PhonePe Blogs Main Featured Image

Trust & Safety

KYC ವಂಚನೆಯಿಂದ ಗುರುತಿನ ಕಳ್ಳತನ: ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳುವಿರಿ?

PhonePe Regional|3 min read|18 July, 2025

URL copied to clipboard

ನೀವು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಖಾತೆಯನ್ನು ತೆರೆದಾಗ, ನಿಮ್ಮ ಗುರುತನ್ನು ಪರಿಶೀಲಿಸಲು ‘KYC’ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಪ್ರಕ್ರಿಯೆ ಅಗತ್ಯವಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಆಧಾರ್, ಪ್ಯಾನ್ ಅಥವಾ ರಿಸರ್ವ್ ಬ್ಯಾಂಕ್ ಅನುಮೋದಿಸಿದ ಇತರ ದಾಖಲೆಗಳನ್ನು ಸಲ್ಲಿಸಬೇಕು.

ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಹಣಕಾಸು ಸಂಸ್ಥೆಗಳು ಈ ಗುರುತು ಪರಿಶೀಲನೆ ಪ್ರಕ್ರಿಯೆಯನ್ನು ‘ಡಿಜಿಟಲ್ KYC’ ಮೂಲಕ ನಡೆಸುತ್ತವೆ. ಡಿಜಿಟಲ್ KYC ಯಲ್ಲಿ ಗ್ರಾಹಕರ ಲೈವ್ ಫೋಟೋಗಳು, ಅವರ ದಾಖಲೆಗಳು ಅಥವಾ ಆಧಾರ್ ಕಾರ್ಡ್‌ ಇರುವ ಪುರಾವೆಗಳನ್ನು ಪಡೆಯಲಾಗುತ್ತದೆ. ವಿಶೇಷವಾಗಿ, ಆಫ್‌ಲೈನ್ ಪರಿಶೀಲನೆ ಸಾಧ್ಯವಿಲ್ಲದಿದ್ದಾಗ ಈ ವಿಧಾನವನ್ನು ಬಳಸಲಾಗುತ್ತದೆ.

KYC ವಂಚನೆಯಿಂದ ಗುರುತಿನ ಕಳ್ಳತನ ಎಂದರೇನು?

KYC ವಂಚನೆಯಲ್ಲಿ, ವಂಚಕರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ ಅಥವಾ ನಕಲಿ ಗುರುತುಗಳನ್ನು ಸೃಷ್ಟಿಸುತ್ತಾರೆ ಮತ್ತು ಆ ಮಾಹಿತಿಯನ್ನು ಬಳಸಿಕೊಂಡು KYC ಪ್ರಕ್ರಿಯೆಯನ್ನು ನಕಲಿ ರೀತಿಯಲ್ಲಿ ಪೂರ್ಣಗೊಳಿಸುತ್ತಾರೆ. ಒಮ್ಮೆ KYC ಪರಿಶೀಲನೆಯಾದ ನಂತರ, ಅವರು ಅನಧಿಕೃತವಾಗಿ ನಿಮ್ಮ ಖಾತೆಗಳಿಗೆ ಪ್ರವೇಶ ಪಡೆಯುತ್ತಾರೆ ಅಥವಾ ನಿಮ್ಮ ಹೆಸರಿನಲ್ಲಿ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಾರೆ, ಸಾಲ ಪಡೆಯುತ್ತಾರೆ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯುತ್ತಾರೆ. ಇದರಿಂದ ನಿಮಗೆ ಆರ್ಥಿಕ ನಷ್ಟವಾಗುವುದಲ್ಲದೆ, ನಿಮ್ಮ ಪ್ರತಿಷ್ಠೆಗೂ ದೊಡ್ಡ ಹಾನಿಯಾಗುತ್ತದೆ.

ಇಂದಿನ ಡಿಜಿಟಲ್ ಯುಗದಲ್ಲಿ ಗುರುತಿನ ಕಳ್ಳತನ ಒಂದು ಗಂಭೀರ ಸಮಸ್ಯೆಯಾಗಿದೆ, ವಿಶೇಷವಾಗಿ ವಂಚಕರು ಕದ್ದ ಅಥವಾ ನಕಲಿ ದಾಖಲೆಗಳನ್ನು ಬಳಸಿ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನಿಮ್ಮ ಖಾತೆಗಳ ನಿಯಂತ್ರಣವನ್ನು ಪಡೆದಾಗ ಈ ಅಪಾಯವು ಇನ್ನಷ್ಟು ಹೆಚ್ಚಾಗುತ್ತದೆ.

ಗುರುತಿನ ಕಳ್ಳತನ ಹಲವು ವಿಧಗಳಲ್ಲಿ ಸಂಭವಿಸಬಹುದು

ಸನ್ನಿವೇಶ 1: ಫಿಶಿಂಗ್‌ನ ವಿವಿಧ ತಂತ್ರಗಳ ಮೂಲಕ ವಂಚಕರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಈ ಮಾಹಿತಿ ಪಡೆದ ನಂತರ ಅವರು ನಿಮ್ಮ ಖಾತೆಗೆ ಅನಧಿಕೃತವಾಗಿ ಪ್ರವೇಶಿಸಿ ಆರ್ಥಿಕ ವ್ಯವಹಾರಗಳನ್ನು ನಡೆಸುತ್ತಾರೆ.

ಅರ್ಜುನ್‌ನನ್ನು ಒಬ್ಬ ವ್ಯಕ್ತಿ ಆಕರ್ಷಕ ಹೂಡಿಕೆಯ ಲಾಭದ ಆಮಿಷವೊಡ್ಡಿದ. ಮುಂದಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅರ್ಜುನ್ ತನ್ನ ವೈಯಕ್ತಿಕ ವಿವರಗಳನ್ನು ಖಚಿತಪಡಿಸಿಕೊಳ್ಳುವಂತೆ ಕೇಳಲಾಯಿತು. ತನ್ನ ಹೂಡಿಕೆಯನ್ನು ಸುರಕ್ಷಿತವಾಗಿ ನಿರ್ವಹಿಸಲಾಗುತ್ತದೆ ಎಂದು ಭಾವಿಸಿ ವಂಚಕನನ್ನು ನಂಬಿ ಅರ್ಜುನ್ ತನ್ನ ಖಾತೆಯ ಮಾಹಿತಿ ಮತ್ತು OTP ಅನ್ನು ಹಂಚಿಕೊಂಡನು. ಆದರೆ, ಈ ಮಾಹಿತಿ ಪಡೆದ ತಕ್ಷಣ, ವಂಚಕನು ಅರ್ಜುನ್‌ನ ಖಾತೆಯನ್ನು ತೆರೆದು ಅದರಿಂದ ಅನಧಿಕೃತ ವ್ಯವಹಾರಗಳನ್ನು ನಡೆಸಿದನು.

ಸನ್ನಿವೇಶ 2: ವಂಚಕರು ನಿಮ್ಮ ಖಾತೆಯ ಪ್ರವೇಶ ಪಡೆಯಲು ನಿಮ್ಮನ್ನು KYC ಪ್ರಕ್ರಿಯೆ ಪೂರ್ಣಗೊಳಿಸಲು ಕೇಳಬಹುದು. ಒಮ್ಮೆ ಅವರಿಗೆ ನಿಮ್ಮ ಮಾಹಿತಿ ಸಿಕ್ಕರೆ, ಅವರು ಖಾತೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ ದುರುಪಯೋಗಪಡಿಸಿಕೊಳ್ಳುತ್ತಾರೆ.

ವಂಚಕನೊಬ್ಬ ರೋಹಿಣಿಯನ್ನು ಸಂಪರ್ಕಿಸಿ, ಸರ್ಕಾರದ ಸಬ್ಸಿಡಿ ಯೋಜನೆಯಲ್ಲಿ ಲಾಭ ಪಡೆಯಲು ತಾನು ಸಹಾಯ ಮಾಡಬಲ್ಲೆ ಎಂದು ಹೇಳಿದನು. ಅದಕ್ಕಾಗಿ, ರೋಹಿಣಿ ಒಂದು ಖಾತೆಯನ್ನು ಸೃಷ್ಟಿಸಿ KYC ಪರಿಶೀಲನೆಯನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದನು. ಸಬ್ಸಿಡಿ ಪಡೆಯುವ ಆಸೆಯಿಂದ ರೋಹಿಣಿ ತನ್ನ ವೈಯಕ್ತಿಕ ಮಾಹಿತಿ ನೀಡಿದಳು. KYC ಮಾಹಿತಿ ವಂಚಕನ ಕೈಗೆ ಸಿಕ್ಕ ನಂತರ, ಅವನು ರೋಹಿಣಿಯ ಖಾತೆಯನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡು ದುರುಪಯೋಗಪಡಿಸಿಕೊಂಡನು ಮತ್ತು ಅನಧಿಕೃತ ವ್ಯವಹಾರಗಳಿಂದ ರೋಹಿಣಿಗೆ ಆರ್ಥಿಕ ನಷ್ಟವಾಯಿತು.

ಸನ್ನಿವೇಶ 3: ವಂಚಕರು ಕೆಲವೊಮ್ಮೆ ನಿಮ್ಮಿಂದ ನಿಮ್ಮದಲ್ಲದ ಖಾತೆಗೆ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳುತ್ತಾರೆ. ನಂತರ ಅವರು ಈ ಖಾತೆಯನ್ನು ವಂಚನೆಗಾಗಿ ಬಳಸುತ್ತಾರೆ ಮತ್ತು ನಿಮಗೆ ಅದರ ಸುಳಿವು ಸಹ ಇರುವುದಿಲ್ಲ.

ವಂಚಕನೊಬ್ಬ ಡೇವಿಡ್‌ನನ್ನು ಸಂಪರ್ಕಿಸಿ, ಅವನಿಗೆ ಸಾಲ ಕೊಡಿಸುವ ಭರವಸೆ ನೀಡಿದನು. ಅದಕ್ಕಾಗಿ, ವಂಚಕನು ಈಗಾಗಲೇ ತನ್ನ ಹೆಸರಿನಲ್ಲಿ ಸಿದ್ಧಪಡಿಸಿದ ಖಾತೆಗೆ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಡೇವಿಡ್‌ಗೆ ತಿಳಿಸಿದನು. ಸಾಲದ ಅರ್ಜಿ ಪ್ರಕ್ರಿಯೆಯ ಭಾಗ ಎಂದು ಭಾವಿಸಿ ಡೇವಿಡ್ ತನ್ನ ವೈಯಕ್ತಿಕ ಮಾಹಿತಿ ನೀಡಿದನು. ಅವನಿಗೆ ತಿಳಿಯದಂತೆ, ಅವನ ಮಾಹಿತಿಯನ್ನು ಬಳಸಿಕೊಂಡು ವಂಚಕನು ಆ ಖಾತೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ, ಅದನ್ನು ಸಾಲದ ವ್ಯವಹಾರಗಳಿಗೆ ದುರುಪಯೋಗಪಡಿಸಿಕೊಂಡನು. ಡೇವಿಡ್‌ಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಮತ್ತು ಅವನ ಆರ್ಥಿಕ ಜೀವನಕ್ಕೆ ಅಪಾಯ ಎದುರಾಯಿತು.

KYC ವಂಚನೆ ಮತ್ತು ಖಾತೆ ಬೇರೊಬ್ಬರ ಸ್ವಾಧೀನಕ್ಕೆ ಹೋದ ಸಾಮಾನ್ಯ ಸೂಚನೆಗಳು

  • ನೀವು ಎಂದಿಗೂ ಅರ್ಜಿ ಸಲ್ಲಿಸದ ಖಾತೆಗಳ ಬಗ್ಗೆ ಇದ್ದಕ್ಕಿದ್ದಂತೆ ಬರುವ ಫೋನ್ ಕರೆಗಳು ಅಥವಾ ಇಮೇಲ್‌ಗಳು
  • ನಿಮ್ಮ ಅನುಮತಿಯಿಲ್ಲದೆ ನಡೆದ ವ್ಯವಹಾರಗಳ ಬಗ್ಗೆ ಬರುವ ಅಲರ್ಟ್ ಅಥವಾ SMS ನೋಟಿಫಿಕೇಶನ್
  • ನೀವು ಅರ್ಜಿ ಸಲ್ಲಿಸದ ಬಿಲ್‌ಗಳು ಅಥವಾ ಕ್ರೆಡಿಟ್ ಕಾರ್ಡ್‌ ಪಡೆಯುವುದು
  • ನಿಮ್ಮ ಬ್ಯಾಂಕ್ ಅಥವಾ ಆರ್ಥಿಕ ಖಾತೆಗಳಿಗೆ ಲಾಗಿನ್ ಆಗುವಲ್ಲಿ ತೊಂದರೆಗಳು
  • ಅತಿ ಆಕರ್ಷಕವಾಗಿ ಕಾಣುವ, ಆದರೆ ವಾಸ್ತವವಾಗಿ ಗುರುತಿನ ಕಳ್ಳತನಕ್ಕೆ ಬಳಸಲಾಗುವ ಆಫರ್‌ಗಳು

ಗುರುತಿನ ಕಳ್ಳತನ ಮತ್ತು KYC ವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಲಹೆಗಳು 

  • ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಡಿ: ಆಧಾರ್, ಪ್ಯಾನ್, OTP ನಂತಹ ಸೂಕ್ಷ್ಮ ದಾಖಲೆಗಳ ಮಾಹಿತಿಯನ್ನು ಫೋನ್, ಇಮೇಲ್ ಅಥವಾ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಹಂಚಿಕೊಳ್ಳಬೇಡಿ.
  • ಫಿಶಿಂಗ್‌ನಿಂದ ಎಚ್ಚರವಾಗಿರಿ: ಸಂಶಯಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ವಿಶ್ವಾಸಾರ್ಹವಲ್ಲದ ವೆಬ್‌ಸೈಟ್‌ಗಳಲ್ಲಿ ಮಾಹಿತಿ ತುಂಬಬೇಡಿ.
  • ಖಾತೆಗಳನ್ನು ಆಗಾಗ್ಗೆ ಪರಿಶೀಲಿಸಿ: ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, ಕ್ರೆಡಿಟ್ ರಿಪೋರ್ಟ್‌ಗಳು ಮತ್ತು ಖಾತೆಗಳಲ್ಲಿ ನಡೆಯುವ ವ್ಯವಹಾರಗಳನ್ನು ಪರಿಶೀಲಿಸಿ, ಯಾರೂ ಅನಧಿಕೃತವಾಗಿ ಪ್ರವೇಶಸಿಲ್ಲ ಎಂದು ಖಚಿತಪಡಿಸಿಕೊಳ್ಳಿ.
  • ಬಲವಾದ ಗುರುತು ಪರಿಶೀಲನೆ/ಆಥೆಂಟಿಕೇಷನ್ ಬಳಸಿ: ಸಾಧ್ಯವಾದರೆ, ಟೂ-ಫ್ಯಾಕ್ಟರ್ ಆಥೆಂಟಿಕೇಶನ್ (2FA) ಅನ್ನು ಸಕ್ರಿಯಗೊಳಿಸಿ.
  • ಸಂವಹನವನ್ನು ಪರಿಶೀಲಿಸಿ: ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಇದ್ದಕ್ಕಿದ್ದಂತೆ ಸಂಪರ್ಕಿಸಿದರೆ, ಅಧಿಕೃತ ಮೂಲದಿಂದ ಅವರ ಗುರುತನ್ನು ಪರಿಶೀಲಿಸಿ.
  • ಗುರುತಿನ ಚೀಟಿಗಳ ದುರುಪಯೋಗವಾದರೆ ತಕ್ಷಣ ತಿಳಿಸಿ: ನಿಮ್ಮ ವೈಯಕ್ತಿಕ ದಾಖಲೆಗಳ ದುರುಪಯೋಗವಾದರೆ, ಸಂಬಂಧಿತ ಸಂಸ್ಥೆಗಳಿಗೆ ಮತ್ತು ಅಧಿಕಾರಿಗಳಿಗೆ ತಕ್ಷಣ ತಿಳಿಸಿ.
  • KYC ಅನ್ನು ಅಧಿಕೃತ ಮಾಧ್ಯಮಗಳ ಮೂಲಕ ಮಾತ್ರ ಮಾಡಿ: KYC ಪ್ರಕ್ರಿಯೆಯನ್ನು ಯಾವಾಗಲೂ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಅಥವಾ ವಿಶ್ವಾಸಾರ್ಹ ಪ್ರತಿನಿಧಿಗಳ ಮೂಲಕವೇ ಪೂರ್ಣಗೊಳಿಸಿ.

ನಿಮ್ಮ ಗುರುತಿಗೆ ಸಂಬಂಧಿಸಿದ ಮಾಹಿತಿಯನ್ನು ಯಾವುದೇ PhonePe ಖಾತೆಯಲ್ಲಿ ತಪ್ಪಾಗಿ ಬಳಸಿದ್ದರೆ ಏನು ಮಾಡಬೇಕು?

ನಿಮಗೆ PhonePe ಮೂಲಕ ವಂಚನೆಯ ಅನುಮಾನ ಬಂದಿದ್ದರೆ ಅಥವಾ ವಂಚನೆ ಸಂಭವಿಸಿದೆ ಎಂದು ತಿಳಿದಿದ್ದರೆ, ತಕ್ಷಣವೇ ಈ ಕೆಳಗಿನ ಯಾವುದೇ ವಿಧಾನಗಳ ಮೂಲಕ ದೂರು ನೀಡಿ:

  1. ಸಾಮಾಜಿಕ ಮಾಧ್ಯಮ ವಂಚನೆಯ ಘಟನೆಗಳನ್ನು PhonePe ಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ ತಿಳಿಸಿ:
  2. PhonePe ಗ್ರಾಹಕ ಸೇವಾ ಸಂಖ್ಯೆ: PhonePe ಗ್ರಾಹಕ ಆರೈಕೆಗೆ 80–68727374 ಅಥವಾ 022–68727374 ಈ ಸಂಖ್ಯೆಗಳಿಗೆ ಕರೆ ಮಾಡಿ. ಗ್ರಾಹಕ ಸೇವಾ ಪ್ರತಿನಿಧಿಯು ನಿಮಗಾಗಿ ಟಿಕೆಟ್ ರಚಿಸಿ ಮುಂದಿನ ಸಹಾಯ ಮಾಡುತ್ತಾರೆ.
  3. ದೂರು ಪರಿಹಾರ: ನಿಮ್ಮ ಬಳಿ ದೂರು ಟಿಕೆಟ್ ಇದ್ದರೆ, ನಿಮ್ಮ ಟಿಕೆಟ್ ಐಡಿಯನ್ನು ಬಳಸಿಕೊಂಡು https://grievance.PhonePe.com/ ಈ ವೆಬ್‌ಸೈಟ್‌ನಲ್ಲಿ ನಿಮ್ಮ ದೂರು ನೋಂದಾಯಿಸಬಹುದು.

ಸಂಬಂಧಿತ ಪ್ರಾಧಿಕಾರಗಳಲ್ಲಿ ದೂರು ಸಲ್ಲಿಸುವುದು

  • ಸೈಬರ್ ಕ್ರೈಮ್ ಸೆಲ್: ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ಆನ್‌ಲೈನ್ ದೂರು ಸಲ್ಲಿಸಿ ಅಥವಾ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ.
  • ದೂರಸಂಪರ್ಕ ಇಲಾಖೆ (DOT): ಸಂಶಯಾಸ್ಪದ ಸಂದೇಶಗಳು, ಕರೆಗಳು ಅಥವಾ ವಂಚನೆಯ ವಿನಂತಿಗಳ ಮಾಹಿತಿಯನ್ನು ಸಂಚಾರ ಸಾಥಿ ಪೋರ್ಟಲ್‌ನಲ್ಲಿರುವ ಚಕ್ಷು ಸೌಲಭ್ಯದ ಮೂಲಕ ನೀಡಿ.

Keep Reading