PhonePe Blogs Main Featured Image

Trust & Safety

ನಕಲಿ ಉದ್ಯೋಗ ಪಟ್ಟಿಯನ್ನು ಗುರುತಿಸಲು 5 ಮಾರ್ಗಗಳು

PhonePe Regional|3 min read|12 June, 2023

URL copied to clipboard

ನೀವು ಉದ್ಯೋಗವನ್ನು ಹುಡುಕುತ್ತಿದ್ದೀರಿ ಎಂದುಕೊಳ್ಳಿ. ನೀವು ಸದಾ ಬಯಸುವ ಕನಸಿನ ಕೆಲಸ, ಲಾಭದಾಯಕ ಸಂಬಳ ಮತ್ತು ವಿದೇಶಕ್ಕೆ ಪ್ರಯಾಣಿಸಲು ಹೆಚ್ಚುವರಿ ಅವಕಾಶ ನೀಡುತ್ತೇವೆಂದು ನೇಮಕಾತಿದಾರರು ನಿಮ್ಮನ್ನು ಆಹ್ವಾನಿಸುತ್ತಾರೆ! ಇದು ನಿರಾಕರಿಸಲು ಆಗದಂತಹ ಉತ್ತಮ ಆಫರ್‌ ಆಗಿರುತ್ತದೆ. ಈ ಬಗ್ಗೆ ಚಾಟ್ ಮಾಡಿದ ನಂತರ, ನೇಮಕಾತಿದಾರರು ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಲು ನಿಮಗೆ ಲಿಂಕ್ ಕಳುಹಿಸುತ್ತಾರೆ. ನಂತರ ನೇಮಕಾತಿದಾರರು ದೃಢೀಕರಣಕ್ಕಾಗಿ ಕರೆ ಮಾಡಿ, ಫ್ಲೈಟ್‌ ಮತ್ತು ಸ್ಥಳಾಂತರಕ್ಕಾಗಿ ನೀವು 50,000 ರೂ.ಗಳನ್ನು ಭರಿಸಬೇಕು ಎಂದು ತಿಳಿಸುತ್ತಾರೆ. ನೀವು ಅದನ್ನು ಪಾವತಿಸಲು ನಿರ್ಧರಿಸುತ್ತೀರಿ ಹಾಗೂ ಅವರು ಮುಂದಿನ ಸೂಚನೆಗಳನ್ನು ನೀಡುವವರೆಗೆ ಕಾತರದಿಂದ ಕಾಯುತ್ತಿರುತ್ತೀರಿ. ಆದರೆ, ಇದ್ದಕ್ಕಿದ್ದಂತೆ ನೇಮಕಾತಿದಾರು ನಿಮ್ಮ ಸಂಪರ್ಕಕ್ಕೆ ಸಿಗುವುದಿಲ್ಲ ಹಾಗೂ ಈಗ ನಿಮ್ಮ ಬಳಿ ಉದ್ಯೋಗವೂ ಇಲ್ಲ. ದೇಶದ ಸಾವಿರಾರು ಮಂದಿಗೆ* ಇದೇ ರೀತಿಯ ಅನುಭವ ಆಗುತ್ತಿರುತ್ತದೆ.

ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ರಿಮೋಟ್‌ ಜಾಬ್‌ಗಳನ್ನು ನೀಡುತ್ತೇವೆಂದು ಹೇಳಿ ಮೋಸ ಮಾಡುವ ಇಂತಹ ಹಗರಣಗಳು ಜಾಸ್ತಿಯಾಗುತ್ತಿವೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE)ಯ ಇತ್ತೀಚಿನ ಡೇಟಾ# ಪ್ರಕಾರ, ದೇಶದಾದ್ಯಂತ ಸರಾಸರಿ ನಿರುದ್ಯೋಗ ದರವು 7.85% ಆಗಿದೆ. ಇದರಿಂದ ಮುಗ್ಧ ಉದ್ಯೋಗಾಕಾಂಕ್ಷಿಗಳು ಮೋಸಗಾರರ ವಂಚನೆಗಳಿಗೆ ಗುರಿಯಾಗುತ್ತಿದ್ದಾರೆ. ಉದ್ಯೋಗದ ಅಗತ್ಯವಿರುವವರು ಶೋಷಣೆಗೆ ಒಳಗಾಗುತ್ತಿದ್ದಾರೆ.

ವಂಚಕರು ಆಕರ್ಷಕ ಶೀರ್ಷಿಕೆ ಮತ್ತು ಸಂಬಳದ ಆಸೆ ತೋರಿಸುವ ಜಾಹೀರಾತುಗಳನ್ನು ನೀಡುವ ಮೂಲಕ ಅಥವಾ SMS ಮತ್ತು WhatsApp ಸಂದೇಶಗಳ ಮೂಲಕ ಅಸುರಕ್ಷಿತವಾದ ನಕಲಿ ಅರೆಕಾಲಿಕ ಉದ್ಯೋಗ ಲಿಂಕ್‌ಗಳನ್ನು ಹಂಚಿಕೊಳ್ಳುವ ಮೂಲಕ ಹಣ ಗಳಿಸುತ್ತಿದ್ದಾರೆ. ಒಮ್ಮೆ ನೀವು ಆ ಕೆಲಸಕ್ಕೆ ಸೈನ್‌ಅಪ್‌ ಆದ ಬಳಿಕ, ಮೊದಲ ಟಾಸ್ಕ್‌ ಅನ್ನು ಪೂರ್ಣಗೊಳಿಸಿದರೆ ನಿಮಗೆ ಹೆಚ್ಚಿನ ಮೊತ್ತದ ಹಣವನ್ನು ನೀಡುತ್ತೇವೆ ಎಂದು ಭರವಸೆ ನೀಡುತ್ತಾರೆ. ಆ ಮೂಲಕ ನಿರ್ದಿಷ್ಟ ಮೊತ್ತವನ್ನು ಪಾವತಿಸಲು ನಿಮಗೆ ತಿಳಿಸುತ್ತಾರೆ. ನಿಮಗೆ ನಂಬಿಕೆ ಬರುವಂತೆ ಮಾಡಲು ನಿಮ್ಮ ಖಾತೆಗೆ ಸಣ್ಣ ಮೊತ್ತವನ್ನು ಜಮಾ ಮಾಡುತ್ತಾರೆ. ಅಂತಿಮವಾಗಿ ಅವರು ನಿಮ್ಮಿಂದ ಸಂಪರ್ಕ ಕಡಿದುಕೊಳ್ಳುತ್ತಾರೆ. ನೀವು ಅವರನ್ನು ಸಂಪರ್ಕಿಸಲೂ ಸಾಧ್ಯವಾಗುವುದಿಲ್ಲ.

ಉದ್ಯೋಗ ವಂಚಕರು ನಿಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬುದಕ್ಕೆ 5 ಚಿಹ್ನೆಗಳು

ವಂಚಕರು ಮುಗ್ಧ ಉದ್ಯೋಗಾಕಾಂಕ್ಷಿಗಳನ್ನು ವಂಚಿಸಲು ಪ್ರಯತ್ನಿಸುವ 5 ಸಾಮಾನ್ಯ ವಿಧಾನಗಳ ವಿವರಗಳು ಇಲ್ಲಿವೆ. ನೀವು ಉದ್ಯೋಗದ ಹುಡುಕಾಟದಲ್ಲಿದ್ದರೆ, ಇಂತಹವುಗಳಿಂದ ದೂರವಿದ್ದು ಜಾಗರೂಕರಾಗಿರಿ ಮತ್ತು ನಕಲಿ ಉದ್ಯೋಗ ಪಟ್ಟಿಗಳಿಂದ ಸುರಕ್ಷಿತವಾಗಿರಿ.

1. ಸೂಕ್ಷ್ಮ ಮಾಹಿತಿಯನ್ನು ಕೇಳುತ್ತಾರೆ: ನೇಮಕಾತಿದಾರರು ನಿಮ್ಮ ಹೆಸರು, ಜನ್ಮದಿನಾಂಕ ಅಥವಾ ಮನೆ ವಿಳಾಸದಂತಹ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ, ನಿಮ್ಮ ಬ್ಯಾಂಕ್ ಖಾತೆ/ಕ್ರೆಡಿಟ್ ಕಾರ್ಡ್ ಅನ್ನು ಆ್ಯಕ್ಸೆಸ್‌ ಮಾಡಲು ನಿಮ್ಮಿಂದ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುತ್ತಿರುವ ವಂಚಕ ಎಂದು ನೀವು ಖಚಿತವಾಗಿ ಹೇಳಬಹುದು. ವಿಶಿಷ್ಟವೆಂಬಂತೆ, ನೇಮಕಾತಿದಾರರು ನಿಮ್ಮ ಶೈಕ್ಷಣಿಕ ಹಿನ್ನೆಲೆ ಮತ್ತು ವೃತ್ತಿಪರ ಅನುಭವದ ಬಗ್ಗೆ ಮೂಲಭೂತ ಮಾಹಿತಿಯನ್ನು ಕೇಳುತ್ತಾರೆ. ನಂತರ ಉದ್ಯೋಗದಾತರೊಂದಿಗೆ ಸಂದರ್ಶನವನ್ನು ಏರ್ಪಡಿಸಿ, ಆಫರ್‌ ಲೆಟರ್‌ ಅನ್ನು ನೀಡುತ್ತಾರೆ. ಸಾಮಾನ್ಯವಾಗಿ ಸೇರ್ಪಡೆಗೊಳ್ಳುವ ಸಮಯದಲ್ಲಿ ಕಂಪನಿಯು ಪರಿಶೀಲನೆ ಮತ್ತು ದಾಖಲೆಗಾಗಿ ಹಿನ್ನೆಲೆ ಮಾಹಿತಿಯನ್ನು ವಿನಂತಿಸುತ್ತದೆ.

2. ಉದ್ಯಮದ ಮಾನದಂಡಗಳಿಗೆ ಅನುಗುಣವಾಗಿಲ್ಲದ ಅತಿ ಹೆಚ್ಚು ಸಂಬಳವನ್ನು ನೀಡುತ್ತದೆ: ಉದ್ಯೋಗವನ್ನು ಹೆಚ್ಚು ಆಕರ್ಷಕವನ್ನಾಗಿ ಮಾಡಲು ಹಾಗೂ ನಿಮ್ಮನ್ನು ವಂಚನೆಯ ಜಾಲಕ್ಕೆ ಸೆಳೆಯಲು ಕಡಿಮೆ ಕೆಲಸಕ್ಕೆ ಹೆಚ್ಚು ಸಂಬಳವನ್ನು ನೀಡುತ್ತಾರೆ. ಇದು ನಿಮ್ಮ ಸಾಧನದಲ್ಲಿರುವ ಗೌಪ್ಯ ಮಾಹಿತಿಯನ್ನು ಆ್ಯಕ್ಸೆಸ್‌ ಮಾಡಬಹುದಾದ ಮಾಲ್‌ವೇರ್ ಅನ್ನು ಹೊಂದಿರುವ ಲಿಂಕ್ ಅನ್ನು ಒಳಗೊಂಡಿರಬಹುದು. ಪರ್ಯಾಯವಾಗಿ, ವಂಚನೆಯ ಲಿಂಕ್ ಮೂಲಕ ಮೋಸಗಾರರು ನಿಮ್ಮನ್ನು ವೈಯಕ್ತಿಕ ವಿವರಗಳಿಗಾಗಿ ವಿನಂತಿಸಬಹುದು ಮತ್ತು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಲು ನಿಮ್ಮನ್ನು ಸೆಳೆಯಲು ಪ್ರಯತ್ನಿಸಬಹುದು.

3. ಉದ್ಯೋಗ ವಿವರಣೆಯಲ್ಲಿ ದೋಷಗಳು: ನಕಲಿ ಉದ್ಯೋಗ ಪೋಸ್ಟಿಂಗ್‌ನಲ್ಲಿ ಕೆಲವು ಪ್ರಮುಖ ಪದಗಳು ವ್ಯಾಕರಣ ಅಥವಾ ಕಾಗುಣಿತ ದೋಷಗಳಿಂದ ಕೂಡಿರುತ್ತವೆ. ಉದಾಹರಣೆಗೆ PhonePe ಎಂಬುದರ ಬದಲಿಗೆ Phonepay.com ಎಂದು ಬಳಸಿರಬಹುದು. ಇದು ನಿಮ್ಮನ್ನು ಅಸುರಕ್ಷಿತ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ. ಅಲ್ಲದೆ, ಕಂಪನಿಯನ್ನು ಬ್ಯಾಕಪ್ ಮಾಡಲು ಯಾವುದೇ ಕಾನೂನುಬದ್ಧ ವೆಬ್‌ಸೈಟ್ ಇಲ್ಲದ ಅಸ್ಪಷ್ಟ ಉದ್ಯೋಗ ವಿವರಣೆಗಳು ನಿಮಗೆ ಕಂಡುಬಂದರೆ ಅದು ನೀವು ನಕಲಿ ಉದ್ಯೋಗ ಪಟ್ಟಿಯನ್ನು ಓದುತ್ತಿರಬಹುದು ಎಂಬುದರ ಸೂಚಕಗಳಾಗಿರುತ್ತವೆ.

4. ತ್ವರಿತ ಉದ್ಯೋಗ ಆಫರ್: ನೇಮಕಾತಿ ಮಾಡುವವರು ಕಡಿಮೆ ಸಮಯದಲ್ಲಿ ಹಾಗೂ ಯಾವುದೇ ಹಿನ್ನೆಲೆಯನ್ನು ಪರಿಶೀಲಿಸದೇ ಮತ್ತು ಸಂದರ್ಶನವಿಲ್ಲದೇ ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಉದ್ಯೋಗ ನೀಡಿದರೆ, ಸಂಪರ್ಕದಲ್ಲಿರುವ ಆ ವ್ಯಕ್ತಿಗಳು ವಂಚಕರಾಗಿರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದರೆ ಅಧಿಕೃತ ನೇಮಕಾತಿದಾರರು ತಮ್ಮ ಕಂಪನಿಯಲ್ಲಿರುವ ಹುದ್ದೆಗೆ ಅಭ್ಯರ್ಥಿಯು ಸರಿ ಹೊಂದುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಲು ಸೂಕ್ತ ಸಂದರ್ಶನವನ್ನು ನಡೆಸುತ್ತಾರೆ. ಉದ್ಯಮದ ಮಾನದಂಡಗಳಿಗೆ ಅನುಗುಣವಾಗಿ ಸಂಬಳ ನೀಡುತ್ತಾರೆ.

5. ಕಮೀಷನ್‌ ಕೇಳುತ್ತಾರೆ: ವಂಚಕನು ಕೆಲವೊಮ್ಮೆ ಸಂಸ್ಥೆಯಲ್ಲಿ ಕಾನೂನುಬದ್ಧ ವ್ಯಕ್ತಿಯೆಂದು ಅಥವಾ ಉದ್ಯೋಗ ಸಲಹೆಗಾರನೆಂದು ನಟಿಸುವ ಮೂಲಕ ಉದ್ಯೋಗ ನೀಡಲು ಕಮೀಷನ್‌ ಪಾವತಿಸುವಂತೆ ಕೇಳುತ್ತಾನೆ. ಉದ್ಯೋಗದ ನಿರೀಕ್ಷೆಯಲ್ಲಿರುವ ನೀವು ಮೊತ್ತವನ್ನು ವರ್ಗಾಯಿಸಿದ ನಂತರ ಅವರನ್ನು ಸಂಪರ್ಕಿಸುವ ಎಲ್ಲ ಮಾರ್ಗಗಳನ್ನು ಕಡಿತಗೊಳಿಸುತ್ತಾರೆ. ಅವರು ನಿಮಗೆ ಹಣವನ್ನು ಮರಳಿಸುವುದಿಲ್ಲ ಹಾಗೂ ಉದ್ಯೋಗವನ್ನೂ ನೀಡುವುದಿಲ್ಲ. ನೆನಪಿಡಿ, ನೀವು ಉದ್ಯೋಗ ಪಡೆಯಲು ನೇಮಕಾತಿ ಮಾಡಿಕೊಳ್ಳುವವರಿಗೆ ಯಾವುದೇ ಹಣವನ್ನು ಪಾವತಿಸಬೇಕಿಲ್ಲ.

ಉದ್ಯೋಗ ವಂಚನೆಗಳನ್ನು ತಪ್ಪಿಸುವುದು ಹೇಗೆ

  • ಅನುಮಾನಾಸ್ಪದ ಲಿಂಕ್‌ಗಳು, ಅದರಲ್ಲೂ ವಿಶೇಷವಾಗಿ ಮೇಲೆ ತಿಳಿಸಿರುವ ಎಚ್ಚರಿಕೆ ಸಂಕೇತಗಳಿರುವ ಹಾಗೂ ಹಣ ಅಥವಾ ಇತರೆ ವಿಷಯಗಳಿಗೆ ಸಂಬಂಧಪಟ್ಟ ಲಿಂಕ್‌ಗಳ ಮೇಲೆ ಕ್ಲಿಕ್‌ ಮಾಡಬೇಡಿ.
  • ಉದ್ಯೋಗವು ಕಾನೂನುಬದ್ಧವಾಗಿರುವುದರ ಬಗ್ಗೆ ನಿಮಗೆ ಖಚಿತತೆ ಇಲ್ಲದಿದ್ದರೆ, ಕಾಲ್‌ಬ್ಯಾಕ್‌ ಮಾಡಬೇಡಿ.
  • PhonePe ಅಧಿಕಾರಿಗಳು ಸೇರಿದಂತೆ ಯಾರೊಂದಿಗೂ ಕ್ರೆಡಿಟ್/ಡೆಬಿಟ್ ಕಾರ್ಡ್ ಸಂಖ್ಯೆ, ಕಾರ್ಡ್ ಮುಕ್ತಾಯದ ದಿನಾಂಕ, CVV, OTP, ಇತ್ಯಾದಿಗಳಂತಹ ಗೌಪ್ಯ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ.
  • ಕೊನೆಯದಾಗಿ, ವರದಿ ಮಾಡಿ ಮತ್ತು ಬ್ಲಾಕ್‌ ಮಾಡಿ. ನೆನಪಿಡಿ, ಈ ಸಂಖ್ಯೆಗಳನ್ನು ವರದಿ ಮಾಡುವುದು ಮತ್ತು ಬ್ಲಾಕ್‌ ಮಾಡುವುದು ಉತ್ತಮ.

ಉದ್ಯೋಗ ವಂಚನೆಗೆ ಒಳಗಾಗಿದ್ದರೆ ನೀವು ಏನು ಮಾಡಬೇಕು

PhonePe ನಲ್ಲಿ ಉದ್ಯೋಗ ವಂಚಕರಿಂದ ನೀವು ವಂಚನೆಗೆ ಒಳಗಾದರೆ, ನೀವು ತಕ್ಷಣ ಈ ಕೆಳಗಿನ ವಿಧಾನಗಳ ಮೂಲಕ ಸಮಸ್ಯೆಯನ್ನು ತಿಳಿಸಬಹುದು:

1. PhonePe ಆ್ಯಪ್: ಸಹಾಯ ವಿಭಾಗಕ್ಕೆ ಹೋಗಿ ಮತ್ತು “ವಹಿವಾಟಿನಲ್ಲಿ ಸಮಸ್ಯೆ ಇದೆ” ಆಯ್ಕೆಯ ಅಡಿಯಲ್ಲಿ ಸಮಸ್ಯೆಯನ್ನು ತಿಳಿಸಿ.

2. PhonePe ಗ್ರಾಹಕ ಸಹಾಯವಾಣಿ ಸಂಖ್ಯೆ: ಸಮಸ್ಯೆಯನ್ನು ಸಲ್ಲಿಸಲು ನೀವು PhonePe ಗ್ರಾಹಕ ಸೇವೆಗೆ 80–68727374 / 022–68727374 ಮೂಲಕ ಕರೆ ಮಾಡಬಹುದು, ಅದನ್ನು ಪೋಸ್ಟ್ ಮಾಡಿ ಗ್ರಾಹಕ ಸಹಾಯ ಏಜೆಂಟ್ ಟಿಕೆಟ್ ಅನ್ನು ಸಲ್ಲಿಸುತ್ತಾರೆ ಮತ್ತು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತಾರೆ.

3. ವೆಬ್‌ಫಾರ್ಮ್ ಸಲ್ಲಿಕೆ: ನೀವು PhonePe ನ ವೆಬ್‌ಫಾರ್ಮ್ ಅನ್ನು ಬಳಸಿಕೊಂಡು ಟಿಕೆಟ್ ಸಲ್ಲಿಸಬಹುದು, https://support.phonepe.com/

4. ಸಾಮಾಜಿಕ ಮಾಧ್ಯಮ: ನೀವು PhonePe ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಮೋಸದ ಘಟನೆಗಳನ್ನು ವರದಿ ಮಾಡಬಹುದು

Twitter — https://twitter.com/PhonePeSupport

Facebook — https://www.facebook.com/OfficialPhonePe

5. ಕುಂದುಕೊರತೆ: ಅಸ್ತಿತ್ವದಲ್ಲಿರುವ ದೂರಿನ ಮೇಲಿನ ಕುಂದುಕೊರತೆಯನ್ನು ವರದಿ ಮಾಡಲು, ನೀವು https://grievance.phonepe.com/ ಗೆ ಲಾಗಿನ್ ಮಾಡಬಹುದು ಮತ್ತು ಈ ಹಿಂದೆ ಸಲ್ಲಿಸಿರುವ ಟಿಕೆಟ್ ಐಡಿಯನ್ನು ಹಂಚಿಕೊಳ್ಳಬಹುದು.

6. ಸೈಬರ್ ಸೆಲ್: ಕೊನೆಯದಾಗಿ, ನೀವು ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ವಂಚನೆ ದೂರುಗಳನ್ನು ವರದಿ ಮಾಡಬಹುದು ಅಥವಾ https://www.cybercrime.gov.in/ ಮೂಲಕ ಆನ್‌ಲೈನ್‌ನಲ್ಲಿ ದೂರನ್ನು ನೋಂದಾಯಿಸಬಹುದು ಅಥವಾ 1930 ಮೂಲಕ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು ಸಂಪರ್ಕಿಸಬಹುದು.

ಪ್ರಮುಖ ರಿಮೈಂಡರ್‌ — PhonePe ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಎಂದಿಗೂ ಕೇಳುವುದಿಲ್ಲ. Phonepe.com ಡೊಮೇನ್‌ನಿಂದ ಹೇಳಿಕೊಳ್ಳುವ ಆದರೆ PhonePeನಿಂದ ಅಲ್ಲದ ನಕಲಿ ಮೇಲ್‌ಗಳನ್ನು ನಿರ್ಲಕ್ಷಿಸಿ. ನೀವು ವಂಚನೆಯ ಕುರಿತು ಅನುಮಾನ ಹೊಂದಿದ್ದರೆ, ದಯವಿಟ್ಟು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ.

*ಮೂಲ: https://www.hindustantimes.com/technology/how-to-detect-fake-job-offers-modi-govt-shares-checklist-you-must-follow-101665639723089.html

#ಮೂಲ: https://www.outlookindia.com/national/robbed-of-money-hope-and-hard-work-online-job-scams-is-trapping-the-indian-youth-amidst-job-dearth-news-253665

Keep Reading