ಆವೃತ್ತಿ 9.0
ದಿನಾಂಕ: ಜುಲೈ 31, 2025
1. ಹಿನ್ನೆಲೆ
PhonePe ಲಿಮಿಟೆಡ್ (“PhonePe”) (ಹಿಂದೆ ‘PhonePe ಪ್ರೈವೇಟ್ ಲಿಮಿಟೆಡ್’ ಎಂದು ಕರೆಯಲಾಗುತ್ತಿತ್ತು) ಭಾರತದಲ್ಲಿ ಪ್ರಿಪೇಯ್ಡ್ ಪಾವತಿ ಸಾಧನಗಳನ್ನು (“PPI”) ವಿತರಿಸಲು ಮತ್ತು ನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ (“RBI”) ನಿಂದ ಅಧಿಕಾರ ಪಡೆದಿದೆ, ಪಾವತಿ ಮತ್ತು ಸೆಟಲ್‌ಮೆಂಟ್ ವ್ಯವಸ್ಥೆಗಳ ಕಾಯ್ದೆ, 2007 ರ ನಿಬಂಧನೆಗಳು ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ನಿರ್ದೇಶನಗಳು ಮತ್ತು ನಿಯಮಗಳಿಗೆ ಅನುಸಾರವಾಗಿದೆ. ಭಾರತ್ ಬಿಲ್ ಪೇಮೆಂಟ್ ಆಪರೇಟಿಂಗ್ ಯುನಿಟ್ (“BBPOU”) ಆಗಿ ಕಾರ್ಯನಿರ್ವಹಿಸಲು PhonePe ಗೆ RBI ಅಧಿಕಾರ ನೀಡಿದೆ ಮತ್ತು ಪಾವತಿ ಸಂಗ್ರಾಹಕವಾಗಿ ಕಾರ್ಯನಿರ್ವಹಿಸಲು PhonePe ಗೆ RBI ತಾತ್ವಿಕವಾಗಿ ಅಧಿಕಾರ ನೀಡಿದೆ.
ಅದರಂತೆ, PhonePe ತನ್ನ ಎಲ್ಲ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಕುಂದುಕೊರತೆ ನೀತಿಯ ಮೂಲಕ ಪ್ರಮಾಣಿತ ಕುಂದುಕೊರತೆ ಪರಿಹಾರ ಪ್ರಕ್ರಿಯೆಯನ್ನು ನಿಗದಿಪಡಿಸಿದೆ.
2. ವ್ಯಾಪ್ತಿ
ಈ ಪಾಲಿಸಿಯು ಈ ಕೆಳಗಿನ ಅಂಶಗಳನ್ನು ಪರಿಹರಿಸುತ್ತದೆ:
i. ಈ ಪಾಲಿಸಿಯು ರೀಚಾರ್ಜ್, ಬಿಲ್ ಪಾವತಿ, PhonePe ವ್ಯಾಲೆಟ್, PhonePe ಗಿಫ್ಟ್ ಕಾರ್ಡ್‌ಗಳು, UPI (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್), ಸಂಪತ್ತು, ಪ್ರಯಾಣ, ಸಾರಿಗೆ ಮತ್ತು ಆಹಾರ, ಗ್ರಾಹಕರಿಗೆ ವೋಚರ್‌ಗಳು ಮತ್ತು ಕೋ-ಬ್ರ್ಯಾಂಡೆಡ್ ಪಾಲುದಾರಿಕೆಗಳನ್ನು ಒಳಗೊಂಡಂತೆ ಉತ್ಪನ್ನ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ.
ii. ಈ ಪಾಲಿಸಿಯು ವ್ಯಾಪಾರಿ ಪರಿಹಾರ ಮತ್ತು ಆಧಾರ್ eKYC-ಸಂಬಂಧಿತ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ.
3. ಉದ್ದೇಶ:
ವಿವಿಧ ರೀತಿಯ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಪ್ರಸ್ತಾಪಿಸಲಾದ ಕುಂದುಕೊರತೆಗಳ ವಿವರಗಳನ್ನು ಮತ್ತು ಪರಿಹಾರ ಕಾರ್ಯವಿಧಾನವನ್ನು ನೀಡುವುದು ಪಾಲಿಸಿಯ ಉದ್ದೇಶವಾಗಿದೆ.
ಈ ಪಾಲಿಸಿಯು ಗ್ರಾಹಕರು ಮತ್ತು ವ್ಯಾಪಾರಿಗಳಿಗಾಗಿ ದೂರುಗಳನ್ನು ಎಸ್ಕಲೇಟ್ ಮಾಡುವ ಹಂತಗಳನ್ನು ವಿವರಿಸುತ್ತದೆ. ಪ್ರತಿ ದೂರು ಸರಿಯಾದ ತಂಡವನ್ನು ತಲುಪುತ್ತಿದೆಯೇ ಎಂಬುದನ್ನು ಖಚಿತಪಡಿಸುತ್ತದೆ.
4. ಉದ್ದೇಶಿತ ಪ್ರೇಕ್ಷಕರು
ಈ ಪಾಲಿಸಿಯು PhonePe ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುವ ಎಲ್ಲ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಅನ್ವಯಿಸುತ್ತದೆ.
5. ಗ್ರಾಹಕರಿಗೆ ಸೇವಾ ಹಂತಗಳು:
ರೀಚಾರ್ಜ್, ಬಿಲ್ ಪಾವತಿ, PhonePe ವ್ಯಾಲೆಟ್, PhonePe ಗಿಫ್ಟ್ ಕಾರ್ಡ್‌ಗಳು, UPI (ಯುನಿಫೈಡ್ ಪೇಮೆಂಟ್ ಇಂಟರ್ಫೇಸ್), ಸಂಪತ್ತು, ಪ್ರಯಾಣ, ಸಾರಿಗೆ ಮತ್ತು ಆಹಾರ, ವೋಚರ್‌ಗಳು ಮತ್ತು ಕೋ-ಬ್ರ್ಯಾಂಡೆಂಡ್ ಪಾಲುದಾರಿಕೆಗಳಿಗೆ ಸೇವಾ ಹಂತಗಳನ್ನು ವ್ಯಾಖ್ಯಾನಿಸಲಾಗಿದೆ.
ಹಂತ 1: ನಾವು ದಿನದ 24 ಗಂಟೆಗಳು ಮತ್ತು ವಾರದ 7 ದಿನಗಳು ಗ್ರಾಹಕ ಬೆಂಬಲ ಸೇವೆಯನ್ನು ಒದಗಿಸುತ್ತೇವೆ.
i. “ಇತಿಹಾಸ” ವಿಭಾಗದಿಂದ ಆಯಾ ವಹಿವಾಟನ್ನು ಆಯ್ಕೆ ಮಾಡಿ “PhonePe ಬೆಂಬಲವನ್ನು ಸಂಪರ್ಕಿಸಿ” ಎಂಬುದನ್ನು ಕ್ಲಿಕ್ ಮಾಡುವ ಮೂಲಕ ಗ್ರಾಹಕರು PhonePe ಗ್ರಾಹಕ ಬೆಂಬಲದೊಂದಿಗೆ ತಮ್ಮ ದೂರನ್ನು ಸಲ್ಲಿಸಬಹುದು. ಗ್ರಾಹಕರು PhonePe ಆ್ಯಪ್‌ನ ಹೋಂಪೇಜ್‌ನಲ್ಲಿರುವ (?) ಐಕಾನ್ ಮೇಲೆ ಕ್ಲಿಕ್ ಮಾಡಬಹುದು, ಅವರು ಯಾವ ವಿಷಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂಬುದನ್ನು ಆಯ್ಕೆ ಮಾಡಿ ಮತ್ತು ತಮ್ಮ ದೂರನ್ನು ಸಲ್ಲಿಸಬಹುದು.
ii. ಪರ್ಯಾಯವಾಗಿ, ಗ್ರಾಹಕರು ನಮ್ಮ ಗ್ರಾಹಕ ಬೆಂಬಲ ಕೇಂದ್ರವನ್ನು 080-68727374 / 022-68727374 ಗೆ ಕರೆ ಮಾಡುವ ಮೂಲಕ ದೂರು ನೀಡಬಹುದು.
iii. ಹೆಚ್ಚುವರಿಯಾಗಿ, ಗ್ರಾಹಕರು https://support.phonepe.com/ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಯಾವುದೇ ಲಾಗಿನ್-ಸಂಬಂಧಿತ ಕಾಳಜಿಗಳನ್ನು ವರದಿ ಮಾಡಬಹುದು.
ದೂರುಗಳ ಪರಿಹಾರ:
- ದೂರು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ಗ್ರಾಹಕರಿಗೆ ಮೊದಲ ಪ್ರತಿಕ್ರಿಯೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.
- ನಾವು ಎಲ್ಲಾ ಗ್ರಾಹಕರ ದೂರುಗಳು/ಪ್ರಶ್ನೆಗಳನ್ನು 3 ವ್ಯವಹಾರ ದಿನಗಳಲ್ಲಿ ಪರಿಹರಿಸುವ ಗುರಿ ಹೊಂದಿದ್ದೇವೆ. (ಭಾರತ್ ಕನೆಕ್ಟ್ ಇಕೋಸಿಸ್ಟಂ ಮೇಲಿನ ಅವಲಂಬನೆಯಿಂದಾಗಿ, ಭಾರತ್ ಕನೆಕ್ಟ್ ಸಂಬಂಧಿತ ಯಾವುದೇ ಕಾಳಜಿಗಳ ಪರಿಹಾರಕ್ಕೆ ಸಮಯ ತೆಗೆದುಕೊಳ್ಳಬಹುದು. ಆದ್ದರಿಂದ ನಾವು ದೂರನ್ನು ಸ್ವೀಕರಿಸಿದ ದಿನದಿಂದ 30 ವ್ಯವಹಾರ ದಿನಗಳಲ್ಲಿ ಅದನ್ನು ಪರಿಹರಿಸುವ ಗುರಿಯನ್ನು ಹೊಂದಿದ್ದೇವೆ)
- ಅನಧಿಕೃತ ವಹಿವಾಟುಗಳಿಗೆ ಸಂಬಂಧಿಸಿದ ದೂರುಗಳನ್ನು ಈ ಪಾಲಿಸಿಯ ‘ಗ್ರಾಹಕ ಹೊಣೆಗಾರಿಕೆಯ ಮಿತಿ’ ವಿಭಾಗ 5.1 ರ ಪ್ರಕಾರ ನಿರ್ವಹಿಸಲಾಗುತ್ತದೆ.
- ದೂರು ಪರಿಹಾರವಾಗುವವರೆಗೆ ದೂರಿನ ಸ್ಥಿತಿಯ ಬಗ್ಗೆ ಗ್ರಾಹಕರಿಗೆ ನಿಯತಕಾಲಿಕವಾಗಿ ತಿಳಿಸಲಾಗುವುದು.
- ಕೆಲವು ಸಂದರ್ಭಗಳಲ್ಲಿ, ಪರಿಹಾರವು ತಕ್ಷಣವೇ ದೊರೆಯಬಹುದು. ಆದರೂ ಅದು ಸಿಸ್ಟಂನಲ್ಲಿ ಕಾಣಿಸಿಕೊಳ್ಳಲು ಸಮಯ ತೆಗೆದುಕೊಳ್ಳಬಹುದು. ಉದಾಹರಣೆಗೆ, ರಿಫಂಡ್ ಪ್ರಕ್ರಿಯೆ ತಕ್ಷಣವೇ ಪ್ರಾರಂಭವಾಗಬಹುದು, ಆದರೆ ಬ್ಯಾಂಕಿಂಗ್ ಮತ್ತು ಕಾರ್ಯಾಚರಣೆಯ ವಿಳಂಬದಿಂದಾಗಿ ಖಾತೆಯಲ್ಲಿ ಕಾಣಿಸಿಕೊಳ್ಳಲು 3–10 ದಿನಗಳು ತೆಗೆದುಕೊಳ್ಳಬಹುದು.
ಗಮನಿಸಿ: ಬಾಹ್ಯ ಅವಲಂಬನೆಗಳು ಅಥವಾ ಕಾರ್ಯಾಚರಣೆ/ತಾಂತ್ರಿಕ ಕಾರಣಗಳಿಂದಾಗಿ ದೂರು ಬಗೆಹರಿಯಲು ಹೆಚ್ಚು ಸಮಯ ತೆಗೆದುಕೊಂಡರೆ, ವಿಳಂಬ ಮತ್ತು ನಿರೀಕ್ಷಿತ ಪರಿಹಾರ ಸಮಯದ ಬಗ್ಗೆ ಗ್ರಾಹಕರಿಗೆ ತಿಳಿಸಲಾಗುತ್ತದೆ.
ಹಂತ 2 – ಕುಂದುಕೊರತೆ ನೋಂದಣಿ:
i. ಸಮಸ್ಯೆ ಬಗೆಹರಿಯದಿದ್ದರೆ ಅಥವಾ ಹಿಂದಿನ ಹಂತದಲ್ಲಿ ಒದಗಿಸಲಾದ ಪರಿಹಾರದ ಕುರಿತು ಗ್ರಾಹಕರು ಅತೃಪ್ತರಾಗಿದ್ದರೆ, ಗ್ರಾಹಕರು ಇಲ್ಲಿ ಕ್ಲಿಕ್ ಮಾಡುವ ಮೂಲಕ ತಮ್ಮ ಕಳವಳವನ್ನು ಕುಂದುಕೊರತೆ ಡೆಸ್ಕ್‌ಗೆ ತಿಳಿಸಬಹುದು – https://grievance.phonepe.com/
ಗ್ರಾಹಕರು ತಮ್ಮ ದೂರುಗಳನ್ನು ಈ ಕೆಳಗಿನ ನಂತರ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು:
- PhonePe QR ಗಳಲ್ಲದ ಪಾವತಿಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ 15 ದಿನಗಳು
- ಯಾವುದೇ ಇತರ ರೀತಿಯ ವಹಿವಾಟಿಗೆ ಸಂಬಂಧಿಸಿದ ಸಮಸ್ಯೆಗಳಿಗೆ 10 ದಿನಗಳು
2ನೇ ಹಂತದ ದೂರುಗಳ ಪರಿಹಾರ:
- 2ನೇ ಹಂತದ ದೂರು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ಮೊದಲ ಪ್ರತಿಕ್ರಿಯೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.
- ನಾವು 2ನೇ ಹಂತದ ಎಲ್ಲ ದೂರುಗಳನ್ನು 7 ವ್ಯವಹಾರ ದಿನಗಳಲ್ಲಿ ಪರಿಹರಿಸುವ ಗುರಿಯನ್ನು ಹೊಂದಿದ್ದೇವೆ. (ನಾವು ಭಾರತ್ ಕನೆಕ್ಟ್‌ಗೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ಸ್ವೀಕರಿಸಿದ ದಿನಾಂಕದಿಂದ 30 ವ್ಯವಹಾರ ದಿನಗಳಲ್ಲಿ ಅದನ್ನು ಪರಿಹರಿಸುವ ಗುರಿಯನ್ನು ಹೊಂದಿದ್ದೇವೆ).
ಗಮನಿಸಿ: ಬಾಹ್ಯ ಅವಲಂಬನೆಗಳು ಅಥವಾ ಕಾರ್ಯಾಚರಣೆ/ತಾಂತ್ರಿಕ ಕಾರಣಗಳಿಂದಾಗಿ ಯಾವುದೇ ದೂರನ್ನು ಪರಿಹರಿಸಲು ಹೆಚ್ಚುವರಿ ಸಮಯ ಬೇಕಾದರೆ, ಆಗುವ ವಿಳಂಬ ಮತ್ತು ನಿರೀಕ್ಷಿತ ಪರಿಹಾರ ಸಮಯದ ಬಗ್ಗೆ ಗ್ರಾಹಕರಿಗೆ ತಿಳಿಸಲಾಗುತ್ತದೆ.
ಹಂತ 3- ನೋಡಲ್ ಅಧಿಕಾರಿ ಸಂಪರ್ಕಗಳು:
ಹಿಂದಿನ ಹಂತದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ, ಗ್ರಾಹಕರು ನೋಡಲ್ ಮತ್ತು ಪ್ರಧಾನ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ನೋಡಲ್ ಅಧಿಕಾರಿ: ಶ್ರೀಮತಿ ದೀಪಾ ಶೆಟ್ಟಿ
ಪ್ರಧಾನ ನೋಡಲ್ ಅಧಿಕಾರಿ- ಶ್ರೀ ಅನಿಕೇತ್ ಬಹೇತಿ
ಸಂಪರ್ಕ ಸಂಖ್ಯೆ.:080-68727105
ವೆಬ್‌ಫಾರ್ಮ್: nodalofficerdesk.phonepe.com
ವಿಳಾಸ: ಕಚೇರಿ-2, ಮಹಡಿ 4,5,6,7, ವಿಂಗ್ A, ಬ್ಲಾಕ್ A, ಸಾಲಾರ್‌ಪುರಿಯಾ ಸಾಫ್ಟ್‌ಜೋನ್, ಸರ್ವಿಸ್ ರಸ್ತೆ, ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು, ಬೆಂಗಳೂರು, ಕರ್ನಾಟಕ-KA, ಪಿನ್- 560103. ಕೆಲಸದ ಸಮಯ: ಸೋಮ-ಶುಕ್ರ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ.
3ನೇ ಹಂತದ ದೂರುಗಳ ಪರಿಹಾರ:
- 3ನೇ ಹಂತದ ದೂರು ಸ್ವೀಕರಿಸಿದ 24 ಕೆಲಸದ ಗಂಟೆಗಳ ಒಳಗಾಗಿ ಮೊದಲ ಪ್ರತಿಕ್ರಿಯೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.
- ನಾವು 3ನೇ ಹಂತದ ಎಲ್ಲ ದೂರುಗಳನ್ನು 7 ವ್ಯವಹಾರ ದಿನಗಳಲ್ಲಿ ಪರಿಹರಿಸುವ ಗುರಿಯನ್ನು ಹೊಂದಿದ್ದೇವೆ (ಭಾರತ್ ಕನೆಕ್ಟ್ ದೂರುಗಳನ್ನು ಗ್ರಾಹಕರಿಂದ ಸ್ವೀಕರಿಸಿದ 30 ವ್ಯವಹಾರ ದಿನಗಳಲ್ಲಿ ಅವುಗಳನ್ನು ಪರಿಹರಿಸುವ ಗುರಿಯನ್ನು ನಾವು ಹೊಂದಿದ್ದೇವೆ.).
ಗಮನಿಸಿ: ಬಾಹ್ಯ ಅವಲಂಬನೆಗಳು ಅಥವಾ ಕಾರ್ಯಾಚರಣೆ/ತಾಂತ್ರಿಕ ಕಾರಣಗಳಿಂದಾಗಿ ಯಾವುದೇ ದೂರನ್ನು ಪರಿಹರಿಸಲು ಹೆಚ್ಚುವರಿ ಸಮಯ ಬೇಕಾದರೆ, ಆಗುವ ವಿಳಂಬ ಮತ್ತು ನಿರೀಕ್ಷಿತ ಪರಿಹಾರ ಸಮಯದ ಬಗ್ಗೆ ಗ್ರಾಹಕರಿಗೆ ತಿಳಿಸಲಾಗುತ್ತದೆ.
ಹಂತ 4- RBI ಓಂಬುಡ್ಸ್‌ಮನ್:
ಹಿಂದಿನ ಹಂತಗಳಲ್ಲಿ 30 ದಿನಗಳ ಒಳಗಾಗಿ ದೂರುಗಳು ತೃಪ್ತಿಕರವಾಗಿ ಬಗೆಹರಿಯದಿದ್ದರೆ, ಗ್ರಾಹಕರು RBI ಒಂಬುಡ್ಸ್‌ಮನ್ ಅವರನ್ನು ಸಂಪರ್ಕಿಸಬಹುದು.
ಒಂಬುಡ್ಸ್‌ಮನ್ ದೂರು ದಾಖಲಾತಿ ಪೋರ್ಟಲ್: https://cms.rbi.org.in/
ಟೋಲ್-ಫ್ರೀ ದೂ. ಸಂಖ್ಯೆ: 14448
ಇಮೇಲ್ ಐಡಿ: [email protected]
ವಿಳಾಸ: ಸೆಂಟ್ರಲೈಸ್ಡ್ ರೆಸಿಪ್ಟ್ ಆ್ಯಂಡ್ ಪ್ರೊಸೆಸಿಂಗ್ ಸೆಂಟರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 4ನೇ ಫ್ಲೋರ್, ಸೆಕ್ಟರ್ 17, ಚಂಡೀಗಢ – 160017
ರಿಸರ್ವ್ ಬ್ಯಾಂಕ್ – ಇಂಟಿಗ್ರೇಟೆಡ್ ಓಂಬುಡ್ಸ್‌ಮನ್ ಸ್ಕೀಮ್, 2021 ಕುರಿತು ಹೆಚ್ಚಿನ ವಿವರಗಳಿಗಾಗಿ, ಸ್ಕೀಮ್‌ನ ಪ್ರತಿಗಾಗಿ ದಯವಿಟ್ಟು ಲಿಂಕ್ ಅನ್ನು ನೋಡಿ. – RBI ಇಂಟಿಗ್ರೇಟೇಡ್ ಓಂಬುಡ್ಸ್‌ಮನ್ ಸ್ಕೀಮ್ ಮತ್ತು ಸ್ಕೀಮ್‌ನ ಪ್ರಮುಖ ಲಕ್ಷಣಗಳು.
5.1 ಗ್ರಾಹಕರ ಹೊಣೆಗಾರಿಕೆಯ ಮಿತಿ
ಅನಧಿಕೃತ ಪಾವತಿ ವಹಿವಾಟಿನಿಂದ ಉಂಟಾಗುವ ಗ್ರಾಹಕರ ಹೊಣೆಗಾರಿಕೆಯು ಇವುಗಳಿಗೆ ಸೀಮಿತವಾಗಿರುತ್ತದೆ:
ಕ್ರ.ಸಂ. | ವಿವರಗಳು | ಗ್ರಾಹಕರ ಗರಿಷ್ಠ ಹೊಣೆಗಾರಿಕೆ |
---|---|---|
1 | PhonePe ಯಿಂದ ವಂಚನೆ/ನಿರ್ಲಕ್ಷ್ಯ/ಕೊರತೆ ಉಂಟಾಗಿರುವುದು, (ಗ್ರಾಹಕರು ವಹಿವಾಟನ್ನು ವರದಿ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ) | ಇಲ್ಲ |
2 | ಥರ್ಡ್ ಪಾರ್ಟಿ ಉಲ್ಲಂಘನೆ, ಇದರಲ್ಲಿ ನ್ಯೂನತೆಯು PhonePe ನಲ್ಲಿ ಅಥವಾ ಗ್ರಾಹಕರಲ್ಲಿ ಇರುವುದಿಲ್ಲ. ಬದಲಾಗಿ ವ್ಯವಸ್ಥೆಯ ಬೇರೆಡೆ ಇರುತ್ತದೆ ಮತ್ತು ಗ್ರಾಹಕರು ಅನಧಿಕೃತ ಪಾವತಿ ವಹಿವಾಟಿನ ಬಗ್ಗೆ PhonePe ಗೆ ತಿಳಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಪ್ರತಿ ವಹಿವಾಟಿನ ಗ್ರಾಹಕರ ಹೊಣೆಗಾರಿಕೆಯು, ಗ್ರಾಹಕರು PhonePe ಯಿಂದ ವಹಿವಾಟಿನ ಸಂವಹನವನ್ನು ಸ್ವೀಕರಿಸಿದ ಮತ್ತು ಗ್ರಾಹಕರು ಅನಧಿಕೃತ ವಹಿವಾಟುಗಳನ್ನು PhonePe ಗೆ ವರದಿ ಮಾಡುವ ನಡುವಿನ ದಿನಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. – | |
i. ಮೂರು ದಿನಗಳಲ್ಲಿ | ಇಲ್ಲ | |
ii. ನಾಲ್ಕರಿಂದ ಏಳು ದಿನಗಳಲ್ಲಿ | ವಹಿವಾಟಿನ ಮೌಲ್ಯ ಅಥವಾ ಪ್ರತಿ ವಹಿವಾಟಿಗೆ ₹10,000/-, ಯಾವುದು ಕಡಿಮೆಯೋ ಅದು | |
iii. ಏಳು ದಿನಗಳನ್ನು ಮೀರಿ | ಪ್ರಕರಣದಿಂದ ಪ್ರಕರಣಕ್ಕೆ ಅನುಗುಣವಾಗಿ PhonePe ನಿರ್ಧರಿಸುತ್ತದೆ. | |
3 | ಗ್ರಾಹಕರ ನಿರ್ಲಕ್ಷ್ಯದಿಂದಾಗಿ ನಷ್ಟ ಸಂಭವಿಸಿದಲ್ಲಿ, ಉದಾಹರಣೆಗೆ ಅವರು ಪಾವತಿ ಲಾಗಿನ್ ಮಾಹಿತಿಗಳನ್ನು ಎಲ್ಲಿಯಾದರೂ ಹಂಚಿಕೊಂಡಿದ್ದರೆ, ಅನಧಿಕೃತ ವಹಿವಾಟನ್ನು PhonePe ಗೆ ವರದಿ ಮಾಡುವವರೆಗೆ ಗ್ರಾಹಕರು ಸಂಪೂರ್ಣ ನಷ್ಟವನ್ನು ಭರಿಸುತ್ತಾರೆ. ಅನಧಿಕೃತ ವಹಿವಾಟನ್ನು ವರದಿ ಮಾಡಿದ ನಂತರ ಸಂಭವಿಸುವ ಯಾವುದೇ ನಷ್ಟವನ್ನು PhonePe ಭರಿಸುತ್ತದೆ. | |
4 | ಗ್ರಾಹಕರು ನಿರ್ಲಕ್ಷ್ಯ ವಹಿಸಿದ್ದರೂ ಸಹ, ಅನಧಿಕೃತ ಎಲೆಕ್ಟ್ರಾನಿಕ್ ಪಾವತಿ ವಹಿವಾಟುಗಳಿಗೆ ಗ್ರಾಹಕರ ಹೊಣೆಗಾರಿಕೆಯನ್ನು ಮನ್ನಾ ಮಾಡಲು PhonePe ಆಯ್ಕೆ ಮಾಡಬಹುದು. |
ಸೀಮಿತ ಹೊಣೆಗಾರಿಕೆಯ ಮೇಲೆ ಗ್ರಾಹಕರ ಜವಾಬ್ದಾರಿ.
- ಗ್ರಾಹಕರು ತಮ್ಮ ಖಾತೆಗಳನ್ನು ಸುರಕ್ಷಿತವಾಗಿಡಲು ಬಲವಾದ ಪಾಸ್‌ವರ್ಡ್‌ಗಳು ಮತ್ತು ಪಿನ್‌ಗಳನ್ನು ಬಳಸಬೇಕು, ಇವುಗಳನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕಾಗುತ್ತದೆ. ಪಿನ್‌ಗಳು/ ಪಾಸ್‌ವರ್ಡ್‌ಗಳು ಮತ್ತು OTP ಗಳನ್ನು PhonePe ಉದ್ಯೋಗಿಗಳು ಸೇರಿದಂತೆ ಯಾರೊಂದಿಗೂ ಇಮೇಲ್/ದೂರವಾಣಿ ಮೂಲಕ ಹಂಚಿಕೊಳ್ಳಬಾರದು. PhonePe ಎಂದಿಗೂ ಅಂತಹ ಲಾಗಿನ್ ಮಾಹಿತಿಗಳನ್ನು ಕೇಳುವುದಿಲ್ಲ.
- ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯಲ್ಲಿ ಬದಲಾವಣೆಗಳಿದ್ದಲ್ಲಿ, ಗ್ರಾಹಕರು ನಮ್ಮ ಗ್ರಾಹಕ ಬೆಂಬಲ ತಂಡವನ್ನು ಸಂಪರ್ಕಿಸುವ ಮೂಲಕ PhonePe ಗೆ ಲಿಖಿತವಾಗಿ ತಕ್ಷಣವೇ ತಿಳಿಸಬೇಕು.
- ಎಲೆಕ್ಟ್ರಾನಿಕ್ ಪಾವತಿ ವಹಿವಾಟುಗಳಿಗಾಗಿ ಗ್ರಾಹಕರು ಕಡ್ಡಾಯವಾಗಿ SMS ಅಲರ್ಟ್‌ಗಳು ಮತ್ತು ಇ-ಮೇಲ್ ಅಲರ್ಟ್‌ಗಳಿಗೆ (ಅನ್ವಯವಾಗುವಲ್ಲೆಲ್ಲ) ನೋಂದಾಯಿಸಿಕೊಳ್ಳಬೇಕು.
- ಯಾವುದೇ ಅನಧಿಕೃತ ವಹಿವಾಟನ್ನು ಗುರುತಿಸಲು ಗ್ರಾಹಕರು SMS ಅಲರ್ಟ್‌ಗಳಿಂದ ಅಥವಾ ಮೊಬೈಲ್ ಆ್ಯಪ್ ಮೂಲಕ ನಿಯಮಿತವಾಗಿ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ.
- ಗ್ರಾಹಕರು ಯಾವುದೇ ಅನಧಿಕೃತ ವಹಿವಾಟುಗಳನ್ನು ವಿಳಂಬವಿಲ್ಲದೆ PhonePe ಗೆ ತಕ್ಷಣ ವರದಿ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
- ಮಾರ್ಗಸೂಚಿಗಳ ಪ್ರಕಾರ, ವರದಿ ಮಾಡಿದ 10 ದಿನಗಳಲ್ಲಿ ತನಿಖೆ ಮುಗಿಯದಿದ್ದರೆ, PhonePe ಗ್ರಾಹಕರ ವ್ಯಾಲೆಟ್‌ಗೆ ಕಲ್ಪನಾತ್ಮಕ ಕ್ರೆಡಿಟ್(ತಾತ್ಕಾಲಿಕ ಕ್ರೆಡಿಟ್) ಅನ್ನು ಒದಗಿಸುತ್ತದೆ. ಗ್ರಾಹಕರ ಹೊಣೆಗಾರಿಕೆಯನ್ನು 10 ದಿನಗಳ ನಂತರ ಮತ್ತು 90 ದಿನಗಳ ಕಾಲಮಿತಿಯೊಳಗೆ ದೃಢಪಡಿಸಿದರೆ ಕಲ್ಪನಾತ್ಮಕ ಕ್ರೆಡಿಟ್ ಅನ್ನು ಹಿಂತಿರುಗಿಸಲಾಗುತ್ತದೆ. 90 ದಿನಗಳಲ್ಲಿ ವಿವಾದ ಬಗೆಹರಿಯದಿದ್ದರೆ, ಕಲ್ಪನಾತ್ಮಕ ಕ್ರೆಡಿಟ್ ಅನ್ನು ಹಿಂತೆಗೆದುಕೊಳ್ಳಲಾಗುತ್ತದೆ ಮತ್ತು ಗ್ರಾಹಕರ ವ್ಯಾಲೆಟ್‌ಗೆ ನಿಜವಾದ ಕ್ರೆಡಿಟ್ ಆಗಿ ಪರಿವರ್ತಿಸಲಾಗುತ್ತದೆ. ಆ್ಯಪ್ ನೋಟಿಫಿಕೇಶನ್ ಮೂಲಕ ಗ್ರಾಹಕರಿಗೆ ತಿಳಿಸಲಾಗುತ್ತದೆ.
5.2 ಭಾರತ್ ಕನೆಕ್ಟ್ ವಿವಾದದ ಪ್ರಸ್ತಾಪ
ಭಾರತ್ ಕನೆಕ್ಟ್‌ನಲ್ಲಿ ಗ್ರಾಹಕರು ಬಿಲ್ ಪಾವತಿ ವಿವಾದವನ್ನು ಇಲ್ಲಿ ಕ್ಲಿಕ್ ಮಾಡುವ ಮೂಲಕ ಸಲ್ಲಿಸಬಹುದು. ಅಂತಹ ದೂರುಗಳನ್ನು ಪರಿಹರಿಸಲು ಅಗತ್ಯವಿದ್ದರೆ NBBL, PhonePe ಅನ್ನು ಸಂಪರ್ಕಿಸಬಹುದು. ಅಂತಹ ದೂರು ಬಗೆಹರಿದಾಗ ನಾವು ಗ್ರಾಹಕರಿಗೆ ಯಾವುದೇ ನೋಟಿಫಿಕೇಶನ್ ಕಳುಹಿಸುವ ಅಗತ್ಯವಿಲ್ಲ.
5.3 ಆಧಾರ್ eKYC ಕುಂದುಕೊರತೆ ಪರಿಹಾರ
ಆಧಾರ್ eKYC ಮತ್ತು ಒಪ್ಪಿಗೆ ರದ್ದತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ, ಗ್ರಾಹಕರು ನಮ್ಮ ಗ್ರಾಹಕ ಬೆಂಬಲ ಕೇಂದ್ರವನ್ನು 080-68727374 / 022-68727374 ಗೆ ಕರೆ ಮಾಡಿ ಸಂಪರ್ಕಿಸಬಹುದು ಅಥವಾ ದೂರು ನೀಡಬಹುದು.
6. ವ್ಯಾಪಾರಿಗಳಿಗೆ ಸೇವಾ ಹಂತಗಳು – ಆಫ್‌ಲೈನ್ ಮತ್ತು ಆನ್‌ಲೈನ್
ಸೇವಾ ಹಂತಗಳು | ಆಫ್‌ಲೈನ್ ವ್ಯಾಪಾರಿ ಕುಂದುಕೊರತೆ ಪರಿಹಾರ | ಆನ್‌ಲೈನ್ ವ್ಯಾಪಾರಿ ಕುಂದುಕೊರತೆ ಪರಿಹಾರ |
---|---|---|
ಹಂತ 1 |
ದೂರು ನೋಂದಣಿ: | |
PhonePe Business ಆ್ಯಪ್‌ನ ಮುಖಪುಟದಲ್ಲಿರುವ (?ಸಹಾಯ) ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ಆಫ್‌ಲೈನ್ ವ್ಯಾಪಾರಿಗಳು PhonePe ವ್ಯಾಪಾರಿ ಬೆಂಬಲದಲ್ಲಿ ತಮ್ಮ ದೂರನ್ನು ನೋಂದಾಯಿಸಬಹುದು. ಸಹಾಯ ವಿಭಾಗದಲ್ಲಿ, ವ್ಯಾಪಾರಿಯು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ದೂರನ್ನು ಸಲ್ಲಿಸಲು “Chat with Us”/”ನಮ್ಮೊಂದಿಗೆ ಚಾಟ್ ಮಾಡಿ” ಎಂಬುದನ್ನು ಕ್ಲಿಕ್ ಮಾಡಬಹುದು. ಪರ್ಯಾಯವಾಗಿ, ವ್ಯಾಪಾರಿಯು PhonePe Business ಡ್ಯಾಶ್‌ಬೋರ್ಡ್‌ನ ಮುಖಪುಟದಲ್ಲಿರುವ (?ಸಹಾಯ) ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ https://business.phonepe.com/faq ನಲ್ಲಿ ದೂರು ದಾಖಲಿಸಬಹುದು. ಪರ್ಯಾಯವಾಗಿ, ವ್ಯಾಪಾರಿಗಳು ನಮ್ಮ ಮರ್ಚೆಂಟ್ ಸಪೋರ್ಟ್ ಕೇಂದ್ರಕ್ಕೆ 080-6872-7777 / 022-6872-7777 ಗೆ ಕರೆ ಮಾಡುವ ಮೂಲಕ ದೂರು ನೀಡಬಹುದು. ನಾವು ದಿನದ 24 ಗಂಟೆಗಳು ಮತ್ತು ವಾರದ 7 ದಿನಗಳು ಬೆಂಬಲ ಸೇವೆಯನ್ನು ನೀಡುತ್ತೇವೆ. |
ಆನ್‌ಲೈನ್ ವ್ಯಾಪಾರಿಗಳು ತಮ್ಮ PhonePe Business ಡ್ಯಾಶ್‌ಬೋರ್ಡ್‌ನಲ್ಲಿರುವ ಸಹಾಯ ವಿಭಾಗದಿಂದ PhonePe ಪೇಮೆಂಟ್ ಗೇಟ್‌ವೇ ಬೆಂಬಲದೊಂದಿಗೆ ತಮ್ಮ ದೂರುಗಳನ್ನು ಸಲ್ಲಿಸಬಹುದು. ಸಹಾಯ ವಿಭಾಗದಲ್ಲಿ, ವ್ಯಾಪಾರಿಯು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ದೂರನ್ನು ಸಲ್ಲಿಸಲು “Contact Us”/”ನಮ್ಮನ್ನು ಸಂಪರ್ಕಿಸಿ” ಎಂಬುದನ್ನು ಕ್ಲಿಕ್ ಮಾಡಬಹುದು. ಪರ್ಯಾಯವಾಗಿ, ಆನ್‌ಲೈನ್ ವ್ಯಾಪಾರಿಗಳು ನಮ್ಮ ಆನ್‌ಲೈನ್ ವ್ಯಾಪಾರಿ ಬೆಂಬಲ ಕೇಂದ್ರಕ್ಕೆ 080-6872-7778 ಗೆ ಕರೆ ಮಾಡುವ ಮೂಲಕ ದೂರುಗಳನ್ನು ಸಲ್ಲಿಸಬಹುದು. ವ್ಯಾಪಾರಿಗಳು ತಮ್ಮ PhonePe Business ಡ್ಯಾಶ್‌ಬೋರ್ಡ್‌ಗೆ ಲಾಗಿನ್ ಆಗಲು ಸಾಧ್ಯವಾಗದಿದ್ದರೆ, ಅವರು https://tickets.phonepe.com/en/support ಮೂಲಕ ದೂರು ನೀಡಬಹುದು. ನಾವು ದಿನದ 24 ಗಂಟೆಗಳು ಮತ್ತು ವಾರದ 7 ದಿನಗಳು ಬೆಂಬಲ ಸೇವೆಯನ್ನು ನೀಡುತ್ತೇವೆ. | |
ದೂರುಗಳ ಪರಿಹಾರ: | ||
● ದೂರು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ವ್ಯಾಪಾರಿಗಳಿಗೆ ಮೊದಲ ಪ್ರತಿಕ್ರಿಯೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ● ನಾವು ಎಲ್ಲ ದೂರುಗಳು/ಪ್ರಶ್ನೆಗಳನ್ನು 7 ವ್ಯವಹಾರ ದಿನಗಳಲ್ಲಿ ಪರಿಹರಿಸುವ ಗುರಿ ಹೊಂದಿದ್ದೇವೆ. ಗಮನಿಸಿ: ಬಾಹ್ಯ ಅವಲಂಬನೆಗಳು ಅಥವಾ ಕಾರ್ಯಾಚರಣೆ/ತಾಂತ್ರಿಕ ಕಾರಣಗಳಿಂದಾಗಿ ಯಾವುದೇ ದೂರನ್ನು ಪರಿಹರಿಸಲು ಹೆಚ್ಚುವರಿ ಸಮಯ ಬೇಕಾದರೆ, ವ್ಯಾಪಾರಿಗಳಿಗೆ ವಿಳಂಬ ಮತ್ತು ಪರಿಹಾರದ ನಿರೀಕ್ಷಿತ ಸಮಯದ ಬಗ್ಗೆ ತಿಳಿಸಲಾಗುತ್ತದೆ. | ||
ಹಂತ 2 |
ಕುಂದುಕೊರತೆ ನೋಂದಣಿ: | |
ಸಮಸ್ಯೆ ಬಗೆಹರಿಯದೆ ಉಳಿದಿದ್ದರೆ ಅಥವಾ ಹಿಂದಿನ ಹಂತದಲ್ಲಿ ಒದಗಿಸಲಾದ ಪರಿಹಾರದ ಬಗ್ಗೆ ವ್ಯಾಪಾರಿಗಳು ಅತೃಪ್ತರಾಗಿದ್ದರೆ, ವ್ಯಾಪಾರಿಗಳು ಇಲ್ಲಿ ಕ್ಲಿಕ್ ಮಾಡುವ ಮೂಲಕ ತಮ್ಮ ಕಾಳಜಿಯನ್ನು ಕುಂದುಕೊರತೆ ಡೆಸ್ಕ್‌ಗೆ ತಿಳಿಸಬಹುದು – https://grievance.phonepe.com/ 1ನೇ ಹಂತದಲ್ಲಿ ದೂರು ನೋಂದಣಿಯಾದ ದಿನಾಂಕದಿಂದ 10 ದಿನಗಳ ನಂತರವಷ್ಟೇ ದೂರು ಸಲ್ಲಿಸಲಾಗಿದೆಯೆ ಎಂದು ವ್ಯಾಪಾರಿಗಳು ಖಚಿತಪಡಿಸಿಕೊಳ್ಳಬೇಕು. | ||
2ನೇ ಹಂತದ ದೂರುಗಳ ಪರಿಹಾರ: | ||
● 2ನೇ ಹಂತದ ದೂರು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ಮೊದಲ ಪ್ರತಿಕ್ರಿಯೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ● ನಾವು 2ನೇ ಹಂತದ ಎಲ್ಲ ದೂರುಗಳನ್ನು 7 ವ್ಯವಹಾರ ದಿನಗಳಲ್ಲಿ ಪರಿಹರಿಸುವ ಗುರಿಯನ್ನು ಹೊಂದಿದ್ದೇವೆ. ಗಮನಿಸಿ: ಬಾಹ್ಯ ಅವಲಂಬನೆಗಳು ಅಥವಾ ಕಾರ್ಯಾಚರಣೆ/ತಾಂತ್ರಿಕ ಕಾರಣಗಳಿಂದಾಗಿ ಯಾವುದೇ ದೂರನ್ನು ಪರಿಹರಿಸಲು ಹೆಚ್ಚುವರಿ ಸಮಯ ಬೇಕಾದರೆ, ವಿಳಂಬ ಮತ್ತು ನಿರೀಕ್ಷಿತ ಪರಿಹಾರ ಸಮಯದ ಬಗ್ಗೆ ವ್ಯಾಪಾರಿಗಳಿಗೆ ತಿಳಿಸಲಾಗುತ್ತದೆ. | ||
ಹಂತ 3 |
ನೋಡಲ್ ಅಧಿಕಾರಿ ಸಂಪರ್ಕಗಳು: | |
ಹಿಂದಿನ ಹಂತದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ, ವ್ಯಾಪಾರಿಗಳು ನೋಡಲ್ ಮತ್ತು ಪ್ರಧಾನ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು. ನೋಡಲ್ ಅಧಿಕಾರಿ: ಶ್ರೀಮತಿ ದೀಪಾ ಶೆಟ್ಟಿ ಸಂಪರ್ಕ ಸಂಖ್ಯೆ.: 080-68727105 ವಿಳಾಸ: ಕಚೇರಿ-2, ಮಹಡಿ 4,5,6,7, ವಿಂಗ್ A, ಬ್ಲಾಕ್ A, ಸಾಲಾರ್‌ಪುರಿಯಾ ಸಾಫ್ಟ್‌ಜೋನ್, ಸರ್ವಿಸ್ ರಸ್ತೆ, ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು, ಬೆಂಗಳೂರು, ಕರ್ನಾಟಕ-KA, ಪಿನ್- 560103. | ||
3ನೇ ಹಂತದ ದೂರುಗಳ ಪರಿಹಾರ: | ||
● 3ನೇ ಹಂತದ ದೂರು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ಮೊದಲ ಪ್ರತಿಕ್ರಿಯೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ● ನಾವು 3ನೇ ಹಂತದ ಎಲ್ಲ ದೂರುಗಳನ್ನು 7 ವ್ಯವಹಾರ ದಿನಗಳಲ್ಲಿ ಪರಿಹರಿಸುವ ಗುರಿಯನ್ನು ಹೊಂದಿದ್ದೇವೆ. ಗಮನಿಸಿ: ಬಾಹ್ಯ ಅವಲಂಬನೆಗಳು ಅಥವಾ ಕಾರ್ಯಾಚರಣೆ/ತಾಂತ್ರಿಕ ಕಾರಣಗಳಿಂದಾಗಿ ಯಾವುದೇ ದೂರನ್ನು ಪರಿಹರಿಸಲು ಹೆಚ್ಚುವರಿ ಸಮಯ ಬೇಕಾದರೆ, ವಿಳಂಬ ಮತ್ತು ನಿರೀಕ್ಷಿತ ಪರಿಹಾರ ಸಮಯದ ಬಗ್ಗೆ ವ್ಯಾಪಾರಿಗಳಿಗೆ ತಿಳಿಸಲಾಗುತ್ತದೆ. | ||
ಹಂತ 4 |
RBI ಓಂಬುಡ್ಸ್‌ಮನ್ | |
ಹಿಂದಿನ ಹಂತಗಳಲ್ಲಿ 30 ದಿನಗಳ ಒಳಗೆ ದೂರುಗಳು ತೃಪ್ತಿಕರವಾಗಿ ಬಗೆಹರಿಯದಿದ್ದರೆ, ವ್ಯಾಪಾರಿಗಳು RBI ಒಂಬುಡ್ಸ್‌ಮನ್ ಅವರನ್ನು ಸಂಪರ್ಕಿಸಬಹುದು. ಒಂಬುಡ್ಸ್‌ಮನ್‌ನ ದೂರು ದಾಖಲಾತಿ ಪೋರ್ಟಲ್: https://cms.rbi.org.in/ ರಿಸರ್ವ್ ಬ್ಯಾಂಕ್ – ಇಂಟಿಗ್ರೇಟೆಡ್ ಓಂಬುಡ್ಸ್‌ಮನ್ ಸ್ಕೀಮ್, 2021 ಕುರಿತು ಹೆಚ್ಚಿನ ವಿವರಗಳಿಗಾಗಿ, ಸ್ಕೀಮ್‌ನ ಪ್ರತಿಗಾಗಿ ದಯವಿಟ್ಟು ಲಿಂಕ್ ಅನ್ನು ನೋಡಿ – RBI ಇಂಟಿಗ್ರೇಟೇಡ್ ಓಂಬುಡ್ಸ್‌ಮನ್ ಸ್ಕೀಮ್ ಮತ್ತು ಸ್ಕೀಮ್‌ನ ಪ್ರಮುಖ ಲಕ್ಷಣಗಳು. |
6.2 ಆಧಾರ್ eKYC ಕುಂದುಕೊರತೆ ಪರಿಹಾರ
ಆಧಾರ್ eKYC ಮತ್ತು ಒಪ್ಪಿಗೆ ರದ್ದತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ, ವ್ಯಾಪಾರಿಯು ಇನ್‌ಬೌಂಡ್ ಬೆಂಬಲ ತಂಡವನ್ನು 080-6872-7777 / 022-6872-7777 ನಲ್ಲಿ ಸಂಪರ್ಕಿಸಬಹುದು. ನಾವು ಎಲ್ಲ 7 ದಿನಗಳಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 11 ರವರೆಗೆ ಬೆಂಬಲವನ್ನು ನೀಡುತ್ತೇವೆ. ಆನ್‌ಬೋರ್ಡಿಂಗ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಮತ್ತು ವಿಷಯ ತೆಗೆದುಹಾಕಲು 30 ಕ್ಯಾಲೆಂಡರ್ ದಿನಗಳವರೆಗೆ ತೆಗೆದುಕೊಳ್ಳಬಹುದು.
7. ವಿವಾದ ನಿರ್ವಹಣಾ ಪ್ರಕ್ರಿಯೆ
PhonePe QR ಅಥವಾ PhonePe ಪೇಮೆಂಟ್ ಗೇಟ್‌ವೇ ಬಳಸಿಕೊಂಡು PhonePe ವ್ಯಾಪಾರಿಗಳಲ್ಲಿ ಉತ್ಪನ್ನ/ಸೇವೆಯ ಖರೀದಿ/ಆರ್ಡರ್‌ನಿಂದ ಖರೀದಿದಾರರು ತೃಪ್ತರಾಗದಿದ್ದರೆ, ಅವರು ವಿವಾದವನ್ನು ಪ್ರಸ್ತಾಪಿಸಬಹುದು.
ಖರೀದಿದಾರರು ವಿವಾದವನ್ನು ಪ್ರಸ್ತಾಪಿಸಬಹುದಾದ ಸಂದರ್ಭಗಳು:
- ಯಾವುದೇ ಉತ್ಪನ್ನ/ಸೇವೆಯನ್ನು ಸ್ವೀಕರಿಸಲಿಲ್ಲ.
- ವ್ಯಾಪಾರಿ ಒದಗಿಸಿದ ಗರಿಷ್ಠ ಅಂದಾಜು ಡೆಲಿವರಿ ದಿನಾಂಕಕ್ಕಿಂತ ನಂತರ ಉತ್ಪನ್ನ/ಸೇವೆಯನ್ನು ಸ್ವೀಕರಿಸಲಾಗಿದೆ..
- ಉತ್ಪನ್ನವನ್ನು ಸ್ವೀಕರಿಸಲಾಗಿದೆ ಆದರೆ ಅದು ದೋಷಪೂರಿತವಾಗಿತ್ತು, ಹಾನಿಗೊಳಗಾಗಿತ್ತು, ಅದರ ಭಾಗಗಳು ಕಾಣೆಯಾಗಿದ್ದವು ಅಥವಾ ವ್ಯಾಪಾರಿ ಒದಗಿಸಿದ ವಿವರಣೆಗೆ ಹೊಂದಿಕೆಯಾಗುತ್ತಿಲ್ಲ.
- ವ್ಯಾಪಾರಿಯೊಂದಿಗಿನ ಒಪ್ಪಂದದ ಪ್ರಕಾರ ಉತ್ಪನ್ನವನ್ನು ಹಿಂತಿರುಗಿಸಲಾಗಿದೆ ಆದರೆ ಉತ್ಪನ್ನವನ್ನು ಸ್ವೀಕರಿಸಿದ ನಂತರ ವ್ಯಾಪಾರಿಯು ಒಪ್ಪಿಕೊಂಡ ರಿಫಂಡ್ ಅನ್ನು ಒದಗಿಸಲಿಲ್ಲ.
- ವ್ಯಾಪಾರಿಯು ತಮ್ಮ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ನಲ್ಲಿ ತೋರಿಸಿರುವ ರೀಫಂಡ್ ಪಾಲಿಸಿಯನ್ನು ಅನುಸರಿಸಲು ನಿರಾಕರಿಸುತ್ತಿದ್ದಾರೆ.
- ಖರೀದಿಗೆ ಅನುಮತಿಸಲಾದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ವಿಧಿಸಲಾಗಿದೆ.
ವಿವಾದ ಪ್ರಸ್ತಾಪಿಸುವ ಪ್ರಕ್ರಿಯೆ:
- ಖರೀದಿದಾರರು ತಮ್ಮ ಖರೀದಿ/ಆರ್ಡರ್‌ನ ಸಮಸ್ಯೆಯನ್ನು ಪರಿಹರಿಸಲು ಮೊದಲು ನೇರವಾಗಿ ವ್ಯಾಪಾರಿಯನ್ನು ಸಂಪರ್ಕಿಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ.
- ವ್ಯಾಪಾರಿಯಿಂದ ಯಾವುದೇ ಪ್ರತಿಕ್ರಿಯೆ ದೊರೆಯದಿದ್ದರೆ ಅಥವಾ ಅತೃಪ್ತಿಕರ ಪ್ರತಿಕ್ರಿಯೆ ದೊರೆತರೆ, ಖರೀದಿದಾರರು ಆ ವಹಿವಾಟಿನ ಮೇಲೆ ಚಾರ್ಜ್‌ಬ್ಯಾಕ್ ಪ್ರಸ್ತಾಪಿಸಲು ತಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬಹುದು ಅಥವಾ NPCI ಅಧಿಕೃತ ವೆಬ್‌ಸೈಟ್ ಮೂಲಕ (UPI ವಹಿವಾಟುಗಳಿಗೆ ಮಾತ್ರ) ಸಂಪರ್ಕಿಸಬಹುದು.
ಖರೀದಿದಾರರು ತಮ್ಮ ಬ್ಯಾಂಕ್‌ನಲ್ಲಿ ಚಾರ್ಜ್‌ಬ್ಯಾಕ್ ಪ್ರಸ್ತಾಪಿಸುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು,
- ಪಾವತಿ ದಿನಾಂಕದಿಂದ 15 ದಿನಗಳ ನಂತರ ಅಥವಾ ಡೆಲಿವರಿಯ ಅಂದಾಜು ದಿನಾಂಕದ ನಂತರ, ಯಾವುದು ಮೊದಲೋ ಅದರ ನಂತರ ಮಾತ್ರ ಚಾರ್ಜ್‌ಬ್ಯಾಕ್ ಅನ್ನು ಪ್ರಸ್ತಾಪಿಸಬೇಕು.
- ಪಾವತಿ ಮಾಡಿದ 120 ದಿನಗಳ ಒಳಗಾಗಿ ಯಾವುದೇ ಸಮಯದಲ್ಲಿ ಮಾತ್ರ ಇದನ್ನು ಪ್ರಸ್ತಾಪಿಸಬಹುದು.
- ಗ್ರಾಹಕರು ಆರ್ಡರ್ ದೃಢೀಕರಣದ ಸ್ಕ್ರೀನ್‌ಶಾಟ್ ಅನ್ನು ಒದಗಿಸಬೇಕು.
ಖರೀದಿದಾರರ ಬ್ಯಾಂಕ್ ಅಥವಾ NPCI ಅಧಿಕೃತ ವೆಬ್‌ಸೈಟ್ ಮೂಲಕ (UPI ವಹಿವಾಟುಗಳಿಗೆ ಮಾತ್ರ) ವಿವಾದವನ್ನು ಯಶಸ್ವಿಯಾಗಿ ಪ್ರಸ್ತಾಪಿಸಿದ ನಂತರ, ಅದನ್ನು PhonePe ನೊಂದಿಗೆ ಚರ್ಚಿಸಲಾಗುವುದು ಮತ್ತು ನಂತರ ನಾವು ವಿವಾದದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸುವಲ್ಲಿ ಸಹಾಯ ಮಾಡುತ್ತೇವೆ.ನಾವು ವ್ಯಾಪಾರಿಯೊಂದಿಗೆ ವಿವರಗಳನ್ನು ಮೌಲ್ಯೀಕರಿಸುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ಬ್ಯಾಂಕ್/NPCI ಗೆ ಪ್ರತಿಕ್ರಿಯೆಯನ್ನು ಒದಗಿಸುತ್ತೇವೆ. ಖರೀದಿದಾರರ ಬ್ಯಾಂಕ್/NPCI ಅಂತಿಮ ನಿರ್ಣಯದ ಬಗ್ಗೆ ಖರೀದಿದಾರರಿಗೆ ತಿಳಿಸುತ್ತದೆ, ಇದರಲ್ಲಿ ವಿವಾದವನ್ನು ಒಪ್ಪಿಕೊಳ್ಳುವುದು ಅಥವಾ ವ್ಯಾಪಾರಿಯಿಂದ ವಿವಾದವನ್ನು ನಿರಾಕರಿಸುವುದು ಸಹ ಒಳಗೊಂಡಿರಬಹುದು.