
Trust & Safety
ನಿಮ್ಮ ಫೋನ್ ಕಳೆದುಹೋಗಿದೆಯೇ? ನಿಮ್ಮ ಉಳಿತಾಯವನ್ನು ಸುರಕ್ಷಿತವಾಗಿಡಲು ನೀವು ಏನು ಮಾಡಬೇಕು ಎಂಬುದು ಇಲ್ಲಿದೆ.
nidhiswadi|4 min read|03 July, 2025
ರಾತ್ರಿ 11 ಗಂಟೆ. ನಿಮ್ಮ ಸ್ನೇಹಿತ ನಿಮ್ಮನ್ನು ಮನೆಗೆ ಡ್ರಾಪ್ ಮಾಡಿ, ನೀವು ಬಾಗಿಲು ತೆಗೆಯುವಾಗ, ನಿಮ್ಮ ಫೋನ್ ನಿಮ್ಮ ಜೇಬಿನಲ್ಲಿಲ್ಲ ಎಂದು ಅರಿವಾಗುತ್ತದೆ! ಕಾಳಜಿಯಲ್ಲಿ ಎದೆಬಡಿತ ಹೆಚ್ಚಾಗುತ್ತದೆ.
ಗಾಬರಿಗೊಂಡು, ನಿಮ್ಮ ಫೋನ್ ಅನ್ನು ಎಲ್ಲಿ ಇಟ್ಟಿರಬಹುದು ಎಂದು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಬಹುಶಃ ನೀವು ಅದನ್ನು ಚಿತ್ರಮಂದಿರದಲ್ಲಿ ಮರೆತು ಬಂದಿರಬಹುದು. ಇಲ್ಲವೇ, ಶಾಪಿಂಗ್ ಮಾಡುವಾಗ ಎಲ್ಲಾದರೂ ಬೀಳಿಸಿರಬಹುದು, ಅಥವಾ ಯಾರಾದರೂ ಅದನ್ನು ಜೇಬಿನನಿಂದ ಕದ್ದಿರಲೂಬಹುದು!
ನಿಮಗೀಗ ಕಾಡುವ ವಿಷಯ, ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಡೇಟಾ – ನೀವು ಲಾಗಿನ್ ಮಾಡಿರುವ ಪಾವತಿ ಮತ್ತು ಬ್ಯಾಂಕಿಂಗ್ ಆ್ಯಪ್‌ಗಳು ಮತ್ತು ಬಹುಶಃ ನಿಮ್ಮ ನೋಟ್ಸ್ ಆ್ಯಪ್‌ನಲ್ಲಿರುವ ನಿಮ್ಮ ಪಾಸ್‌ವರ್ಡ್‌ಗಳ ಬಗ್ಗೆ ಮಾತ್ರ.
ಗಾಬರಿಯಾಗುವುದು ಸಹಜವೇ. ಆದರೆ ನಿಮಿಷಗಳಲ್ಲಿ ನೀವು ನಿಮ್ಮ ಉಳಿತಾಯಗಳನ್ನು ಕಾಪಾಡಿಟ್ಟುಕೊಳ್ಳುವುದು ಬಹುಮುಖ್ಯ.
ಮೊಬೈಲ್ ಕಳ್ಳತನದ ಬಗ್ಗೆ ಸತ್ಯ
ಇಂದಿನ ದಿನಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಕೇವಲ ಸಂವಹನ ಸಾಧನವಲ್ಲ – ಅದೇ ನಿಮ್ಮ ವಾಲೆಟ್, ನಿಮ್ಮ ಬ್ಯಾಂಕ್ ಮತ್ತು ನಿಮ್ಮ ಗುರುತು. ಕಳ್ಳರಿಗೆ ಇದು ತಿಳಿದಿದೆ. ಅವರ ಉದ್ದೇಶ ನಿಮ್ಮ ಫೋನ್ ಅನ್ನು ಮಾರಾಟ ಮಾಡಿ ಹಣ ಪಡೆಯುವುದೊಂದೇ ಅಲ್ಲ, ಅದನ್ನು ಅನ್‌ಲಾಕ್ ಮಾಡಿ ಹತ್ತು ಹಲವು ವಿಷಯಗಳಿಗೆ ಆಕ್ಸೆಸ್ ಪಡೆದು ವಂಚಿಸುವುದೂ ಆಗಿದೆ.
ಸಾಧನ ಕಳ್ಳತನದ ನಂತರ ಹಣಕಾಸಿನ ವಂಚನೆಗಳಾಗುವ ಬಗೆ ಮತ್ತು ಅವುಗಳನ್ನು ತಡೆಯುವ ವಿಧಗಳನ್ನು ತಿಳಿಯೋಣ ಬನ್ನಿ.
ಸಾಧನ ಕಳ್ಳತನದ ನಂತರ ಹಣಕಾಸಿನ ವಂಚನೆಗಳಾಗುವ ಬಗೆ
ಸಾಧನ ಕಳ್ಳತನದ ನಂತರ ಆಧುನಿಕ ಡಿಜಿಟಲ್ ಇಕೋ ಸಿಸ್ಟಮ್‌ಗಳಲ್ಲಿನ ದುರ್ಬಲತೆಗಳನ್ನು ಬಳಸಿಕೊಂಡು ಹೆಚ್ಚಾಗಿ ಹಣಕಾಸಿನ ವಂಚನೆಗಳಾಗುತ್ತವೆ. ಈ ರೀತಿಯ ಸೂಕ್ಷ್ಮ ವಿಷಯಗಳನ್ನು ವಂಚಕರು ಬಳಸಿಕೊಳ್ಳಬಹುದು:
- ಆಟೋ ಲಾಗ್ ಮಾಡಲಾದ ಪಾವತಿ ಆ್ಯಪ್‌ಗಳು: UPI, ಡಿಜಿಟಲ್ ವ್ಯಾಲೆಟ್‌ಗಳು ಅಥವಾ ಬ್ಯಾಂಕಿಂಗ್ ಆ್ಯಪ್‌ಗಳ೦ತಹ ಆಟೋ ಲಾಗ್ ಮಾಡಲಾದ ಪಾವತಿ ಆ್ಯಪ್‌ಗಳು ಕಳ್ಳರಿಗೆ ರಿ-ಆಥೆಂಟಿಕೇಷನ್ ಮಾಡದೇ ವಹಿವಾಟುಗಳನ್ನು ಮಾಡಲು ಅವಕಾಶ ಮಾಡಿಕೊಡುತ್ತವೆ. ಅಲ್ಲದೇ, ಸಾಧನವು ಬಲವಾದ ಸ್ಕ್ರೀನ್ ಲಾಕ್ ಅಥವಾ ಬಯೋಮೆಟ್ರಿಕ್ ಅಥವಾ ಪಿನ್-ಆಧಾರಿತ ಭದ್ರತೆಯಂತಹ ಆ್ಯಪ್-ನಿರ್ದಿಷ್ಟ ರಕ್ಷಣೆಗಳನ್ನು ಹೊಂದಿಲ್ಲದಿದ್ದರೆ ಅವರ ಕೆಲಸ ಇನ್ನಷ್ಟು ಸುಲಭವಾದಂತೆ!
- ಸೇವ್ ಮಾಡಿದ ಕಾರ್ಡ್ ವಿವರಗಳು: ಬ್ರೌಸರ್‌ಗಳು ಅಥವಾ ಆ್ಯಪ್‌ಗಳಲ್ಲಿ ಸೇವ್ ಮಾಡಲಾದ ಕಾರ್ಡ್ ವಿವರಗಳಿಂದ, ಕಳ್ಳರು ಸಂಗ್ರಹಿಸಿದ ಪಾವತಿ ಮಾಹಿತಿ ಬಳಸಿ, ಸುಲಭವಾಗಿ ಅನಧಿಕೃತ ಖರೀದಿಗಳನ್ನು ಮಾಡಬಹುದು.
- ದುರ್ಬಲ ಸ್ಕ್ರೀನ್ ಲಾಕ್‌ಗಳು ಅಥವಾ ಸ್ಕ್ರೀನ್ ಲಾಕ್ ಇಲ್ಲದಿರುವುದು: ದುರ್ಬಲ ಸ್ಕ್ರೀನ್ ಲಾಕ್‌ಗಳಿದ್ದರೆ ಅಥವಾ ಯಾವುದೇ ರೀತಿಯ ಸ್ಕ್ರೀನ್ ಲಾಕ್ ಇಲ್ಲದಿದ್ದರೆ ಕಳ್ಳರು ಸುಲಭವಾಗಿ ಸಾಧನವನ್ನು ಆಕ್ಸೆಸ್ ಮಾಡಬಹುದು. ಅಲ್ಲದೆ ಆ್ಯಪ್-ನಿರ್ದಿಷ್ಟ ಸುರಕ್ಷತಾ ಕ್ರಮಗಳಿಲ್ಲದಿದ್ದಲ್ಲಿ ಇಂತಹ ಸೂಕ್ಷ್ಮ ಆ್ಯಪ್‌ಗಳ ದುರ್ಬಳಕೆಯ ಅಪಾಯ ಇನ್ನೂ ಹೆಚ್ಚಾಗಿರುತ್ತದೆ.
- ಸಿಮ್ ಸ್ವಾಪ್ ದಾಳಿ: ಕಳ್ಳರು ಟೆಲಿಕಾಂ ಪೂರೈಕೆದಾರರನ್ನು ಬಲಿಪಶುವಿನ ಫೋನ್ ಸಂಖ್ಯೆಯನ್ನು ಹೊಸ ಸಿಮ್‌ಗೆ ವರ್ಗಾಯಿಸಲು ಮನವೊಲಿಸುವ ಮೂಲಕ ಸಿಮ್ ಸ್ವಾಪ್ ದಾಳಿಗಳನ್ನು ಮಾಡಬಹುದು. ಇದರಿಂದಾಗಿ ವಹಿವಾಟು ಪರಿಶೀಲನೆಗಾಗಿ ಉದ್ದೇಶಿಸಲಾದ ಒಂದು-ಬಾರಿ ಪಾಸ್‌ವರ್ಡ್‌ಗಳನ್ನು (OTP ಗಳು) ತಡೆಹಿಡಿಯಬಹುದು. ಈ ಹಗರಣದ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ಈ ಬ್ಲಾಗ್ ಅನ್ನು ಓದಬಹುದು.
- ಫಿಶಿಂಗ್ ದಾಳಿಗಳು: ಮತ್ತೊಂದು ಸಾಮಾನ್ಯ ತಂತ್ರವೆಂದರೆ ಫಿಶಿಂಗ್ ದಾಳಿಗಳು. ವಂಚಕರು ಕದ್ದ ಸಾಧನವನ್ನು ಬಳಸಿಕೊಂಡು ಬಲಿಪಶುವಿನ ಸಂಪರ್ಕಗಳು ಅಥವಾ ಇಮೇಲ್ ಅನ್ನು ಆಕ್ಸೆಸ್ ಮಾಡಿ, ಅವರಂತೆ ನಟಿಸಿ, ಸೂಕ್ಷ್ಮ ಮಾಹಿತಿ ಹಂಚಿಕೊಳ್ಳುವಂತೆ ಅಥವಾ ಹಣವನ್ನು ಕಳುಹಿಸುವಂತೆ ಇತರರನ್ನು ಮೋಸಗೊಳಿಸುತ್ತಾರೆ. ಫಿಶಿಂಗ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನೀವು ಈ ಬ್ಲಾಗ್ ಅನ್ನು ಓದಬಹುದು.
ಈ ವಿಧಾನಗಳು ತಾಂತ್ರಿಕ ಮತ್ತು ಮಾನವ ದುರ್ಬಲತೆಗಳೆರಡನ್ನೂ ಬಳಸಿಕೊಳ್ಳುತ್ತವೆ. ಹಾಗಾಗಿ, ಸಾಧನ ಕಳ್ಳತನವು ಗಮನಾರ್ಹ ಆರ್ಥಿಕ ನಷ್ಟಕ್ಕೆ ಅವಕಾಶ ಮಾಡಿಕೊಡುತ್ತದೆ.
ಆ್ಯ೦ಟಿ-ಥೆಫ್ಟ್ ಅಥವಾ ಕಳ್ಳತನ ವಿರೋಧಿ ಕ್ರಮಗಳನ್ನು ತಿಳಿದುಕೊಳ್ಳುವುದು ಏಕೆ ಮುಖ್ಯ
ಭಾರತದಲ್ಲಿ, ಸಾಧನ ಕಳ್ಳತನದ ನಂತರ ಹಣಕಾಸಿನ ವಂಚನೆ ಪ್ರಕರಣಗಳು ಹೆಚ್ಚಾಗಿವೆ, ಇದಕ್ಕೆ ಕಾರಣ ದುರ್ಬಲ ಸ್ಕ್ರೀನ್ ಲಾಕ್‌ಗಳು ಅಥವಾ ನಿಗಾ ವಹಿಸದಂತಹ ಖಾತೆಗಳು. ಆ್ಯ೦ಟಿ-ಥೆಫ್ಟ್ ಅಥವಾ ಕಳ್ಳತನ-ವಿರೋಧಿ ಕ್ರಮಗಳನ್ನು ತಿಳಿದುಕೊಳ್ಳುವುದು ಮತ್ತು ಕಾರ್ಯಗತಗೊಳಿಸುವುದರಿಂದ ಬಳಕೆದಾರರು ತಮ್ಮ ಸಾಧನಗಳನ್ನು ಸುರಕ್ಷಿತವಾಗಿರಿಸಲು, ಹಣಕಾಸಿನ ಅಪಾಯಗಳನ್ನು ಕಡಿಮೆ ಮಾಡಲು ಮತ್ತು ನಷ್ಟಗಳನ್ನು ತಡೆಗಟ್ಟಲು ತ್ವರಿತವಾಗಿ ಕಾರ್ಯನಿರ್ವಹಿಸಲು, ಅವರ ಡಿಜಿಟಲ್ ಮತ್ತು ಆರ್ಥಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರ ನೀಡುತ್ತದೆ.
ನಿಮ್ಮ ಸಾಧನವನ್ನು ಹೇಗೆ ರಕ್ಷಿಸುವುದು
ಸಾಧನ ಕಳ್ಳತನದ ನಂತರ ನಿಮ್ಮ ಹಣಕಾಸಿನ ಮಾಹಿತಿಯನ್ನು ರಕ್ಷಿಸಲು, ಈ ಕ್ರಮಗಳನ್ನು ಕೈಗೊಳ್ಳಿ:
- ನಿಮ್ಮ ಸಾಧನವನ್ನು ಬಲವಾದ ಲಾಕ್‌ಗಳೊಂದಿಗೆ ಸುರಕ್ಷಿತಗೊಳಿಸಿ: ಸಂಕೀರ್ಣ ಪಾಸ್‌ವರ್ಡ್‌ಗಳು, ಬಯೋಮೆಟ್ರಿಕ್ ದೃಢೀಕರಣ (ಬೆರಳಚ್ಚು ಅಥವಾ ಮುಖ ಗುರುತಿಸುವಿಕೆ) ಬಳಸಿ, ಮತ್ತು ನಿಷ್ಕ್ರಿಯತೆಯ ನಂತರ ನಿಮ್ಮ ಸಾಧನವನ್ನು ಸುರಕ್ಷಿತಗೊಳಿಸಲು ಆಟೋ-ಲಾಕ್ ಅನ್ನು ಸಕ್ರಿಯಗೊಳಿಸಿ. “1234” ನಂತಹ ಊಹಿಸಬಹುದಾದ ಪಿನ್‌ಗಳನ್ನು ಬಳಸಬೇಡಿ.
- ಆ್ಯಪ್ ಲಾಕ್‌ಗಳನ್ನು ಹೊಂದಿಸಿ: ಸಾಧನವು ಅನ್‌ಲಾಕ್ ಆಗಿದ್ದರೂ ಸಹ ಆ್ಯಪ್‌ಗಳನ್ನು ರಕ್ಷಿಸಲು ಬ್ಯಾಂಕಿಂಗ್ ಮತ್ತು ಪಾವತಿ ಆ್ಯಪ್‌ಗಳಲ್ಲಿ (ಉದಾ., PhonePe ಪ್ರೊಫೈಲ್ > ಭದ್ರತೆ > ಬಯೋಮೆಟ್ರಿಕ್ ಮತ್ತು ಸ್ಕ್ರೀನ್ ಲಾಕ್) ಹೆಚ್ಚುವರಿ ಪಿನ್‌ಗಳು ಅಥವಾ ಬಯೋಮೆಟ್ರಿಕ್‌ಗಳನ್ನು ಸಕ್ರಿಯಗೊಳಿಸಿ.
- ಸೂಕ್ಷ್ಮ ಮಾಹಿತಿಯ ಆಟೋ-ಸೇವ್ ಅನ್ನು ನಿಷ್ಕ್ರಿಯಗೊಳಿಸಿ: ಎನ್‌ಕ್ರಿಪ್ಶನ್ ಇಲ್ಲದೆ ಬ್ರೌಸರ್‌ಗಳು ಅಥವಾ ಆ್ಯಪ್‌ಗಳಲ್ಲಿ ಕಾರ್ಡ್ ವಿವರಗಳು ಅಥವಾ UPI ಐಡಿಗಳನ್ನು ಸಂಗ್ರಹಿಸುವುದನ್ನು ತಪ್ಪಿಸಿ. ಸುರಕ್ಷಿತ ಸಂಗ್ರಹಣೆಗಾಗಿ ವಿಶ್ವಾಸಾರ್ಹ ಪಾಸ್‌ವರ್ಡ್ ಮ್ಯಾನೇಜರ್ ಅನ್ನು ಬಳಸಿ.
- ರಿಮೋಟ್ ಟ್ರ್ಯಾಕಿಂಗ್ ಮತ್ತು ಡೇಟಾ ವೈಪಿಂಗ್ ಅನ್ನು ಸಕ್ರಿಯಗೊಳಿಸಿ: ನಿಮ್ಮ ಸಾಧನವನ್ನು ರಿಮೋಟ್ ಟ್ರ್ಯಾಕ್ ಮಾಡಲು, ಲಾಕ್ ಮಾಡಲು ಅಥವಾ ಅಳಿಸಲು “Find My Device/ನನ್ನ ಸಾಧನವನ್ನು ಹುಡುಕಿ” (ಆಂಡ್ರಾಯ್ಡ್) ಅಥವಾ “Find My iPhone/ನನ್ನ ಐಫೋನ್ ಹುಡುಕಿ” (iOS) ಅನ್ನು ಸಕ್ರಿಯಗೊಳಿಸಿ.
- ಸಾಫ್ಟ್‌ವೇರ್ ಅಪ್ಡೇಟ್ ಮಾಡುತ್ತೀರಿ: ಭದ್ರತಾ ದೋಷಗಳನ್ನು ಸರಿಪಡಿಸಲು ನಿಮ್ಮ ಸಾಧನದ ಆಪರೇಟಿಂಗ್ ಸಿಸ್ಟಮ್ ಮತ್ತು ಆ್ಯಪ್‌ಗಳನ್ನು ನಿಯಮಿತವಾಗಿ ಅಪ್ಡೇಟ್ ಮಾಡಿ.
- ಸಾಧನ ನಷ್ಟವನ್ನು ತಕ್ಷಣ ವರದಿ ಮಾಡಿ: ನಿಮ್ಮ ಸಿಮ್ ಕಾರ್ಡ್ ಅನ್ನು ನಿರ್ಬಂಧಿಸಲು ನಿಮ್ಮ ಟೆಲಿಕಾಂ ಪೂರೈಕೆದಾರರನ್ನು ಸಂಪರ್ಕಿಸಿ ಮತ್ತು ಖಾತೆಗಳನ್ನು ಅಮಾನತುಗೊಳಿಸಲು ಬ್ಯಾಂಕ್‌ಗಳು ಅಥವಾ ವ್ಯಾಲೆಟ್ ಪೂರೈಕೆದಾರರಿಗೆ ಸೂಚಿಸಿ.
- ಬ್ಯಾಂಕ್ ಖಾತೆಗಳ ಮೇಲೆ ನಿಗಾ ಇಡಿ: ವಹಿವಾಟುಗಳಿಗೆ SMS/ಇಮೇಲ್ ಅಲರ್ಟ್ ಹೊಂದಿಸಿ ಮತ್ತು ಪ್ರತಿದಿನ ಖಾತೆಗಳನ್ನು ಪರಿಶೀಲಿಸಿ. ಅನಧಿಕೃತ ವಹಿವಾಟುಗಳನ್ನು ತಕ್ಷಣ ವರದಿ ಮಾಡಿ.
- ಡಿವೈಸ್ ಬೈಂಡಿಂಗ್ ವೈಶಿಷ್ಟ್ಯಗಳನ್ನು ಬಳಸಿ: UPI ಆ್ಯಪ್‌ಗಳು (ಉದಾ. PhonePe, Google Pay) ಡಿವೈಸ್-ಬೌಂಡ್ ಆಗಿವೆಯೇ ಎಂದು ಖಚಿತಪಡಿಸಿಕೊಳ್ಳಿ, ಆಗ ಸಿಮ್ ಬದಲಾಯಿಸಿಕೊಂಡರೂ ಸಹ ಮರು-ಪರಿಶೀಲನೆಯ ಅಗತ್ಯವಿರುತ್ತದೆ.
ನಿಮ್ಮ PhonePe ಖಾತೆಯನ್ನು ನಿರ್ಬಂಧಿಸುವುದು ಮತ್ತು ನಂತರ ಆಕ್ಸೆಸ್ ಪಡೆಯುವುದು ಹೇಗೆ
ನಿಮ್ಮ ಸಾಧನ ಕಳುವಾದರೆ, ಅನಧಿಕೃತ ಆಕ್ಸೆಸ್ ತಡೆಯಲು ನಿಮ್ಮ PhonePe ಖಾತೆಯನ್ನು ತಕ್ಷಣವೇ ನಿರ್ಬಂಧಿಸಿ:
- ಖಾತೆಯನ್ನು ಬ್ಲಾಕ್ ಮಾಡಿ:
- ಗ್ರಾಹಕ ಸೇವಾ ಕೇಂದ್ರದ ಮೂಲಕ: ಕಳ್ಳತನವನ್ನು ವರದಿ ಮಾಡಲು ಮತ್ತು ಖಾತೆಯನ್ನು ಅಮಾನತುಗೊಳಿಸಲು ವಿನಂತಿಸಲು PhonePe ಬೆಂಬಲವನ್ನು 80-68727374 ಅಥವಾ 022-68727374 ಗೆ ಕರೆ ಮಾಡಿ.
- ವೆಬ್‌ಫಾರ್ಮ್ ಮೂಲಕ: ಸಮಸ್ಯೆಯನ್ನು ವಿವರಿಸಿ PhonePe ಬೆಂಬಲ ಫಾರ್ಮ್ ಮೂಲಕ ಟಿಕೆಟ್ ಸಲ್ಲಿಸಿ.
- ಸಾಮಾಜಿಕ ಮಾಧ್ಯಮದ ಮೂಲಕ: ಘಟನೆಯನ್ನು ವರದಿ ಮಾಡಲು Twitter ನಲ್ಲಿ @PhonePeSupport ಅಥವಾ Facebook ನಲ್ಲಿ OfficialPhonePe ಅನ್ನು ಸಂಪರ್ಕಿಸಿ.
- ಸೈಬರ್ ಅಪರಾಧ ಸೆಲ್ ಮೂಲಕ: ವಂಚನೆಯ ಶಂಕೆಯಿದ್ದರೆ, cybercrime.gov.in ನಲ್ಲಿ ದೂರು ದಾಖಲಿಸಿ ಅಥವಾ 1930 ಗೆ ಕರೆ ಮಾಡಿ.
- ಪುನಃ ಆಕ್ಸೆಸ್ ಪಡೆಯುವುದು:
- PhonePe ಬೆಂಬಲವನ್ನು ಸಂಪರ್ಕಿಸಿ: ನೀವು ಹೊಸ ಸಾಧನ ಅಥವಾ ಸಿಮ್ ಅನ್ನು ಪಡೆದ ನಂತರ, ನಿಮ್ಮ ಗುರುತನ್ನು (ಉದಾ. ನೋಂದಾಯಿತ ಮೊಬೈಲ್ ಸಂಖ್ಯೆ, ಇಮೇಲ್ ಅಥವಾ KYC ವಿವರಗಳು) ಪರಿಶೀಲಿಸಲು ಕರೆ ಮಾಡಿ ಅಥವಾ ವೆಬ್‌ಫಾರ್ಮ್ ಬಳಸಿ.
- ಖಾತೆಯನ್ನು ಮರು ಪರಿಶೀಲಿಸಿ: ನಿಮ್ಮ ಖಾತೆಯನ್ನು ಹೊಸ ಸಾಧನಕ್ಕೆ ಮರು ಲಿಂಕ್ ಮಾಡಲು PhonePe ಯ ಸೂಚನೆಗಳನ್ನು ಅನುಸರಿಸಿ, ಇದರಲ್ಲಿ OTP ಪರಿಶೀಲನೆ ಅಥವಾ KYC ಮರು ಸಲ್ಲಿಕೆ ಒಳಗೊಂಡಿರಬಹುದು.
- ವಹಿವಾಟುಗಳನ್ನು ಪರಿಶೀಲಿಸಿ: ಆಕ್ಸೆಸ್ ಮರಳಿ ಪಡೆದ ನಂತರ, PhonePe ಆ್ಯಪ್‌ನಲ್ಲಿ ನಿಮ್ಮ ವಹಿವಾಟಿನ ಇತಿಹಾಸವನ್ನು ಪರಿಶೀಲಿಸಿ (Help/ಸಹಾಯ > Transaction History/ವಹಿವಾಟಿನ ಇತಿಹಾಸ) ಮತ್ತು ಯಾವುದೇ ಅನಧಿಕೃತ ಚಟುವಟಿಕೆಯನ್ನು Help/ಸಹಾಯ > Have an issue with the transaction/ವಹಿವಾಟಿನಲ್ಲಿ ಸಮಸ್ಯೆ ಇದೆ ಮೂಲಕ ವರದಿ ಮಾಡಿ.
- ದೂರು ಪರಿಹಾರ: ಸಮಸ್ಯೆಗಳು ಮುಂದುವರಿದರೆ, ದೂರು ದಾಖಲಿಸಲು ನಿಮ್ಮ ಟಿಕೆಟ್ ಐಡಿಯೊಂದಿಗೆ grievance.phonepe.com ಗೆ ಲಾಗಿನ್ ಮಾಡಿ.

ಹೆಚ್ಚಿನ ಮಾಹಿತಿ
- ಇತರ ರೀತಿಯ ವಂಚನೆಗಳು ಮತ್ತು ಸುರಕ್ಷಿತವಾಗಿರುವುದು ಹೇಗೆ ಎಂಬುದರ ಕುರಿತು ತಿಳಿಯಲು ಇವುಗಳನ್ನು ಓದಿ.
- ನಮ್ಮ ಟ್ರಸ್ಟ್ ಮತ್ತು ಸುರಕ್ಷತಾ ಮುಖ್ಯಸ್ಥರು ವಂಚನೆಗಳು ಹೇಗೆ ಸಂಭವಿಸುತ್ತವೆ ಮತ್ತು ನಮ್ಮ ಗ್ರಾಹಕರನ್ನು ರಕ್ಷಿಸಲು ನಾವು ತೆಗೆದುಕೊಳ್ಳುವ ಕ್ರಮಗಳನ್ನು ವಿವರಿಸುವುದನ್ನು ಇಲ್ಲಿ ವೀಕ್ಷಿಸಿ.
ನೀವು ಈ ಹಗರಣಕ್ಕೆ ಬಲಿಯಾಗಿದ್ದರೆ ಹೇಗೆ ವರದಿ ಮಾಡುವುದು
PhonePe ನಲ್ಲಿ ವಂಚಕರಿಂದ ನೀವು ಮೋಸ ಹೋಗಿದ್ದರೆ, ನೀವು ತಕ್ಷಣ ಈ ಕೆಳಗಿನ ವಿಧಾನಗಳಲ್ಲಿ ಸಮಸ್ಯೆಯನ್ನು ತಿಳಿಸಬಹುದು:
- PhonePe ಆ್ಯಪ್: ಸಹಾಯ ವಿಭಾಗಕ್ಕೆ ಹೋಗಿ ಮತ್ತು “ವಹಿವಾಟಿನಲ್ಲಿ ಸಮಸ್ಯೆ ಇದೆ” ಆಯ್ಕೆಯ ಅಡಿಯಲ್ಲಿ ಸಮಸ್ಯೆಯನ್ನು ತಿಳಿಸಿ.
- PhonePe ಗ್ರಾಹಕ ಸೇವಾ ಸಂಖ್ಯೆ: ಸಮಸ್ಯೆಯನ್ನು ತಿಳಿಸಲು ನೀವು PhonePe ಗ್ರಾಹಕ ಸೇವಾ ಸಂಖ್ಯೆ 80–68727374 / 022–68727374 ಗೆ ಕರೆ ಮಾಡಬಹುದು, ನಂತರ ಗ್ರಾಹಕ ಸೇವಾ ಏಜೆಂಟ್ ನಿಮ್ಮ ಸಮಸ್ಯೆಗೆ ಟಿಕೆಟ್ ರಚಿಸಿ ಸಹಾಯ ಮಾಡುತ್ತಾರೆ.
- ವೆಬ್‌ಫಾರ್ಮ್ ಸಲ್ಲಿಕೆ: ನೀವು PhonePe ವೆಬ್‌ಫಾರ್ಮ್ https://support.phonepe.com/ ಬಳಸಿಕೊಂಡು ಟಿಕೆಟ್ ರಚಿಸಬಹುದು.
- ಸಾಮಾಜಿಕ ಮಾಧ್ಯಮ: ನೀವು ವಂಚನೆಯ ಘಟನೆಗಳನ್ನು PhonePe ಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ವರದಿ ಮಾಡಬಹುದು.
- ಟ್ವಿಟ್ಟರ್— https://twitter.com/PhonePeSupport
- ಫೇಸ್‌ಬುಕ್— https://www.facebook.com/OfficialPhonePe
- ದೂರು: ಅಸ್ತಿತ್ವದಲ್ಲಿರುವ ದೂರಿನ ಕುರಿತು ಹೆಚ್ಚಿನ ಮಾಹಿತಿ ವರದಿ ಮಾಡಲು, ನೀವು https://grievance.phonepe.com/ ಗೆ ಲಾಗಿನ್ ಆಗಬಹುದು ಮತ್ತು ಈ ಹಿಂದೆ ಸಲ್ಲಿಸಲಾದ ಟಿಕೆಟ್ ಐಡಿಯನ್ನು ಹಂಚಿಕೊಳ್ಳಬಹುದು.
- ಸೈಬರ್ ಸೆಲ್: ಕೊನೆಯದಾಗಿ, ನೀವು ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ವಂಚನೆ ದೂರುಗಳನ್ನು ವರದಿ ಮಾಡಬಹುದು ಅಥವಾ https://www.cybercrime.gov.in/ ನಲ್ಲಿ ಆನ್‌ಲೈನ್‌ನಲ್ಲಿ ದೂರು ನೋಂದಾಯಿಸಬಹುದು ಅಥವಾ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು 1930 ಮೂಲಕ ಸಂಪರ್ಕಿಸಬಹುದು.
ಪ್ರಮುಖ ಸೂಚನೆ — PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೇನ್‌ನಿಂದ ಬಂದಿರದ, PhonePe ನಿಂದ ಬಂದಿದೆ ಎಂದು ಹೇಳಿಕೊಳ್ಳುವ ಎಲ್ಲಾ ಇಮೇಲ್‌ಗಳನ್ನು ನಿರ್ಲಕ್ಷಿಸಿ. ವಂಚನೆಯ ಅನುಮಾನವಿದ್ದರೆ, ದಯವಿಟ್ಟು ತಕ್ಷಣ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ.
Author
