PhonePe Blogs Main Featured Image

Trust & Safety

ಹಣವನ್ನು ತಪ್ಪಾಗಿ ವರ್ಗಾಯಿಸಿದಾಗ ಅಥವಾ ಬಾಕಿ ಇರುವ ಸ್ಥಿತಿಯಲ್ಲಿದ್ದಾಗ UPI ಪಾವತಿಗಳನ್ನು ಹಿಂತೆಗೆದುಕೊಳ್ಳುವುದು ಹೇಗೆ

PhonePe Regional|2 min read|13 June, 2023

URL copied to clipboard

ನೀವು ತಪ್ಪು ವ್ಯಕ್ತಿಗೆ ಹಣವನ್ನು ವರ್ಗಾಯಿಸಿದರೆ ಅಥವಾ ನಿಮ್ಮ ಹಣವು ಬಾಕಿ ಉಳಿದಿರುವ ಸ್ಥಿತಿಯಲ್ಲಿ ಇದ್ದರೆ ನಿಮ್ಮ ಪಾವತಿಯನ್ನು ಹಿಂತೆಗೆದುಕೊಳ್ಳುವುದು ಹೇಗೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಆಕಸ್ಮಿಕವಾಗಿ ತಪ್ಪಾದ ವ್ಯಕ್ತಿಗೆ ಹಣವನ್ನು ವರ್ಗಾಯಿಸುವುದು ಅಸಹಜ ಸಂಗತಿಯಲ್ಲ. ನೀವು ಫೋನ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿರಬಹುದು, ತಪ್ಪಾದ UPI ಐಡಿಯನ್ನು ಟೈಪ್ ಮಾಡಿರಬಹುದು ಅಥವಾ ಹಣವನ್ನು ವರ್ಗಾಯಿಸಲು ತಪ್ಪಾದ ವ್ಯಕ್ತಿಯ ಚಾಟ್‌ನಲ್ಲಿ ಕ್ಲಿಕ್ ಮಾಡಿರಬಹುದು, ವಹಿವಾಟು ಮಾಡಿದ ನಂತರ ನೀವು ತಪ್ಪು ವ್ಯಕ್ತಿಗೆ ವರ್ಗಾಯಿಸಿದ್ದೀರಿ ಎಂದು ನೀವು ಮನಗಂಡಿರಬಹುದು. ಅಂತಹ ಸಂದರ್ಭಗಳಲ್ಲಿ ಅಥವಾ ಪಾವತಿಯು ಬಾಕಿ ಸ್ಥಿತಿಯಲ್ಲಿದ್ದಾಗ, ಈ ಬ್ಲಾಗ್‌ನಲ್ಲಿ ವಿವರಿಸಿದ ವಿಧಾನವನ್ನು ಅನುಸರಿಸುವ ಮೂಲಕ ನಿಮ್ಮ ಪಾವತಿಯನ್ನು ಹಿಂತೆಗೆದುಕೊಳ್ಳಬಹುದು

ಹಣದ ತಪ್ಪಾದ ವರ್ಗಾವಣೆ ಎಂದರೇನು?

ನೀವು ಯಾರಿಗೆ ಹಣವನ್ನು ಕಳುಹಿಸಲು ಉದ್ದೇಶಿಸಿರುತ್ತೀರೋ ಅವರ ಬದಲು ತಪ್ಪು ವ್ಯಕ್ತಿಗೆ ಹಣವನ್ನು ವರ್ಗಾಯಿಸಿದಾಗ, ಅದನ್ನು ತಪ್ಪಾದ ಅಥವಾ ಹಣದ ತಪ್ಪು ವರ್ಗಾವಣೆ ಎಂದು ಉಲ್ಲೇಖಿಸಲಾಗುತ್ತದೆ.

ನೀವು ತಪ್ಪಾಗಿ ಹಣ ವರ್ಗಾವಣೆ ಮಾಡಿದಾಗ ಏನು ಮಾಡಬೇಕು

ವರ್ಗಾವಣೆಗೊಂಡ ಹಣವನ್ನು UPI ನೇರವಾಗಿ ಸ್ವೀಕರಿಸುವವರ ಬ್ಯಾಂಕ್ ಖಾತೆಗೆ ಜಮಾ ಮಾಡುವುದರಿಂದ, ಹಣ ವರ್ಗಾವಣೆಯನ್ನು ಹಿಂತೆಗೆದುಕೊಳ್ಳುವುದು ಸವಾಲಿನ ಕೆಲಸವಾಗಿದೆ. UPI ಪಾವತಿಗಳನ್ನು ರದ್ದುಗೊಳಿಸಲು ಅಥವಾ ಹಿಂತೆಗೆದುಕೊಳ್ಳಲು ಬ್ಯಾಂಕ್‌ಗಳು ನಮಗೆ ಅನುಮತಿಸುವುದಿಲ್ಲ. ಹಣವನ್ನು ಹಿಂತೆಗೆದುಕೊಳ್ಳಬೇಕೆಂದರೆ, ಸ್ವೀಕರಿಸಿರುವವರು ಹಣವನ್ನು ವರ್ಗಾಯಿಸಲು ಬ್ಯಾಂಕ್‌ಗೆ ತಮ್ಮ ಒಪ್ಪಿಗೆಯನ್ನು ನೀಡುವುದು ಕಡ್ಡಾಯವಾಗಿದೆ.

ಸ್ವೀಕರಿಸಿದವರು ನಿಮ್ಮ ಕುಟುಂಬದವರು ಅಥವಾ ಸ್ನೇಹಿತರಾಗಿದ್ದರೆ ಹಣವನ್ನು ವಾಪಾಸ್‌ ಪಡೆಯುವುದು ತುಂಬ ಸುಲಭ. ಆದಾಗ್ಯೂ ನೀವು ತಪ್ಪಾದ ವರ್ಗಾವಣೆಯನ್ನು ಮಾಡಿ, ನಿಮ್ಮ ಹಣವನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ನೀವು ಏನು ಮಾಡಬೇಕು ಎಂಬುದರ ವಿವರ ಇಲ್ಲಿದೆ:

  1. ನಿಮ್ಮ ಬ್ಯಾಂಕ್ ಅನ್ನು ನೇರವಾಗಿ ಸಂಪರ್ಕಿಸಿ ಮತ್ತು ಪಾವತಿಯ ಯುನಿಕ್ ಟ್ರಾನ್ಸಾಕ್ಷನ್ ರೆಫರೆನ್ಸ್ (UTR) ಸಂಖ್ಯೆಯೊಂದಿಗೆ ತಪ್ಪಾದ ಕ್ರೆಡಿಟ್ ಚಾರ್ಜ್‌ಬ್ಯಾಕ್ ಅನ್ನು ಸಲ್ಲಿಸಿ.
  2. ನೀವು ತಪ್ಪಾಗಿ ಹಣವನ್ನು ಕಳುಹಿಸಿದ ವ್ಯಕ್ತಿಯು ನಿಮ್ಮ ಬ್ಯಾಂಕ್‌ನಲ್ಲಿಯೇ ಖಾತೆಯನ್ನು ಹೊಂದಿದ್ದರೆ, ನಿಮ್ಮ ಬ್ಯಾಂಕ್ ನೇರವಾಗಿ ಅವರನ್ನು ನಿಮ್ಮ ಪರವಾಗಿ ಸಂಪರ್ಕಿಸಬಹುದು ಮತ್ತು ಹಣವನ್ನು ನಿಮಗೆ ಹಿಂತಿರುಗಿಸಲು ಮನವಿ ಮಾಡಬಹುದು.
  3. ನೀವು ತಪ್ಪಾಗಿ ಹಣವನ್ನು ಕಳುಹಿಸಿರುವ ವ್ಯಕ್ತಿಯು ಮತ್ತೊಂದು ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೆ, ನಿಮ್ಮ ಬ್ಯಾಂಕ್ ಕೇವಲ ಆಯೋಜಕ ಪಾತ್ರವನ್ನು ನಿರ್ವಹಿಸುತ್ತದೆ ಹಾಗೂ ಶಾಖೆಯ ಕೆಲವು ವಿವರಗಳನ್ನು ನಿಮಗೆ ಒದಗಿಸುತ್ತದೆ. ಹೆಚ್ಚಿನ ಸಹಾಯಕ್ಕಾಗಿ ನೀವು ಶಾಖೆಗೆ ಭೇಟಿ ನೀಡಬೇಕು ಮತ್ತು ವ್ಯವಸ್ಥಾಪಕರೊಂದಿಗೆ ಮಾತನಾಡಬೇಕು.
  4. ಸ್ವೀಕರಿಸಿದವರು ಒಪ್ಪಿದರೆ ಮಾತ್ರ ಹಣವನ್ನು ಹಿಂತಿರುಗಿಸಬಹುದು. ಅವರು ಒಪ್ಪಿಗೆ ನೀಡಿದರೆ ಹಣವನ್ನು 7 ದಿನಗಳಲ್ಲಿ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.
  5. ಸ್ವೀಕರಿಸಿದವರು ನಿಮ್ಮ ವಿನಂತಿಗೆ ಪ್ರತಿಕ್ರಿಯಿಸಲು ವಿಫಲವಾದರೆ ಅಥವಾ ಬ್ಯಾಂಕ್‌ಗೆ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗದಿದ್ದರೆ, ನೀವು NPCI ಪೋರ್ಟಲ್‌ನಲ್ಲಿ (https://npci.org.in/) ದೂರು ಸಲ್ಲಿಸಬಹುದು.
  6. ಮೇಲಿನ ಪ್ರಕ್ರಿಯೆಗಳನ್ನು ಅನುಸರಿಸಿದ ನಂತರವೂ, ದೂರು ಇತ್ಯರ್ಥವಾಗದೆ ಉಳಿದಿದ್ದರೆ, 30 ದಿನಗಳ ನಂತರ ನೀವು ಬ್ಯಾಂಕಿಂಗ್ ಒಂಬುಡ್ಸ್‌ಮನ್ ಅವರನ್ನು ಸಂಪರ್ಕಿಸಬಹುದು ಮತ್ತು ವಿಷಯವನ್ನು ಎಸ್ಕಲೇಟ್‌ ಮಾಡಬಹುದು.

ಬಾಕಿಯಿರುವ ವಹಿವಾಟು ಎಂದರೇನು?

ಬಾಕಿಯಿರುವ ವಹಿವಾಟು ಸಾಮಾನ್ಯವಾಗಿ ಹಣವನ್ನು ಕಡಿತಗೊಳಿಸಿದ ನಂತರ ಬಾಕಿಯಿರುವ ಸ್ಥಿತಿಯನ್ನು ಸೂಚಿಸುತ್ತದೆ. ಇದು ಅನೇಕ ರೀತಿಗಳಲ್ಲಿ ಉಂಟಾಗಬಹುದು — ನೀವು ಪಾವತಿ ಮಾಡುತ್ತೀರಿ ಮತ್ತು ನಿಮ್ಮ ಕಡೆಯಿಂದ ವಹಿವಾಟು ಪೂರ್ಣಗೊಳ್ಳುತ್ತದೆ ಆದರೆ ಸ್ವೀಕರಿಸುವವರು ಹಣವನ್ನು ಸ್ವೀಕರಿಸಿರುವುದಿಲ್ಲ. ಪಾವತಿಯು ಬಾಕಿ ಉಳಿದಿರುತ್ತದೆ ಅಥವಾ ನಿಮ್ಮ ವ್ಯವಹಾರವನ್ನು ರದ್ದುಗೊಳಿಸಲಾಗುತ್ತದೆ ಆದರೆ ಕಡಿತಗೊಳಿಸಿದ ಹಣ ನಿಮಗೆ ಮರಳಿ ಬಂದಿರುವುದಿಲ್ಲ.

ನಿಮ್ಮ ಪಾವತಿಯು ಬಾಕಿಯಿರುವ ಸ್ಥಿತಿಯಲ್ಲಿದ್ದಾಗ ಏನು ಮಾಡಬೇಕು

  1. ದಯವಿಟ್ಟು ತಾಳ್ಮೆಯಿಂದಿರಿ. ಈ ಸಂದರ್ಭದಲ್ಲಿ, ನಿಮ್ಮ ಹಣವು ಸುರಕ್ಷಿತ ಮತ್ತು ಭದ್ರವಾಗಿರುತ್ತದೆ. ನೀವು ಶೀಘ್ರದಲ್ಲೇ ಹಣವನ್ನು ಹಿಂಪಡೆಯುತ್ತೀರಿ.
  2. PhonePe ಆ್ಯಪ್‌ನಲ್ಲಿ ಸಮಸ್ಯೆಯನ್ನು ವರದಿ ಮಾಡಿ ಇದರಿಂದ ನಾವು ಪ್ರಗತಿಯನ್ನು ಟ್ರ್ಯಾಕ್ ಮಾಡಬಹುದು.
  3. ನಿಮ್ಮ ಬ್ಯಾಂಕ್‌ ಪಾವತಿಯ ಅಂತಿಮ ಸ್ಥಿತಿಯನ್ನು ಅಪ್‌ಡೇಟ್‌ ಮಾಡಲು ನೀವು 48 ಗಂಟೆಗಳ ಕಾಲ ಕಾಯಬೇಕಾಗುತ್ತದೆ. ನಿಮ್ಮ ಕಡೆಯಿಂದ ಪಾವತಿ ಯಶಸ್ವಿಯಾದರೆ, ಮೊತ್ತವನ್ನು ಸ್ವೀಕರಿಸುವವರ ಖಾತೆಗೆ ಜಮಾ ಮಾಡಲಾಗುತ್ತದೆ.
  4. ಒಂದು ವೇಳೆ ಪಾವತಿ ವಿಫಲವಾದರೆ, ಪಾವತಿ ದಿನಾಂಕದಿಂದ 3–5 ವ್ಯವಹಾರ ದಿನಗಳಲ್ಲಿ ನಿಮ್ಮ ಖಾತೆಗೆ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ.
  5. ತ್ವರಿತ ಪರಿಹಾರಕ್ಕಾಗಿ, ನೀವು ಯಾವಾಗ ಬೇಕಾದರೂ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬಹುದು ಮತ್ತು ವಹಿವಾಟು UTR ಸಂಖ್ಯೆಯನ್ನು ಉಲ್ಲೇಖಿಸಿ ದೂರು ಸಲ್ಲಿಸಬಹುದು.
  6. ನಿಗದಿತ ಸಮಯವನ್ನು ಪೂರ್ಣಗೊಳಿಸಿದ ನಂತರ ನೀವು ಯಾವಾಗ ಬೇಕಾದರೂ PhonePe ಆ್ಯಪ್‌ನಲ್ಲಿ ಈ ವಿಷಯವನ್ನು ಎಸ್ಕಲೇಟ್‌ ಮಾಡಬಹುದು. ನಾವು ಸಮಸ್ಯೆಯನ್ನು ವಿಂಗಡಿಸಲು ಮತ್ತು ವಹಿವಾಟಿನ ಮೇಲೆ ಸೂಕ್ತ ಕ್ರಮವನ್ನು ಪ್ರಾರಂಭಿಸಲು ಇದರಿಂದ ನಮಗೆ ಸಹಾಯವಾಗುತ್ತದೆ.

ಪ್ರಮುಖ ಟಿಪ್ಪಣಿ: PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. phonepe.com ಡೊಮೇನ್‌ನಿಂದ ಎಂದು ಹೇಳಿಕೊಳ್ಳುವ, ಆದರೆ PhonePe ನಿಂದ ಆಗಿರದ ಎಲ್ಲ ಮೇಲ್‌ಗಳನ್ನು ನಿರ್ಲಕ್ಷಿಸಿ. ವಂಚನೆಯ ಕುರಿತು ನಿಮಗೆ ಅನುಮಾನ ಉಂಟಾದರೆ ದಯವಿಟ್ಟು ತಕ್ಷಣ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ.

ನಿಜವಾದ ಗ್ರಾಹಕ ಪ್ರತಿನಿಧಿಯು ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್‌ನ ಸಂಪೂರ್ಣ ವಿವರಗಳನ್ನು ಅಥವಾ OTP ಅನ್ನು ಹಂಚಿಕೊಳ್ಳಬೇಕೆಂದು ಎಂದಿಗೂ ನಿಮ್ಮನ್ನು ಕೇಳುವುದಿಲ್ಲ. ಅವರು ನಿಮ್ಮನ್ನು ಅಧಿಕೃತ ಸ್ಥಿರ ದೂರವಾಣಿ ಸಂಖ್ಯೆಗಳಿಂದ ಮಾತ್ರ ಸಂಪರ್ಕಿಸುತ್ತಾರೆಯೇ ಹೊರತು ಮೊಬೈಲ್ ಸಂಖ್ಯೆಯಿಂದ ಸಂಪರ್ಕಿಸುವುದಿಲ್ಲ. ನಿಮ್ಮ ಬ್ಯಾಂಕ್‌ನವರು ತಮ್ಮ ಅಧಿಕೃತ ಡೊಮೇನ್‌ನಿಂದ ಕಳುಹಿಸದೇ ಇರುವ ಇಮೇಲ್‌ಗಳನ್ನು ನಿರ್ಲಕ್ಷಿಸಬೇಕು. ಸಾಮಾಜಿಕ ಎಂಜಿನಿಯರಿಂಗ್ ವಂಚನೆ ಬಗ್ಗೆ ಎಚ್ಚರದಿಂದಿರಿ.

ಸಮಸ್ಯೆಯನ್ನು ಸಲ್ಲಿಸಲು, ನಿಮ್ಮ PhonePe ಆ್ಯಪ್‌ಗೆ ಲಾಗಿನ್ ಮಾಡಿ ಮತ್ತು ‘ಸಹಾಯ’ ವಿಭಾಗಕ್ಕೆ ಹೋಗಿ. ನೀವು ‘ಖಾತೆ ಭದ್ರತಾ ಸಮಸ್ಯೆ/ ಮೋಸದ ಚಟುವಟಿಕೆಯನ್ನು ವರದಿ ಮಾಡಿ’ ವಿಭಾಗದಡಿಯಲ್ಲಿ ವಂಚನೆಯನ್ನು ವರದಿ ಮಾಡಬಹುದು. ಪರ್ಯಾಯವಾಗಿ ನೀವು support.phonepe.com ಗೆ ಲಾಗಿನ್‌ ಆಗಬಹುದು ಅಥವಾ Twitter ಮೂಲಕ ಸಂಪರ್ಕದಲ್ಲಿರಬಹುದು.

Keep Reading