PhonePe Blogs Main Featured Image

Trust & Safety

RBI ಡಿಜಿಟಲ್ ಜಾಗೃತಿ ಸಪ್ತಾಹ: ಸೋಶಿಯಲ್ ಇಂಜಿನಿಯರಿಂಗ್ ಮೋಸಗಳ ಬಗ್ಗೆ ನೀವು ತಿಳಿಯಬೇಕಾದ ವಿಷಯಗಳು

PhonePe Regional|2 min read|10 May, 2021

URL copied to clipboard

ಮಾಹಿತಿಯನ್ನು ಮಾರ್ಚ್ 12, 2026 ರಂದು ಅಪ್‌ಡೇಟ್ ಮಾಡಲಾಗಿದೆ.

ಸೋಶಿಯಲ್ ಇಂಜಿನಿಯರಿಂಗ್ ಅಂದರೆ ಜನರನ್ನು ಮಾತಿನಲ್ಲೇ ಮರುಳು ಮಾಡಿ, ಅವರ ಬ್ಯಾಂಕ್ ಮತ್ತು ಹಣದ ರಹಸ್ಯಗಳನ್ನು ತಿಳಿದುಕೊಳ್ಳುವ ಒಂದು ಕುತಂತ್ರ. ಇಲ್ಲಿ ಮೋಸಗಾರರು ಯಾವುದೇ ಬೆದರಿಕೆ ಹಾಕುವುದಿಲ್ಲ ಅಥವಾ ನಿಮ್ಮ ಫೋನ್‌ಗೆ ವೈರಸ್ ಹಾಕುವುದಿಲ್ಲ; ಬದಲಿಗೆ ನಿಮ್ಮನ್ನು ನಂಬಿಸಿ ನೀವೇ ಸ್ವತಃ ಮಾಹಿತಿ ಕೊಡುವಂತೆ ಮಾಡುತ್ತಾರೆ.

ಈ ಕಳ್ಳರು ಮೊದಲು ನಿಮಗೆ ಭಯ ಅಥವಾ ಅವಸರ ಹುಟ್ಟಿಸುತ್ತಾರೆ. ಇದರಿಂದ ನೀವು ಯೋಚನೆ ಮಾಡಲು ಸಮಯವೇ ಸಿಗದಂತೆ ಮಾಡುತ್ತಾರೆ. “ನಿಮ್ಮ ಖಾತೆ ಬ್ಲಾಕ್ ಆಗಿದೆ” ಅಥವಾ “ನಿಮ್ಮ ಚಂದಾದಾರಿಕೆ ಮುಗಿಯುತ್ತಿದೆ” ಎಂದು ಮೆಸೇಜ್ ಅಥವಾ ಇಮೇಲ್ ಕಳುಹಿಸಿ, ನೀವು ಯೋಚನೆ ಮಾಡುವ ಮೊದಲೇ ಏನಾದರೂ ಒಂದು ಮಾಡುವಂತೆ ಒತ್ತಾಯಿಸುತ್ತಾರೆ.

ಈ ಸೋಶಿಯಲ್ ಇಂಜಿನಿಯರಿಂಗ್ ಮೋಸ ಎಂದರೇನು ಮತ್ತು ಇದರಿಂದ ಪಾರಾಗುವುದು ಹೇಗೆ ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ.

ಏನಿದು ಸೋಶಿಯಲ್ ಇಂಜಿನಿಯರಿಂಗ್?

ಸೋಶಿಯಲ್ ಇಂಜಿನಿಯರಿಂಗ್ ಅಂದರೆ ನಿಮ್ಮನ್ನು ನಂಬಿಸಿ ನಿಮ್ಮ ಖಾಸಗಿ ಮಾಹಿತಿ ಪಡೆಯುವುದು ಅಥವಾ ನಿಮ್ಮ ಭದ್ರತೆಗೆ ತೊಡಕಾಗುವಂತೆ ಮಾಡುವುದು. ಮೋಸಗಾರರು ಭಯ, ದುರಾಸೆ, ಅಥವಾ ಸಹಾನುಭೂತಿ ಹುಟ್ಟಿಸಿಯೋ ಅಥವಾ ನಕಲಿ ಗ್ರಾಹಕ ಬೆಂಬಲದಂತೆ ನಟಿಸಿಯೋ ನಿಮ್ಮಿಂದ ತಪ್ಪು ಮಾಡಿಸುತ್ತಾರೆ. ಅವರು ಬ್ಯಾಂಕ್‌ನವರು, ಸರ್ಕಾರಿ ಅಧಿಕಾರಿಗಳು ಅಥವಾ ನಿಮ್ಮ ಪರಿಚಯಸ್ಥರಂತೆ ಮಾತಾಡಿ ನಿಮ್ಮ ನಂಬಿಕೆ ಗೆಲ್ಲುತ್ತಾರೆ, ನಂತರ ನಿಮ್ಮನ್ನೇ ಲೂಟಿ ಮಾಡುತ್ತಾರೆ.

ಅತ್ಯಂತ ಸಾಮಾನ್ಯ ರೀತಿಯ ಸೋಷಿಯಲ್ ಎಂಜಿನಿಯರಿಂಗ್ ಹಗರಣದ ಸಾಧನಗಳಲ್ಲಿ ಫಿಶಿಂಗ್ ಸೇರಿದೆ, ಇಲ್ಲಿ ವಂಚಕರು ಮಾಹಿತಿಯನ್ನು ಹೊರತೆಗೆಯಲು ಇಮೇಲ್‌ಗಳು ಅಥವಾ ಪಠ್ಯ ಸಂದೇಶಗಳನ್ನು ಮಾಧ್ಯಮವಾಗಿ ಬಳಸುತ್ತಾರೆ. ವಿಷಿಂಗ್ ಅಥವಾ ವಾಯ್ಸ್ ಫಿಶಿಂಗ್ ಇನ್ನೊಂದು ಸಾಧನ, ಇಲ್ಲಿ ಬಲಿಪಶುವನ್ನು ಆಮಿಷವೊಡ್ಡಲು ಫೋನ್ ಕರೆಗಳಲ್ಲಿ ಮರಳು ಮಾಡುತ್ತಾರೆ. ಮತ್ತೊಂದು ಡಿಜಿಟಲ್ ಅರೆಸ್ಟ್ ಎಂಬ ಸಾಧನ, ಇಲ್ಲಿ ವಂಚಕರು ಕಾನೂನು ಜಾರಿ ಅಧಿಕಾರಿಗಳಂತೆ ನಟಿಸುತ್ತಾರೆ ಮತ್ತು ಅವರ ಬೇಡಿಕೆಗಳನ್ನು ಈಡೇರಿಸುವವರೆಗೆ ವ್ಯಕ್ತಿಗಳನ್ನು “ಡಿಜಿಟಲ್ ಬಂಧನದಲ್ಲಿ” ಇಡುತ್ತಾರೆ.

ಈ ಮೋಸದ ಜಾಲ ಹೇಗೆ ಕೆಲಸ ಮಾಡುತ್ತದೆ?

ಸಾಮಾನ್ಯವಾಗಿ ವಂಚಿಸುವ ಬಗೆ ಇಂತಿದೆ:

  1. ವಂಚಕರು ನಿಮ್ಮ ಬ್ಯಾಂಕ್‌ನಿಂದ ಗ್ರಾಹಕ ಬೆಂಬಲ ಪ್ರತಿನಿಧಿ ಎಂದು ಹೇಳಿಕೊಂಡು ನಿಮ್ಮ ಖಾತೆಯನ್ನು ಪರಿಶೀಲಿಸಲು ಕರೆ ಮಾಡುತ್ತಾರೆ. ಇದು ಕಡ್ಡಾಯ ಹಂತವಾಗಿದ್ದು, ತಕ್ಷಣವೇ ಕರೆಯಲ್ಲಿ ಪೂರ್ಣಗೊಳಿಸಬೇಕು, ವಿಫಲವಾದರೆ ನಿಮ್ಮ ಖಾತೆಯಲ್ಲಿನ ಉಳಿತಾಯವನ್ನು ಆಕ್ಸೆಸ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ ಎಂದು ನಂಬಿಸಲು ಪ್ರಯತ್ನಿಸುತ್ತಾರೆ.
  2. ಒಮ್ಮೆ ನಿಮ್ಮ ನಂಬಿಕೆ ಗೆದ್ದ ನಂತರ, ಕಾರ್ಡ್ ಸಂಖ್ಯೆ, ಪಿನ್ ಮತ್ತು CVV ಸೇರಿದಂತೆ ನಿಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಲು ಅವರು ನಿಮ್ಮನ್ನು ಕೇಳುತ್ತಾರೆ.
  3. ಪರಿಶೀಲನೆಯನ್ನು ಪೂರ್ಣಗೊಳಿಸಲು OTP ಒದಗಿಸುವಂತೆ ಕರೆ ಮಾಡಿದವರು ನಿಮ್ಮನ್ನು ಕೇಳುತ್ತಾರೆ.
  4. ವಾಸ್ತವದಲ್ಲಿ, ನೀವು OTP ಹಂಚಿಕೊಂಡ ತಕ್ಷಣ, ನಿಮ್ಮ ಖಾತೆಯಲ್ಲಿದ್ದ ಹಣವನ್ನೆಲ್ಲಾ ದೋಚಿಬಿಡುತ್ತಾನೆ. ಅಲ್ಲಿಗೆ ವಂಚನೆ ಸಫಲವಾದಂತೆ.

ದಯವಿಟ್ಟು ನೆನಪಿಡಿ: ನಿಜವಾದ ಗ್ರಾಹಕ ಬೆಂಬಲ ಪ್ರತಿನಿಧಿಯು ನಿಮ್ಮ ಸಂಪೂರ್ಣ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳು ಅಥವಾ OTP ಅನ್ನು ಹಂಚಿಕೊಳ್ಳಲು ನಿಮ್ಮನ್ನು ಎಂದಿಗೂ ಕೇಳುವುದಿಲ್ಲ. ಅವರು ಅಧಿಕೃತ ಲ್ಯಾಂಡ್‌ಲೈನ್ ಸಂಖ್ಯೆಗಳಿಂದ ಮಾತ್ರ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ಮೊಬೈಲ್ ಸಂಖ್ಯೆಯಿಂದಲ್ಲ. ನಿಮ್ಮ ಬ್ಯಾಂಕ್‌ನ ಅಧಿಕೃತ ಡೊಮೇನ್‌ನಿಂದ ಕಳುಹಿಸದ ಇಮೇಲ್‌ಗಳನ್ನು ನಿರ್ಲಕ್ಷಿಸಬೇಕು.

ಸೋಶಿಯಲ್ ಇಂಜಿನಿಯರಿಂಗ್‌ನಿಂದ ಸುರಕ್ಷಿತವಾಗಿರುವುದು ಹೇಗೆ?

  • ನೀವು SMS ಅಥವಾ ಇತರ ಚಾನೆಲ್‌ಗಳ ಮೂಲಕ ಸ್ವೀಕರಿಸುವ OTP, ಪಿನ್‌ ಅಥವಾ ಯಾವುದೇ ಇತರ ಕೋಡ್‌ಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ. ಗಮನಿಸಬೇಕಾದ ಇನ್ನೊಂದು ಬಹುಮುಖ್ಯ ವಿಷಯ- ಹಣ ಕಳುಹಿಸಲು ಮಾತ್ರ ಪಿನ್ ಒತ್ತಬೇಕು, ಹಣ ಪಡೆಯಲು ಅಲ್ಲ. ರಿಫಂಡ್ ಅಥವಾ ಕ್ಯಾಶ್‌ಬ್ಯಾಕ್ ಪಡೆಯಲು ಪಿನ್ ನಮೂದಿಸುವಂತೆ ಯಾರಾದರೂ ನಿಮ್ಮನ್ನು ಕೇಳಿದರೆ, ಅದು ಖಂಡಿತವಾಗಿಯೂ ಹಗರಣವಾಗಿದೆ.
  • ಸಾರ್ವಜನಿಕ ವೇದಿಕೆಯಲ್ಲಿ ನಿಮ್ಮ ಖಾತೆ ಸಂಖ್ಯೆ ಅಥವಾ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿವರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ. ನೀವು ಸಾಮಾಜಿಕ ಮಾಧ್ಯಮದಲ್ಲಿ ದೂರು ಸಲ್ಲಿಸುತ್ತಿದ್ದರೆ, ನಿಮ್ಮ ಫೋನ್ ಸಂಖ್ಯೆ ಅಥವಾ ವೈಯಕ್ತಿಕ ವಿವರಗಳನ್ನು ಪೋಸ್ಟ್ ಮಾಡಬೇಡಿ ಏಕೆಂದರೆ ವಂಚಕರು ಅದನ್ನೇ ಹೊಂಚು ಹಾಕುತ್ತಿರುತ್ತಾರೆ.
  • ಬ್ಯಾಂಕ್‌ನಿಂದ ಎಂದು ಹೇಳಿಕೊಳ್ಳುವ ಮತ್ತು ನಿಮ್ಮ ವೈಯಕ್ತಿಕ ವಿವರಗಳನ್ನು ಕೇಳುವ ಅಪರಿಚಿತ ಸಂಖ್ಯೆಯಿಂದ ನೀವು ಕರೆ ಸ್ವೀಕರಿಸಿದರೆ, ಕರೆಯನ್ನು ಮುಂದುವರಿಸಬೇಡಿ ಮತ್ತು ಅದನ್ನು ಕಡಿತಗೊಳಿಸಿ.
  • ಇಮೇಲ್‌ಗಳ ಸಂದರ್ಭದಲ್ಲಿ, ಕಳುಹಿಸುವವರ ಡೊಮೇನ್ ಪರಿಶೀಲಿಸಿ. ಅದು [XYZ]@gmail.com ಅಥವಾ ಯಾವುದೇ ಸಾಮಾನ್ಯ ಡೊಮೇನ್ ಆಗಿದ್ದರೆ, ಮೇಲ್ ಅನ್ನು ನಿರ್ಲಕ್ಷಿಸಿ. ಎಲ್ಲಾ ಅಧಿಕೃತ ಬ್ಯಾಂಕ್ ಸಂವಹನಗಳು ಸುರಕ್ಷಿತ ಡೊಮೇನ್‌ಗಳಿಂದ ಬರುತ್ತವೆ.
  • ಯಾವುದೇ ಕಾರಣಕ್ಕೂ ನಿಮ್ಮ ಸ್ಕ್ರೀನ್ ಶೇರ್ ಮಾಡಬೇಡಿ. ಯಾವುದೇ ಬ್ಯಾಂಕ್ ಅಥವಾ ಸೇವಾ ಪೂರೈಕೆದಾರರು ನಿಮ್ಮ ಸ್ಕ್ರೀನ್ ಅನ್ನು ಹಂಚಿಕೊಳ್ಳಲು ಅಥವಾ ರಿಮೋಟ್ ಆಕ್ಸೆಸ್ ನೀಡಲು ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಲು ನಿಮ್ಮನ್ನು ಎಂದಿಗೂ ಕೇಳುವುದಿಲ್ಲ.
  • ಯಾವುದೇ ಚಂದಾದಾರಿಕೆ ಮ್ಯಾಂಡೇಟ್ ಅಥವಾ ಆಟೋ-ಪೇ ವಿನಂತಿಯ ಮೇಲೆ “ಅಪ್ರೂವ್ ಮಾಡಿ/ಅನುಮೋದಿಸಿ” ಕ್ಲಿಕ್ ಮಾಡುವ ಮೊದಲು, ವ್ಯಾಪಾರಿಯ ಹೆಸರು ಮತ್ತು ಮೊತ್ತವನ್ನು ಪರಿಶೀಲಿಸಿ. ನೀವು ಚಂದಾದಾರಿಕೆಯನ್ನು ಪ್ರಾರಂಭಿಸದಿದ್ದರೆ, ತಕ್ಷಣ ಅದನ್ನು ತಿರಸ್ಕರಿಸಿ.

ಸುರಕ್ಷಿತವಾಗಿ ವಹಿವಾಟು ನಡೆಸುವ ಕುರಿತ ವೀಡಿಯೊವನ್ನು ವೀಕ್ಷಿಸಿ: https://youtu.be/rHZ57O9X8kk

PhonePeನಲ್ಲಿ ದೂರು ನೀಡಲು:

  • PhonePe ಆ್ಯಪ್‌ನಲ್ಲಿ ‘Help/ಸಹಾಯ’ ವಿಭಾಗಕ್ಕೆ ಹೋಗಿ ದೂರು ನೀಡಿ.
  • ಗ್ರಾಹಕ ಬೆಂಬಲ ಸಂಖ್ಯೆ: 80-68727374 ಅಥವಾ 022-68727374 ಗೆ ಫೋನ್ ಮಾಡಿ.
  • ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿ:
  • ಕುಂದುಕೊರತೆ ಪರಿಹಾರ: PhonePe ಕುಂದುಕೊರತೆ ಪೋರ್ಟಲ್‌ನಲ್ಲಿ ದೂರು ಸಲ್ಲಿಸಿ.

ಅಧಿಕಾರಿಗಳಿಗೆ ದೂರು ನೀಡಲು:

  • ಸೈಬರ್ ಕ್ರೈಂ ಸೆಲ್: ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ದೂರು ನೀಡಿ ಅಥವಾ ತಕ್ಷಣವೇ 1930 ನಂಬರ್‌ಗೆ ಕರೆ ಮಾಡಿ.
  • ದೂರಸಂಪರ್ಕ ಇಲಾಖೆ (DOT): ಸಂಚಾರ್ ಸಾಥಿ ಪೋರ್ಟಲ್‌ನಲ್ಲಿರುವ ಚಕ್ಷು ಸೌಲಭ್ಯದ ಮೂಲಕ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ WhatsApp / Telegram ವಂಚನೆಯನ್ನು ವರದಿ ಮಾಡಿ.

ಪ್ರಮುಖ ಸೂಚನೆ — ಫೋನ್‌ಪೇ ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೇನ್‌ನಿಂದ ಅಲ್ಲದಿದ್ದರೆ, PhonePeನಿಂದ ಬಂದಿರುವುದಾಗಿ ಹೇಳಿಕೊಳ್ಳುವ ಎಲ್ಲಾ ಮೇಲ್‌ಗಳನ್ನು ನಿರ್ಲಕ್ಷಿಸಿ. ವಂಚನೆಯ ಅನುಮಾನವಿದ್ದರೆ, ದಯವಿಟ್ಟು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ.

Keep Reading