PhonePe Blogs Main Featured Image

Design

ಲಕ್ಷಾಂತರ ಭಾರತೀಯರಿಗೆ ಸುಲಲಿತವಾದ ಪಾವತಿ ಅನುಭವವನ್ನು ನಿರ್ಮಿಸುವುದು

PhonePe Regional|2 min read|23 April, 2021

URL copied to clipboard

PhonePe ಇದೀಗ 250 ಮಿಲಿಯನ್ ಬಳಕೆದಾರರ ಮೈಲಿಗಲ್ಲನ್ನು ದಾಟಿದೆ ಮತ್ತು UPI ವಹಿವಾಟುಗಳಲ್ಲಿ ಅತಿದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ. 100 ಮಿಲಿಯನ್‌ಗೂ ಹೆಚ್ಚಿನ ಮಾಸಿಕ ಸಕ್ರಿಯ ಬಳಕೆದಾರರಿಂದ, ನಾವೀಗ ಭಾರತದಲ್ಲಿನ ಅತಿದೊಡ್ಡ ವಹಿವಾಟು ನಡೆಸುವ ಬಳಕೆದಾರರನ್ನು ಹೊಂದಿರುವರಲ್ಲಿ ಒಬ್ಬರಾಗಿದ್ದೇವೆ. ನಮ್ಮ ಈ ಸುದೀರ್ಘ ಪಯಣದಲ್ಲಿ ಭಾರತದ 500 ನಗರಗಳಲ್ಲಿನ ಲಕ್ಷಾಂತರ ಬಳಕೆದಾರರಿಗೆ ಸೇವೆ ನೀಡುವ ಹೆಮ್ಮೆ ನಮ್ಮದಾಗಿದೆ.

ನಾವು ಶ್ರೇಷ್ಠವಾದ ತಾಂತ್ರಿಕ ಸಾಮರ್ಥ್ಯವನ್ನು ಹೊಂದುವುದರೊಂದಿಗೆ ಸರಳವಾದ ಮತ್ತು ಸುಲಭವಾದ ಉತ್ಪನ್ನಗಳ ಪರಿವಿಡಿಯನ್ನು ಹೊಂದಿದ್ದೇವೆ, ಅಷ್ಟೇ ಅಲ್ಲದೆ, ಹೊಸ ಹೊಸ ಉತ್ಪನ್ನಗಳ ಹಾಗೂ ಫೀಚರ್‌ಗಳ ಸೇರಿಸುವಿಕೆ ಹಾಗೂ ಗ್ರಾಹಕರ ಸಂತೃಪ್ತಿಯಂತಹ ಅಂಶಗಳು ಗ್ರಾಹಕರು ನಮ್ಮನ್ನು ಏಕೆ ಬಳಸುತ್ತಾರೆ ಎಂಬುದಕ್ಕೆ ಮುಖ್ಯ ಕಾರಣಗಳಾಗಿವೆ. ಬರೀ ಗ್ರಾಹಕ ತೃಪ್ತಿಯೊಂದೇ ನಮ್ಮ ಆದ್ಯತೆ ಅಲ್ಲ, ಗ್ರಾಹಕರು ಪ್ರತಿ ಬಾರಿ ಪಾವತಿ ಮಾಡಿದಾಗ, ಅವರಿಗೆ ಸಂತೋಷದ ಅನುಭವ ನೀಡುವುದನ್ನು ಆದ್ಯತೆಯನ್ನಾಗಿ ಮಾಡಿಕೊಂಡಿದ್ದೇವೆ. ಅದನ್ನು ನಾವು ಮಾಡುವ ಬಗೆ ಹೀಗಿದೆ!

ಭಾರತಕ್ಕಾಗಿ ಡಿಜಿಟಲ್ ಪಾವತಿಯ ಅಳವಡಿಸುವಿಕೆ

ಭಾರತದ ಉದ್ದಗಲಕ್ಕೂ ಹೆಚ್ಚಾಗಿ ಬಳಸುತ್ತಿರುವ ಪಾವತಿ ಆಯ್ಕೆ ನಮ್ಮದಾಗಿದೆ. ನಮ್ಮ ವಿಸ್ತಾರ ಮತ್ತು ದೊಡ್ಡ ಗ್ರಾಹಕ ಬಳಗಕ್ಕೆ ಸಾಕ್ಷಿಯಾಗಿ ನಮ್ಮ 80% ನಷ್ಟು ಗ್ರಾಹಕರು ಟೈರ್ 2, 3 ನಗರಗಳಲ್ಲಿದ್ದಾರೆ ಮತ್ತು ಅದರಾಚೆಯೂ ಇದ್ದಾರೆ. ನಂಬಿಕೆ, ಸುರಕ್ಷತೆ, ವಿಶ್ವಾಸಾರ್ಹತೆಯಂತಹ ಕಾರಣಗಳಿಂದಾಗಿ ಡಿಜಿಟಲ್ ಪಾವತಿ ಕುರಿತ ಹಿಂಜರಿಕೆ ಈ ವಲಯಗಳಲ್ಲಿ ಇನ್ನೂ ಇದೆ.

ನಮ್ಮ ಗ್ರಾಹರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ ನಮಗೆ ಕಂಡು ಬಂದಿದ್ದು ಏನೆಂದರೆ, ಹೆಚ್ಚಿನ ನಮ್ಮ ಗ್ರಾಹಕರು ಮೊದಲ ಬಾರಿ ಇಂಟರ್‌ನೆಟ್ ಬಳಸುತ್ತಿದ್ದಾರೆ ಎಂಬುದು. ಹೀಗಾಗಿ ಅವರಿಗೆ ಸುಲಭವಾಗಿ ಪಾವತಿ ಮಾಡಲು ಸಹಾಯ ಮಾಡುವುದು ಹಾಗೂ ಡಿಜಿಟಲ್ ಪ್ಲಾಟ್‌ಫಾರ್ಮ್ ಪರಿಚಿತವಾಗುವವರೆಗೆ ಕೈಹಿಡಿದು ನಡೆಸುವುದು ನಮ್ಮ ಮುಖ್ಯ ಕರ್ತವ್ಯಗಳಾಗಿವೆ.

ಮನಸ್ಸಿನಲ್ಲಿ ಈ ಒಳನೋಟಗಳೊಂದಿಗೆ, ನಾವು ಗ್ರಾಹಕರನ್ನು ಚೆನ್ನಾಗಿ ಅರಿಯಲು ಸೂಕ್ತ ವ್ಯವಸ್ಥೆಗಳನ್ನು ಮತ್ತು ಪ್ರಕ್ರಿಯೆಗಳನ್ನು ನಿರ್ಮಿಸಲು ಬಹಳಷ್ಟು ತೊಡಗಿಸಿಕೊಂಡೆವು, ಅದರ ಫಲವಾಗಿ ಬೇರೆಬೇರೆ ಪ್ರದೇಶ, ವಿಭಾಗ, ಸಾಧನಗಳು ಮತ್ತು ಪಾವತಿ ಕೆಟಗರಿಗಳಾದ್ಯಂತ ಗ್ರಾಹಕರ ವರ್ತನೆಗಳನ್ನು ಅರಿಯಲು ನಮಗೆ ಸಾಧ್ಯವಾಯಿತು. ಈ ಪ್ರಯತ್ನಗಳ ಮೂಲಕ ನಮ್ಮ ಆ್ಯಪ್‌ನಲ್ಲಿ ಗ್ರಾಹಕರಿಗೆ ಸಂತೋಷದ ಮತ್ತು ನಿರಾಸೆಯ ಅನುಭವಕ್ಕೆ ಕಾರಣವಾಗುವ ಮುಖ್ಯ ಅಂಶಗಳನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ನಮ್ಮ ಆಳವಾದ ಸಂಶೋಧನೆಯ ಸಮಯದಲ್ಲಿ ಕಂಡುಬಂದ ತೊಂದರೆಗಳನ್ನು ಪರಿಹರಿಸಲು ತಾಂತ್ರಿಕ ಮತ್ತು ಡೇಟಾ-ಫಸ್ಟ್ ವಿಧಾನವನ್ನು ಅಳವಡಿಸಿಕೊಂಡೆವು.

ನಮ್ಮ ಆ್ಯಪ್‌ ನಿಮ್ಮ ಭಾಷೆಯಲ್ಲೂ ದೊರೆಯುತ್ತದೆ

ನಮ್ಮ ಬಹಳಷ್ಟು ಗ್ರಾಹಕರು ನಮ್ಮ ಆ್ಯಪ್‌ ಅನ್ನು ತಮ್ಮ ಸ್ಥಳೀಯ ಭಾಷೆಯಲ್ಲಿ ಬಳಸಲು ಇಷ್ಟಪಡುತ್ತಾರೆ. ಇದನ್ನು ಪರಿಗಣಿಸಿ, 8 ಭಾರತೀಯ ಭಾಷೆಗಳಲ್ಲಿ ನಾವು ಬೆಂಬಲ ಮತ್ತು ಸಹಾಯವನ್ನು ಒದಗಿಸುತ್ತೇವೆ. ಪ್ರಾದೇಶಿಕ ಭಾಷೆಯಲ್ಲಿ ಫೋನ್ ಬೆಂಬಲ ನೀಡುವುದು ಮಾತ್ರವಲ್ಲದೆ, ನಮ್ಮ ಆ್ಯಪ್‌ನಲ್ಲಿ, ಸಹಾಯ ವಿಭಾಗದಲ್ಲಿ ಮತ್ತು ಚಾಟ್ ಬೆಂಬಲದಲ್ಲಿ ಭಾಷೆ ಆಯ್ಕೆಯನ್ನು ಸಹ ನೀಡಿದ್ದೇವೆ. ಹೆಚ್ಚೆಚ್ಚು ಗ್ರಾಹಕರು ತಮ್ಮ ನೆಚ್ಚಿನ ಭಾಷೆಯಲ್ಲಿ ಆ್ಯಪ್‌ ಅನ್ನು ಬಳಸಲು ಆರಂಭಿಸಿರುವುದರಿಂದ ನಮ್ಮ ಸ್ಥಳೀಯ ಭಾಷೆಯಲ್ಲಿ ಸೇವೆ ನೀಡುವ ಪ್ರಯತ್ನಕ್ಕೆ ಬೆಂಬಲದ ಮಹಾಪೂರವೇ ಬಂದಂತಾಗಿದೆ.

ನಿಮಗೆ ಸಹಾಯ ಮಾಡುವುದಕ್ಕೆ ನಾವಿದ್ದೇವೆ!

UPI ಪಾವತಿಗಳ ಕಾರ್ಯವೈಖರಿಯಲ್ಲಿ VPA ರಚಿಸುವುದು, BHIM UPI PIN ಅನ್ನು ಸೆಟ್ ಮಾಡುವುದು, ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡುವುದು ಇಂತಹ ಮುಂತಾದ ಸಂಗತಿಗಳನ್ನು ಒಳಗೊಂಡಿರುವುದರಿಂದ ಬಹಳಷ್ಟು ಗ್ರಾಹಕರು ತಿಳುವಳಿಕೆಯ ಕೊರತೆಯಿಂದಾಗಿ ಡಿಜಿಟಲ್ ಪಾವತಿಗಳನ್ನು ಬಳಸಲು ಹಿಂಜರಿಯುತ್ತಾರೆ. ಗ್ರಾಹಕರನ್ನು ಸುಲಭವಾಗಿ ಆನ್-ಬೋರ್ಡ್ ಮಾಡುವ ಉದ್ದೇಶದಿಂದ ನಾವು ಸುಲಭವಾಗಿ ಅರ್ಥವಾಗುವ ಸಹಾಯ ಲೇಖನಗಳು ಮತ್ತು ಶಿಕ್ಷಣ ವೀಡಿಯೊಗಳನ್ನು ಹಲವಾರು ಭಾಷೆಗಳಲ್ಲಿ ರಚಿಸಿದ್ದೇವೆ. ಆ್ಯಪ್‌ನಲ್ಲಿನ ಬಳಕೆದಾರರಿಗೆ ಸುಲಭವಾಗಿ ಅರ್ಥವಾಗಲು ಫೋಟೋಗಳು ಮತ್ತು ದೃಶ್ಯ ಮಾಧ್ಯಮಗಳನ್ನು ಸತತವಾಗಿ ಸೇರಿಸುತ್ತಿದ್ದೇವೆ. ನಾವು ಉತ್ಪನ್ನ ಮತ್ತು ವ್ಯವಹಾರ ತಂಡಗಳೊಂದಿಗೆ ಚರ್ಚಿಸುತ್ತ, ಬೆಂಬಲಕ್ಕಾಗಿ ಸಂಪರ್ಕಿಸುವ ದರವನ್ನು ಕಡಿಮೆ ಮಾಡಲು ಸತತವಾಗಿ ಕೆಲಸ ಮಾಡುತ್ತಿದ್ದೇವೆ, ಅದು ಇಂದು 0.5% ಇದ್ದು, ಬಹಳ ಉತ್ತಮವಾಗಿದೆ.

ಆಟೋಮೇಶನ್ ಮೂಲಕ ಸಮಸ್ಯೆಯ ತಕ್ಷಣ ಪರಿಹಾರ

ನಾವು 90% ರಷ್ಟು ಗ್ರಾಹಕ ಸಮಸ್ಯೆಗಳಿಗೆ ಆ ಕ್ಷಣವೇ ಪರಿಹಾರವನ್ನು ಒದಗಿಸುತ್ತೇವೆ ಮತ್ತು ಈ ಶೇಕಡಾವಾರು ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಪಡುತ್ತಿದ್ದೇವೆ. ನಮ್ಮ ಸಹಾಯ ನೀಡುವ ವ್ಯವಸ್ಥೆಯನ್ನು ಆಟೋಮೇಟ್ ಮಾಡಿದ್ದೇವೆ, ಈ ಮೂಲಕ ಗ್ರಾಹಕರು ತಮ್ಮ ಪಾವತಿ ಸಮಸ್ಯೆಗಳನ್ನು ಆ್ಯಪ್‌ನಲ್ಲಿ ಸುಲಭವಾಗಿ ಟ್ರ್ಯಾಕ್ ಮಾಡಬಹುದು ಮತ್ತು ತಕ್ಷಣ ಸ್ಪಂದನೆಯನ್ನು ಪಡೆಯಬಹುದು. ಇದರಿಂದ ಗ್ರಾಹಕರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಅನುಕೂಲವಾಗುತ್ತದೆ ಮತ್ತು ಗ್ರಾಹಕ ಸಹಾಯ ಪ್ರತಿನಿಧಿಯನ್ನು ಸಂಪರ್ಕಿಸಲು ಕಾಯುವ ಅಗತ್ಯವಿರುವುದಿಲ್ಲ. ಗ್ರಾಹಕರಿಗೆ ಪರಿಹಾರವನ್ನು ಒದಗಿಸುವಾಗ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿದ್ದೇವೆ. ಇಂದು ಸುಮಾರು 80% ರಷ್ಟು ಸಮಸ್ಯೆಗಳನ್ನು ಆಟೋಮೇಟ್ ಪೋರ್ಟಲ್ ಮತ್ತು ಫೋನ್ IVR ಮೂಲಕ ಕವರ್ ಮಾಡಲಾಗುತ್ತಿದೆ ಹಾಗೂ ಬೆಂಬಲ ಸಹಾಯದ ಅಂಕಗಳನ್ನು ಉತ್ತಮಪಡಿಸಲಾಗಿದೆ. ಇದನ್ನು ಇನ್ನೂ ಸುಧಾರಿಸುವ ವಿಶ್ವಾಸ ನಮ್ಮಲ್ಲಿದೆ. ಗ್ರಾಹಕರು ತಮ್ಮ ಯಾವುದೇ ಸಮಸ್ಯೆಗಳಿಗೆ ನಮ್ಮಿಂದ ಕೆಲವೇ ಗಂಟೆಗಳಲ್ಲಿ ಉತ್ತರ ಪಡೆಯುವುದನ್ನು ನಾವು ಖಚಿತಪಡಿಸಿದ್ದೇವೆ.

ಭವಿಷ್ಯಕ್ಕಾಗಿ ನಿರ್ಮಾಣ

ನಮ್ಮ ಗ್ರಾಹಕರಿಂದ ಪ್ರತಿದಿನವೂ ಕಲಿಯುತ್ತಲೇ ಇರುತ್ತೇವೆ. ನಮಗೆ ಬರುವ ಫೀಡ್‌ಬ್ಯಾಕ್ ಅನ್ನು ಸತತವಾಗಿ ಬಳಸಿಕೊಂಡು ಭಾರತದ ಉದ್ದಗಲಕ್ಕೂ ಇರುವ ನಮ್ಮ ಬಳಕೆದಾರರಿಗೆ ಅತ್ಯುತ್ತಮ ಪಾವತಿ ಅನುಭವವನ್ನು ರೂಪಿಸಲು ತೊಡಗಿಸುತ್ತೇವೆ.

Keep Reading