
Trust & Safety
ತೆರಿಗೆ ವಂಚನೆಯಿಂದ ಸುರಕ್ಷಿತವಾಗಿರುವುದು ಹೇಗೆ?
PhonePe Regional|2 min read|07 August, 2025
ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವ ಸಮಯ ಮತ್ತೆ ಬಂದಿದೆ! ಈ ಸಮಯದಲ್ಲಿ ಕೇವಲ ದಾಖಲೆಗಳ ಸಲ್ಲಿಕೆಯಷ್ಟೇ ಅಲ್ಲ, ತೆರಿಗೆ ವಂಚನೆಯ ಅಪಾಯವೂ ಹೆಚ್ಚಿರುತ್ತದೆ.
ಹೀಗೊಂದು ಕಾಲ್ಪನಿಕ ಸನ್ನಿವೇಶ: “ಅರ್ಜೆಂಟ್: ನಿಮ್ಮ ₹25,000 ತೆರಿಗೆ ಮರುಪಾವತಿ ಸಿದ್ಧವಾಗಿದೆ! 1 ಗಂಟೆಯೊಳಗೆ ಕ್ಲೈಮ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.” ಇಷ್ಟೊಂದು ದೊಡ್ಡ ಮೊತ್ತದ ಮರುಪಾವತಿಯ ಆಸೆ ಮತ್ತು ಗಡುವಿನ ಒತ್ತಡವು ನಿಮ್ಮನ್ನು ಆ ಲಿಂಕ್ ಅನ್ನು ಕ್ಲಿಕ್ ಮಾಡಲು ಪ್ರೇರೇಪಿಸಬಹುದು. ಆದರೆ ಇದು ಫಿಶಿಂಗ್ ಹಗರಣವಾಗಿರುವ ಸಾಧ್ಯತೆ ಹೆಚ್ಚಾಗಿದ್ದು ವೈಯಕ್ತಿಕ ಮಾಹಿತಿ ಕಳ್ಳತನ ಅಥವಾ ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು.
ಸೈಬರ್ ಅಪರಾಧಿಗಳು ಗೊಂದಲ, ಗಡುವಿನ ಒತ್ತಡ, ಮತ್ತು ತೆರಿಗೆ ಮರುಪಾವತಿಯ ಆಸೆಯನ್ನು ದುರುಪಯೋಗಪಡಿಸಿಕೊಂಡು ವೈಯಕ್ತಿಕ ಮಾಹಿತಿಯನ್ನು ನೀಡಲು, ಮಾಲ್‌ವೇರ್ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಅಥವಾ ನಕಲಿ ಶುಲ್ಕಗಳನ್ನು ಪಾವತಿಸಲು ಜನರನ್ನು ಪ್ರಚೋದಿಸುತ್ತಾರೆ. ಈ ರೀತಿಯ ವಂಚನೆಗಳ ಬಗ್ಗೆ ಮತ್ತು ಅವುಗಳಿಂದ ಸುರಕ್ಷಿತವಾಗಿರುವುದು ಹೇಗೆ ಎಂದು ತಿಳಿಯೋಣ.
ತೆರಿಗೆ ವಂಚನೆ ಎಂದರೇನು?
ತೆರಿಗೆ ಹಗರಣದಲ್ಲಿ, ಅಪರಾಧಿಗಳು ನಿಮ್ಮ ವೈಯಕ್ತಿಕ ಮಾಹಿತಿ, ಹಣ ಅಥವಾ ತೆರಿಗೆ ಮರುಪಾವತಿಗಳನ್ನು ಕದಿಯಲು ತೆರಿಗೆ ವೃತ್ತಿಪರರು, ಸರ್ಕಾರಿ ಸಂಸ್ಥೆಗಳು ಅಥವಾ ಮರುಪಾವತಿ ಸೇವೆ ನೀಡುವಂತಹ ವಿಶ್ವಾಸಾರ್ಹ ಸಂಸ್ಥೆಗಳಂತೆ ಸೋಗು ಹಾಕುತ್ತಾರೆ.
ತೆರಿಗೆ ವಂಚನೆ ಹೇಗಾಗುತ್ತದೆ?
ವಂಚಕರು ನಿಮ್ಮಿಂದ ಸೂಕ್ಷ್ಮ ಮಾಹಿತಿ ಅಥವಾ ಹಣವನ್ನು ಕದಿಯಲು ಭಯ, ತುರ್ತು ಪರಿಸ್ಥಿತಿ ಅಥವಾ ಆಕರ್ಷಕ ಆಫರ್‌ಗಳನ್ನು ಬಳಸುತ್ತಾರೆ. ಒಂದು ಸಾಮಾನ್ಯ ವಂಚನೆ ಸನ್ನಿವೇಶ ಹೀಗಿದೆ:
- ಸೋಗು ಹಾಕುವಿಕೆ: ವಂಚಕರು ಆದಾಯ ತೆರಿಗೆ ಇಲಾಖೆ, ತೆರಿಗೆ ಸಲಹೆಗಾರ, ಅಥವಾ ಮರುಪಾವತಿ ಏಜೆನ್ಸಿಯಂತೆ ನಟಿಸಿ ನಿಮ್ಮನ್ನು ಸಂಪರ್ಕಿಸುತ್ತಾರೆ.
- ಹಲವು ಮಾಧ್ಯಮಗಳ ಬಳಕೆ: ಅವರು ಫೋನ್ ಕರೆಗಳು (ಸಾಮಾನ್ಯವಾಗಿ ನಕಲಿ ಕಾಲರ್ ಐಡಿಗಳು), ನಕಲಿ ಸರ್ಕಾರಿ ಡೊಮೈನ್‌ನ ಇಮೇಲ್‌ಗಳು, SMS ಅಥವಾ WhatsApp ಸಂದೇಶಗಳ ಮೂಲಕ ತುರ್ತು ತೆರಿಗೆ ಸಮಸ್ಯೆಗಳು ಅಥವಾ ಮರುಪಾವತಿಗಳ ಬಗ್ಗೆ ನಿಮಗೆ ತಿಳಿಸುತ್ತಾರೆ.
- ತುರ್ತು ಪರಿಸ್ಥಿತಿಯ ಸೃಷ್ಟಿ: ಅವರು ಈ ಕೆಳಗಿನ ರೀತಿಯ ಸಂದೇಶಗಳ ಮೂಲಕ ನಿಮ್ಮಲ್ಲಿ ಆತಂಕ ಸೃಷ್ಟಿಸುತ್ತಾರೆ:
- “ನಿಮ್ಮ ತೆರಿಗೆ ಪಾವತಿಸಬೇಕಿದೆ, ಬಂಧನ ತಪ್ಪಿಸಲು ತಕ್ಷಣ ಪಾವತಿಸಿ.”
- “ಅವಧಿ ಮೀರುವ ಮೊದಲೇ ನಿಮ್ಮ ತೆರಿಗೆ ಮರುಪಾವತಿಯನ್ನು ಕ್ಲೈಮ್ ಮಾಡಿ.”
- “ನಿಮ್ಮ PAN/ಆಧಾರ್ ತನಿಖೆಯಲ್ಲಿದೆ.”
- “ನಿಮ್ಮ ITR ನಲ್ಲಿ ತಪ್ಪುಗಳಿವೆ; ನಿಮ್ಮ ವಿವರಗಳನ್ನು ತಕ್ಷಣ ಪರಿಶೀಲಿಸಿ.”
- “ನಿಮ್ಮ ತೆರಿಗೆ ಪಾವತಿಸಬೇಕಿದೆ, ಬಂಧನ ತಪ್ಪಿಸಲು ತಕ್ಷಣ ಪಾವತಿಸಿ.”
- ವೈಯಕ್ತಿಕ ಮಾಹಿತಿ ಕೋರುವುದು: ಒಮ್ಮೆ ನೀವು ಅವರೊಂದಿಗೆ ಸಂವಹನ ಆರಂಭಿಸಿದರೆ, ಅವರು ‘ಪರಿಶೀಲನೆ’ಯ ನೆಪದಲ್ಲಿ PAN, ಆಧಾರ್, ಹುಟ್ಟಿದ ದಿನಾಂಕ, ಬ್ಯಾಂಕ್ ಖಾತೆ ಸಂಖ್ಯೆಗಳು, UPI IDಗಳು, ಕಾರ್ಡ್ ವಿವರಗಳು ಅಥವಾ OTPಗಳಂತಹ ವೈಯಕ್ತಿಕ ವಿವರಗಳನ್ನು ಕೇಳುತ್ತಾರೆ. ಅವರು UPI, ಗಿಫ್ಟ್ ಕಾರ್ಡ್‌ಗಳು, ಅಥವಾ ವ್ಯಾಲೆಟ್‌ಗಳ ಮೂಲಕ ತಕ್ಷಣ ಪಾವತಿಸಲು ಸಹ ಒತ್ತಾಯಿಸಬಹುದು.
- ಪರಿಣಾಮಗಳು: ನೀವು ವಂಚಕರ ಸೂಚನೆಗಳನ್ನು ಅನುಸರಿಸಿದರೆ, ಹಣವನ್ನು ಕಳೆದುಕೊಳ್ಳಬಹುದು, ನಿಮ್ಮ ಗುರುತನ್ನು ಕದಿಯಬಹುದು, ಮತ್ತು ನಂತರ ವಂಚಕರು ನಿಮ್ಮನ್ನು ಸಂಪರ್ಕಿಸುವುದನ್ನು ನಿಲ್ಲಿಸಬಹುದು.
ತೆರಿಗೆ ವಂಚನೆಯ ಸಾಮಾನ್ಯ ಲಕ್ಷಣಗಳು
- ತೆರಿಗೆ ಅಧಿಕಾರಿಗಳಿಂದ ಬರುವ ಅನಿರೀಕ್ಷಿತ ಕರೆಗಳು, ಇಮೇಲ್‌ಗಳು, ಅಥವಾ ಸಂದೇಶಗಳು
- ತುರ್ತು ಬೆದರಿಕೆಗಳು ಅಥವಾ ಅವಾಸ್ತವಿಕ ಗಡುವಿನ ಒತ್ತಾಯ
- ಅಸಾಮಾನ್ಯ ಪಾವತಿ ವಿಧಾನಗಳನ್ನು ಬಳಸುವಂತೆ ವಿನಂತಿಸುವುದು
- ನಿಜವಾಗಲು ಸಾಧ್ಯವಾಗದಂತಹ ಮರುಪಾವತಿ ಆಫರ್‌ಗಳು
- OTP, PIN, ಅಥವಾ ಪಾಸ್‌ವರ್ಡ್‌ಗಳಿಗೆ ಬೇಡಿಕೆ
ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?
- ಮೂಲವನ್ನು ಪರಿಶೀಲಿಸಿ: ಅಧಿಕೃತ ತೆರಿಗೆ ಇಲಾಖೆಯ ಸಂದೇಶಗಳು @gov.in ಎಂದು ಕೊನೆಗೊಳ್ಳುವ ಇಮೇಲ್ ವಿಳಾಸಗಳಿಂದ ಮಾತ್ರ ಬರುತ್ತವೆ. ಆದಾಯ ತೆರಿಗೆ ಇಲಾಖೆ ಎಂದಿಗೂ SMS ಅಥವಾ ಫೋನ್ ಕರೆಗಳ ಮೂಲಕ ವೈಯಕ್ತಿಕ ಮಾಹಿತಿಯನ್ನು ಕೇಳುವುದಿಲ್ಲ.
- ವಿಶ್ವಾಸಾರ್ಹ ವೇದಿಕೆಗಳನ್ನು ಬಳಸಿ: incometax.gov.in ಅಥವಾ ವಿಶ್ವಾಸಾರ್ಹ ವೃತ್ತಿಪರರ ಮೂಲಕ ಮಾತ್ರ ತೆರಿಗೆಗಳನ್ನು ಫೈಲ್ ಮಾಡಿ. ಪರಿಶೀಲಿಸದ ಥರ್ಡ್ ಪಾರ್ಟಿ ಸೈಟ್‌ಗಳು ಅಥವಾ ವಿನಂತಿಸದ ಲಿಂಕ್‌ಗಳಿಂದ ದೂರವಿರಿ.
- ಯಾವತ್ತೂ OTP ಅಥವಾ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಬೇಡಿ: ತೆರಿಗೆ ಅಧಿಕಾರಿಗಳು ಎಂದಿಗೂ OTPಗಳು, PINಗಳು, ಅಥವಾ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳನ್ನು ಕೇಳುವುದಿಲ್ಲ.
- ಸಾಫ್ಟ್‌ವೇರ್ ಅಪ್‌ಡೇಟ್ ಆಗಿರಲಿ: ನಿಮ್ಮ ಕಂಪ್ಯೂಟರ್ ಮತ್ತು ಫೋನ್‌ಗಳಲ್ಲಿ, ವಿಶೇಷವಾಗಿ ತೆರಿಗೆ ಸಲ್ಲಿಸುವ ಮತ್ತು ಹಣಕಾಸು ಅಪ್ಲಿಕೇಶನ್‌ಗಳಲ್ಲಿ ಇತ್ತೀಚಿನ ಆಂಟಿವೈರಸ್ ಮತ್ತು ಆಂಟಿ-ಮಾಲ್‌ವೇರ್ ಸಾಫ್ಟ್‌ವೇರ್ ಬಳಸಿ.
ಒಂದು ವೇಳೆ ನೀವು ವಂಚನೆಗೆ ಒಳಗಾಗಿದ್ದರೆ
- ತಕ್ಷಣವೇ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ.
- https://cybercrime.gov.in ನಲ್ಲಿ ಆನ್‌ಲೈನ್‌ನಲ್ಲಿ ಸೈಬರ್ ಅಪರಾಧ ದೂರು ದಾಖಲಿಸಿ ಅಥವಾ 1930 ಸಹಾಯವಾಣಿಗೆ ಕರೆ ಮಾಡಿ.
- ಘಟನೆಯ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಿ.
- ನಿಮ್ಮ ಕ್ರೆಡಿಟ್ ಮತ್ತು ಹಣಕಾಸಿನ ಚಟುವಟಿಕೆಯನ್ನು ನಿಯಮಿತವಾಗಿ ಪರಿಶೀಲಿಸುತ್ತಾ ಇರಿ.
PhonePe ನಲ್ಲಿ ತೆರಿಗೆ ವಂಚನೆಯನ್ನು ವರದಿ ಮಾಡುವುದು ಹೇಗೆ?
ನಿಮ್ಮನ್ನು PhonePe ಮೂಲಕ ಗುರಿಪಡಿಸಿದ್ದರೆ, ಹೀಗೆ ದೂರು ದಾಖಲಿಸಬಹುದು:
- PhonePe ಆ್ಯಪ್: Help/ಸಹಾಯ > “Have an issue with the transaction/ವಹಿವಾಟಿಗೆ ಸಂಬಂಧಿಸಿದಂತೆ ಸಮಸ್ಯೆಯಿದೆ” ಪುಟಕ್ಕೆ ಹೋಗಿ ನಿಮ್ಮ ದೂರನ್ನು ಸಲ್ಲಿಸಿ.
- ಗ್ರಾಹಕ ಬೆಂಬಲ: ಸಹಾಯಕ್ಕಾಗಿ PhonePe ಬೆಂಬಲ ಸಂಖ್ಯೆ 80-68727374 / 022-68727374 ಗೆ ಕರೆ ಮಾಡಿ.
- ಸಾಮಾಜಿಕ ಮಾಧ್ಯಮ: PhonePe ಅಧಿಕೃತ ಖಾತೆಗಳಲ್ಲಿ ವಂಚನೆಯನ್ನು ವರದಿ ಮಾಡಿ:
- ಕುಂದುಕೊರತೆಯ ಪೋರ್ಟಲ್: ನಿಮ್ಮ ಟಿಕೆಟ್ ಐಡಿ ಬಳಸಿ https://grievance.phonepe.com/ ನಲ್ಲಿ ಈಗಾಗಲೇ ಸಲ್ಲಿಸಿದ ದೂರುಗಳ ಸ್ಥಿತಿ ತಿಳಿಯಿರಿ.
ಅಧಿಕಾರಿಗಳಿಗೆ ವರದಿ ಮಾಡುವುದು
- ಟೆಲಿಕಮ್ಯುನಿಕೇಶನ್ ಇಲಾಖೆ (DOT): ಸಂಚಾರ್ ಸಾಥಿ ಪೋರ್ಟಲ್‌ನಲ್ಲಿರುವ ಚಕ್ಷು ಸೌಲಭ್ಯದ ಮೂಲಕ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ ಯಾವುದೇ ವಂಚನೆಯ ಮನವಿಯನ್ನು ವರದಿ ಮಾಡಿ.
ಪ್ರಮುಖ ಸೂಚನೆ — PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೈನ್‌ನಿಂದ ಬರದ ಯಾವುದೇ ಇಮೇಲ್‌ಗಳನ್ನು ನಿರ್ಲಕ್ಷಿಸಿ. ವಂಚನೆಯ ಬಗ್ಗೆ ನಿಮಗೆ ಅನುಮಾನವಿದ್ದರೆ, ದಯವಿಟ್ಟು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ.