ಈ ನಿಯಮಗಳು ಮತ್ತು ಷರತ್ತುಗಳು PhonePe ಪ್ರೈವೇಟ್ ಲಿಮಿಟೆಡ್‌ನಿಂದ ಸಕ್ರಿಯಗೊಳಿಸಲಾದ ರೀಚಾರ್ಜ್ ಮತ್ತು ಬಿಲ್ ಪಾವತಿ ಸೇವೆಗಳ ಬಳಕೆಯನ್ನು ನಿಯಂತ್ರಿಸುತ್ತವೆ, ಈ ಕಂಪನಿಯು ಕಂಪನಿ ಕಾಯಿದೆ, 1956 ರ ಅಡಿಯಲ್ಲಿ ಕಛೇರಿ-2, ಮಹಡಿ 4,5,6,7, ವಿಂಗ್ A, ಬ್ಲಾಕ್ A, ಸಲಾರ್‌ಪುರಿಯಾ ಸಾಫ್ಟ್‌ಝೋನ್, ಸರ್ವಿಸ್ ರಸ್ತೆ, ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು, ಬೆಂಗಳೂರು, ದಕ್ಷಿಣ ಬೆಂಗಳೂರು, ಕರ್ನಾಟಕ – 560103, ಭಾರತ ಇಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿರುತ್ತದೆ.(ಇನ್ನು ಮುಂದೆ “PhonePe”/ “ನಾವು”/”ನಮಗೆ”/” ನಮ್ಮ” ಎಂದು ಉಲ್ಲೇಖಿಸಲಾಗುತ್ತದೆ). ಈ ನಿಟ್ಟಿನಲ್ಲಿ PhonePe ಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮೂಲಕ ಪಾವತಿ ಮತ್ತು ಸೆಟಲ್‌ಮೆಂಟ್ ಆಕ್ಟ್, 2007 ರ ನಿಬಂಧನೆಗಳು ಮತ್ತು ಕಾಲಕಾಲಕ್ಕೆ RBI ಹೊರಡಿಸಿದ ನಿಯಮಗಳು ಮತ್ತು ನಿರ್ದೇಶನಗಳಿಗೆ ಅನುಸಾರವಾಗಿ ಸೆಮಿ ಕ್ಲೋಸ್ಡ್ PPI ಅನ್ನು ವಿತರಿಸಲು ಅಧಿಕಾರ ನೀಡಲಾಗಿದೆ.
PhonePe ರೀಚಾರ್ಜ್ ಮತ್ತು ಬಿಲ್ ಪಾವತಿಯನ್ನು ಬಳಸಲು ಮುಂದುವರಿಯುವ ಮೂಲಕ, ನೀವು (“ಬಳಕೆದಾರ”/ “ನೀವು”/ “ನಿಮ್ಮ”) https://www.phonepe.com/terms-conditions/ ನಲ್ಲಿರುವ ಸಾಮಾನ್ಯ PhonePe ನಿಯಮಗಳು ಮತ್ತು ಷರತ್ತುಗಳನ್ನು (“ಸಾಮಾನ್ಯ ನಿಯಮಗಳು”) ಹಾಗೂ ನಲ್ಲಿ ಲಭ್ಯವಿರುವ ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳುವುದರ ಜೊತೆಗೆ, ಈ ಬಳಕೆಯ ನಿಯಮಗಳಿಗೆ (ಇನ್ನು ಮುಂದೆ “ಬಿಲ್ ಪಾವತಿ ನಿಯಮ ಹಾಗೂ ಷರತ್ತುಗಳು”) ಬದ್ಧರಾಗಿರಲು ನಿಮ್ಮ ಸಮ್ಮತಿಯನ್ನು ಸೂಚಿಸುತ್ತೀರಿ. ಸಂದರ್ಭವು ಅಗತ್ಯವಿರುವಾಗೆಲ್ಲಾ “ಬಳಕೆದಾರ”/ “ನೀವು”/”ನಿಮ್ಮ” ಎಂದರೆ, ಭಾರತೀಯ ಒಪ್ಪಂದ ಕಾಯಿದೆ, 1872 ರ ಅರ್ಥವ್ಯಾಪ್ತಿಯಲ್ಲಿ ಒಪ್ಪಂದ ಮಾಡಿಕೊಳ್ಳಲು ಅರ್ಹರಾಗಿರುವ, ಕನಿಷ್ಠ 18 (ಹದಿನೆಂಟು) ವರ್ಷ ವಯಸ್ಸಿನ, ಭಾರತದ ನಿವಾಸಿಯಾಗಿರುವ, ಬಿಡುಗಡೆ ಹೊಂದದ ದಿವಾಳಿದಾರರಲ್ಲದ ಹಾಗೂ ಈ ಬಿಲ್ ಪಾವತಿ ನಿಯಮ ಹಾಗೂ ಷರತ್ತುಗಳನ್ನು ಒಪ್ಪಿಕೊಳ್ಳುವ ಮೂಲಕ PhonePe ಆ್ಯಪ್‌ನಲ್ಲಿ ನೋಂದಾಯಿಸಿಕೊಂಡಿರುವ ಯಾವುದೇ ನೈಸರ್ಗಿಕ ಅಥವಾ ಕಾನೂನುಬದ್ಧ ವ್ಯಕ್ತಿಯಾಗುತ್ತಾರೆ.
PhonePe ನ ರೀಚಾರ್ಜ್ ಮತ್ತು ಬಿಲ್ ಪಾವತಿ ಸೌಲಭ್ಯಗಳನ್ನು ಒಳಗೊಂಡಿರುವ PhonePe ಸೇವೆಗಳನ್ನು ಬಳಸಲು ಮುಂದುವರಿಯುವ ಮೂಲಕ, ನೀವು PhonePe ನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತೀರಿ ಮತ್ತು ಇಲ್ಲಿ ಉಲ್ಲೇಖಿಸಲಾದ ಎಲ್ಲಾ ನೀತಿಗಳನ್ನು ಒಳಗೊಂಡಂತೆ ಈ ಬಿಲ್ ಪಾವತಿ ನಿಯಮ ಹಾಗೂ ಷರತ್ತುಗಳು, ಈ ಸೌಲಭ್ಯಕ್ಕೆ ಸಂಬಂಧಿಸಿದಂತೆ PhonePe ನೊಂದಿಗೆ ನಿಮ್ಮ ಬದ್ಧವಾದ ಬಾಧ್ಯತೆಗಳನ್ನು ರೂಪಿಸುತ್ತವೆ.
ಇದಲ್ಲದೆ, ರೀಚಾರ್ಜ್ ಮತ್ತು ಬಿಲ್ ಪಾವತಿ ವರ್ಗದ ಉದ್ದೇಶಕ್ಕಾಗಿ “ವ್ಯಾಪಾರಿಗಳು/ ಬಿಲ್ಲರ್‌ಗಳು” ಎಂಬ ಪದವು, ನಿಮಗೆ ಯುಟಿಲಿಟಿ ಸೇವೆಗಳು, ಪಾವತಿ ಸೇವೆಗಳನ್ನು ಒದಗಿಸುವ ಹಾಗೂ ಯುಟಿಲಿಟಿಗಳ ಆನ್‌ಲೈನ್ ಅಥವಾ ಆಫ್‌ಲೈನ್ ಖರೀದಿಗಾಗಿ, ಪಾವತಿ ಸೇವೆಗಳಿಗಾಗಿ PhonePe ವಾಲೆಟ್, UPI, ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್ (‘ಪಾವತಿ ಆಯ್ಕೆಗಳು’) ಅನ್ನು ಪಾವತಿ ವಿಧಾನವಾಗಿ ಸ್ವೀಕರಿಸುವ ಯಾವುದೇ ಸಂಸ್ಥೆ ಮತ್ತು/ಅಥವಾ ಘಟಕವನ್ನು ಒಳಗೊಂಡಿರುತ್ತದೆ; ಇದರಲ್ಲಿ ಅಗ್ರಿಗೇಟರ್ ಅಥವಾ BBPO ಮೂಲಕ ಕಾರ್ಯನಿರ್ವಹಿಸುವವರು ಸೇರಿದ್ದಾರೆ, ಇವರಿಗೆ ನೀವು PhonePe App ಬಳಸಿಕೊಂಡು ಬಿಲ್ ಪಾವತಿ ಅಥವಾ ರೀಚಾರ್ಜ್ ಮಾಡಬಹುದಾಗಿದೆ.
PhonePe ಆ್ಯಪ್ ಮೂಲಕ ಅಥವಾ ಯಾವುದೇ ವ್ಯಾಪಾರಿ ವೆಬ್‌ಸೈಟ್/ ವ್ಯಾಪಾರಿ ಪ್ಲಾಟ್‌ಫಾರ್ಮ್/ ವ್ಯಾಪಾರಿ ಮಳಿಗೆಯಲ್ಲಿ ರೀಚಾರ್ಜ್ ಮತ್ತು ಬಿಲ್ ಪಾವತಿ ಸೇವೆಗಳನ್ನು ಪಡೆಯಲು, ನೀವು PhonePe ಆ್ಯಪ್ ಅನ್ನು ಬಳಸಿಕೊಂಡು (ಯಾವುದೇ ಪಾವತಿ ಆಯ್ಕೆಗಳೊಂದಿಗೆ) ವಹಿವಾಟು ನಡೆಸಿದಾಗ, ಆಯಾ ವ್ಯಾಪಾರಿಗಳ ನಿಯಮಗಳು ಮತ್ತು ಷರತ್ತುಗಳ ಜೊತೆಗೆ ಈ ಬಿಲ್ ಪಾವತಿ ನಿಯಮಗಳು ಮತ್ತು ಷರತ್ತುಗಳು ಕೂಡ ನಿಮಗೆ ಅನ್ವಯವಾಗುತ್ತವೆ.
ನಿಮಗೆ ಯಾವುದೇ ಪೂರ್ವ ಲಿಖಿತ ಸೂಚನೆ ನೀಡದೇ, ನಮ್ಮ ಸ್ವಂತ ವಿವೇಚನೆಯಿಂದ ಯಾವುದೇ ಸಮಯದಲ್ಲಿ ಈ ಬಳಕೆಯ ನಿಯಮಗಳ ಭಾಗಗಳನ್ನು ಬದಲಾಯಿಸಲು, ಮಾರ್ಪಡಿಸಲು, ಸೇರಿಸಲು ಅಥವಾ ತೆಗೆದುಹಾಕಲು ನಾವು ಹಕ್ಕನ್ನು ಕಾಯ್ದಿರಿಸಿದ್ದೇವೆ. ಅಪ್‌ಡೇಟ್‌ಗಳು / ಬದಲಾವಣೆಗಳಿಗಾಗಿ ನಿಯತಕಾಲಿಕವಾಗಿ ಈ ಬಳಕೆಯ ನಿಯಮಗಳನ್ನು ಪರಿಶೀಲಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಬದಲಾವಣೆಗಳನ್ನು ಪೋಸ್ಟ್ ಮಾಡಿದ ನಂತರ PhonePe ಆ್ಯಪ್‌ನ ನಿಮ್ಮ ಮುಂದುವರಿದ ಬಳಕೆಯು ಹೆಚ್ಚುವರಿ ನಿಯಮಗಳು ಅಥವಾ ಈ ನಿಯಮಗಳ ಭಾಗಗಳನ್ನು ತೆಗೆದುಹಾಕುವುದು, ಮಾರ್ಪಾಡುಗಳು ಇತ್ಯಾದಿ ಸೇರಿದಂತೆ ಆಗಿರುವ ಪರಿಷ್ಕರಣೆಗಳನ್ನು ನೀವು ಸ್ವೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ ಎಂದರ್ಥ. ನೀವು ಈ ಬಳಕೆಯ ನಿಯಮಗಳನ್ನು ಪಾಲಿಸುವವರೆಗೆ, ಪಾವತಿಗಳು, ಚಂದಾದಾರಿಕೆಗಳು, ರೀಚಾರ್ಜ್‌ಗಳು, ಯುಟಿಲಿಟಿ ಪಾವತಿಗಳು ಮತ್ತು ಯಾವುದೇ ಇತರ ಮರುಕಳಿಸುವ ಪಾವತಿಗಳಿಗಾಗಿ, ಕಾಲಕಾಲಕ್ಕೆ PhonePe ಆ್ಯಪ್ ಮೂಲಕ ನೀಡಲಾಗುವ ರೀಚಾರ್ಜ್ ಮತ್ತು ಬಿಲ್ ಪಾವತಿಯ ಸೌಲಭ್ಯ ಮತ್ತು ಇತರ ಸೇವೆಗಳನ್ನು ಬಳಸಿಕೊಳ್ಳಲು ನಾವು ನಿಮಗೆ ಸೀಮಿತ ಸವಲತ್ತನ್ನು ನೀಡುತ್ತೇವೆ.
PHONEPE ಆ್ಯಪ್‌ನಲ್ಲಿ PHONEPE ರೀಚಾರ್ಜ್ ಮತ್ತು ಬಿಲ್ ಪಾವತಿ ಫೀಚರ್ ಅನ್ನು ಬಳಸುವುದು ಎಲ್ಲ ನಿಯಮಗಳು ಮತ್ತು ಷರತ್ತುಗಳಿಗೆ ನಿಮ್ಮ ಒಪ್ಪಂದವನ್ನು ಸೂಚಿಸುತ್ತದೆ. ಆದ್ದರಿಂದ, ಮುಂದುವರಿಯುವ ಮೊದಲು ದಯವಿಟ್ಟು ಈ ನಿಯಮಗಳನ್ನು ಎಚ್ಚರಿಕೆಯಿಂದ ಓದಿ.
ರೀಚಾರ್ಜ್ ಮತ್ತು ಬಿಲ್ ಪಾವತಿಗಳ ನಿಯಮಗಳು ಮತ್ತು ಷರತ್ತುಗಳನ್ನು ಸೂಚ್ಯವಾಗಿ ಅಥವಾ ಸ್ಪಷ್ಟವಾಗಿ ಒಪ್ಪಿಕೊಳ್ಳುವ ಮೂಲಕ, ಗೌಪ್ಯತಾ ನೀತಿ ಸೇರಿದಂತೆ ಎಲ್ಲ PhonePe ನೀತಿಗಳಿಗೆ ಬದ್ಧರಾಗಿರಲು ಸಹ ನೀವು ಸಮ್ಮತಿಸುತ್ತೀರಿ ಮತ್ತು ಒಪ್ಪಿಗೆ ಸೂಚಿಸುತ್ತೀರಿ.
- ರೀಚಾರ್ಜ್ ಮತ್ತು ಬಿಲ್ ಪಾವತಿಗಳ ಸಾಮಾನ್ಯ ನಿಯಮಗಳು:
- PhonePe ಕೇವಲ ಪಾವತಿಗಳ ಸುಗಮಗೊಳಿಸುತ್ತದೆಯೇ ಹೊರತು ಪಾವತಿಗಳಲ್ಲಿ ಪಕ್ಷಗಾರರಲ್ಲ ಎಂಬುದನ್ನು ಬಳಕೆದಾರರು ಗಮನಿಸಬಹುದು.
- a) PhonePe ಒಪ್ಪಂದವನ್ನು ಮಾಡಿಕೊಂಡಿರುವ ಅಗ್ರಿಗೇಟರ್‌ಗಳ ಮೂಲಕ ಅಥವಾ b) ಬಿಲ್ ಪಾವತಿಗಳಿಗಾಗಿ ವ್ಯಾಪಾರಿಯು NPCI ನೊಂದಿಗೆ ನೋಂದಾಯಿಸಿಕೊಂಡಿರುವ ಭಾರತ್ ಕನೆಕ್ಟ್ ಬಿಲ್ ಪೇಮೆಂಟ್ ಆಪರೇಟಿಂಗ್ ಯೂನಿಟ್ (BBPOU) ಮೂಲಕ, PhonePe, ಮೊಬೈಲ್ ಆ್ಯಪ್‌ನ “ರೀಚಾರ್ಜ್ ಮತ್ತು ಬಿಲ್ ಪಾವತಿ” ವಿಭಾಗದ ಅಡಿಯಲ್ಲಿ ಲಭ್ಯವಿರುವ ಮೊಬೈಲ್ ಪೋಸ್ಟ್‌ಪೇಯ್ಡ್, ಪ್ರಿಪೇಯ್ಡ್ ರೀಚಾರ್ಜ್ ಮತ್ತು ಲ್ಯಾಂಡ್‌ಲೈನ್ ಫೋನ್ ಬಿಲ್ ಪಾವತಿ, DTH ಮತ್ತು ಸ್ಟ್ರೀಮಿಂಗ್ ಸೇವೆಗಳ ಚಂದಾದಾರಿಕೆ ಪಾವತಿ, ವಿದ್ಯುತ್, LPG ಇತ್ಯಾದಿಗಳಂತಹ ಇತರ ಯುಟಿಲಿಟಿ ಪಾವತಿಗಳು, ಕ್ರೆಡಿಟ್ ಕಾರ್ಡ್ ಪಾವತಿ, ವಿಮಾ ಪ್ರೀಮಿಯಂ ಪಾವತಿ, ಆನ್‌ಲೈನ್ ದೇಣಿಗೆ, ಇಂಟರ್ನೆಟ್ ಬ್ರಾಡ್‌ಬ್ಯಾಂಡ್ ಮತ್ತು ಡೇಟಾ ಕಾರ್ಡ್ ಬಿಲ್ ಪಾವತಿ, ಮುನ್ಸಿಪಲ್ ತೆರಿಗೆ ಮತ್ತು ನೀರಿನ ತೆರಿಗೆ ಪಾವತಿ, ಶಾಲಾ ಶುಲ್ಕ ಪಾವತಿ, ಟೋಲ್ ಟ್ಯಾಕ್ಸ್ ರೀಚಾರ್ಜ್ (FasTag), ಸಾಲ ಮರುಪಾವತಿ ಮತ್ತು PhonePe ನಿಂದ ಕಾಲಕಾಲಕ್ಕೆ ಒದಗಿಸಲಾಗುವ ಇತರ ಸೇವೆಗಳಿಗೆ ಪಾವತಿಸಲು ನಿಮಗೆ ಅನುವು ಮಾಡಿಕೊಡುವ ಮೂಲಕ ರೀಚಾರ್ಜ್ ಮತ್ತು ಬಿಲ್ ಪಾವತಿ ಸೇವೆಗಳನ್ನು ಸುಗಮಗೊಳಿಸುತ್ತದೆ.
- ರೀಚಾರ್ಜ್ ಮತ್ತು ಬಿಲ್ ಪಾವತಿಗಳನ್ನು ಹೊಂದಿಸುವಿಕೆ:
- ರೀಚಾರ್ಜ್ ಅಥವಾ ಬಿಲ್ ಪಾವತಿಗಳನ್ನು ಮಾಡಲು, ವ್ಯಾಪಾರಿಯೊಂದಿಗೆ ನಿಮ್ಮ ಖಾತೆಗೆ ಪಾವತಿಯನ್ನು ಸಕ್ರಿಯಗೊಳಿಸಲು ಅಗತ್ಯವಿರುವ ಪಾವತಿ/ಚಂದಾದಾರಿಕೆ ಬಾಕಿ ಅಥವಾ ಬಿಲ್ ಮೌಲ್ಯ, ಚಂದಾದಾರಿಕೆ ಯೋಜನೆ, ಅಂತಿಮ ದಿನಾಂಕ, ಬಾಕಿ ಇರುವ ಮೊತ್ತ ಮತ್ತು ಅಂತಹ ಇತರ ಮಾಹಿತಿಯನ್ನು ಪಡೆಯಲು ಅಗತ್ಯವಿರುವ ಅನನ್ಯ ಗ್ರಾಹಕ ಗುರುತು/ ಚಂದಾದಾರಿಕೆ ಗುರುತಿನ ಸಂಖ್ಯೆ ಅಥವಾ ಬಿಲ್ ಸಂಖ್ಯೆ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆ, ನೋಂದಾಯಿತ ದೂರವಾಣಿ ಸಂಖ್ಯೆ ಅಥವಾ ಅಂತಹ ಇತರ ಗುರುತಿಸುವಿಕೆಗಳನ್ನು ನೀವು ಒದಗಿಸಬೇಕಾಗುತ್ತದೆ.
- ಸದರಿ ಉದ್ದೇಶಗಳಿಗಾಗಿ ನಿಮ್ಮ ಪರವಾಗಿ ನಿರಂತರವಾಗಿ ರೀಚಾರ್ಜ್ ಮತ್ತು ಬಿಲ್ ಪಾವತಿ ಸೇವೆಗಳಿಗಾಗಿ ವ್ಯಾಪಾರಿಯೊಂದಿಗಿನ ನಿಮ್ಮ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಆ್ಯಕ್ಸೆಸ್ ಮಾಡಲು, ಪಡೆಯಲು, ಹಂಚಿಕೊಳ್ಳಲು, ಬಳಸಲು, ಸಂಗ್ರಹಿಸಲು ನೀವು PhonePe ಗೆ ಅಧಿಕಾರ ನೀಡುತ್ತೀರಿ.
- ಸರಿಯಾದ ಬಿಲ್ ಮತ್ತು ಚಂದಾದಾರಿಕೆ ಮೌಲ್ಯವನ್ನು ಪಡೆಯಲು ಮಾಹಿತಿಯ ನಿಖರತೆಯು ಅತ್ಯಂತ ಮಹತ್ವದ್ದಾಗಿದೆ ಎಂದು ನೀವು ಅರ್ಥಮಾಡಿಕೊಂಡಿದ್ದೀರಿ ಮತ್ತು ತದನುಸಾರವಾಗಿ ಗುರುತಿಸುವಿಕೆ ಮಾಹಿತಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಜವಾಬ್ದಾರರಾಗಿರಲು ನೀವು ದೃಢೀಕರಿಸುತ್ತೀರಿ.
- ಪಾವತಿಸಬೇಕಾದ ಮೊತ್ತ, ರೀಚಾರ್ಜ್ ಅಥವಾ ಚಂದಾದಾರಿಕೆ ಮೌಲ್ಯವು ನಿಮ್ಮ ಮತ್ತು ವ್ಯಾಪಾರಿಯ ನಡುವಿನ ಒಪ್ಪಂದವಾಗಿದೆ ಮತ್ತು ಅದರ ನಿಖರತೆಯನ್ನು ಪರಿಶೀಲಿಸಲು PhonePe ಗೆ ಯಾವುದೇ ಬಾಧ್ಯತೆ ಇಲ್ಲ ಎಂದು ನೀವು ಅರ್ಥಮಾಡಿಕೊಂಡಿದ್ದೀರಿ.
- ನಿಮ್ಮ ಖಾತೆಯ ಮಾಹಿತಿಯನ್ನು ಅಪ್‌ಡೇಟ್ ಆಗಿರಿಸಲು ಮತ್ತು ಎಲ್ಲ ಸಮಯದಲ್ಲೂ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಲು ನೀವು ಒಪ್ಪುತ್ತೀರಿ. ಇಲ್ಲದಿದ್ದರೆ ಖಾತೆಯನ್ನು ಅಮಾನತುಗೊಳಿಸುವ ಅಥವಾ ಯಾವುದೇ ಸೇವೆಗಳನ್ನು ನಿರಾಕರಿಸುವ ಹಕ್ಕನ್ನು PhonePe ಹೊಂದಿದೆ.
- ರೀಚಾರ್ಜ್ ಮತ್ತು ಬಿಲ್ ಪಾವತಿ ಸೇವೆಗಳನ್ನು ಒದಗಿಸಲು ಬಳಕೆದಾರರ ಗುರುತಿಸುವಿಕೆಯ ಡೇಟಾ, ಸ್ಥಳ/ರಾಜ್ಯ ಮತ್ತು/ಅಥವಾ KYC ಮಾಹಿತಿ/ಯಾವುದೇ ವೈಯಕ್ತಿಕ ಮಾಹಿತಿಯನ್ನು ತೆರಿಗೆ/GST ಉದ್ದೇಶಗಳಿಗಾಗಿ ವ್ಯಾಪಾರಿ/ಬಿಲ್ಲರ್‌ನೊಂದಿಗೆ ಹಂಚಿಕೊಳ್ಳುವ ಅಗತ್ಯವಿದೆ ಎಂದು ನೀವು ಒಪ್ಪುತ್ತೀರಿ.
- ವಹಿವಾಟನ್ನು ಪ್ರಕ್ರಿಯೆಗೊಳಿಸಲು ನಿಮ್ಮ ಖಾತೆಯ ಮಾಹಿತಿಯೊಂದಿಗೆ ವ್ಯಾಪಾರಿ, ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರು, ಅಗ್ರಿಗೇಟರ್‌ಗಳೊಂದಿಗೆ ಸಂವಹನ ನಡೆಸಲು ನೀವು PhonePe ಗೆ ಸಮ್ಮತಿಸುತ್ತೀರಿ ಮತ್ತು ಅಧಿಕಾರ ನೀಡುತ್ತೀರಿ,
- PhonePe ರಿಮೈಂಡರ್ ಸೌಲಭ್ಯ ಅಥವಾ ಆಟೋಪೇ ಸೌಲಭ್ಯವನ್ನು ಹೊಂದಿಸಬಹುದು ಎಂಬುದನ್ನು ನೀವು ಒಪ್ಪುತ್ತೀರಿ, ಇದಕ್ಕೆ ನೀವು ಸ್ಪಷ್ಟವಾಗಿ ಸಮ್ಮತಿಸುತ್ತೀರಿ ಮತ್ತು ರೀಚಾರ್ಜ್ ಮತ್ತು ಬಿಲ್ ಪಾವತಿಗಾಗಿ ವ್ಯಾಪಾರಿಗೆ ಒಮ್ಮೆ ಮಾಡಿದ ಪಾವತಿಯನ್ನು ಮರುಪಾವತಿಸಲಾಗುವುದಿಲ್ಲ(ನಾನ್-ರೀಫಂಡೇಬಲ್) ಎಂದು ಅರ್ಥಮಾಡಿಕೊಂಡಿದ್ದೀರಿ.
- ಪಾವತಿ ಅಥವಾ ವಿಳಂಬಿತ ಪಾವತಿಗಳಿಗೆ ಅಥವಾ ಮಾಡಿದ ಪಾವತಿಗಳ ಮೇಲೆ ವ್ಯಾಪಾರಿ ವಿಧಿಸುವ ಯಾವುದೇ ಪೆನಾಲ್ಟಿ/ಬಡ್ಡಿಗಾಗಿ ಯಾವುದೇ ನಕಲು ನಿಲುವು ಸೂಚನೆಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ. PhonePe ನಿಮ್ಮ ಪರವಾಗಿ ವ್ಯಾಪಾರಿಗಳಿಗೆ ಪಾವತಿಗಳನ್ನು ಮಾತ್ರ ಸುಗಮಗೊಳಿಸುತ್ತದೆ ಎಂದು ಮತ್ತೊಮ್ಮೆ ತಿಳಿಸಲಾಗುತ್ತಿದೆ.
- ಶುಲ್ಕಗಳು
- PhonePe ಪ್ಲಾಟ್‌ಫಾರ್ಮ್ ಮೂಲಕ PhonePe ಸೇವೆಗಳನ್ನು ಒದಗಿಸಲು, PhonePe ವಿವಿಧ ವೆಚ್ಚಗಳನ್ನು (ಮೂಲಸೌಕರ್ಯದ ಕಾರ್ಯಾಚರಣೆ ಮತ್ತು ನಿರ್ವಹಣೆ, ವಿವಿಧ ವಿಧಾನಗಳ ಮೂಲಕ ವಹಿವಾಟು/ಪಾವತಿಗಳನ್ನು ಸುಗಮಗೊಳಿಸುವುದು ಸೇರಿದಂತೆ ಆದರೆ ಇವುಗಳಿಗೆ ಮಾತ್ರ ಸೀಮಿತವಾಗಿಲ್ಲ) ಭರಿಸುತ್ತದೆ ಎಂದು ನೀವು ಅರ್ಥಮಾಡಿಕೊಂಡಿದ್ದೀರಿ. ಈ ಮೂಲಕ PhonePe ನಿಮಗೆ ಶುಲ್ಕ(ಗಳನ್ನು) ವಿಧಿಸಬಹುದು (ಪ್ಲಾಟ್‌ಫಾರ್ಮ್ ಶುಲ್ಕ, ಅನುಕೂಲಕರ ಶುಲ್ಕದ ರೀತಿಯಂತಹವು) ಮತ್ತು ಅದನ್ನು ನಿಮಗೆ ಮುಂಗಡವಾಗಿ ತೋರಿಸಲಾಗುತ್ತದೆ ಮತ್ತು ಅದು ನೀವು ಮಾಡುತ್ತಿರುವ ಆಯಾ ವಹಿವಾಟು/ಬಿಲ್ ಪಾವತಿಯ ಮೌಲ್ಯ/ಮೊತ್ತಕ್ಕಿಂತ ಹೆಚ್ಚಾಗಿರುತ್ತದೆ ಎಂದು ನೀವು ಒಪ್ಪುತ್ತೀರಿ. ಕಾಲಕಾಲಕ್ಕೆ ಅಂತಹ ಶುಲ್ಕ(ಗಳನ್ನು) ಪರಿಷ್ಕರಿಸುವ ಹಕ್ಕನ್ನು PhonePe ಹೊಂದಿರುತ್ತದೆ.
- ಈ ನಿಯಮಗಳ ಪ್ರಕಾರ ಯಾವುದೇ ಪಾವತಿ ಮಾಡಲು ಬಿಲ್ಲರ್(ಗಳು) ನಿಮ್ಮ ಮೇಲೆ ವಿಧಿಸಬಹುದಾದ ಯಾವುದೇ ಶುಲ್ಕಗಳಿಗೆ PhonePe ಹೊಣೆಗಾರವಾಗಿರುವುದಿಲ್ಲ.
- ನಿಮ್ಮ ಜವಾಬ್ದಾರಿಗಳು: PhonePe ರೀಚಾರ್ಜ್ ಮತ್ತು ಬಿಲ್ ಪಾವತಿಗಳ ನಿಮ್ಮ ಬಳಕೆಗೆ ಸಂಬಂಧಿಸಿದಂತೆ, ಈ ಕೆಳಗಿನವುಗಳಿಗೆ ಬದ್ಧವಾಗಿರುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ:
- ನೀವು ವಹಿವಾಟಿನ ಇತಿಹಾಸ ಮತ್ತು/ಅಥವಾ ಯಶಸ್ವಿಯಾದ ವಹಿವಾಟು ಅಥವಾ ವೈಫಲ್ಯದ ಕುರಿತು ನೋಟಿಫಿಕೇಶನ್‌ಗಳಿಂದ ಪರಿಶೀಲಿಸಬೇಕು.
- ರೀಚಾರ್ಜ್ ಮತ್ತು ಬಿಲ್ ಪಾವತಿಗಳ ಸೇವೆಗಳಿಗೆ ಸಂಬಂಧಿಸಿದಂತೆ ವ್ಯಾಪಾರಿ/ಬಿಲ್ಲರ್ ವಿಧಿಸುವ ಯಾವುದೇ ಶುಲ್ಕಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ; ಈ ಶುಲ್ಕಗಳು ನಿಮ್ಮ ಖಾತೆಯಿಂದ ಕಡಿತಗೊಳ್ಳಬಹುದು ಅಥವಾ ನಿಮ್ಮ ಬಿಲ್ / ಚಂದಾದಾರಿಕೆ ಶುಲ್ಕಗಳಿಗೆ ಸೇರ್ಪಡೆಯಾಗಬಹುದು.
- ನಿಮ್ಮ ಆವರ್ತಕ ಬಿಲ್‌ಗಳು, ಚಂದಾದಾರಿಕೆ ಶುಲ್ಕ ಮತ್ತು ರೀಚಾರ್ಜ್ ಮುಕ್ತಾಯ ದಿನಾಂಕಗಳು ಮತ್ತು ಅಥವಾ ನೀವು ಪಡೆದುಕೊಂಡಿರುವ ಯಾವುದೇ ಯುಟಿಲಿಟಿಗಳು/ ಸೇವೆಗಳು ಅಥವಾ ಮರುಕಳಿಸುವ ಶುಲ್ಕ ಸೇವೆಗಳ ಅಂತಿಮ ದಿನಾಂಕಗಳನ್ನು ಟ್ರ್ಯಾಕ್ ಮಾಡುವ ಜವಾಬ್ದಾರಿ ನಿಮ್ಮದಾಗಿರುತ್ತದೆ. ಬಿಲ್ಲರ್‌ಗಳಿಂದ ಆವರ್ತಕವಾಗಿ ಬಿಲ್‌ಗಳನ್ನು ಪಡೆಯಲು ಸಂಬಂಧಿಸಿದ ಯಾವುದೇ ತಾಂತ್ರಿಕ ಸಮಸ್ಯೆಗೆ ಅಥವಾ ಬಿಲ್‌ಗಳಲ್ಲಿನ ಯಾವುದೇ ದೋಷಗಳು / ವ್ಯತ್ಯಾಸಗಳಿಗೆ PhonePe ಜವಾಬ್ದಾರರಾಗಿರುವುದಿಲ್ಲ.
- ನಿಮ್ಮ ಬಿಲ್ ಪಾವತಿಯನ್ನು ನಿಗದಿಪಡಿಸಲು ನೀವು ಜವಾಬ್ದಾರರಾಗಿರುತ್ತೀರಿ ಮತ್ತು ಪಾವತಿ ಜಮೆಯಾಗುವ ಸಮಯವು ವ್ಯಾಪಾರಿಯಿಂದ ವ್ಯಾಪಾರಿಗೆ ಬದಲಾಗುತ್ತದೆ ಎಂದು ನೀವು ಅರ್ಥಮಾಡಿಕೊಂಡಿದ್ದೀರಿ ಮತ್ತು ನಿಮ್ಮ ಸೂಚನೆಗಳನ್ನು ಆಧರಿಸಿ ನಾವು ಪಾವತಿಯನ್ನು ಮಾಡುತ್ತೇವೆ. ವಹಿವಾಟಿನ ವಿಳಂಬಗಳು/ಹಿಂಪಡೆಯುವಿಕೆಗಳು ಅಥವಾ ವೈಫಲ್ಯಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ.
- ಬಳಕೆದಾರರ ದೋಷಗಳು:
- ನೀವು ತಪ್ಪಾದ ವ್ಯಕ್ತಿಗೆ ಅಥವಾ ತಪ್ಪಾದ ಬಿಲ್ಲರ್‌ಗೆ ತಪ್ಪಾಗಿ ಪಾವತಿಯನ್ನು ಕಳುಹಿಸಿದರೆ ಅಥವಾ ಎರಡು ಬಾರಿ ಪಾವತಿಸಿದರೆ ಅಥವಾ ತಪ್ಪಾದ ಮೊತ್ತಕ್ಕೆ ಪಾವತಿಯನ್ನು ಕಳುಹಿಸಿದರೆ (ಉದಾಹರಣೆಗೆ ನಿಮ್ಮ ಕಡೆಯಿಂದಾದ ಮುದ್ರಣ ದೋಷ) ನೀವು ಕಳುಹಿಸಿದ ವ್ಯಾಪಾರಿ/ಪಾರ್ಟಿಯನ್ನು ಸಂಪರ್ಕಿಸುವುದು ನಿಮಗಿರುವ ಏಕೈಕ ಮಾರ್ಗವಾಗಿರುತ್ತದೆ. ಪಾವತಿ ಮತ್ತು ಮೊತ್ತವನ್ನು ಮರುಪಾವತಿಸಲು ನೀವು ಅವರನ್ನು ಕೇಳಬೇಕು. PhonePe ನಿಮಗೆ ಮರುಪಾವತಿ ಮಾಡುವುದಿಲ್ಲ ಅಥವಾ ನೀವು ತಪ್ಪಾಗಿ ಮಾಡಿದ ಪಾವತಿಯನ್ನು ಹಿಂತಿರುಗಿಸುವುದಿಲ್ಲ.
- ಹಕ್ಕು ನಿರಾಕರಣೆಗಳು:
- ಆನ್‌ಲೈನ್ ವಹಿವಾಟಿನಿಂದ ಉಂಟಾಗುವ ಎಲ್ಲ ಅಪಾಯಗಳನ್ನು ನೀವು ಭರಿಸುತ್ತೀರಿ ಎಂದು ನೀವು ಒಪ್ಪುತ್ತೀರಿ.
- PhonePe ಮತ್ತು ಥರ್ಡ್-ಪಾರ್ಟಿ ಪಾಲುದಾರರು ಸೇವೆಗಳ ಗುಣಮಟ್ಟದ ಬಗ್ಗೆ ವ್ಯಕ್ತ ಅಥವಾ ಸೂಚಿತವಾದ ಯಾವುದೇ ಖಾತರಿಯನ್ನು ನೀಡುವುದಿಲ್ಲ, ಇವುಗಳಲ್ಲಿ ಇವು ಸೇರಿವೆ ಆದರೆ ಇಷ್ಟಕ್ಕೇ ಸೀಮಿತವಾಗಿಲ್ಲ: i) ಸೇವೆಗಳು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತವೆ; ii) ಸೇವೆಗಳು ತಡೆರಹಿತ, ಸಮಯೋಚಿತ ಅಥವಾ ದೋಷ ಮುಕ್ತವಾಗಿರುತ್ತವೆ; ಅಥವಾ iii) ಸೇವೆಗಳಿಗೆ ಸಂಬಂಧಿಸಿದಂತೆ ನೀವು ಪಡೆದ ಯಾವುದೇ ಉತ್ಪನ್ನಗಳು, ಮಾಹಿತಿ ಅಥವಾ ವಸ್ತುಗಳು ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತವೆ.
- ಇಲ್ಲಿ ಸ್ಪಷ್ಟವಾಗಿ ಒದಗಿಸಿರುವುದನ್ನು ಹೊರತುಪಡಿಸಿ ಮತ್ತು ಕಾನೂನಿನಿಂದ ಅನುಮತಿಸಲಾದ ಪೂರ್ಣ ಪ್ರಮಾಣದಲ್ಲಿ, ವಾಲೆಟ್ ಫೀಚರ್ ಅನ್ನು “ಇದ್ದಂತೆಯೇ”, “ಲಭ್ಯವಿದ್ದಂತೆ” ಮತ್ತು “ಎಲ್ಲಾ ದೋಷಗಳೊಂದಿಗೆ” ಒದಗಿಸಲಾಗುತ್ತದೆ. ಅಂತಹ ಎಲ್ಲಾ ವಾರಂಟಿಗಳು, ಪ್ರಾತಿನಿಧ್ಯಗಳು, ಷರತ್ತುಗಳು, ಭರವಸೆಗಳು ಮತ್ತು ನಿಯಮಗಳನ್ನು, ವ್ಯಕ್ತವಾಗಿರಲಿ ಅಥವಾ ಸೂಚಿತವಾಗಿರಲಿ, ಈ ಮೂಲಕ ಹೊರಗಿಡಲಾಗಿದೆ. PhonePe ಅಥವಾ ಸಾಮಾನ್ಯವಾಗಿ ಲಭ್ಯವಿರುವ ಸೇವೆಗಳು ಮತ್ತು ಇತರ ಮಾಹಿತಿಯ ನಿಖರತೆ, ಸಂಪೂರ್ಣತೆ ಮತ್ತು ಉಪಯುಕ್ತತೆಯನ್ನು ಮೌಲ್ಯಮಾಪನ ಮಾಡುವುದು ನಿಮ್ಮ ಜವಾಬ್ದಾರಿಯಾಗಿದೆ. ನಮ್ಮ ಪರವಾಗಿ ಯಾವುದೇ ಖಾತರಿ ನೀಡಲು ನಾವು ಯಾರಿಗೂ ಅಧಿಕಾರ ನೀಡುವುದಿಲ್ಲ ಮತ್ತು ನೀವು ಅಂತಹ ಯಾವುದೇ ಹೇಳಿಕೆಯನ್ನು ಅವಲಂಬಿಸಬಾರದು.
- ಭಾರತ್ ಕನೆಕ್ಟ್ ಆಪರೇಟಿಂಗ್ ಯುನಿಟ್ ದೂರು ಪ್ರಕ್ರಿಯೆ
- ಬಾಕಿ ಇರುವ ವಹಿವಾಟುಗಳು: ಬಿಲ್ ಪಾವತಿಗಳು/ರೀಚಾರ್ಜ್‌ಗಳು ಸಾಮಾನ್ಯವಾಗಿ ತಕ್ಷಣವೇ ದೃಢೀಕರಿಸಲ್ಪಡುತ್ತವೆ. ಆದರೂ, ಅಪರೂಪದ ಸಂದರ್ಭಗಳಲ್ಲಿ, ವಹಿವಾಟಿನ ದೃಢೀಕರಣವನ್ನು ಹಂಚಿಕೊಳ್ಳಲು ಸೇವಾ ಪೂರೈಕೆದಾರರು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ನಿಮ್ಮ ಬಿಲ್ ಪಾವತಿ/ರೀಚಾರ್ಜ್ ಬಾಕಿ ಇರುವ ಸ್ಥಿತಿಯಲ್ಲಿ ಕಂಡುಬಂದರೆ, ನಿಮ್ಮ ಸೇವಾ ಪೂರೈಕೆದಾರರಿಂದ ದೃಢೀಕರಣಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದರ್ಥ, ಮತ್ತು ಅಂತಿಮ ಸ್ಥಿತಿಯನ್ನು ಅಪ್‌ಡೇಟ್ ಮಾಡಲು ಅವರು 96 ಗಂಟೆಗಳವರೆಗೆ ತೆಗೆದುಕೊಳ್ಳಬಹುದು. ಒಂದು ವೇಳೆ ವಹಿವಾಟು 24 ಗಂಟೆಗಳ ನಂತರವೂ ಬಾಕಿ ಉಳಿದಿರುವುದನ್ನು ನೀವು ನೋಡಿದರೆ, ನೀವು ನಮ್ಮೊಂದಿಗೆ ದೂರು (ticket) ದಾಖಲಿಸಬಹುದು, ಮತ್ತು ನಾವು ಅದನ್ನು ಸೇವಾ ಪೂರೈಕೆದಾರರೊಂದಿಗೆ ವಿಚಾರಿಸುತ್ತೇವೆ.
- ಯಶಸ್ವಿ ವಹಿವಾಟುಗಳು: ಯಶಸ್ವಿಯಾದ ಬಿಲ್ ಪಾವತಿ/ರೀಚಾರ್ಜ್ ನಂತರವೂ ಬಿಲ್ ಪಾವತಿ/ರೀಚಾರ್ಜ್ ಅಪ್‌ಡೇಟ್ ಆಗಿರದಿದ್ದರೆ/ಸೇವೆಯನ್ನು ಒದಗಿಸದಿದ್ದರೆ, ದಯವಿಟ್ಟು 48 ಗಂಟೆಗಳ ಕಾಲ ನಿರೀಕ್ಷಿಸಿ. 48 ಗಂಟೆಗಳ ನಂತರವೂ ಬಿಲ್ ಪಾವತಿ/ರೀಚಾರ್ಜ್ ಅಪ್‌ಡೇಟ್ ಆಗಿರದಿದ್ದರೆ/ಸೇವೆಯನ್ನು ಒದಗಿಸದಿದ್ದರೆ, ನೀವು ಯಾವುದೇ ದೂರು/ಕುಂದುಕೊರತೆಯನ್ನು ನಮಗೆ ವರದಿ ಮಾಡಬಹುದು. ನಿಮ್ಮ ಸಮಸ್ಯೆಯನ್ನು ನಾವು ಪರಿಶೀಲಿಸುತ್ತೇವೆ ಮತ್ತು ನಿಮ್ಮ ದೂರು/ಕುಂದುಕೊರತೆಯನ್ನು ಸ್ವೀಕರಿಸಿದ ದಿನಾಂಕದಿಂದ 48 ವ್ಯವಹಾರದ ಗಂಟೆಗಳ ಒಳಗಾಗಿ ಮತ್ತು 30 ವ್ಯವಹಾರದ ದಿನಗಳ ನಂತರ ನಿಮ್ಮ ದೂರು/ಕುಂದುಕೊರತೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ. ಹೆಚ್ಚಿನ ವಿವರಗಳಿಗಾಗಿ ನೀವು ನಮ್ಮ ಕುಂದುಕೊರತೆ ನೀತಿಯನ್ನು ಉಲ್ಲೇಖಿಸಬಹುದು.
- ರೀಫಂಡ್‌ಗಳು: PhonePe ಪ್ಲಾಟ್‌ಫಾರ್ಮ್‌ನಲ್ಲಿ ನೀವು ಪ್ರಕ್ರಿಯೆಗೊಳಿಸಿದ ವಹಿವಾಟಿನ ಎಲ್ಲ ರೀಫಂಡ್‌ಗಳನ್ನು (ಅನ್ವಯಿಸಿದರೆ) ಮೂಲ ಖಾತೆಗೆ ಮಾತ್ರ ರೀಫಂಡ್ ಮಾಡಲಾಗುತ್ತದೆ. UPI ಬಳಸಿ ಮಾಡಿದ ಪಾವತಿಗಳಿಗೆ, ನೀವು 3 ರಿಂದ 5 ದಿನಗಳಲ್ಲಿ ರೀಫಂಡ್ ಅನ್ನು ಪಡೆಯುತ್ತೀರಿ, ಕಾರ್ಡ್ ಪಾವತಿಗಳಿಗೆ 7 ರಿಂದ 9 ದಿನಗಳಲ್ಲಿ ರೀಫಂಡ್ ಅನ್ನು ಪಡೆಯುತ್ತೀರಿ ಮತ್ತು ವ್ಯಾಲೆಟ್ ಮತ್ತು ಗಿಫ್ಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ನೀವು 24 ಗಂಟೆಗಳ ಒಳಗಾಗಿ ರೀಫಂಡ್ ಅನ್ನು ಪಡೆಯುತ್ತೀರಿ.
- ಇತರೆ ನಿಯಮಗಳು:
- ಬಳಕೆದಾರ ನೋಂದಣಿ, ಗೌಪ್ಯತೆ, ಬಳಕೆದಾರರ ಜವಾಬ್ದಾರಿಗಳು, ನಷ್ಟಭರ್ತಿ, ಆಡಳಿತ ಕಾನೂನು, ಹೊಣೆಗಾರಿಕೆ, ಬೌದ್ಧಿಕ ಆಸ್ತಿ, ಗೌಪ್ಯತೆ ಮತ್ತು ಸಾಮಾನ್ಯ ನಿಬಂಧನೆಗಳು ಮುಂತಾದ ನಿಯಮಗಳು ಸೇರಿದಂತೆ ಎಲ್ಲ ಇತರ ನಿಯಮಗಳು ಸಾಮಾನ್ಯ ನಿಯಮಗಳನ್ನು ಉಲ್ಲೇಖಿಸಿ ಈ ಬಳಕೆಯ ನಿಯಮಗಳಲ್ಲಿ ಸಂಯೋಜಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.