Trust & Safety
ಕೋವಿಡ್ -19 ಸ್ಕ್ಯಾಮ್‌ಗಳ ಕುರಿತು ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ
PhonePe Regional|3 min read|09 August, 2021
ಭಾರತದಲ್ಲಿ ಕೋವಿಡ್ -19 ಎರಡನೇ ಅಲೆ ಪ್ರಾರಂಭವಾದ ನಂತರದಲ್ಲಿ, ಜನರು ಅಪರಿಚಿತ ಖಾತೆಗಳಿಗೆ ಹಾಗೂ ಫೋನ್ ನಂಬರ್‌ಗಳಿಗೆ ಹಣ ಕಳಿಹಿಸುವಂತೆ ಮಾಡಲು ಕೆಲವು ವಂಚಕರು ಬೇರೆ ಬೇರೆ ರೀತಿಯ ವಿಧಾನಗಳನ್ನು ಬಳಸುತ್ತಿದ್ದಾರೆ. ಆಸ್ಪತ್ರೆಯ ಹಾಸಿಗೆಗಳಿಗೆ, ಆಮ್ಲಜನಕಕ್ಕಾಗಿ, ಲಸಿಕೆಗಳಿಗಾಗಿ ಸಹಾಯ ನೀಡುವ ನೆಪದಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ.
ಎಚ್ಚರಿಕೆ ವಹಿಸಬೇಕಾದ ಸನ್ನಿವೇಶಗಳ ಕುರಿತು PhonePe ಒದಗಿಸಿದ ಮಾರ್ಗಸೂಚಿ ಇಲ್ಲಿದೆ.
ಕೋವಿಡ್ -19 ಲಸಿಕೆ ನೋಂದಣಿ
ಸೈಬರ್ ಅಪರಾಧಿಗಳು ಮೊದಲ ಲಸಿಕೆಗಾಗಿ ಮುಂಚಿತವಾಗಿ ಸ್ಲಾಟ್ ಬುಕ್ ಮಾಡುವ ಅಥವಾ ಸರ್ಕಾರಿ ಡೇಟಾಬೇಸ್ ಅನ್ನು ನವೀಕರಿಸುವ ಭರವಸೆ ನೀಡುವ ಮೂಲಕ ಸಾರ್ವಜನಿಕರಿಂದ ಹಣ ವಸೂಲಿ ಮಾಡಿದ ಹಲವಾರು ಪ್ರಕರಣಗಳು ದಾಖಲಾಗಿದೆ. ಈ ಸಂದರ್ಭದಲ್ಲಿ ವಂಚಕರು ಬಳಸುವ ಮಾರ್ಗ ತುಂಬಾ ಸರಳವಾಗಿದೆ.
● ಯಾರಿಗಾದರೂ ಕರೆ ಮಾಡಿ ಅದರಲ್ಲೂ ವಿಶೇಷವಾಗಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕರೆ ಮಾಡಿ, ಅವರು ಕೋವಿಡ್ -19 ನ ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆಯೇ ಎಂದು ಕೇಳುವುದು.
● ಕರೆ ಸ್ವೀಕರಿಸಿದ ವ್ಯಕ್ತಿ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರೆ, ಈ ಕುರಿತ ಡಾಟಾಬೇಸ್ ಅನ್ನು ನವೀಕರಿಸುವ ನೆಪದಲ್ಲಿ ಅವರ ಮೊಬೈಲ್ ಫೋನ್‌ಗೆ ಬಂದ OTP ಸಂಖ್ಯೆಯನ್ನು ತಿಳಿಸಲು ಹೇಳಲಾಗುತ್ತದೆ.
● ತಾವು ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿಲ್ಲ ಎಂದು ಹೇಳುವವರಿಗೆ ಲಸಿಕೆಯನ್ನು ಮುಂಚಿತವಾಗಿ ಕಾಯ್ದಿರಿಸಲು ತಾವು ಸಹಾಯ ಮಾಡುವುದಾಗಿ ಹೇಳಿ ಅವರ ಮೊಬೈಲ್‌ಗೆ OTP ಕಳುಹಿಸಿ ಅದನ್ನು ಪಡೆಯಲಾಗುತ್ತದೆ.
ಈ ಎರಡು-ಹಂತದ ಪ್ರಕ್ರಿಯೆಯು ಮೇಲ್ನೋಟಕ್ಕೆ ತುಂಬಾ ಹಾನಿಕಾರಕವಾಗಿ ತೋರುವುದಿಲ್ಲ. ಆದರೆ ನಿಮ್ಮ ಮೊಬೈಲ್‌ಗೆ ಬಂದ OTP ಸಂಖ್ಯೆಯನ್ನು ಹಂಚಿಕೊಳ್ಳುವ ಮೂಲಕ, ಅಪರಾಧಿಗಳು ನಿಮ್ಮ ಫೋನ್‌ನಲ್ಲಿರುವ ಆ್ಯಪ್‌ಗಳು ಅಥವಾ ಪ್ರಮುಖ ಮಾಹಿತಿಯನ್ನು ಹ್ಯಾಕ್ ಮಾಡಬಹುದು ಹಾಗೂ ಇದರಿಂದ ಗಂಭೀರ ಪರಿಣಾಮಗಳು ಉಂಟಾಗಬಹುದು.
ಸಾಮಾಜಿಕ ಮಾಧ್ಯಮದಲ್ಲಿ ಪರಿಶೀಲಿಸಿದ (ಪರಿಶೀಲಿಸದ) ಲೀಡ್‌ಗಳು
ಸಾಂಕ್ರಾಮಿಕದ ಎರಡನೆ ಅಲೆಯ ಸಮಯದಲ್ಲಿ, ಲಸಿಕೆಗಳ ನೈಜ ಮಾರಾಟಗಾರರು ಮತ್ತು ಇತರ ಚಿಕಿತ್ಸಾ ಸಲಕರಣೆಗಳು ಮತ್ತು ಲಭ್ಯವಿರುವ ಆಸ್ಪತ್ರೆಯ ಹಾಸಿಗೆಗಳ ಮಾಹಿತಿ ನೀಡುವುದಾಗಿ ಅಥವಾ ಅವರುಗಳೊಂದಿಗೆ ಸಂಪರ್ಕ ಕಲ್ಪಿಸುವುದಾಗಿ ಹೇಳುವ ಅನೇಕ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದವು.
ಈ ಪೋಸ್ಟ್‌ಗಳಲ್ಲಿನ ಮಾಹಿತಿಯನ್ನು ಬಳಸಿಕೊಂಡು, ಅನೇಕ ವಂಚಕರು ಆಮ್ಲಜನಕದ ಸಿಲಿಂಡರ್‌ಗಳ ವಿತರಕರಂತೆ ಸೋಗುಹಾಕಿ ಔಷಧಿ ಶುಲ್ಕದ ಹೆಸರಿನಲ್ಲಿ ಜನರಿಂದ ಹಣವನ್ನು ದೋಚಿದ್ದಾರೆ.
ವೈಯಕ್ತಿಕ ಮಾಹಿತಿಯನ್ನು ಕದಿಯಲು ಉಚಿತ ಕೋವಿಡ್ ಲಸಿಕೆ ನೋಂದಣಿ ಎಂದು ಹೇಳುವ ಮಾಲ್‌ವೇರ್ ಲಿಂಕ್ ಹೊಂದಿರುವ ಸಂದೇಶಗಳನ್ನು WhatsApp ಮತ್ತು SMS ನಲ್ಲಿ ಹಂಚಿಕೊಳ್ಳಲಾಯಿತು. ಇದು ಅಪರಾಧಿಗಳಿಗೆ ನೀವು ಬಳಸುವ ಸಂವಹನ ಸಾಧನಗಳನ್ನು ಹಾಗೂ ಖಾತೆಗಳನ್ನು ಪ್ರವೇಶಿಸಲು ಮತ್ತು ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳಲು ಅನುವು ಮಾಡಿ ಕೊಟ್ಟಿತು.
ಚುಚ್ಚುಮದ್ದುಗಳು ಮತ್ತು ತುರ್ತು ವೈದ್ಯಕೀಯ ಸಾಮಗ್ರಿಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತುಗಳಿಂದ ಈಗಾಗಲೇ ಆತಂಕದಲ್ಲಿರುವ ಕುಟುಂಬ ಮತ್ತು ಸ್ನೇಹಿತರು ಇನ್ನೂ ಆತಂಕಗೊಳ್ಳುವಂತೆ ಮಾಡಿತು.
ಅಲ್ಲದೆ, ನಕಲಿ Facebook ಮತ್ತು Instagram ಖಾತೆಗಳ ಮೂಲಕ ನಕಲಿ ವೈದ್ಯರು, ಔಷಧಿಗಳನ್ನು ಮತ್ತು ಆಕ್ಸಿಜನ್ ಸಿಲಿಂಡರ್‌ಗಳನ್ನು ಒದಗಿಸುವ ಪರಿಶೀಲಿಸಿದ ಲೀಡ್‌ಗಳು ಎಂದು ಜಾಹೀರಾತು ನೀಡುವ ಮೂಲಕ ಅನೇಕ ಜನರನ್ನು ಮೋಸ ಮಾಡಿದ್ದಾರೆ.
ಚುಚ್ಚುಮದ್ದುಗಳಿಗಾಗಿ ಹಾಗೂ ಕಡಿಮೆ ಲಭ್ಯವಿರುವ ಔಷಧಿಗಳಿಗಾಗಿ ಮುಂಚಿತವಾಗಿ ಹಣ ಪಾವತಿಸುವಂತೆ ಹೇಳುವ ಮೂಲಕ ಹಣ ಪಡೆದುಕೊಂಡು ನಂತರ ಕರೆಗಳನ್ನು ಬ್ಲಾಕ್ ಮಾಡುವುದು ಅಥವಾ ನಂಬರ್ ಬದಲಾಯಿಸುವ ಮೂಲಕ ಸಹ ಜನರನ್ನು ಇವರು ವಂಚಿಸಿರುವುದು ಕಂಡುಬಂದಿದೆ.
ವಂಚಕ ವೆಬ್‌ಸೈಟ್‌ಗಳನ್ನು ಪರಿಶೀಲಿಸುವುದು ಮತ್ತು ಕೋವಿಡ್ ಸಂಬಂಧಿತ ಸಹಾಯಗಳಿಗೆ ದೇಣಿಗೆ ನೀಡುವುದು ಹೇಗೆ?
ಇಡೀ ಭಾರತವು ಒಗ್ಗಟ್ಟಾಗಿ ಕರೋನಾ ವೈರಸ್ ವಿರುದ್ಧ ಒಂದಾದಾಗ, ಹಲವಾರು ಜನರು ಸಂತ್ರಸ್ತರಿಗೆ ಸಹಾಯ ಮಾಡಲು ಮುಂದೆ ಬಂದರು. ಸಂತ್ರಸ್ತರಿಗೆ ಸಹಾಯ ಮಾಡುವ ಯಾವುದೇ ಸಂಸ್ಥೆಗೆ ನೀವು ಹಣವನ್ನು ದೇಣಿಗೆ ನೀಡಲು ಬಯಸಿದರೆ, ನೀವು ಸಂಬಂಧಿತ ಸಂಸ್ಥೆಯ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅವರು ಏನು ಮಾಡುತ್ತಾರೆ ಮತ್ತು ಅವರ ವೆಬ್‌ಸೈಟ್‌ನಲ್ಲಿರುವ ವಿಷಯವು ಕೋವಿಡ್ ಸಂತ್ರಸ್ತರಿಗೆ ಸಹಾಯ ಮಾಡುವ ಬಗ್ಗೆ ಅವರು ಹೇಳುತ್ತಿರುವುದಕ್ಕೆ ಹೋಲುತ್ತದೆಯೇ ಎಂಬುದನ್ನು ಗಮನಿಸಿ.
ಆ ವೆಬ್‌ಸೈಟ್ ವಿಳಾಸವು ಆರಂಭದಲ್ಲಿ ‘HTTPS’ ಅಥವಾ ‘HTTP’ ಹೊಂದಿದೆಯೇ ಎಂದು ನೋಡಿ. ‘HTTPS’ ಹೊಂದಿರುವ ವೆಬ್‌ಸೈಟ್ ಎಂದರೆ ಅದು SSL ಪ್ರಮಾಣಪತ್ರವನ್ನು ಹೊಂದಿದೆ ಎಂಬುದನ್ನು ನೆನಪಿನಲ್ಲಿಡಿ, ಅಂದರೆ ಇದು ‘HTTP’ ಹೊಂದಿರುವ ವೆಬ್‌ಸೈಟ್‌ಗಿಂತ ಹೆಚ್ಚು ಸುರಕ್ಷಿತವಾಗಿದೆ. ಆದಾಗ್ಯೂ, ಆ ಸಂಸ್ಥೆಯ ಸಿಂಧುತ್ವದ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ ಅಥವಾ ನೀವು ದಾನ ಮಾಡಲು ಬಯಸುವ ಹಣವನ್ನು ಸರಿಯಾದ ಉದ್ದೇಶಗಳಿಗಾಗಿ ಬಳಸಬೇಕೆಂದು ಬಯಸಿದರೆ, ನೀವು PhonePe ಅಪ್ಲಿಕೇಶನ್ ಅನ್ನು ಬಳಸಬಹುದು ಮತ್ತು ಅಪ್ಲಿಕೇಷನ್‌ನಲ್ಲಿರುವ ‘ದೇಣಿಗೆ’ ಟ್ಯಾಬ್ ಮೇಲೆ ಕ್ಲಿಕ್ ಮಾಡುವ ಮೂಲಕ ದಾನ ಮಾಡಬಹುದಾಗಿದೆ.
PhonePe ಆ್ಯಪ್ ಮೂಲಕ ದಾನ ಮಾಡುವುದು ಹೇಗೆ?
ಪರಿಶೀಲಿಸಿದ NGO ಗಳಿಗೆ ನೀವು ದೇಣಿಗೆ ನೀಡುವಂತೆ ಸಹಾಯ ಮಾಡುವ ಸಲುವಾಗಿ PhonePe ತನ್ನ ಸೈಟ್‌ನಲ್ಲಿ ಈ ಕುರಿತು ಕೆಲಸಮಾಡುತ್ತಿರುವ ಪರಿಶೀಲಿತ ಸಂಸ್ಥೆಗಳ ಪಟ್ಟಿಯನ್ನು ನೀಡಿರುತ್ತದೆ. ಈ ಕೆಳಗೆ ಸೂಚಿಸಿದ ಹಂತಗಳನ್ನು ಅನುಸರಿಸುವ ಮೂಲಕ ನೀವು PhonePe ನಲ್ಲಿ ಪಟ್ಟಿ ಮಾಡಲಾದ NGO ಗಳಿಗೆ ದಾನ ಮಾಡಬಹುದು.
ಹಂತ 1: ನಿಮ್ಮ PhonePe ಹೋಮ್ ಸ್ಕ್ರೀನ್‌ನಲ್ಲಿ ‘ರೀಚಾರ್ಜ್ ಮತ್ತು ಬಿಲ್‌ಗಳ ಪಾವತಿ’ ಟ್ಯಾಬ್‌ನ ಅಡಿಯಲ್ಲಿರುವ ‘Donate’ ಟ್ಯಾಬ್ ಅನ್ನು ಟ್ಯಾಪ್ ಮಾಡಿ.
ಹಂತ 2: ನೀವು NGO ಗಳು ಅಥವಾ ಇತರ ಸಂಸ್ಥೆಗಳು ಅಥವಾ ನೀವು ಯಾವ ಕಾರ್ಯಕ್ಕೆ ದಾನ ಮಾಡಲು ಬಯಸುತ್ತೀರಿ ಎಂಬುದನ್ನು ಪಟ್ಟಿಯಿಂದ ಆಯ್ಕೆ ಮಾಡಿ.
ಹಂತ 3: ನಿಮ್ಮ ಹೆಸರು, ಇಮೇಲ್ ವಿಳಾಸವನ್ನು ನಮೂದಿಸಿ.
ಹಂತ 4: ದೇಣಿಗೆ ಮೊತ್ತವನ್ನು ನಮೂದಿಸಿ.
ಹಂತ 5: ಪಟ್ಟಿ ಮಾಡಲಾದ ಪಾವತಿ ವಿಧಾನಗಳಿಂದ ಆಯ್ಕೆಮಾಡಿ. ನೀವು UPI, ನಿಮ್ಮ ಡೆಬಿಟ್ ಕಾರ್ಡ್ ಅಥವಾ ನಿಮ್ಮ PhonePe ವ್ಯಾಲೆಟ್ ಮೂಲಕ ದಾನ ಮಾಡಬಹುದು.
ಹಂತ 6: ‘Donate’ ಟ್ಯಾಬ್ ಅನ್ನು ಟ್ಯಾಪ್ ಮಾಡಿ ಮತ್ತು ಪಾವತಿಯನ್ನು ಅಧಿಕೃತಗೊಳಿಸಿ.
ವಂಚಕರ ಫೋನ್ ಸಂಖ್ಯೆಗಳನ್ನು ಪರಿಶೀಲಿಸಲು ನೀವು PhonePe ಅನ್ನು ಹೇಗೆ ಬಳಸಬಹುದು ಎನ್ನುವುದನ್ನು ಈ ಕೆಳಗೆ ನೀಡಲಾಗಿದೆ
ವಿವರಗಳನ್ನು ಕೇಳುವ ಅಥವಾ ಬಹುಮಾನಗಳನ್ನು ಕೊಡುವ ಭರವಸೆ ನೀಡುವ ಕರೆಗಳನ್ನು ಗುರುತಿಸುವ ನಿಮ್ಮ ಜಾಗರೂಕತೆಯು ಇತರರಿಗೆ ಸಹಾಯಕವಾಗಬಹುದು. ವೈದ್ಯಕೀಯ ಆರೈಕೆ ಮತ್ತು ಆಮ್ಲಜನಕ ವಿತರಣೆ ಕುರಿತಂತೆ ನಿಮಗೆ ಕರೆಗಳು/ಪರಿಶೀಲಿಸದ ಸಂಖ್ಯೆಗಳಿಂದ ಬರುತ್ತಿದ್ದಲ್ಲಿ ಅವುಗಳ ಸತ್ಯಾಸತ್ಯತೆಯನ್ನು ತಿಳಿಯಲು ನೀವು, https://www.phonepe.com/security/covid-frauds/ ಲಾಗ್ ಇನ್ ಆಗಿ ಮತ್ತು ನಿಮಗೆ ಕರೆಗಳು ಬರುತ್ತಿರುವ ಸಂಖ್ಯೆಗಳು ವಂಚಕರ ಜಾಲದ ಸಂಖ್ಯೆಗಳಾಗಿವೆಯೇ ಎಂಬುದನ್ನು ಪರಿಶೀಲಿಸಿ. ನಿಮಗೆ ಬಂದ ಕರೆಯ ಸಂಖ್ಯೆ ಅಲ್ಲಿ ಇಲ್ಲದಿದ್ದಲ್ಲಿ ನೀವು ನಿಮಗೆ ಕರೆ ಮಾಡಿದ ವಂಚಕರ ಜಾಲದ ಸಂಖ್ಯೆಯನ್ನು ಕೂಡಾ ಅಲ್ಲಿ ಸೇರಿಸಿ, ಇತರರನ್ನು ಎಚ್ಚರಿಸುವ ಮೂಲಕ ಸಹಾಯ ಮಾಡಬಹುದು.
ನೆನಪಿಡಿ: PhonePe ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ನಿಮ್ಮ OTP / CVV ಅಥವಾ UPI MPIN ನಂತಹ ಸೂಕ್ಷ್ಮ ಮಾಹಿತಿಗಳನ್ನು ಕೇಳಲು ಕರೆಗಳನ್ನು ಮಾಡುವುದಿಲ್ಲ.
ಮೋಸದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು
ಮಾಡಬೇಕಾದ ಕೆಲಸಗಳು:
ನಕಲಿ ಫೋನ್ ಕರೆಗಳಿಂದ ತಪ್ಪಿಸಿಕೊಳ್ಳುವುದು ಕಷ್ಟವಲ್ಲ. ಅದಕ್ಕಾಗಿ ನೀವು ಇವುಗಳನ್ನು ‘ಮಾಡಬೇಕು’
- ಅಪರಿಚಿತ ವ್ಯಕ್ತಿಗೆ ಹಣವನ್ನು ಕಳುಹಿಸುವ ಮೊದಲು ಸ್ವೀಕರಿಸುವವರ ವಿವರಗಳನ್ನು ಪರಿಶೀಲಿಸಿ
- ಹಣ ಕಳುಹಿಸುವ ಮುನ್ನ ಖಾತೆದಾರರ ಹೆಸರು, ಬ್ಯಾಂಕ್ ಖಾತೆ ವಿವರಗಳು ಮತ್ತು ಸಂಪರ್ಕ ವಿವರಗಳನ್ನು ಪರಿಶೀಲಿಸಿ.
- ಯಾರದೋ ಮಾತನ್ನು ನಂಬಿ ಯಾವುದೇ ಇತರ ಥರ್ಡ್-ಪಾರ್ಟಿ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಬೇಡಿ. ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್‌ನಿಂದ ವಿಶ್ವಾಸಾರ್ಹ, ಪರಿಶೀಲಿಸಿದ ಆ್ಯಪ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡಿ.
- ನೀವು ಅಪರಿಚಿತ ವ್ಯಕ್ತಿಗೆ ಹಣವನ್ನು ಕಳುಹಿಸಿದರೆ, ಅದನ್ನು ತಕ್ಷಣವೇ ನಿಮ್ಮ ಬ್ಯಾಂಕ್ ಅಥವಾ ಸೈಬರ್ ಸೆಲ್‌ಗೆ ವರದಿ ಮಾಡಿ.
- ನಿಮ್ಮ ಫೋನಿನಲ್ಲಿ ಸ್ವೀಕೃತಿದಾರರ ಸಂಖ್ಯೆಯನ್ನು ನಿರ್ಬಂಧಿಸಿ ಅಥವಾ ಭವಿಷ್ಯದಲ್ಲಿ ನಿಮ್ಮಿಂದ ಮತ್ತೆ ಹಣವನ್ನು ವಿನಂತಿಸುವುದನ್ನು ತಡೆಯಲು PhonePe ಪ್ಲಾಟ್‌ಫಾರ್ಮ್‌ನಲ್ಲಿ ಅವರ ಖಾತೆಯನ್ನು ನಿರ್ಬಂಧಿಸಿ.
- ಮೋಸದ ಘಟನೆಯನ್ನು ವರದಿ ಮಾಡಲು ನಿಮ್ಮ PhonePe ಆ್ಯಪ್‌ಗೆ ಲಾಗ್ ಇನ್ ಮಾಡಿ ಮತ್ತು “ಸಹಾಯ” ವಿಭಾಗದಲ್ಲಿ “ಖಾತೆ ಭದ್ರತೆ ಮತ್ತು ಮೋಸದ ಚಟುವಟಿಕೆ ವರದಿ ಮಾಡುವಿಕೆ” ಆಯ್ಕೆಯನ್ನು ಬಳಸಿ. ಪರ್ಯಾಯವಾಗಿ, ನೀವು support.phonepe.com ಗೆ ಲಾಗಿನ್ ಮಾಡಬಹುದು.
- ಯಾವುದೇ UPI ಆ್ಯಪ್‌ನಲ್ಲಿ ಹಣವನ್ನು ಸ್ವೀಕರಿಸಲು ನೀವು ಯಾವುದೇ UPI PIN ಅನ್ನು ನಮೂದಿಸುವ ಅಗತ್ಯವಿಲ್ಲ ಎಂಬುದನ್ನು ಯಾವಾಗಲೂ ನೆನಪಿಡಿ.
ಮಾಡಬಾರದವು: ವಂಚಕರು ನಿಮ್ಮ ಹಣವನ್ನು ಕದಿಯುವುದನ್ನು ತಡೆಯಲು ನೀವು ಮಾಡಬಾರದ ಕೆಲಸಗಳು ಇವು
- ನಿಮ್ಮ UPI PIN, OTP ಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. PhonePe ಉದ್ಯೋಗಿಗಳು ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ.
- ನಿಮ್ಮ Twitter, Facebook, LinkedIn, Instagram ಮುಂತಾದ ಸಾಮಾಜಿಕ ಮಾಧ್ಯಮಗಳ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.
- ವಿವಿಧ ಉತ್ಪನ್ನಗಳು ಅಥವಾ ಸರಕುಗಳ ಮೇಲೆ ಅಪರಿಚಿತ ಮಾರಾಟಗಾರರು ನೀಡುವ ಆಕರ್ಷಕ ಕೊಡುಗೆಗಳಿಗೆ ಬಲಿಯಾಗಬೇಡಿ.
- ನಿಮ್ಮ ಬ್ಯಾಂಕ್ ವಿವರಗಳನ್ನು ಕೇಳುವ ಯಾವುದೇ ನಮೂನೆಗಳನ್ನು ಭರ್ತಿ ಮಾಡಬೇಡಿ.
- ಪಾವತಿಗಳನ್ನು ಕಳುಹಿಸಲು / ಸ್ವೀಕರಿಸಲು ScreenShare, Any Desk, ಅಥವಾ TeamViewer ನಂತಹ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.
- ಸರ್ಚ್ ಎಂಜಿನ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿರುವ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬೇಡಿ. ಬದಲಾಗಿ, ಸಹಾಯವಾಣಿ ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್‌ಗಳನ್ನು ಪರಿಶೀಲಿಸಿ.
- ಅಪರಿಚಿತ ವಿಳಾಸಗಳಿಂದ ಬಂದ ಇಮೇಲ್‌ಗಳಿಗೆ ಉತ್ತರಿಸಬೇಡಿ ಹಾಗೂ ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.
PhonePe ಗ್ರಾಹಕ ಸಹಾಯವನ್ನು ಅಧಿಕೃತವಾಗಿ ಸಂಪರ್ಕಿಸಲು https://support.phonepe.com/ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ 24*7 ಗ್ರಾಹಕ ಸೇವಾ ಬೆಂಬಲಕ್ಕಾಗಿ 0806–8727–374 ಅಥವಾ 0226–8727–374 ಸಂಖ್ಯೆಗೆ ಕರೆ ಮಾಡುವ ಮೂಲಕ ನಮ್ಮ ಅಧಿಕಾರಿಗಳನ್ನು ಸಂಪರ್ಕಿಸಿ.
ನಿಮ್ಮ ಸಹಾಯಕ್ಕಾಗಿ
ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿರುವ ನಮ್ಮ ಅಧಿಕೃತ ಖಾತೆಗಳ ಮೂಲಕ ಮಾತ್ರ ನಮ್ಮನ್ನು ಸಂಪರ್ಕಿಸಿ.
● ಟ್ವಿಟರ್ ಹ್ಯಾಂಡಲ್‌ಗಳು : https://twitter.com/PhonePe ಅಥವಾ https://twitter.com/PhonePeSupport
● ಫೇಸ್‌ಬುಕ್: https://www.facebook.com/OfficialPhonePe/
● ಗ್ರಾಹಕ ಸಹಾಯ ಸಂಖ್ಯೆ: 080–68727374 / 022–68727374
● ಇಮೇಲ್ ಐಡಿ: support.phonepe.com