PhonePe Blogs Main Featured Image

Trust & Safety

KYC ವಂಚನೆ ಎಂದರೇನು ಮತ್ತು ಅದರಿಂದ ಸುರಕ್ಷಿತವಾಗಿರುವುದು ಹೇಗೆ

PhonePe Regional|2 min read|30 April, 2021

URL copied to clipboard

ಕೆಲವು ಗ್ರಾಹಕರು ತಮ್ಮ KYC ಪ್ರಕ್ರಿಯೆಯನ್ನು ಅತ್ಯಂತ ತ್ವರಿತವಾಗಿ ಮುಗಿಸುವ ಪ್ರಯತ್ನ ಮಾಡುತ್ತಾರೆ. ಹಾಗೆ ಮಾಡಿದಾಗ, ಅನೇಕರು KYC ಸಂಬಂಧಿತ ವಂಚನೆಗೆ ಬಲಿಯಾಗಿಬಿಡುತ್ತಾರೆ. ಅಂತಹ ವಂಚನೆಗೆ ಈಡಾದ ಒಬ್ಬರ ಕಥೆ ಇಲ್ಲಿದೆ.

ಒಂದು ದಿನ ರೋಹನ್ ಅವರಿಗೆ ಕರೆ ಒಂದು ಬಂತು. ಕರೆ ಮಾಡಿದವರು ಅವರಿಗೆ ತಮ್ಮ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೀರಾ ಎಂದು ಕೇಳಿದರು. ಅಷ್ಟೇ ಅಲ್ಲ, KYC ಪ್ರಕ್ರಿಯೆ ಬಹಳ ಮಹತ್ವದ್ದಾಗಿದೆ, ಅದನ್ನು ವಿಳಂಬ ಮಾಡಬಾರದು ಎಂದು ರೋಹನ್ ಅವರಿಗೆ ವಿವರಿಸಿದರು. ನಂತರ ಅವರು ತಾವು ಕರೆಯ ಮೂಲಕವೇ ನೇರವಾಗಿ ರೋಹನ್ ಅವರ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಹೇಳಿ, ಅದಕ್ಕೆ ಚಿಕ್ಕ ಶುಲ್ಕವನ್ನು ನೀಡಬೇಕಾಗುತ್ತದೆ ಎಂದು ಹೇಳಿದರು.

ನಂತರ, ಕರೆ ಮಾಡಿದವರು KYC ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಗತ್ಯವೆಂದು ಹೇಳಿ, ರೋಹನ್ ಅವರ ಪೂರ್ಣ ಹೆಸರು ಮತ್ತು ಇತರ ವೈಯಕ್ತಿಕ ವಿವರಗಳನ್ನು ನೀಡಲು ಕೇಳಿಕೊಂಡರು. ಇಷ್ಟು ಮಾತುಕತೆ ಮುಗಿಯುವ ಹೊತ್ತಿಗೆ, ರೋಹನ್ ಅವರು ತಮಗೆ KYC ಶೀಘ್ರವಾಗಿ ದೊರೆಯಲಿದೆ ಎಂದು ಪೂರ್ಣವಾಗಿ ನಂಬಿಬಿಟ್ಟರು. ಈ ಕರೆಯ ಸಮಯದಲ್ಲಿ, ಕರೆ ಮಾಡಿದವರು ಈ ಪ್ರಕ್ರಿಯೆಯನ್ನು ದೂರದಿಂದಲೇ ಪೂರ್ಣಗೊಳಿಸುವುದಕ್ಕಾಗಿ ‘Anydesk’ ಎಂಬ ಆ್ಯಪ್‌ ಡೌನ್‌ಲೋಡ್ ಮಾಡಲು ಕೇಳಿಕೊಂಡರು.

ಇದರ ನಂತರ, ಕರೆ ಮಾಡಿದವರು ತಾವು ಮೊದಲೇ ಮಾತನಾಡಿಕೊಂಡಂತೆ, ತಮ್ಮ ಶುಲ್ಕವನ್ನು ತಮ್ಮ ಖಾತೆಗೆ ವರ್ಗಾಯಿಸಲು ರೋಹನ್ ಅವರಿಗೆ ಹೇಳಿದರು. ರೋಹನ್ ಅದನ್ನು ಮಾಡಿದ ನಂತರ, ಕರೆ ಮಾಡಿದ ವ್ಯಕ್ತಿ ಅವರಿಗೆ ಶೀಘ್ರದಲ್ಲೇ KYC ದೃಢೀಕರಣವನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ರೋಹನ್ ಕರೆಯನ್ನು ಸಂಪರ್ಕ ಕಡಿತಗೊಳಿಸಿದ ನಂತರ, ಅವರಿಗೆ ಎರಡು ಹೊಸ ಸಂದೇಶಗಳು ಬಂದಿದ್ದವು. ಒಂದು ಅವರ ಡೆಬಿಟ್ ಕಾರ್ಡ್‌ನಲ್ಲಿ ಮಾಡಲಾದ ವಹಿವಾಟಿಗೆ ಸಂಬಂಧಿಸಿದ OTP ಆಗಿದ್ದರೆ, ಇನ್ನೊಂದು ಅವರ ಖಾತೆಯಿಂದ ₹30,000 ಅನ್ನು ಡೆಬಿಟ್ ಮಾಡಲಾಗಿರುವ ಕುರಿತು!

ಏನಾಯಿತು ಎಂಬುದನ್ನು ನೋಡಿ:

ಆ ಕರೆಮಾಡಿದ ವಂಚಕನು ರೋಹನ್‌ ಅವರಿಗೆ ಡೌನ್‌ಲೋಡ್ ಮಾಡಲು ಕೇಳಿದ ಆ್ಯಪ್‌ ಒಂದು ಸ್ಕ್ರೀನ್ ಶೇರಿಂಗ್ ಆ್ಯಪ್‌ ಆಗಿದೆ. ಈ ಆ್ಯಪ್‌ ವಂಚಕನಿಗೆ ರೋಹನ್ ಅವರ ಫೋನ್ ಸ್ಕ್ರೀನ್ ಮೇಲೆ ನಡೆಯುವ ಎಲ್ಲಾ ಚಟುವಟಿಕೆಗಳನ್ನು ನೋಡಲು ಅವಕಾಶ ಮಾಡಿಕೊಟ್ಟಿದೆ.

ರೋಹನ್ ಅವರು ತಮ್ಮ ಶುಲ್ಕವನ್ನು ವರ್ಗಾಯಿಸಿದಾಗ, ಆ ವಂಚಕನಿಗೆ ಅವರ ಬ್ಯಾಂಕ್ ಖಾತೆ ಮತ್ತು ಬಳಸಿದ ಕಾರ್ಡ್ ಸಂಖ್ಯೆಗಳು, ಅಷ್ಟೇ ಅಲ್ಲ ಪಿನ್ ಮತ್ತು ಪಾಸ್‌ವರ್ಡ್ ವಿವರಗಳು ಕೂಡಾ ಕಾಣಿಸಿವೆ.

ನಂತರ ವಂಚಕನು ಈ ವಿವರಗಳನ್ನು ಬಳಸಿಕೊಂಡು ತನ್ನ ಸ್ವಂತ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡನು. ಅವನಿಗೆ OTP ಸಹಾ ಅಗತ್ಯವಿದ್ದು, ಅದು ರೋಹನ್‌ ಅವರು Anydesk ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡ ಕಾರಣದಿಂದಾಗಿ ಅವರ ಫೋನ್ ಸ್ಕ್ರೀನ್ ಮೇಲೆ ಕಾಣಿಸಿದೆ.

ದಯವಿಟ್ಟು ನೆನಪಿಡಿ: KYC ಪ್ರಕ್ರಿಯೆಯನ್ನು ಫೋನ್ ಕರೆಯ ಮೂಲಕ ಅಥವಾ ಯಾವುದೇ ಥರ್ಡ್ ಪಾರ್ಟಿ ಆ್ಯಪ್‌ ಡೌನ್‌ಲೋಡ್ ಮಾಡುವ ಮೂಲಕ ಮಾಡಲು ಸಾಧ್ಯವಿಲ್ಲ. ವಂಚಕರು ನಿಮಗೆ ಮೋಸ ಮಾಡಲು, ನಿಮ್ಮ ಅಸ್ತಿತ್ವದಲ್ಲಿರುವ ಬ್ಯಾಂಕ್ KYC ಅಥವಾ ಡಿಜಿಟಲ್ ವಾಲೆಟ್ ಅಮಾನ್ಯವಾಗಿದೆ ಎಂದು ಹೇಳಿ, ತಾವು ಅದನ್ನು ಆನ್‌ಲೈನ್‌ ಮೂಲಕ ಸರಿಪಡಿಸಿಕೊಡುತ್ತೇವೆ ಎಂದು ಹೇಳಿಬಿಡುತ್ತಾರೆ. ಆದರೆ ಅದನ್ನು ಕೂಡಾ ಮಾಡಲು ಬರುವುದಿಲ್ಲ ಎಂಬುದನ್ನು ಕೂಡಾ ನೆನಪಿಡಿ.

  • ಕರೆ ಮಾಡುವವರಿಗೆ ನಿಮ್ಮ ಬ್ಯಾಂಕ್ ಖಾತೆ, ಕಾರ್ಡ್ ಅಥವಾ ಅಂತಹ ಯಾವುದೇ ವಿವರಗಳನ್ನು ಎಂದಿಗೂ ನೀಡಬೇಡಿ.
  • ಯಾವುದೇ ಕರೆ ಮಾಡುವವರ ಕೋರಿಕೆಯ ಮೇರೆಗೆ Anydesk, TeamViewer ಅಥವಾ Screenshareನಂತಹ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಈ ಆ್ಯಪ್‌ಗಳು ವಂಚಕರಿಗೆ ನಿಮ್ಮ ಎಲ್ಲಾ ಪಾಸ್‌ವರ್ಡ್‌ಗಳು, ಪಿನ್‌ಗಳು ಮತ್ತು ಇತರ ಪ್ರಮುಖ ವಿವರಗಳನ್ನು ನೋಡಲು ಅನುಮತಿಸುತ್ತವೆ.
  • ನಿಜವಾದ PhonePe ಪ್ರತಿನಿಧಿಗಳು ನಿಮಗೆ ಯಾವತ್ತೂ ಕರೆಮಾಡಿ ನಿಮ್ಮ KYC ಪ್ರಕ್ರಿಯೆಯನ್ನು ಫೋನ್‌ನಲ್ಲಿ ಮಾಡಲು ಹೇಳುವುದಿಲ್ಲ ಅಥವಾ ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಲು ಕೇಳಿಕೊಳ್ಳುವುದಿಲ್ಲ.

ವಂಚನೆಗಳಿಂದ ಸುರಕ್ಷಿತವಾಗಿರಲು ನೀವು ಈ ಕೆಳಗಿನವುಗಳನ್ನು ನೆನಪಿಟ್ಟುಕೊಳ್ಳಿ:

PhonePe ಎಂದಿಗೂ ಯಾವುದೇ ಗ್ರಾಹಕರಿಗೆ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. PhonePe ಪ್ರತಿನಿಧಿಯಾಗಿ ನಟಿಸುವ ಯಾರಾದರೂ ಅಂತಹ ವಿವರಗಳನ್ನು ಕೇಳಿದರೆ, ದಯವಿಟ್ಟು ನಿಮಗೆ ಇಮೇಲ್ ಕಳುಹಿಸಲು ಅವರಿಗೆ ತಿಳಿಸಿ. ಜೊತೆಗೆ, @phonepe.com ಡೊಮೇನ್‌ನ ಇಮೇಲ್‌ಗಳಿಗೆ ಮಾತ್ರ ಪ್ರತಿಕ್ರಿಯಿಸಿ.

  • Google, Twitter, FB ಇತ್ಯಾದಿಗಳಲ್ಲಿ PhonePe ಗ್ರಾಹಕ ಸಹಾಯವಾಣಿಯ ಸಂಖ್ಯೆಗಳಿಗಾಗಿ ಯಾವತ್ತೂ ಹುಡುಕಬೇಡಿ. PhonePe ಗ್ರಾಹಕ ಬೆಂಬಲ ತಂಡವನ್ನು ಸಂಪರ್ಕಿಸುವ ಏಕೈಕ ಅಧಿಕೃತ ಮಾರ್ಗವೆಂದರೆ support.phonepe.com ಮೂಲಕ ಸಂಪರ್ಕಿಸುವುದು.
  • PhonePe ಬೆಂಬಲ ಎಂದು ಹೇಳಿಕೊಳ್ಳುವ ದೃಢೀಕರಿಸದ ಮೊಬೈಲ್ ಸಂಖ್ಯೆಗಳಿಗೆ ಎಂದಿಗೂ ಕರೆ ಮಾಡಬೇಡಿ / ಅಥವಾ ಕರೆಗಳಿಗೆ ಪ್ರತಿಕ್ರಿಯಿಸಬೇಡಿ.
  • ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿರುವ ನಮ್ಮ ಅಧಿಕೃತ ಖಾತೆಗಳ ಮೂಲಕ ಮಾತ್ರ ನಮ್ಮನ್ನು ಸಂಪರ್ಕಿಸಿ.
  • Twitter ಹ್ಯಾಂಡಲ್‌ಗಳು: https://twitter.com/PhonePe
    https://twitter.com/PhonePeSupport
    – Facebook ಖಾತೆ: https://www.facebook.com/OfficialPhonePe/
  • ನಿಮ್ಮ ಕಾರ್ಡ್ ಅಥವಾ ಖಾತೆ ವಿವರಗಳು ಕಳುವಾದಲ್ಲಿ:
  • [email protected] ಗೆ ವರದಿ ಮಾಡಿ, ಹಾಗೂ
  • ನಿಮ್ಮ ಹತ್ತಿರದ ಸೈಬರ್ ಸೆಲ್ ಅನ್ನು ಸಂಪರ್ಕಿಸಿ ಮತ್ತು ಪೊಲೀಸರಿಗೆ ದೂರು ನೀಡಿ

ಸುರಕ್ಷಿತವಾಗಿ ವಹಿವಾಟು ನಡೆಸುವ ವೀಡಿಯೊ ನೋಡಿ: https://youtu.be/VbfhRK23BQU

Keep Reading