Investments
ಸಂಪತ್ತನ್ನು ಹೆಚ್ಚಿಸುವ ಸರಳ ಮಾರ್ಗ ಕಲಿಯಿರಿ & ಕೋಟ್ಯಾಧಿಪತಿಯಾಗಿ
PhonePe Regional|2 min read|02 August, 2021
ಬೇಗ ಹೂಡಿಕೆ ಮಾಡಿ, ಕಡಿಮೆಯಿಂದಲೇ ಪ್ರಾರಂಭಿಸಿ ಮತ್ತು ಕಾಲಾನಂತರದಲ್ಲಿ ಬಹಳಷ್ಟು ಗಳಿಸಿ
ಪ್ರತಿಯೊಬ್ಬರೂ ಕೋಟ್ಯಾಧಿಪತಿಯಾಗಬೇಕೆಂಬ ಕನಸು ಕಾಣುತ್ತಾರೆ ಆದರೆ ಆ ಕನಸನ್ನು ನನಸು ಮಾಡುವ ದಾರಿ ಅನೇಕರಿಗೆ ತಿಳಿದಿಲ್ಲ. ಖಂಡಿತವಾಗಿಯೂ ಯಾವುದೇ ಶಾರ್ಟ್‌ಕಟ್‌ಗಳಿಲ್ಲದಿದ್ದರೂ, ನೀವು ನಿಯಮಿತವಾಗಿ ಹೂಡಿಕೆ ಮಾಡಲು ತಾಳ್ಮೆ ಮತ್ತು ಶಿಸ್ತನ್ನು ಹೊಂದಿದ್ದರೆ ಅದು ಸಾಧ್ಯ.
ಸಣ್ಣ ಪ್ರಮಾಣದಲ್ಲಿ ತಾಳ್ಮೆಯಿಂದ ಹೂಡಿಕೆ ಮಾಡುವುದು ಮತ್ತು ಚಕ್ರಬಡ್ಡಿಯನ್ನು ಪಡೆಯುವುದು ಮ್ಯಾಜಿಕ್ ಮಂತ್ರ.
ಚಕ್ರ ಬಡ್ಡಿ ಎಂದರೇನು?
ಇದು ತುಂಬಾ ಸರಳ.ನೀವು ರೂ. 100 ಅನ್ನು ವರ್ಷಕ್ಕೆ 8% ಬಡ್ಡಿಯೊಂದಿಗೆ ಹೂಡಿಕೆ ಮಾಡಿದ್ದೀರಿ ಎಂದು ಊಹಿಸೋಣ, ನೀವು ವರ್ಷದ ಕೊನೆಯಲ್ಲಿ 8 ರೂಪಾಯಿ ಬಡ್ಡಿಯನ್ನು ಸ್ವೀಕರಿಸುತ್ತೀರಿ. ಮತ್ತೊಂದು ವರ್ಷಕ್ಕೆ ನೀವು ಅದೇ 108 ರೂಪಾಯಿಯನ್ನು 8% ಬಡ್ಡಿಯೊಂದಿಗೆ ಹೂಡಿಕೆ ಮಾಡಿದರೆ, ನೀವು 8.64 ಮೊತ್ತವನ್ನು ಸ್ವೀಕರಿಸುತ್ತೀರಿ. ಹೆಚ್ಚುವರಿ 64 ಪೈಸೆ ಬಡ್ಡಿಯು ನೀವು ಬಡ್ಡಿಯ ಮೇಲೆ ಬಡ್ಡಿ ಗಳಿಸಿದ್ದಾಗಿದೆ- ಅದು ಚಕ್ರಬಡ್ಡಿಯಾಗಿದೆ.
ದೀರ್ಘಾವಧಿಯವರೆಗೆ ಹೂಡಿಕೆ ಮಾಡಿದಂತೆ, ನೀವು ಹೆಚ್ಚು ‘ಚಕ್ರಬಡ್ಡಿʼ ಗಳಿಸುತ್ತೀರಿ ಮತ್ತು ದೀರ್ಘಕಾಲದ ನಂತರ ಈ ಪುಟ್ಟ ಮೊತ್ತವು, ದೊಡ್ಡ ಮೊತ್ತವಾಗಿ ಪರಿವರ್ತಿತವಾಗುತ್ತದೆ- ಅಂದರೆ ನಿಮ್ಮ ಮೂಲ ಹೂಡಿಕೆಯ ಮೊತ್ತಕ್ಕಿಂತ ತುಂಬಾ ಹೆಚ್ಚು.
ನೀವು ಎಷ್ಟು ಉಳಿಸಬೇಕು ಮತ್ತು ನೀವು ಹೇಗೆ ಪ್ರಾರಂಭಿಸಬೇಕು?
ನಿಮಗೆ 30 ವರ್ಷದ ಯೋಜನೆಯ ಗುರಿ ಇದೆ ಎಂದಾದರೆ (ಬೇಗ ಹೂಡಿಕೆ ಪ್ರಾರಂಭಿಸುವುದು), ನಿಮಗೆ ಬೇಕಾಗಿರುವ ಮೊತ್ತ ಕೇವಲ ತಿಂಗಳಿಗೆ 1300 ರೂಪಾಯಿ. ಪ್ರತಿ ವರ್ಷ ಇದನ್ನು 10% ಹೆಚ್ಚಿಸಬೇಕು.
ನೀವು 30 ವರ್ಷಗಳಿಗಿಂತಲೂ ಮೊದಲೇ ಕೋಟ್ಯಾಧಿಪತಿಯಾಗಬೇಕು ಎಂದಾದರೆ ನೀವು ಹೆಚ್ಚು ಹೂಡಿಕೆ ಮಾಡಲು ಆಯ್ಕೆ ಮಾಡಬಹುದು.
ಕೆಳಗಿನ ಕೋಷ್ಟಕವು ನಿಮ್ಮ ಕೋಟ್ಯಾಧಿಪತಿ ಪ್ರಯಾಣವನ್ನು ಆರಂಭಿಸಲು ಅಗತ್ಯವಿರುವ ಮಾಸಿಕ ಹೂಡಿಕೆ ಮೊತ್ತವನ್ನು ತೋರಿಸುತ್ತದೆ.
ಆದ್ದರಿಂದ, ನಿಮ್ಮ ಹೂಡಿಕೆಯಿಂದ ನೀವು 10% ವಾರ್ಷಿಕ ಲಾಭವನ್ನು ನಿರೀಕ್ಷಿಸಿದರೆ, 25 ವರ್ಷಗಳಲ್ಲಿ 1 ಕೋಟಿಯ ಗುರಿ ಸಾಧಿಸಲು ನೀವು ತಿಂಗಳಿಗೆ ರೂ. 3,200 ರಿಂದ ಆರಂಭಿಸಬೇಕಾಗಬಹುದು. ಅಂತೆಯೇ, ನೀವು ಹೂಡಿಕೆಯ ಮೇಲೆ 12% ಆದಾಯವನ್ನು ನಿರೀಕ್ಷಿಸಿದರೆ ಮತ್ತು 20 ವರ್ಷಗಳಲ್ಲಿ ಈ ಮೈಲಿಗಲ್ಲನ್ನು ಸಾಧಿಸಲು ಬಯಸಿದರೆ, ನೀವು ತಿಂಗಳಿಗೆ ರೂ .5,400 ರಿಂದ ಆರಂಭಿಸಬೇಕಾಗಬಹುದು.
ನಿಮ್ಮ ಕೋಟ್ಯಾಧಿಪತಿ ಪ್ರಯಾಣವನ್ನು ಆರಂಭಿಸಲು ಸಿದ್ಧರಿದ್ದೀರಾ?
ಅದನ್ನು ಪ್ರಾರಂಭಿಸುವ ಮೊದಲು ನೀವು ಏನು ಮಾಡಬೇಕೆಂಬುದು ಇಲ್ಲಿದೆ:
ಸರಿಯಾದ ಹೂಡಿಕೆ ಉತ್ಪನ್ನವನ್ನು ಆರಿಸಿ: ನಿಮ್ಮ ರಿಸ್ಕ್ ತೆಗೆದುಕೊಳ್ಳುವ ಆಧಾರದ ಮೇಲೆ ನೀವು ಈಕ್ವಿಟಿ ಮತ್ತು ಡೆಟ್ ಫಂಡ್ ನಂತರ ವರ್ಗಗಳಲ್ಲಿ ಉತ್ಪನ್ನಗಳ ಸರಿಯಾದ ಸಂಯೋಜನೆಯೊಂದಿಗೆ ಪ್ರಾರಂಭಿಸಬೇಕು.ಇದು ಕಷ್ಟಕರವೆಂದು ತೋರುತ್ತಿದ್ದರೆ, ನಿಮ್ಮ ರಿಸ್ಕ್ ಕಂಫರ್ಟ್‌ಗೆ ತಕ್ಕಂತೆ ಸೂಕ್ತವಾದ ನಮ್ಮ ಹೂಡಿಕೆ ಪರಿಹಾರಗಳಲ್ಲಿ ಒಂದನ್ನು ನೀವು ಆರಿಸಿಕೊಳ್ಳಬಹುದು.
ಮಾಸಿಕ ಹೂಡಿಕೆಯ ಮೊತ್ತವನ್ನು ನಿರ್ಧರಿಸಿ: ಹೂಡಿಕೆ ಉತ್ಪನ್ನ ಅಥವಾ ನೀವು ಆಯ್ಕೆ ಮಾಡಿದ ಉತ್ಪನ್ನಗಳ ಸಂಯೋಜನೆ (ಆಗ್ರೆಸ್ಸಿವ್, ಮಾಡರೇಟಿವ್, ಕನ್ಸರ್ವೇಟಿವ್) ಮತ್ತು ನೀವು ಹೂಡಿಕೆ ಮಾಡಲು ಯೋಜಿಸಿರುವ ವರ್ಷಗಳ ಸಂಖ್ಯೆಯನ್ನು ಆಧರಿಸಿ, ನಿಮ್ಮ ಆರಂಭಿಕ ಮಾಸಿಕ ಹೂಡಿಕೆಯನ್ನು ನೀವು ನಿರ್ಧರಿಸಬಹುದು.
ಶಿಸ್ತಿನ ವಿಧಾನವನ್ನು ಅನುಸರಿಸಿ: ನೀವು ಹೂಡಿಕೆಯಲ್ಲಿ ಶಿಸ್ತಿನ ವಿಧಾನವನ್ನು ಅನುಸರಿಸಬೇಕು (a) ಪ್ರತಿ ತಿಂಗಳು ಹೂಡಿಕೆ ಮಾಡಬೇಕು, (b) ನಿಮ್ಮ ಹೂಡಿಕೆಯನ್ನು ಪ್ರತಿ ವರ್ಷ 10% ಹೆಚ್ಚಿಸಬೇಕು.
ತಾಳ್ಮೆ ಇರಲಿ: ಎಲ್ಲಕ್ಕಿಂತ ಮುಖ್ಯವಾಗಿ, ಅಲ್ಪಾವಧಿಯ ಏರಿಳಿತಗಳನ್ನು ಲೆಕ್ಕಿಸದೆ ನಿಮ್ಮ ಹೂಡಿಕೆಗಳನ್ನು ನೀವು ಮುಂದುವರೆಸಬೇಕು.
ಮತ್ಯಾಕೆ ತಡ! ನಿಮ್ಮ ವೈಯಕ್ತಿಕ ಹೂಡಿಕೆ ಯೋಜನೆಯಲ್ಲಿ ಕೆಲಸ ಮಾಡಿ ಮತ್ತು ಇಂದು ಕೋಟ್ಯಾಧಿಪತಿಯಾಗುವ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.
*ಮ್ಯುಚ್ಯುವಲ್ ಫಂಡ್‌ಗಳು ಮಾರುಕಟ್ಟೆಯ ರಿಸ್ಕ್‌ಗೆ ಒಳಪಟ್ಟಿದ್ದು, ಯಾವುದೇ ಹೂಡಿಕೆ ಮಾಡುವ ಮೊದಲು ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಗಮನವಿಟ್ಟು ಓದಿ.