PhonePe Blogs Main Featured Image

Trust & Safety

ಗಿಫ್ಟ್ ಕಾರ್ಡ್ ಹಗರಣ: ನಿಮ್ಮ ಮಾಹಿತಿಯನ್ನು ಯಾವಾಗ ಹಂಚಿಕೊಳ್ಳಬೇಕೆಂದು ತಿಳಿಯಿರಿ

PhonePe Regional|2 min read|19 May, 2025

URL copied to clipboard

ನೀವು ಪಾವತಿ ಮಾಡಬೇಕಾದರೆ, ಸಾಮಾನ್ಯವಾಗಿ ಹೇಗೆ ಮಾಡುತ್ತೀರಿ? ಹೆಚ್ಚಿನ ಸಂದರ್ಭಗಳಲ್ಲಿ, UPI ಅಥವಾ ಬ್ಯಾಂಕ್ ವರ್ಗಾವಣೆ  ಮೂಲಕ ಪಾವತಿಸುತ್ತೀರಿ, ಅಲ್ಲವೇ? ನೀವು  ಗಿಫ್ಟ್ ಕಾರ್ಡ್ ಮೂಲಕ ಪಾವತಿ ಮಾಡಬೇಕೆಂದು ಫೋನ್ ಕರೆಯನ್ನು ಸ್ವೀಕರಿಸಿದರೆ, ಏನು ಮಾಡುತ್ತೀರಿ?

ಮುನ್ನೋಟ:

ಇತ್ತೀಚಿಗೆ, ಗಿಫ್ಟ್ ಕಾರ್ಡ್‌ಗಳು, ಅಥವಾ ನಿರ್ದಿಷ್ಟವಾಗಿ ಹೇಳಬೇಕಾದರೆ, ಇ-ಗಿಫ್ಟ್ ಕಾರ್ಡ್‌ಗಳು ಜನಪ್ರಿಯ ಉಡುಗೊರೆಯಾಗಿದ್ದು, ಹುಟ್ಟುಹಬ್ಬಗಳು, ಮದುವೆಗಳಿಗಷ್ಟೇ ಸೀಮಿತವಾಗಿರದೆ ಇತರ ಸಂದರ್ಭಗಳಲ್ಲಿಯೂ, ಗಡಿಬಿಡಿಯಲ್ಲಿ ಉಡುಗೊರೆ  ತರಲು ಮರೆತಾಗ ಕೊನೆಯ ಕ್ಷಣದಲ್ಲಿ ಉಡುಗೊರೆಯಾಗಿ ನೀಡಲೂ ಹೇಳಿ ಮಾಡಿಸಿದಂತಾಗಿದೆ. ಆದರೆ, ಗಿಫ್ಟ್ ಕಾರ್ಡ್‌ಗಳು ಅನಾಮಧೇಯವಾಗಿದ್ದು, ಪತ್ತೆಹಚ್ಚಲಾಗದ ಕಾರಣ ಮತ್ತು ಒಬ್ಬ ವ್ಯಕ್ತಿಗೆ ಶಾಶ್ವತವಾಗಿ ಲಿಂಕ್ ಆಗಿಲ್ಲದ ಕಾರಣ, ದುರದೃಷ್ಟವಶಾತ್ ಇದು ಸ್ಕ್ಯಾಮರ್‌ಗಳಿಗೆ ವರವಾಗಿದೆ. ಇದು ಗಿಫ್ಟ್ ಕಾರ್ಡ್‌ಗಳನ್ನು ಆಮಿಷವಾಗಿ ಬಳಸಿಕೊಂಡು ಮುಗ್ಧರಿಂದ ಹಣ ವಂಚಿಸಲು ಸ್ಕ್ಯಾಮರ್‌ಗಳಿಗೆ ದಾರಿ ಮಾಡಿಕೊಟ್ಟಿದೆ.

ಗಿಫ್ಟ್ ಕಾರ್ಡ್‌ ವಂಚನೆಗಳು ದಿನೇ ದಿನೇ ಹೆಚ್ಚುಗುತ್ತಿದ್ದು ನಿಮ್ಮ ಹಣ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಡಲು ಗಿಫ್ಟ್ ಕಾರ್ಡ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಅರ್ಥಮಾಡಿಕೊಳ್ಳುವುದು ಬಹುಮುಖ್ಯ.

ಬನ್ನಿ, ಗಿಫ್ಟ್ ಕಾರ್ಡ್ ವಂಚನೆ ಎಂದರೇನು, ಅದನ್ನು ಹೇಗೆ ಮಾಡಲಾಗುತ್ತದೆ ಹಾಗೂ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಗಿಫ್ಟ್ ಕಾರ್ಡ್ ಹಗರಣ ಎಂದರೇನು?

ಗಿಫ್ಟ್ ಕಾರ್ಡ್ ಹಗರಣದಲ್ಲಿ, ಒಬ್ಬ ವಂಚಕನು ಸಂಭಾವ್ಯ ಬಲಿಪಶುವನ್ನು ಸಂಪರ್ಕಿಸಿ ಅವರನ್ನು ಮೋಸಗೊಳಿಸಿ ಗಿಫ್ಟ್ ಕಾರ್ಡ್ ಖರೀದಿಸುವಂತೆ ಮಾಡುತ್ತಾನೆ. ಖರೀದಿಯ ನಂತರ, ವಂಚನೆಗಾರರು ಉಡುಗೊರೆ ಕಾರ್ಡ್ ಸಂಖ್ಯೆ, ಕೋಡ್, ಪಿನ್‌ಗಳು ಇತ್ಯಾದಿಗಳನ್ನು ಪಡೆಯಲು ವಂಚನೆ ಮತ್ತು ಸುಳ್ಳು ನೆಪಗಳನ್ನು ಬಳಸುತ್ತಾರೆ. ಸ್ಕ್ಯಾಮರ್‌ಗಳು ಅಗತ್ಯ ಮಾಹಿತಿಯನ್ನು ಹೊಂದಿದ ನಂತರ, ಅವರು ತ್ವರಿತವಾಗಿ ಮೌಲ್ಯವನ್ನು ಪಡೆದುಕೊಳ್ಳುತ್ತಾರೆ, ಇದರಿಂದಾಗಿ ಬಲಿಪಶುಗಳಿಗೆ ತಮ್ಮ ಹಣವನ್ನು ಮರುಪಡೆಯಲು ಯಾವುದೇ ಅವಕಾಶವಿರುವುದಿಲ್ಲ.

ಗಿಫ್ಟ್ ಕಾರ್ಡ್ ಹಗರಣ ಹೇಗೆ ಕೆಲಸ ಮಾಡುತ್ತದೆ?

ಗಿಫ್ಟ್ ಕಾರ್ಡ್ ಹಗರಣಗಳು ಸಾಮಾನ್ಯವಾಗಿ ಒಂದು ಮಾದರಿಯನ್ನು ಅನುಸರಿಸುತ್ತವೆ. ವಂಚಕರು ವಂಚಿಸುವ ಬಗೆ ಇಲ್ಲಿದೆ.

1. ವಂಚಕ ನೀವು ನಂಬುವ ವ್ಯಕ್ತಿಯಂತೆ ನಟಿಸುತ್ತಾನೆ

ವಂಚನೆಯು ಫೋನ್ ಕರೆ, ಇಮೇಲ್, ಸಂದೇಶ ಅಥವಾ ಸಾಮಾಜಿಕ ಮಾಧ್ಯಮದಲ್ಲಿ DM ಮೂಲಕ ಪ್ರಾರಂಭವಾಗುತ್ತದೆ. ವಂಚಕನು ಈ ರೀತಿ ನಟಿಸಬಹುದು:

  • ನಿಮ್ಮ ಮ್ಯಾನೇಜರ್ ಅಥವಾ ಸಹೋದ್ಯೋಗಿ
  • ಸಂಕಷ್ಟದಲ್ಲಿರುವ ಕುಟುಂಬ ಸದಸ್ಯರು
  • ಸರ್ಕಾರಿ ಸಂಸ್ಥೆ
  • ಟೆಕ್ ಸಪೋರ್ಟ್ ಏಜೆಂಟ್
  • ನಿಮಗೆ ಉದ್ಯೋಗ ನೀಡುವ ನೇಮಕಾತಿದಾರರು

2. ಅವರು ತುರ್ತು ಪರಿಸ್ಥಿತಿಯನ್ನು ಸೃಷ್ಟಿಸುತ್ತಾರೆ

ವಂಚಕರು ನೀವು ತಕ್ಷಣ ಕಾರ್ಯನಿರ್ವಹಿಸುವಂತೆ ಮಾಡಲು ಗಾಬರಿ ಪಡಿಸುವ ಅಥವಾ ಒತ್ತಡ ಹೇರುವ ತಂತ್ರಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ ಕೇಳಿಬರುವ ವಂಚನೆಯ ಕಥೆಗಳೆಂದರೆ:

  • “ನಾನು ಮೀಟಿಂಗ್‌ನಲ್ಲಿದ್ದೇನೆ ಮತ್ತು ಈ ಗಿಫ್ಟ್ ಕಾರ್ಡ್‌ಗಳು ತುರ್ತಾಗಿ ಬೇಕಾಗಿವೆ.”
  • “ನೀವು ತಕ್ಷಣ ಹಾಗೆ ಮಾಡದಿದ್ದಲ್ಲಿ ನಿಮ್ಮ ಖಾತೆಯನ್ನು ಅಮಾನತುಗೊಳಿಸಲಾಗುತ್ತದೆ.”
  • “ಕಾನೂನು ಸಮಸ್ಯೆ ಇದೆ ಮತ್ತು ನೀವು ಗಿಫ್ಟ್ ಕಾರ್ಡ್‌ಗಳನ್ನು ಬಳಸಿಕೊಂಡು ಪಾವತಿಸಬೇಕು.”
  • “ನಿಮ್ಮ ಆನ್‌ಬೋರ್ಡಿಂಗ್/ಉದ್ಯೋಗ ಕಿಟ್ ಅನ್ನು ಪೂರ್ಣಗೊಳಿಸಲು ಇದು ಬೇಕಾಗಿದೆ.”

3. ಅವರು ನಿಮಗೆ ಗಿಫ್ಟ್  ಕಾರ್ಡ್‌ಗಳನ್ನು ಖರೀದಿಸಲು ಹೇಳುತ್ತಾರೆ

ನಿಮಗೆ ನಿರ್ದಿಷ್ಟ ಉಡುಗೊರೆ ಕಾರ್ಡ್‌ಗಳನ್ನು (PhonePeEGC, QWIKCILVERGC, Amazon, Apple, Google Play, ಇತ್ಯಾದಿ) ಖರೀದಿಸಲು ಸೂಚಿಸಲಾಗುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ, ಹೆಚ್ಚಿನ ಮೌಲ್ಯದ ಹಲವು ಕಾರ್ಡ್‌ಗಳನ್ನು ಖರೀದಿಸುವಂತೆ ಸೂಚಿಸಲಾಗುತ್ತದೆ.

4. ಅವರು ಗಿಫ್ಟ್ ಕಾರ್ಡ್ ವಿವರಗಳನ್ನು ಕೇಳುತ್ತಾರೆ

ನೀವು ಕಾರ್ಡ್‌ಗಳನ್ನು ಖರೀದಿಸಿದ ನಂತರ, ಅವರು ಈ ವಿವರಗಳನ್ನು ಕೇಳುತ್ತಾರೆ:

  • 16-ಅಂಕಿಯ ಗಿಫ್ಟ್ ಕಾರ್ಡ್ ಸಂಖ್ಯೆ
  • ಗಿಫ್ಟ್ ಕಾರ್ಡ್ ಪಿನ್
  • ಕಾರ್ಡ್ ಅಥವಾ ರಶೀದಿಯ ವಿವರಗಳು

5. ಅವರು ಗಿಫ್ಟ್ ಕಾರ್ಡ್‌ಗಳನ್ನು ತಕ್ಷಣವೇ ಬಳಸುತ್ತಾರೆ

ವಂಚಕರು ವೈಯಕ್ತಿಕ ಬಳಕೆಗಾಗಿ ತಕ್ಷಣವೇ ಮೌಲ್ಯವನ್ನು ರಿಡೀಮ್ ಮಾಡಿಕೊಳ್ಳುತ್ತಾರೆ ಅಥವಾ ರಿಯಾಯಿತಿಯಲ್ಲಿ ಕಾರ್ಡ್‌ಗಳನ್ನು ಆನ್‌ಲೈನ್‌ನಲ್ಲಿ ಪುನಃ ಮಾರಾಟ ಮಾಡುತ್ತಾರೆ. ನಂತರ, ಅವರು ಯಾವುದೇ ಕುರುಹು ಇಲ್ಲದೆ ಕಣ್ಮರೆಯಾಗುತ್ತಾರೆ.

ಸಾಮಾನ್ಯ ಎಚ್ಚರಿಕೆಯ ಕರೆಗಂಟೆಗಳು:

  • ಗಿಫ್ಟ್ ಕಾರ್ಡ್ ಮೂಲಕ ಅನುಮಾನಾಸ್ಪದ ಪಾವತಿಯನ್ನು ವಿನಂತಿಸಲಾಗಿದೆ
  • ಸಂದೇಶವು ತುರ್ತು, ಭಾವನಾತ್ಮಕ ಅಥವಾ ರಹಸ್ಯವಾಗಿದೆ
  • ಅದನ್ನು ಗೌಪ್ಯವಾಗಿಡಲು ನಿಮ್ಮನ್ನು ಕೇಳಲಾಗುತ್ತದೆ
  • ಸಂವಹನವು ಅಧಿಕೃತ ಚಾನಲ್‌ಗಳ ಮೂಲಕವಾಗಿರದೆ, ವೈಯಕ್ತಿಕ ಇಮೇಲ್ ಅಥವಾ ಚಾಟ್ ಮೂಲಕ ನಡೆಯುತ್ತದೆ
  • ವ್ಯಾಕರಣ, ಕಾಗುಣಿತ ಅಥವಾ ಧಾಟಿ ಸರಿಯಾಗಿಲ್ಲ ಎಂದು ತೋರುತ್ತದೆ

ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

  • ನಿಮಗೆ ಪರಿಚಯವಿಲ್ಲದ ಅಥವಾ ನಂಬದ ಯಾರೊಂದಿಗೂ ಗಿಫ್ಟ್ ಕಾರ್ಡ್ ಕೋಡ್‌ಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ
  • ಗಿಫ್ಟ್ ಕಾರ್ಡ್‌ಗಳಿಗಾಗಿ ವಿನಂತಿಗಳನ್ನು, ವಿಶೇಷವಾಗಿ ಅವು ಅಸಾಮಾನ್ಯವೆಂದು ತೋರಿದರೆ, ಪರಿಶೀಲಿಸಿ
  • ಸಹೋದ್ಯೋಗಿಗಳು ಅಥವಾ ಕುಟುಂಬದಿಂದ ಬರುವ ತುರ್ತು ಅಥವಾ ಅಸಾಮಾನ್ಯ ವಿನಂತಿಗಳ ಬಗ್ಗೆ ಸಂಶಯ ವ್ಯಕ್ತಪಡಿಸಿ
  • ಅಧಿಕೃತ ಮೂಲಗಳಿಂದ ಮತ್ತು ವೈಯಕ್ತಿಕ ಬಳಕೆಗಾಗಿ ಮಾತ್ರ ಗಿಫ್ಟ್ ಕಾರ್ಡ್‌ಗಳನ್ನು ಖರೀದಿಸಿ
  • ಸ್ನೇಹಿತರು, ಕುಟುಂಬ ಮತ್ತು ಸಹೋದ್ಯೋಗಿಗಳಿಗೆ ಶಿಕ್ಷಣ ನೀಡಿ – ಸ್ಕ್ಯಾಮರ್‌ಗಳು ಹೆಚ್ಚಾಗಿ ವಯಸ್ಸಾದ ಅಥವಾ ತಂತ್ರಜ್ಞಾನದ ಕುರಿತು ಕಡಿಮೆ ಮಾಹಿತಿ ಇರುವ ಬುದ್ಧಿವಂತ ವ್ಯಕ್ತಿಗಳನ್ನು ಗುರಿಯಾಗಿಸುತ್ತಾರೆ

ನೀವು ಗಿಫ್ಟ್ ಕಾರ್ಡ್ ಹಗರಣಕ್ಕೆ ಬಲಿಯಾಗಿದ್ದರೆ ವರದಿ ಮಾಡುವುದು ಹೇಗೆ?

PhonePe ಮೂಲಕ ವಂಚಕರಿಂದ ನೀವು ಮೋಸ ಹೋಗಿದ್ದರೆ, ನೀವು ತಕ್ಷಣ ಈ ಕೆಳಗಿನ ವಿಧಾನಗಳಲ್ಲಿ ಸಮಸ್ಯೆಯನ್ನು ತಿಳಿಸಬಹುದು:

  1. PhonePe ಆ್ಯಪ್‌: ಸಹಾಯ ವಿಭಾಗಕ್ಕೆ ಹೋಗಿ ಮತ್ತು “ವಹಿವಾಟಿನಲ್ಲಿ ಸಮಸ್ಯೆ ಇದೆ” ಆಯ್ಕೆಯ ಅಡಿಯಲ್ಲಿ ಸಮಸ್ಯೆಯ ಬಗ್ಗೆ ತಿಳಿಸಿ.
  2. PhonePe ಗ್ರಾಹಕ ಸೇವಾ ಸಂಖ್ಯೆ: ಸಮಸ್ಯೆಯನ್ನು ತಿಳಿಸಲು ನೀವು PhonePe ಗ್ರಾಹಕ ಸೇವಾ ಕೇಂದ್ರಕ್ಕೆ 80–68727374 / 022–68727374 ಮೂಲಕ ಕರೆ ಮಾಡಬಹುದು, ನಂತರ ಗ್ರಾಹಕ ಸೇವಾ ಏಜೆಂಟ್ ಟಿಕೆಟ್ ರಚಿಸಿ ನಿಮ್ಮ ಸಮಸ್ಯೆಗೆ ಸಹಾಯ ಮಾಡುತ್ತಾರೆ.
  3. ವೆಬ್‌ಫಾರ್ಮ್ ಸಲ್ಲಿಕೆ: ನೀವು PhonePe ವೆಬ್‌ಫಾರ್ಮ್ https://support.phonepe.com/ ಬಳಸಿಕೊಂಡು ಟಿಕೆಟ್ ರಚಿಸಬಹುದು.
  4. ಸಾಮಾಜಿಕ ಮಾಧ್ಯಮ: ನೀವು ವಂಚನೆಯ ಘಟನೆಗಳನ್ನು PhonePe ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ವರದಿ ಮಾಡಬಹುದು.
    1. Twitter — https://twitter.com/PhonePeSupport
    2. Facebook — https://www.facebook.com/OfficialPhonePe
  1. ದೂರು: ಈಗಾಗಲೇ ಸಲ್ಲಿಸಿದ ದೂರು ಬಗೆಹರಿಯದಿದ್ದರೆ, ಅದರ ಬಗ್ಗೆಯೂ ದೂರು ದಾಖಲಿಸಲು, ನೀವು https://grievance.phonepe.com/ ಗೆ ಲಾಗಿನ್ ಆಗಿ ಹಿಂದಿನ ಸಮಸ್ಯೆಯ ಟಿಕೆಟ್ ಐಡಿಯನ್ನು ಹಂಚಿಕೊಳ್ಳಬಹುದು.
  2. ಸೈಬರ್ ಸೆಲ್: ಕೊನೆಯದಾಗಿ, ನೀವು ವಂಚನೆಗೆ ಸಂಬಂಧಿಸಿದ ದೂರುಗಳನ್ನು ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ವರದಿ ಮಾಡಬಹುದು ಅಥವಾ https://www.cybercrime.gov.in/ ನಲ್ಲಿ ಆನ್‌ಲೈನ್‌ನಲ್ಲಿ ದೂರು ನೋಂದಾಯಿಸಬಹುದು ಅಥವಾ 1930 ರಲ್ಲಿ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು ಸಂಪರ್ಕಿಸಬಹುದು.

ಪ್ರಮುಖ ರಿಮೈಂಡರ್ — PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೇನ್‌ನಿಂದ ಬರದ ಹೊರತು PhonePe ಮೂಲಕ ಎಂದು ಹೇಳಿಕೊಳ್ಳುವ ಎಲ್ಲಾ ಮೇಲ್‌ಗಳನ್ನು ನಿರ್ಲಕ್ಷಿಸಿ. ನಿಮಗೆ ವಂಚನೆಯ ಬಗ್ಗೆ ಅನುಮಾನ ಬಂದರೆ, ದಯವಿಟ್ಟು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ.

Keep Reading