PhonePe Blogs Main Featured Image

Trust & Safety

ಸಾಲದ ಮೋಸವನ್ನು ಗುರುತಿಸುವುದು ಮತ್ತು ಅದರಿಂದ ದೂರವಿರುವುದು

PhonePe Regional|2 min read|25 July, 2022

URL copied to clipboard

ಕ್ರೆಡಿಟ್‌ ಪರಿಕಲ್ಪನೆಯು- ತಕ್ಷಣದ ಅಗತ್ಯತೆಗಳಿಗಾಗಿ ಹಣವನ್ನು ಪಡೆಯಲು ನಿಮಗೆ ಅವಕಾಶ ನೀಡುತ್ತದೆ ಮತ್ತು ನಂತರ ಅದನ್ನು ಮರುಪಾವತಿಸಬೇಕಾಗಿರುವುದರಿಂದ ಇದು ಉಪಯುಕ್ತವಾದದ್ದು, ಅದರಲ್ಲೂ ಉದ್ಯೋಗ ನಷ್ಟ ಅಥವಾ ವೈದ್ಯಕೀಯ ತುರ್ತುಸ್ಥಿತಿಯ ತುರ್ತು ಸೇವೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ವಂಚಕರು ಇಂತಹ ದುರ್ಬಲ ಪರಿಸ್ಥಿತಿಯಲ್ಲಿರುವ ಅಮಾಯಕರಿಗೆ ಸಾಲದ ಭರವಸೆಯೊಂದಿಗೆ ಸುಳ್ಳು ಆಮಿಷವೊಡ್ಡುತ್ತಾರೆ ಮತ್ತು ಸಾಲದ ಹಗರಣದಲ್ಲಿ ಹಣವನ್ನು ಲೂಟಿ ಮಾಡುತ್ತಾರೆ.

ಸಾಲದ ಹಗರಣ ಎಂದರೇನು?

ಸಾಲದ ಹಗರಣದಲ್ಲಿ, ಒಬ್ಬ ವಂಚಕನು ಬಯಸಿದ ಸಾಲವನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪಡೆಯಬಹುದು ಎಂಬ ಸುಳ್ಳು ಭರವಸೆಯೊಂದಿಗೆ ಸಾಲ ಬಯಸಿದ ವ್ಯಕ್ತಿಗೆ ವಂಚಿಸುತ್ತಾನೆ. ವಂಚಕನು ಆ ಅಮಾಯಕ ವ್ಯಕ್ತಿಯ ಅಗತ್ಯತೆಗಳ ಆಧಾರದ ಮೇಲೆ ಮೋಸದ ಯೋಜನೆಯನ್ನು ನಿರ್ಮಿಸುತ್ತಾನೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಸ್ಥಾಪಿತ ಬ್ಯಾಂಕ್‌ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿಲ್ಲದಿದ್ದರೆ ಅಥವಾ ಅತಿ ಕಡಿಮೆ ಸಮಯದ ಚೌಕಟ್ಟಿನೊಳಗೆ ದೊಡ್ಡ ಮೊತ್ತದ ಹಣದ ಅಗತ್ಯವಿದ್ದರೆ, ವಂಚಕನು ಅವನು/ಅವಳ ಅವಶ್ಯಕತೆಗೆ ಅನುಗುಣವಾಗಿ ಸಾಲವನ್ನು ನೀಡುವುದಾಗಿ ಕೆಲವೇ ನಿಮಿಷಗಳಲ್ಲಿ ಸಮರ್ಥವಾಗಿ ಜಾಣತನದಿಂದ ಆ ವ್ಯಕ್ತಿಗೆ ಮನವರಿಕೆ ಆಗುವಂತೆ ಮಾಡುತ್ತಾನೆ.

ಸಾಲದ ಹಗರಣದಲ್ಲಿ ಸಿಲುಕುವ ಎರಡು ಪ್ರಮುಖ ಅಂಶಗಳು- ಒಂದೋ ವಂಚಕನು ಭದ್ರತೆಯಾಗಿ ನಿರ್ದಿಷ್ಟ ಮೊತ್ತವನ್ನು ಮುಂಗಡವಾಗಿ ಕೇಳುತ್ತಾನೆ, ಅದನ್ನು ಎಂದಿಗೂ ಹಿಂತಿರುಗಿಸುವುದಿಲ್ಲ ಅಥವಾ ಪ್ರಾಸೆಸ್ಸಿಂಗ್‌ ಶುಲ್ಕ, ವಿಳಂಬ ಶುಲ್ಕ, ಬಡ್ಡಿ ಇತ್ಯಾದಿಗಳ ಹೆಸರಿನಲ್ಲಿ ಒಟ್ಟು ಮೊತ್ತವನ್ನು ಪಡೆಯುತ್ತಾನೆ. ಅಂತಿಮವಾಗಿ ಸಾಲ ಕೇಳಿದ ವ್ಯಕ್ತಿಗೆ ಮೋಸ ಮಾಡುತ್ತಾನೆ.

ಸಾಲದ ಮೋಸ ಹೇಗೆ ಆಗುತ್ತದೆ?

ಸಾಲ ನೀಡುತ್ತೇನೆಂದು ನಂಬಿಸಿ ಮೋಸ ಮಾಡುವವರು, ಸಾಲ ಪಡೆಯುವವರ ಅಗತ್ಯವನ್ನು ಬಳಸಿಕೊಳ್ಳುತ್ತಾರೆ ಮತ್ತು ದುರ್ಬಲ ಸಾಲಗಾರರನ್ನು ಗುರಿಯಾಗಿಸಿಕೊಂಡು ಯಾವುದೇ ಸ್ಟ್ರಿಂಗ್ಸ್-ಲಗತ್ತಿಸದ ಕ್ರೆಡಿಟ್ ಅನ್ನು ಒದಗಿಸುತ್ತಾರೆ. ಅವರು SMS, ಇಮೇಲ್ ಅಥವಾ ಫೋನ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ನಿಮ್ಮ ವಿವರಗಳನ್ನು ತುಂಬಲು ಹಾಗೂ ತ್ವರಿತ ಸಾಲದ ಅನುಮೋದನೆಯನ್ನು ಪಡೆಯಲು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ನಿಮ್ಮನ್ನು ಕೇಳುತ್ತಾರೆ.

ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ, ಅವರು ನಿಮ್ಮ ಫೋನ್‌ ನಲ್ಲಿ ಎಲ್ಲದಕ್ಕೂ ಪ್ರವೇಶವನ್ನು ವಿನಂತಿಸುತ್ತಾರೆ -ಅಂದರೆ ನಿಮ್ಮ ಸಂಪೂರ್ಣ ಸಂಪರ್ಕಗಳ ಪಟ್ಟಿ, ಫೋಟೋಗಳು ಮತ್ತು ವೀಡಿಯೊಗಳು ಮುಂತಾದವು. ನಿಮ್ಮ ಆಧಾರ್, PAN, ವಿಳಾಸ ಮತ್ತು ನಿಮಗೆ ಅಗತ್ಯವಿರುವ ಮೊತ್ತದಂತಹ ಮೂಲಭೂತ ವಿವರಗಳನ್ನು ನೀವು ಭರ್ತಿ ಮಾಡಿದ ನಂತರ, ನಿಮ್ಮ ಖಾತೆಯಲ್ಲಿ ನಗದು ಜಮೆಯಾಗುವುದನ್ನು ನೀವು ನೋಡುತ್ತೀರಿ.

ಈ ಸಾಲಗಳನ್ನು ಸಂಕೀರ್ಣ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ನೀಡಲಾಗುತ್ತದೆ, ಅದನ್ನು ಆರಂಭಿಕ ಹಂತಗಳಲ್ಲಿ ತಿಳಿಸಲಾಗುವುದಿಲ್ಲ. ಅವರು ಕಡಿಮೆ ಬಡ್ಡಿದರದ ಭರವಸೆಯೊಂದಿಗೆ ಸಾಲ ಪಡೆಯುವವರನ್ನು ವಂಚಿಸುತ್ತಾರೆ ಮತ್ತು ನಂತರ ಕಡಿಮೆ ಬಡ್ಡಿದರವು ಸೀಮಿತ ಅವಧಿಗೆ ಮಾತ್ರ ಎಂದು ಹೇಳಿಕೊಳ್ಳುತ್ತಾರೆ, ನಂತರ ಬಡ್ಡಿಯನ್ನು ವಿಪರೀತವಾಗಿ ಹೆಚ್ಚಿಸುತ್ತಾರೆ. ಹೆಚ್ಚಿನ ಬಡ್ಡಿದರಗಳ ಜೊತೆಗೆ, ಮೋಸದ ತ್ವರಿತ ಸಾಲ ಕಂಪನಿಗಳು ಸಾಲಗಳನ್ನು ಮರುಪಾವತಿ ಮಾಡದಿದ್ದಕ್ಕಾಗಿ ಹೆಚ್ಚಿನ ಸಂಸ್ಕರಣಾ ಶುಲ್ಕಗಳು ಮತ್ತು ಇತರ ದಂಡಗಳನ್ನೂ ಸೇರಿಸಿ ದೈನಂದಿನ ಆಧಾರದ ಮೇಲೆ ಭಾರೀ ದಂಡವನ್ನು ವಿಧಿಸುತ್ತವೆ.

ಇನ್ನು ಕೆಲವು ವಂಚಕರು ಕೆಲವು ದಾಖಲೆಗಳನ್ನು ಕೇಳುತ್ತಾರೆ ಮತ್ತು ಇನ್ನೂ ಕೆಲವರು — 3 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್, ಆಧಾರ್ ಕಾರ್ಡ್ ಮತ್ತು PAN ನಕಲು ಇಂತಹ ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ. ಆದಾಗ್ಯೂ, ಎರಡೂ ಸಂದರ್ಭಗಳಲ್ಲಿ, ಸಾಲದ ಮೊತ್ತವನ್ನು ನಿಮಿಷಗಳಲ್ಲಿ ವಿತರಿಸಲಾಗುತ್ತದೆ. ಆ್ಯಪ್‌ಗಳು, ಸಾಲವನ್ನು ನೀಡುವ ನೆಪದಲ್ಲಿ, ಸಾಲ ಪಡೆಯಲು ಬಯಸುವ ವ್ಯಕ್ತಿಯ ಫೋನ್‌ನಿಂದ ಎಲ್ಲಾ ಮಾಹಿತಿಯನ್ನು ಪ್ರವೇಶಿಸುತ್ತವೆ, ನಂತರ ಅದನ್ನು ವಂಚಕನು ವ್ಯಕ್ತಿಯಿಂದ ಹೆಚ್ಚಿನ ಹಣವನ್ನು ವಂಚಿಸಲು ಅಥವಾ ಇತರ ಆರ್ಥಿಕ ಅಪರಾಧವನ್ನು ಎಸಗಲು ಬಳಸಬಹುದು.

ಇಂತಹ ಸಾಲದ ವಂಚನೆಗೆ ಸಿಲುಕಿ, ನೀಡಿದ ಹಣವನ್ನು ಸ್ವೀಕರಿಸುವ ಸಂತ್ರಸ್ತರು ಸಾಲದ ಮೊತ್ತವನ್ನು ಮರುಪಾವತಿಸಲು ರಿಕವರಿ ಏಜೆಂಟ್‌ಗಳಿಂದ ಕಿರುಕುಳ ಅನುಭವಿಸುತ್ತಾರೆ. ಅಶ್ಲೀಲ ಸಂದೇಶಗಳು, ಅಸಭ್ಯ ಚಿತ್ರಗಳು ಮತ್ತು ನಿಂದನೀಯ ಮೆಸೇಜ್‌ಗಳನ್ನು ವ್ಯಕ್ತಿಗೆ ಮತ್ತು ಅವನ/ಅವಳ ಸಂಪರ್ಕ ಪಟ್ಟಿಯಲ್ಲಿರುವ ಇತರರಿಗೆ ಕಳುಹಿಸಲಾಗುತ್ತದೆ.

ಸಾಲದ ಹಗರಣವನ್ನು ತಪ್ಪಿಸಲು ಪ್ರಮುಖ ಮಾಹಿತಿ

ಸಾಲ ವಂಚಕರು ನಿಮ್ಮನ್ನು ಸಂಪರ್ಕಿಸಿದ್ದಾರೆ ಎಂದು ತಕ್ಷಣವೇ ತಿಳಿಸುವ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:

  • ಸಾಲದಾತರ ಸಂಸ್ಥೆಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೋಂದಾಯಿಸಲ್ಪಟ್ಟಿರುವುದಿಲ್ಲ ಮತ್ತು ಯಾವುದೇ ತಿಳಿದಿರುವ ಬ್ಯಾಂಕ್ ಅಥವಾ NBFC ಯೊಂದಿಗೆ ಸಂಬಂಧ ಹೊಂದಿರುವುದಿಲ್ಲ
  • ಸಾಲದ ಅಪ್ಲಿಕೇಶನ್ ಅನ್ನು ಆಪ್ ಸ್ಟೋರ್‌ನಲ್ಲಿ ಪರಿಶೀಲಿಸಲಾಗಿರುವುದಿಲ್ಲ, ಸಾಲದ ನಿಯಮಗಳು ಮತ್ತು ಷರತ್ತುಗಳ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಅಥವಾ ಸಾಲದ ಅನುಮೋದನೆಯ ಮೊದಲು ನಿಮ್ಮ ಕ್ರೆಡಿಟ್ ವರದಿಯನ್ನು ಪರಿಶೀಲಿಸುವುದಿಲ್ಲ
  • ಸಾಲದಾತನು ನೋಂದಾಯಿಸಲ್ಪಟ್ಟಿರುವುದಿಲ್ಲ, ಭೌತಿಕ ಕಚೇರಿ ವಿಳಾಸವನ್ನು ಹೊಂದಿರುವುದಿಲ್ಲ ಅಥವಾ ಕಾನೂನುಬದ್ಧ ವೆಬ್‌ಸೈಟ್ ಹೊಂದಿರುವುದಿಲ್ಲ
  • ಸಾಲವನ್ನು ನೀಡುವ ಮೊದಲು ಸಾಲದ ಶುಲ್ಕವನ್ನು ಮುಂಗಡವಾಗಿ ಕೇಳಲಾಗುತ್ತದೆ
  • ಯಾವುದೇ ಕ್ರೆಡಿಟ್ ಪರಿಶೀಲನೆಯನ್ನು ಮಾಡಲಾಗಿಲ್ಲ ಮತ್ತು ಸಾಲವು ಕ್ರೆಡಿಟ್ ಮುಕ್ತವಾಗಿದೆ ಎಂದು ತಿಳಿಸಲಾಗುತ್ತದೆ
  • ಸಾಲದಾತನು ಕಡಿಮೆ ಬಡ್ಡಿದರವನ್ನು ನೀಡುತ್ತಾನೆ ಮತ್ತು ಇದು ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ

ಸಾಲದ ವಂಚನೆಯಿಂದ ದೂರ ಉಳಿಯುವುದು ಹೇಗೆ:

  • ನಿಮ್ಮ ಕಾರ್ಡ್‌ ವಿವರಗಳನ್ನು ಯಾರೊಂದಿಗೂ ಫೋನ್‌, ಇಮೇಲ್‌, ಅಥವಾ ಬೇರೆ ರೀತಿಯಲ್ಲಿ ಹಂಚಿಕೊಳ್ಳಬೇಡಿ.
  • ಸಾಲದಾತರ ವಿಶ್ವಾಸಾರ್ಹತೆಯನ್ನು ತಿಳಿಯಲು ಯಾವಾಗಲೂ ಅವರ ಭೌತಿಕ ವಿಳಾಸ ಮತ್ತು ವೆಬ್‌ಸೈಟ್ ಅನ್ನು ಮೌಲ್ಯಮಾಪನ ಮಾಡಿ.
  • OTP ಅಥವಾ ಯಾವುದೇ ವಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
  • ಲೋನ್ ಆಫರ್ ಅನ್ನು ಅರ್ಥಮಾಡಿಕೊಳ್ಳಿ ಏಕೆಂದರೆ ಹಗರಣಗಳು ಯಾವಾಗಲೂ ಅನುಮಾನಾಸ್ಪದವಾಗಿ ಇರುತ್ತದೆ.

ಪ್ರಮುಖ ಮಾಹಿತಿ- PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. Phonepe.com ಡೊಮೇನ್‌ನಿಂದ ಇಲ್ಲದಿದ್ದರೆ PhonePe ನಿಂದ ಎಂದು ಹೇಳಿಕೊಳ್ಳುವ ಎಲ್ಲಾ ಮೇಲ್‌ಗಳನ್ನು ನಿರ್ಲಕ್ಷಿಸಿ. ನೀವು ವಂಚನೆಯನ್ನು ಅನುಮಾನಿಸಿದರೆ, ದಯವಿಟ್ಟು ತಕ್ಷಣ support.phonepe.com ಗೆ ನಮ್ಮನ್ನು ಸಂಪರ್ಕಿಸಿ ಅಥವಾ ಪೋಲೀಸರಿಗೆ https://cybercrime.gov.in/ ಇಲ್ಲಿ ದೂರು ನೀಡಿ

Keep Reading