PhonePe Blogs Main Featured Image

Trust & Safety

ಕ್ರೆಡಿಟ್‌ ಕಾರ್ಡ್‌ ಬಿಲ್‌ ಪೇಮೆಂಟ್‌ ವಂಚನೆ

PhonePe Regional|2 min read|19 December, 2022

URL copied to clipboard

ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್‌ಗಳನ್ನು ಒಳಗೊಂಡ ಪೇಮೆಂಟ್‌ ವಂಚನೆಗಳು ಹೆಚ್ಚುತ್ತಿವೆ. ಡಿಜಿಟಲ್ ವಹಿವಾಟು ಮಾಡುವಾಗ ವಂಚಕರು ಗ್ರಾಹಕರ ಅನುಭವ ಮತ್ತು ನಂಬಿಕೆಯ ಮೇಲೆ ಪ್ರಭಾವ ಬೀರುತ್ತಾರೆ. ಆದಾಗ್ಯೂ, ತಾಂತ್ರಿಕ ಜಾಗೃತಿ ಮತ್ತು ಜ್ಞಾನದೊಂದಿಗೆ, ಅಂತಹ ವಂಚನೆಗಳನ್ನು ಪತ್ತೆಹಚ್ಚಬಹುದು ಮತ್ತು ತಡೆಯಬಹುದು.

ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್‌ ಹಗರಣದಲ್ಲಿ,ವಂಚಕನು ಬಲಿಪಶುವಿನ ಬ್ಯಾಂಕ್ ಖಾತೆಯಿಂದ ಹಣವನ್ನು ಬಳಸಿಕೊಳ್ಳುವ ಮೂಲಕ ಅವರ ಖಾತೆಯಲ್ಲಿ ಕ್ರೆಡಿಟ್ ಕಾರ್ಡ್ ಪಾವತಿಯನ್ನು ಮಾಡುವಂತೆ ಬಲಿಪಶುವನ್ನು ಆಕರ್ಷಿಸುತ್ತಾನೆ. ವಂಚಕರು ಬಲಿಪಶುಗಳು ತಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ತಮ್ಮ ಖಾತೆಗೆ ಸೇರಿಸುವಂತೆ ಮಾಡುತ್ತಾರೆ ಮತ್ತು ನಂತರ ಅವರ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸುತ್ತಾರೆ.

ಕ್ರೆಡಿಟ್ ಕಾರ್ಡ್ ಬಿಲ್ ಪೇಮೆಂಟ್‌ ವಂಚನೆಯು ಬಲಿಪಶುವನ್ನು ಮೋಸದಿಂದ ನಿರ್ವಹಿಸುವ ಅನೇಕ ಸಾಮಾನ್ಯ ಸೂಚಕಗಳನ್ನು ಹೊಂದಿದೆ.

ಕ್ರೆಡಿಟ್‌ ಕಾರ್ಡ್‌ ಬಿಲ್‌ ಪೇಮೆಂಟ್‌ ವಂಚನೆಯ ಸಾಮಾನ್ಯ ಸೂಚಕಗಳು

ಘಟನೆ 1 : ವಂಚಕರು ತಾವು ವೈದ್ಯಕೀಯ, ಹೋಟೆಲ್ ಮತ್ತು ವಿಮಾ ವಲಯದಲ್ಲಿ ಸೇವೆಗಳ ಅಗತ್ಯವಿರುವ ಸೇನಾ ಸಿಬ್ಬಂದಿ ಎಂದು ಬಿಂಬಿಸಿಕೊಳ್ಳುತ್ತಾರೆ ಮತ್ತು ಒಮ್ಮೆ ಒಪ್ಪಂದ ಮಾಡಿಕೊಂಡ ನಂತರ ಅವರು ತಕ್ಷಣವೇ ಪೇಮೆಂಟ್‌ ವಿಧಾನವನ್ನು ಸೆಟ್‌ ಅಪ್‌ ಮಾಡಲು ಗ್ರಾಹಕರನ್ನು ಕೇಳುತ್ತಾರೆ. ಕುತೂಹಲಕಾರಿಯಾಗಿ, ಕೆಲವು ಸಂದರ್ಭಗಳಲ್ಲಿ ವಂಚಕನು ಸೇನೆಯ ಸಿಬ್ಬಂದಿಯನ್ನು ಅನುಕರಿಸುವ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸುವ ಸಲುವಾಗಿ ಸೇನಾ ಸಮವಸ್ತ್ರದಲ್ಲಿ ವೀಡಿಯೊ ಕರೆಯಲ್ಲಿ ಇರುತ್ತಾನೆ. ಈ ಸನ್ನಿವೇಶದಲ್ಲಿ ಬಲಿಪಶುವಾಗುವವರು ಸಾಮಾನ್ಯವಾಗಿ ಬ್ಯುಸಿನೆಸ್‌ ವ್ಯಕ್ತಿಗಳಾಗಿದ್ದಾರೆ.

ಘಟನೆ 2 : ವಂಚಕರು ತಮ್ಮನ್ನು ದೂರದ ಸಂಬಂಧಿ/ಕುಟುಂಬದ ಸ್ನೇಹಿತ ಅಥವಾ ವ್ಯಾಪಾರ ವೃತ್ತಿಪರರಂತೆ ಬಿಂಬಿಸಿಕೊಳ್ಳುತ್ತಾರೆ ಮತ್ತು ವಂಚಕರ ಖಾತೆಗೆ ಬಲಿಪಶುವಾಗಲಿರುವ ವ್ಯಕ್ತಿಯ ಕಾರ್ಡ್ ವಿವರಗಳನ್ನು ಸೇರಿಸಲು ಮನವರಿಕೆ ಮಾಡುತ್ತಾರೆ. ಅವರು ಫೋನ್ ಕಾಲ್‌ನಲ್ಲಿ ವಿವಿಧ ಪ್ರಕ್ರಿಯೆಯ ಮೂಲಕ ಗ್ರಾಹಕರಿಗೆ ಮಾರ್ಗದರ್ಶನ ನೀಡುವಂತೆ ನಟಿಸುತ್ತಾರೆ. ಈ ಸನ್ನಿವೇಶದಲ್ಲಿ ಗುರಿಯಾಗಿರುವ ಗ್ರಾಹಕರು ಹೆಚ್ಚಾಗಿ PhonePe ಅನ್ನು ಹೆಚ್ಚಾಗಿ ಬಳಸದ ಜನರಿರುತ್ತಾರೆ.

ಸಂಪೂರ್ಣ ಸಂಭಾಷಣೆ ಮತ್ತು ಪಾವತಿಯು Whatsapp ಕಾಲ್/ ವೀಡಿಯೊ ಕಾಲ್‌ ಮೂಲಕ ನಡೆಯುತ್ತದೆ ಹಾಗೂ ಈ ವಂಚಕರು ಹಲವಾರು ಕರೆಗಳ ಮೇಲೆ ಬಳಕೆದಾರರ ನಂಬಿಕೆಯನ್ನು ಗೆಲ್ಲುವ ಮೂಲಕ ಎಲ್ಲವನ್ನೂ ನಿಜವಾದಂತೆ ಕಾಣುವಂತೆ ಮಾಡುತ್ತಾರೆ ಎಂಬುದು ಗಮನಿಸಬೇಕಾದ ಸಂಗತಿ.

ಕ್ರೆಡಿಟ್‌ ಕಾರ್ಡ್‌ ಬಿಲ್‌ ಪೇಮೆಂಟ್‌ ವಂಚನೆಗೆ ಒಳಗಾಗದೇ ಇರುವುದು ಹೇಗೆ:

  • PhonePe ನಲ್ಲಿ ಹಣವನ್ನು ಸ್ವೀಕರಿಸಲು ನೀವು ‘ಪಾವತಿ’ ಮಾಡಬೇಕಾಗಿಲ್ಲ ಅಥವಾ ನಿಮ್ಮ UPI ಪಿನ್ ಅನ್ನು ನಮೂದಿಸಬೇಕಾಗಿಲ್ಲ ಎಂದು ಯಾವಾಗಲೂ ನೆನಪಿಡಿ. ‘Pay/ಪಾವತಿಸಿ’ ಬಟನ್‌ ಒತ್ತುವ ಮೊದಲು ಅಥವಾ ನಿಮ್ಮ UPI ಪಿನ್ ನಮೂದಿಸುವ ಮೊದಲು ದಯವಿಟ್ಟು ನಿಮ್ಮ PhonePe ಅಪ್ಲಿಕೇಶನ್‌ನಲ್ಲಿ ಪ್ರದರ್ಶಿಸಲಾದ ಮೆಸೇಜ್‌ ಅನ್ನು ಎಚ್ಚರಿಕೆಯಿಂದ ಓದಿ.
  • ಯಾವುದೇ ಹೊಸ ಪಾವತಿ “ವಿಧಾನ/ಪ್ರಕ್ರಿಯೆ” ಕುರಿತು ಯಾರಾದರೂ ನಿಮಗೆ ಹೇಳಿದಾಗ ಜಾಗರೂಕರಾಗಿರಿ ಮತ್ತು ಸೇನೆಯ ಸಿಬ್ಬಂದಿಯ ಪಾವತಿ ವ್ಯವಸ್ಥೆಯು ಭಾರತದಲ್ಲಿನ ಯಾವುದೇ ಪಾವತಿ ವಿಧಾನದಂತೆಯೇ ಕಾರ್ಯನಿರ್ವಹಿಸುತ್ತದೆ ಎಂಬುದು ತಿಳಿದಿರಲಿ.

ವಂಚಕರು ನಿಮ್ಮನ್ನು ಸಂಪರ್ಕಿಸಿದಾಗ ನೀವು ಏನು ಮಾಡಬೇಕು?

  • ತಕ್ಷಣವೇ ನಿಮ್ಮ ಹತ್ತಿರದ ಸೈಬರ್ ಅಪರಾಧ ಕೇಂದ್ರಕ್ಕೆ ಘಟನೆಯನ್ನು ವರದಿ ಮಾಡಿ ಮತ್ತು ಪೊಲೀಸರಿಗೆ ಸಂಬಂಧಿಸಿದ ವಿವರಗಳನ್ನು (ಫೋನ್ ನಂಬರ್, ವಹಿವಾಟಿನ ವಿವರಗಳು, ಕಾರ್ಡ್ ನಂಬರ್, ಬ್ಯಾಂಕ್ ಖಾತೆ ಇತ್ಯಾದಿ) ಒದಗಿಸುವ FIR ಅನ್ನು ದಾಖಲಿಸಿ. ಪರ್ಯಾಯವಾಗಿ, ನೀವು ಈ ಲಿಂಕ್ ಅನ್ನು ಟ್ಯಾಪ್ ಮಾಡಬಹುದು- https://cybercrime.gov.in/ ಅಥವಾ ಆನ್‌ಲೈನ್‌ನಲ್ಲಿ ಸೈಬರ್ ದೂರನ್ನು ಸಲ್ಲಿಸಲು ಸೈಬರ್ ಸೆಲ್ ಪೊಲೀಸರನ್ನು 1930 ನಂಬರಿಗೆ ಸಂಪರ್ಕಿಸಿ.
  • ನಿಮ್ಮನ್ನು PhonePe ಮೂಲಕ ಸಂಪರ್ಕಿಸಿದ್ದರೆ, ನಿಮ್ಮ PhonePe ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ ಮತ್ತು ‘‘Help/ಸಹಾಯ’ ಗೆ ಹೋಗಿ. ನೀವು ವಂಚನೆಯ ಘಟನೆಯನ್ನು ‘Account security issue/ Report fraudulent activity/ಖಾತೆ ಭದ್ರತಾ ಸಮಸ್ಯೆ/ಮೋಸದ ಚಟುವಟಿಕೆಯ ವರದಿʼ ಅಡಿಯಲ್ಲಿ ರಿಪೋರ್ಟ್‌ ಮಾಡಬಹುದು. ಪರ್ಯಾಯವಾಗಿ ನೀವು support.phonepe.com ಗೆ ಲಾಗ್ ಇನ್ ಮಾಡಿ ವರದಿ ಮಾಡಬಹುದು.

Keep Reading