
Trust & Safety
ಸಬ್‌ಸ್ಕ್ರಿಪ್ಷನ್ ಮ್ಯಾಂಡೇಟ್ ವಂಚನೆ ಗುರುತಿಸುವುದು ಹೇಗೆ
PhonePe Regional|2 min read|19 May, 2026
ಸಬ್‌ಸ್ಕ್ರಿಪ್ಷನ್ ಮ್ಯಾಂಡೇಟ್ ಅಥವಾ ಆಟೋಪೇ ಎಂಬುದು ನಿಮ್ಮ ಬ್ಯಾಂಕ್‌ಗೆ ನೀವು ನೀಡುವ ಸ್ವಯಂಚಾಲಿತ ಸೂಚನೆಯಾಗಿದ್ದು, OTT ಸಬ್‌ಸ್ಕ್ರಿಪ್ಷನ್‌ಗಳು, ಯುಟಿಲಿಟಿ ಬಿಲ್‌ಗಳು ಅಥವಾ EMI ಪಾವತಿಗಳಂತಹ ಮರುಕಳಿಸುವ ಪಾವತಿಗಳಿಗಾಗಿ ನಿಮ್ಮ ಖಾತೆಯಿಂದ ಹಣವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲು ಅನುಮತಿಸುತ್ತದೆ. ಸಬ್‌ಸ್ಕ್ರಿಪ್ಷನ್ ಮ್ಯಾಂಡೇಟ್‌ಗಳು ನೀವು ನೆನಪಿಟ್ಟುಕೊಂಡು ಮಾನ್ಯುಯಲ್ ಆಗಿ ಪಾವತಿಸುವುದನ್ನು ತಪ್ಪಿಸುತ್ತದೆ. ಇದರಿಂದ ಮರುಕಳಿಸುವ ಪಾವತಿಗಳು ಇನ್ನಷ್ಟು ಸುಲಭವಾಗಿವೆ. ಆದರೆ, ಈ ಡಿಜಿಟಲ್ ಅನುಕೂಲತೆಯ ಜೊತೆಗೆ, ಕೆಲವು ಸೈಬರ್ ಸುರಕ್ಷತೆಯ ಅಪಾಯಗಳು ಸಹ ಹೊರಹೊಮ್ಮಿವೆ.
ವಂಚಕರು ಆಟೋಪೇ ವೈಶಿಷ್ಟ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ನೀವು ತರಾತುರಿಯಲ್ಲಿ ಅವುಗಳ ಮೇಲೆ ಕ್ಲಿಕ್ ಮಾಡುತ್ತೀರಿ ಎಂದು ಆಶಿಸುತ್ತಾ ಅವರು ನಿಮಗೆ ಕಲೆಕ್ಟ್ ರಿಕ್ವೆಸ್ಟ್‌ಗಳನ್ನು ಅಥವಾ ಮ್ಯಾಂಡೇಟ್ ಅಪ್ರೂವಲ್‌ಗಳನ್ನು ಕಳುಹಿಸುತ್ತಾರೆ. ಅವರು ಅಪರಿಚಿತ ಅಥವಾ ನಕಲಿ ಫೋನ್ ಸಂಖ್ಯೆಗಳಿಂದ “ವಿದ್ಯುತ್ ಬಿಲ್ ಬಾಕಿ ಇದೆ”, “ಲಾಟರಿ ತೆರಿಗೆ ಪ್ರಕ್ರಿಯೆ” ಅಥವಾ “KYC ಅಪ್‌ಡೇಟ್ ಶುಲ್ಕ” ಮುಂತಾದ ನೆಪಗಳ ಅಡಿಯಲ್ಲಿ ಅಪರಿಚಿತ ಸಂಖ್ಯೆಯಿಂದ ಈ ಮೋಸದ ವಿನಂತಿಗಳನ್ನು ಕಳುಹಿಸಬಹುದು.
ವಂಚನೆಯ ಮ್ಯಾಂಡೇಟ್ ಅನ್ನು ಗುರುತಿಸುವುದು ಹೇಗೆ
ವಂಚನೆಯ ಮ್ಯಾಂಡೇಟ್ ವಿನಂತಿಯನ್ನು ಗುರುತಿಸಲು ಯಾವಾಗಲೂ ಕೆಲವು ಸ್ಪಷ್ಟ ಲಕ್ಷಣಗಳು ಇರುತ್ತವೆ. ನೀವು ಗಮನಿಸಬೇಕಾದ ಅಂಶಗಳು ಇಲ್ಲಿವೆ:
- ಒಂದು ಬಾರಿ ಅಥವಾ ಮರುಕಳಿಸುವ ಪಾವತಿಯ ಪ್ರಕಾರ: ನೀವು ಒಂದು ಬಾರಿಯ ವಿದ್ಯುತ್ ಬಿಲ್ ಪಾವತಿಸುತ್ತಿದ್ದರೆ, ಅಪ್ರೂವಲ್ ರಿಕ್ವೆಸ್ಟ್‌ನಲ್ಲಿ “Recurring/ಮರುಕಳಿಸುವ” ಎಂಬ ಪದವನ್ನು ನೀವು ಎಂದಿಗೂ ನೋಡಬಾರದು. ನೀವು ಅದನ್ನು ಅನುಮೋದಿಸುವ ಮುನ್ನ ಸಂದೇಶವನ್ನು ಎಚ್ಚರಿಕೆಯಿಂದ ಓದಿ. ಅಲ್ಲದೆ, ಈ ವಿನಂತಿಯು ಪರಿಶೀಲಿಸಿದ ಬಿಲ್ಲರ್‌ನಿಂದ (ಉದಾಹರಣೆಗೆ, ಬೆಸ್ಕಾಂ ಅಥವಾ ಜಿಯೋ) ಬಂದಿದೆಯೇ ಅಥವಾ ಯಾವುದೇ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದಿದೆಯೇ ಎಂದು ಪರಿಶೀಲಿಸಿ. PhonePeಲ್ಲಿ, ಪರಿಶೀಲಿಸಿದ ಬಿಲ್ಲರ್‌ಗಳು ಗ್ರೀನ್ ಟಿಕ್ ಅನ್ನು ಹೊಂದಿರುತ್ತಾರೆ.
- ಪರಿಶೀಲಿಸಿ: ಮ್ಯಾಂಡೇಟ್ ಅಧಿಕೃತವೇ ಅಥವಾ ವಂಚನೆಯೇ ಎಂಬ ಬಗ್ಗೆ ನಿಮಗೆ ಖಚಿತತೆಯಿಲ್ಲದಿದ್ದರೆ, ನಿಮ್ಮ PhonePe ಪ್ರೊಫೈಲ್ > ಆಟೋಪೇ ಸೆಟ್ಟಿಂಗ್ಸ್‌ಗೆ ಹೋಗಿ. ಅಲ್ಲಿ ನಿಮಗೆ ತಿಳಿದಿರದ ಯಾವುದೇ ಮ್ಯಾಂಡೇಟ್ ಕಂಡುಬಂದರೆ, ಅದನ್ನು ತಕ್ಷಣವೇ ಡಿಲೀಟ್ ಮಾಡಿ.
- ಮೂಲ: ನಿಜವಾದ ಮ್ಯಾಂಡೇಟ್‌ಗಳು ಸಾಮಾನ್ಯವಾಗಿ ಮರ್ಚೆಂಟ್ ಆ್ಯಪ್‌ನಿಂದಲೇ ಪ್ರಾರಂಭವಾಗುತ್ತವೆ (ಉದಾಹರಣೆಗೆ, ನೀವು Netflix ಆ್ಯಪ್‌ನಲ್ಲಿ ಆಟೋಪೇಗಾಗಿ PhonePe ಅನ್ನು ಆಯ್ಕೆ ಮಾಡಿಕೊಳ್ಳುತ್ತೀರಿ). ವಂಚನೆಯ ಮ್ಯಾಂಡೇಟ್‌ಗಳು ಸಾಮಾನ್ಯವಾಗಿ ಅಪರಿಚಿತ SMS ಲಿಂಕ್ ಅಥವಾ ಪಾಪ್-ಅಪ್ ರೂಪದಲ್ಲಿರುತ್ತವೆ.
ನೆನಪಿಡಿ, ಹಣವನ್ನು ಸ್ವೀಕರಿಸಲು ನೀವು ಎಂದಿಗೂ ನಿಮ್ಮ UPI ಪಿನ್ ಅನ್ನು ನಮೂದಿಸುವ ಅಗತ್ಯವಿರುವುದಿಲ್ಲ. ಯಾರಾದರೂ “ನಿಮ್ಮ ರಿಫಂಡ್ ಪಡೆಯಲು ಈ QR ಅನ್ನು ಸ್ಕ್ಯಾನ್ ಮಾಡಿ” ಎಂದು ಹೇಳಿದರೆ, ಅವರು ನಿಮಗೆ ವಂಚಿಸುತ್ತಿದ್ದಾರೆ ಎಂದರ್ಥ.
PhonePeಯ ಪ್ರೀ-ಡೆಬಿಟ್ ನೋಟಿಫಿಕೇಶನ್
ನಿಮ್ಮ ಖಾತೆಯಿಂದ ಆಕಸ್ಮಿಕವಾಗಿ ಹಣವನ್ನು ಕಡಿತವಾಗದಂತೆ ನೋಡಿಕೊಳ್ಳಲು PhonePe ಬದ್ಧವಾಗಿದೆ. ಅದಕ್ಕಾಗಿಯೇ ನಾವು ’24-ಗಂಟೆಗಳ ಮುಂಗಡ ಜ್ಞಾಪನೆ’ ಎಂಬ ಭದ್ರತಾ ಕ್ರಮವನ್ನು ಜಾರಿಗೆ ತಂದಿದ್ದೇವೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡೋಣ:
- ಎಚ್ಚರಿಕೆ: PhonePeನಲ್ಲಿ ಸೆಟಪ್ ಮಾಡಲಾದ ಯಾವುದೇ ಮರುಕಳಿಸುವ ಆಟೋಪೇಗಾಗಿ, ನಿಗದಿತ ಕಡಿತದ 24 ಗಂಟೆಗಳ ಮೊದಲು ನಾವು ನಿಮಗೆ ನೋಟಿಫಿಕೇಶನ್ ಕಳುಹಿಸುತ್ತೇವೆ.
- ಅವಕಾಶ: ನೀವು ಈ ನೋಟಿಫಿಕೇಶನ್ ಸ್ವೀಕರಿಸಿದಾಗ, “ಅಯ್ಯೋ, ನಾನು ಈಗ ಆ ಆ್ಯಪ್ ಬಳಸುತ್ತಿಲ್ಲ!” ಎಂದು ನಿಮಗೆ ಅನಿಸಿದರೆ, ಆಟೋಪೇ ಅನ್ನು ಡಿಲೀಟ್ ಮಾಡಲು ನಿಮಗೆ 24 ಗಂಟೆಗಳ ಕಾಲಾವಕಾಶವಿರುತ್ತದೆ. ಸರಳವಾಗಿ ನಿಮ್ಮ PhonePe ಪ್ರೊಫೈಲ್ > ಆಟೋಪೇ ಸೆಟ್ಟಿಂಗ್ಸ್‌ಗೆ ಹೋಗಿ ಆ ಮ್ಯಾಂಡೇಟ್ ಅನ್ನು ಡಿಲೀಟ್ ಮಾಡಿ.
PhonePe ಸುರಕ್ಷತಾ ಸಲಹೆ: ನೀವು ಆಟೋಪೇ ಅನ್ನು ವಿರಾಮಗೊಳಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ನೀವು ರಜೆಯ ಮೇಲೆ ಹೋಗುತ್ತಿದ್ದರೆ ಅಥವಾ ಯಾವುದೇ ಸೇವೆಯಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳಲು ಬಯಸಿದರೆ, ಅದನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕಾಗಿಲ್ಲ. ತಾತ್ಕಾಲಿಕವಾಗಿ ಕಡಿತಗಳನ್ನು ನಿಲ್ಲಿಸಲು ನಿಮ್ಮ ಆಟೋಪೇ ಸೆಟ್ಟಿಂಗ್ಸ್‌ನಲ್ಲಿ ‘Pause/ವಿರಾಮಗೊಳಿಸಿ’ ಅನ್ನು ಒತ್ತಿ.
ನೀವು ಸಬ್‌ಸ್ಕ್ರಿಪ್ಷನ್ ಮ್ಯಾಂಡೇಟ್ ವಂಚನೆಗೆ ಬಲಿಯಾದರೆ ಏನು ಮಾಡಬೇಕು?
ನೀವು ವಂಚನೆಗೆ ಒಳಗಾಗಿದ್ದೀರಿ ಎಂದು ಅನುಮಾನವಿದ್ದರೆ, ತಕ್ಷಣವೇ ನಿಮ್ಮ ಫೋನ್‌ಪೇ ಆ್ಯಪ್‌ನಲ್ಲಿರುವ “ಆಟೋಪೇ ಸೆಟ್ಟಿಂಗ್ಸ್” ಅನ್ನು ಪರಿಶೀಲಿಸಿ ಮತ್ತು ಮ್ಯಾಂಡೇಟ್ ಅನ್ನು ರದ್ದುಗೊಳಿಸಿ. ಇದನ್ನು ತಕ್ಷಣವೇ ವರದಿ ಮಾಡಿ. ಪ್ರತಿಯೊಂದು ಸೆಕೆಂಡೂ ಮುಖ್ಯವಾಗಿದೆ.
PhonePe ನಲ್ಲಿ ವರದಿ ಮಾಡುವುದು:
- PhonePe ಆ್ಯಪ್: ‘Help/ಸಹಾಯ’ ವಿಭಾಗಕ್ಕೆ ಹೋಗಿ ದೂರು ನೀಡಿ.
- ಗ್ರಾಹಕ ಬೆಂಬಲ: 80-68727374 / 022-68727374 ಸಂಖ್ಯೆಗೆ ಕರೆ ಮಾಡಿ.
- ಸಾಮಾಜಿಕ ಜಾಲತಾಣಗಳು:
- Twitter: PhonePe Support
- Facebook: PhonePe Official
- ದೂರು ಪರಿಹಾರ: PhonePe ಕುಂದುಕೊರತೆ ಪೋರ್ಟಲ್ನಲ್ಲಿ ದೂರು ದಾಖಲಿಸಿ.
ಸರ್ಕಾರಿ ಅಧಿಕಾರಿಗಳಿಗೆ ವರದಿ ಮಾಡುವುದು:
- ಸೈಬರ್ ಕ್ರೈಮ್: ಸೈಬರ್ ಕ್ರೈಂ ಪೋರ್ಟಲ್ನಲ್ಲಿ ಆನ್‌ಲೈನ್ ದೂರು ನೀಡಿ ಅಥವಾ 1930 ಕ್ಕೆ ಕರೆ ಮಾಡಿ.
- ದೂರಸಂಪರ್ಕ ಇಲಾಖೆ (DOT): ಸಂಚಾರ್ ಸಾಥಿ ಪೋರ್ಟಲ್‌ನಲ್ಲಿರುವ ಚಕ್ಷು ಸೌಲಭ್ಯದ ಮೂಲಕ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ WhatsApp / ಟೆಲಿಗ್ರಾಮ್ ವಂಚನೆಯನ್ನು ವರದಿ ಮಾಡಿ.
ಮುಖ್ಯವಾದ ವಿಷಯ: PhonePe ಎಂದಿಗೂ ನಿಮ್ಮ ಖಾಸಗಿ ಅಥವಾ ಗೌಪ್ಯ ವಿವರಗಳನ್ನು (PIN, OTP) ಕೇಳುವುದಿಲ್ಲ. phonepe.com ಡೊಮೇನ್‌ನಿಂದಲ್ಲದಿದ್ದರೆ PhonePe ನಿಂದ ಬಂದಿದೆ ಎಂದು ಹೇಳಿಕೊಳ್ಳುವ ಯಾವುದೇ ಇ-ಮೇಲ್ ಬಂದರೆ ಅದನ್ನು ನಂಬಬೇಡಿ. ನಿಮಗೆ ಅನುಮಾನ ಬಂದರೆ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿ.
