PhonePe Blogs Main Featured Image

Trust & Safety

PhonePe ಮೂಲಕ ಸುರಕ್ಷಿತ ಡಿಜಿಟಲ್ ಪಾವತಿಗಳನ್ನು ಮಾಡಿ

PhonePe Regional|3 min read|05 May, 2021

URL copied to clipboard

ಕೋವಿಡ್ -19 ಸಾಂಕ್ರಾಮಿಕ ರೋಗದ ಹರಡುವಿಕೆಯು ಭಾರತದಲ್ಲಿ ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳುವಲ್ಲಿ ಅಸಾಧಾರಣ ಹೆಚ್ಚಳ ಉಂಟಾಗಿದೆ. PhonePe ಯಂತಹ ಡಿಜಿಟಲ್ ಪಾವತಿ ಆ್ಯಪ್‌ಗಳ ಕಾರಣದಿಂದಾಗಿ ಜನರಿಗೆ ತಮ್ಮ ಮನೆಗಳಿಂದ ಹೊರಹೋಗುವ ಅಥವಾ ಪಾವತಿಗಳನ್ನು ಮಾಡಲು ದೀರ್ಘ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲವಾದ್ದರಿಂದ, ಅವರ ಜೀವನ ಸುಲಭವಾಗಿದೆ. ಬಳಕೆದಾರರು PhonePe ಮೂಲಕ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು, ಮೊಬೈಲ್, DTH, ಡೇಟಾ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಬಹುದು, ದಿನಬಳಕೆಯ ಪಾವತಿಗಳನ್ನು ಮಾಡಬಹುದು, ಚಿನ್ನವನ್ನು ಖರೀದಿಸಬಹುದು ಮತ್ತು ತಮ್ಮ ಆನ್‌ಲೈನ್ ಖರೀದಿಗೆ ಮನೆಯಿಂದಲೇ ಪಾವತಿಸಬಹುದು.

ಸುರಕ್ಷತೆಯ ವಿಷಯಕ್ಕೆ ಬಂದರೆ, PhonePe ನಿಮ್ಮನ್ನು ಟ್ರಿಪಲ್ ಕವರ್ ಮಾಡಿದೆ, ಯಾವುದೇ ಟ್ರಾನ್ಸಾಕ್ಷನ್‌ ವೈಫಲ್ಯಗಳಿಲ್ಲದೆ ಪ್ರತಿದಿನ ಕೋಟಿಗಟ್ಟಲೆ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ. ಟ್ರಿಪಲ್-ಲೇಯರ್ ಭದ್ರತೆ ಒಳಗೊಂಡಿದೆ:

 • ಲಾಗಿನ್ ಪಾಸ್‌ವರ್ಡ್: ಆ್ಯಪ್‌ ಸುರಕ್ಷತೆಯ ಮೊದಲ ಭಾಗವು ಲಾಗಿನ್ ಪಾಸ್‌ವರ್ಡ್ ಆಗಿದೆ. ನಿಮ್ಮ ಆ್ಯಪ್‌ ಅನ್ನು ನಿರ್ದಿಷ್ಟ ಫೋನ್ ಮತ್ತು ನಂಬರಿಗೆ ಮ್ಯಾಪ್ ಮಾಡಲಾಗಿದೆ. ನಿಮ್ಮ ಫೋನ್ ಅಥವಾ ನಿಮ್ಮ ನಂಬರ್‌ ಅನ್ನು ನೀವು ಬದಲಾಯಿಸಿದರೆ, ನೀವು ಆ್ಯಪ್‌ ಅನ್ನು ಮರು-ಅಧಿಕೃತಗೊಳಿಸಬೇಕಾಗುತ್ತದೆ.
 • PhonePe ಆ್ಯಪ್‌ ಲಾಕ್: PhonePe ಆ್ಯಪ್‌ ಅನ್ನು ಬಳಸಲು ಪ್ರಾರಂಭಿಸಲು, ನಿಮ್ಮ ಕೈಬೆರಳನ್ನು ಇಡಬಹುದು, ಮುಖದ ಐಡಿ ಅಥವಾ ನಂಬರ್ ಲಾಕ್ ಅನ್ನು ಬಳಸಿಕೊಂಡು ನೀವು ಅದನ್ನು ಅನ್‌ಲಾಕ್ ಮಾಡಬೇಕಾಗುತ್ತದೆ.
 • UPI ಪಿನ್: PhonePe ನಲ್ಲಿ ಪ್ರತಿ ಪಾವತಿಗೆ, ಒಂದು ರೂಪಾಯಿಂದ ಹಿಡಿದು ಒಂದು ಲಕ್ಷದವರೆಗೂ, UPI ಪಿನ್ ಇಲ್ಲದೆ ಯಾವುದೇ ಪಾವತಿಯನ್ನು ಮಾಡಲಾಗುವುದಿಲ್ಲ.

ಡಿಜಿಟಲ್‌ ಪಾವತಿಯು ಸುರಕ್ಷಿತವಾಗಿದ್ದರೂ, ಜೊತೆಯಲ್ಲಿಯೇ ವಿವಿಧ ರೀತಿಯ ವಂಚನೆಗಳ ಬಗ್ಗೆ ಮತ್ತು ವಂಚಕರು ಹೇಗೆ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕದಿಯುವ ಹೊಸ ಹೊಸ ವಿಧಾನಗಳನ್ನು ನಿರಂತರವಾಗಿ ಕಂಡುಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಜಾಗೃತರಾಗಿರುವುದು ಸಹ ಅಷ್ಟೇ ಮುಖ್ಯವಾಗಿದೆ. ಈ ಕೆಳಗೆ ವಿವಿಧ ರೀತಿಯ ವಂಚನೆಗಳ ಕಿರುಮಾಹಿತಿ ಮತ್ತು ಸುರಕ್ಷಿತವಾಗಿ ವಹಿವಾಟು ನಡೆಸಲು ನೀವು ಏನು ಮಾಡಬೇಕು ಎಂಬ ವಿವರಗಳಿವೆ:

 1. ಸಾಲದ ವಂಚನೆ: ಸಾಲದ ಮೋಸಗಾರರು ದುರ್ಬಲ ಸಾಲಗಾರರ ಸಾಲದ ಅಗತ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ, ಅವರನ್ನು ವಂಚಿಸುವ ಉದ್ದೇಶದಿಂದ ಸಾಲವನ್ನು ನೀಡುತ್ತಾರೆ. ಮುಂಗಡ ಮೊತ್ತವನ್ನು ಭದ್ರತೆಯಾಗಿ ಕೇಳುವ ಮೂಲಕ ಅವರು ಹಾಗೆ ಮಾಡುತ್ತಾರೆ — ಅದನ್ನು ಎಂದಿಗೂ ಹಿಂತಿರುಗಿಸುವುದಿಲ್ಲ ಅಥವಾ ಪ್ರಾಸೆಸಿಂಗ್‌ ಶುಲ್ಕ, ವಿಳಂಬ ಶುಲ್ಕ, ಅತಿಯಾದ ಬಡ್ಡಿ ಇತ್ಯಾದಿಗಳ ಹೆಸರಿನಲ್ಲಿ ಮೋಸ ಮಾಡುತ್ತಾರೆ.

2. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ವಂಚನೆ: ತಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸಲು, ವಂಚಕರು ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಹಂಚಿಕೊಳ್ಳಲು ಬಲಿಪಶುಗಳಿಗೆ ಆಮಿಷ ಒಡ್ಡುತ್ತಾರೆ ಮತ್ತು ತಮ್ಮ ಬಿಲ್‌ ಅನ್ನು ಪಾವತಿಸಿಕೊಳ್ಳುತ್ತಾರೆ. ಹಣದ ಅವಶ್ಯಕತೆ ಇರುವ ದೂರದ ಸಂಬಂಧಿ/ಕುಟುಂಬದ ಸ್ನೇಹಿತ/ಉದ್ಯಮ ವೃತ್ತಿಪರ ಎಂದು ಸುಳ್ಳು ಹೇಳಿ ಮುಗ್ಧ ಜನರ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಕದಿಯುತ್ತಾರೆ.

3. ಸಾಮಾಜಿಕ ಮಾಧ್ಯಮ ಸೋಗು ಹಾಕುವ ವಂಚನೆ: ಸಾಮಾಜಿಕ ಮಾಧ್ಯಮವು ಇತ್ತೀಚೆಗೆ ಸುಲಭವಾಗಿ ಡಿಜಿಟಲ್ ಗುರುತಿನ ಕಳ್ಳತನಕ್ಕೆ ದಾರಿ ಮಾಡಿಕೊಡುವುದು ಸಾಮಾನ್ಯವಾಗಿದೆ. ವಂಚಕರು ನಿಮ್ಮ ಅಥವಾ ನಿಮಗೆ ತಿಳಿದಿರುವವರ ನಕಲಿ ಪ್ರೊಫೈಲ್ ಅನ್ನು ರಚಿಸುತ್ತಾರೆ ಮತ್ತು ನಿಮ್ಮ ನೆಟ್‌ವರ್ಕ್‌ನಲ್ಲಿರುವ ಜನರಿಂದ ಹಣ ಅಥವಾ ಸೂಕ್ಷ್ಮ ಮಾಹಿತಿಯನ್ನು ವಿನಂತಿಸಲು ಅದನ್ನು ಬಳಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ವಂಚಕರು ನಿಮ್ಮ ಪಟ್ಟಿಯಲ್ಲಿರುವ ಜನರಿಗೆ ವಿನಂತಿಗಳನ್ನು ಕಳುಹಿಸಲು ನಿಮ್ಮ ಖಾತೆಯನ್ನು ಹ್ಯಾಕ್ ಮಾಡುತ್ತಾರೆ, ಇದು ಮುಗ್ಧರು ನಿರಾಕರಿಸಲು ಅಸಾಧ್ಯವಾಗುವಂತೆ ಮಾಡುತ್ತದೆ.

4. ಹಣವನ್ನು ದ್ವಿಗುಣಗೊಳಿಸುವ ವಂಚನೆ: ಜನರು ತಮ್ಮ ಹಣವನ್ನು ರಾತ್ರೋರಾತ್ರಿ ದ್ವಿಗುಣಗೊಳಿಸಬಹುದು ಎಂದು ತಪ್ಪಾಗಿ ನಂಬುವಂತೆ ಮಾಡುವ ವಂಚನೆ ಇದಾಗಿದೆ. ಒಬ್ಬರ ಹಣವನ್ನು ದ್ವಿಗುಣಗೊಳಿಸಲು ಸೀಮಿತ ಅವಧಿಯ ಕೊಡುಗೆಯೊಂದಿಗೆ ಬರುವ ನಕಲಿ ಲಿಂಕ್ ಅನ್ನು ರಚಿಸುವ ಮೂಲಕ ಅಥವಾ ಬಲಿಪಶುವಿನ ಹಣವನ್ನು ಆರಂಭದಲ್ಲಿ ದ್ವಿಗುಣಗೊಳಿಸುವ ಮೂಲಕ ವಿಶ್ವಾಸವನ್ನು ಸೃಷ್ಟಿಸುವ ಮೂಲಕ ಮತ್ತು ಅಂತಿಮವಾಗಿ ಅವರು ದೊಡ್ಡ ಮೊತ್ತದ ಹಣವನ್ನು ಠೇವಣಿ ಮಾಡಲು ನಿರ್ಧರಿಸಿದಾಗ ಆಗ ಅವರನ್ನು ಲೂಟಿ ಮಾಡುತ್ತಾರೆ.

5. ಉದ್ಯೋಗ ವಂಚನೆ: ಉದ್ಯೋಗಾಕಾಂಕ್ಷಿಗಳ ಬಲಹೀನತೆ ಬಳಸಿಕೊಂಡು ಮೋಸ ಮಾಡಲಾಗುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ಅಥವಾ ನಿಮ್ಮ ಸಾಧನದಲ್ಲಿ ಭದ್ರತಾ ಉಲ್ಲಂಘನೆಗಳಿಗೆ ಕಾರಣವಾಗುವ ನಕಲಿ ಲಿಂಕ್‌ಗಳನ್ನು ರಚಿಸುವುದಕ್ಕಾಗಿ ಮಾತ್ರ ಸ್ಕ್ಯಾಮ್‌ಸ್ಟರ್‌ಗಳು ಆನ್‌ಲೈನ್‌ನಲ್ಲಿ ನಕಲಿ ಉದ್ಯೋಗ ಕೊಡುಗೆಗಳನ್ನು ಪೋಸ್ಟ್ ಮಾಡುತ್ತಾರೆ.

ಸುರಕ್ಷಿತ ಡಿಜಿಟಲ್ ಪಾವತಿಗಳ ಪ್ರಯೋಜನಗಳನ್ನು ಆನಂದಿಸುವುದನ್ನು ಮುಂದುವರಿಸುವಾಗ ಸುರಕ್ಷಿತವಾಗಿರಲು, ವಂಚನೆಗಳನ್ನು ತಡೆಯಲು ನೀವು ಏನು ಮಾಡುತ್ತೀರಿ ಎಂಬುದು ಇಲ್ಲಿದೆ.

ವಂಚನೆಯನ್ನು ತಡೆಗಟ್ಟಲು ಮಾಡಬೇಕಾದ & ಮಾಡಬಾರದ ಕಾರ್ಯಗಳು:

 • ನಿಮ್ಮ ಗೌಪ್ಯ ವಿವರಗಳಾದ ಬ್ಯಾಂಕ್ ಕಾರ್ಡ್ ಸಂಖ್ಯೆ, ಅವಧಿ ಮುಕ್ತಾಯ ದಿನಾಂಕ, ಪಿನ್ ಅಥವಾ OTP ಮುಂತಾದವುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. PhonePe ಪ್ರತಿನಿಧಿಯಂತೆ ನಟಿಸುವ ಯಾರಾದರೂ ಅಂತಹ ವಿವರಗಳನ್ನು ಕೇಳಿದರೆ, ದಯವಿಟ್ಟು ನಿಮಗೆ ಇಮೇಲ್ ಕಳುಹಿಸಲು ಅವರಿಗೆ ತಿಳಿಸಿ. ಮತ್ತು @phonepe.com ಡೊಮೇನ್‌ನಿಂದ ಬರುವ ಇಮೇಲ್‌ಗಳಿಗೆ ಮಾತ್ರ ಪ್ರತಿಕ್ರಿಯಿಸಿ.
 • PhonePe ಯಲ್ಲಿ ನೀವು ಬೇರೆಯವರಿಂದ ಹಣ ಸ್ವೀಕರಿಸಲು ‘ಪಾವತಿ’ ಮಾಡುವ ಅಥವಾ ನಿಮ್ಮ UPI ಪಿನ್ ನಮೂದಿಸುವ ಅಗತ್ಯವಿಲ್ಲ ಎಂಬುದನ್ನು ಯಾವತ್ತೂ ನೆನಪಿಡಿ.
 • PhonePe ಯಲ್ಲಿ ನೀವು ಬೇರೆಯವರಿಂದ ಹಣ ಸ್ವೀಕರಿಸಲು, QR ಕೋಡ್ ಸ್ಕ್ಯಾನ್ ಮಾಡುವ ಅಗತ್ಯವಿಲ್ಲ ಎಂಬುದನ್ನು ಯಾವತ್ತೂ ನೆನಪಿಡಿ.
 • ‘ಪಾವತಿಸಿ’ ಅನ್ನು ಒತ್ತುವ ಅಥವಾ ನಿಮ್ಮ UPI PIN ನಮೂದಿಸುವ ಮೊದಲು, ದಯವಿಟ್ಟು ನಿಮ್ಮ PhonePe ಆ್ಯಪ್‌ನಲ್ಲಿ ಪ್ರದರ್ಶಿಸಲಾದ ಸಂದೇಶವನ್ನು ಎಚ್ಚರಿಕೆಯಿಂದ ಓದಿ.
 • ಯಾವತ್ತೂ Anydesk, TeamViewer ಅಥವಾ Screenshare ನಂತಹ ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.
 • Google, Twitter, FB ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ PhonePe ಗ್ರಾಹಕ ಬೆಂಬಲ ನಂಬರ್‌ಗಳಿಗಾಗಿ ಹುಡುಕಬೇಡಿ. PhonePe ಗ್ರಾಹಕ ಬೆಂಬಲವನ್ನು ಸಂಪರ್ಕಿಸುವ ಅಧಿಕೃತ ಮಾರ್ಗವೆಂದರೆ https://phonepe.com/en/contact_us.html ಮೂಲಕ ಸಂಪರ್ಕಿಸುವುದು ಮಾತ್ರ.
 • ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ನಮ್ಮ ಅಧಿಕೃತ ಖಾತೆಗಳ ಮೂಲಕ ಮಾತ್ರ ನಮ್ಮನ್ನು ಸಂಪರ್ಕಿಸಿ.
 • Twitter handles : https://twitter.com/PhonePe_ https://twitter.com/PhonePeSupport
 • Facebook ಅಕೌಂಟ್: https://www.facebook.com/OfficialPhonePe/
 • ವೆಬ್: support.phonepe.com
 • PhonePe ಬೆಂಬಲ ಎಂದು ಹೇಳಿಕೊಳ್ಳುವ ಪರಿಶೀಲಿಸದ ಮೊಬೈಲ್ ನಂಬರ್‌ಗಳಿಗೆ ಎಂದಿಗೂ ಕರೆ ಮಾಡಬೇಡಿ / ಅವುಗಳ ಕರೆಗಳಿಗೆ ಪ್ರತಿಕ್ರಿಯಿಸಬೇಡಿ.
 • ಪರಿಶೀಲನೆ ಇಲ್ಲದೆ ಯಾವುದೇ SMS ಅಥವಾ ಇಮೇಲ್ ಸಂದೇಶದಲ್ಲಿರುವ ವೆಬ್‌ಸೈಟ್ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
 • ಸುಮ್ಮನೆ ಕರೆ ಮಾಡುವವರ ಸಲಹೆಯ ಆಧಾರದ ಮೇಲೆ ಯಾವುದೇ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಬೇಡಿ.
 • ಪರಿಶೀಲನೆ ಇಲ್ಲದೆ ಸಣ್ಣ ವಹಿವಾಟುಗಳನ್ನು ಒಪ್ಪಿಕೊಳ್ಳಬೇಡಿ.
 • KYC ಪರಿಶೀಲನೆಗಾಗಿ ಎಂದು ಹೇಳಿಕೊಳ್ಳುವ SMS ಮೂಲಕ ಕಳುಹಿಸಿದ ಸಂಖ್ಯೆಗೆ ಕರೆ ಮಾಡಬೇಡಿ.
 • ಬ್ಯಾಂಕ್‌ಗಳು ಅಥವಾ ಕ್ರೆಡಿಟ್ ಕಾರ್ಡ್ ಕಂಪನಿಗಳಂತೆ ತಮ್ಮನ್ನು ಪ್ರತಿನಿಧಿಸುವ ಅಪರಿಚಿತ ಸಂಖ್ಯೆಗಳಿಂದ ಕರೆಗಳನ್ನು ತೆಗೆದುಕೊಳ್ಳಬೇಡಿ.
 • ಟೆಕ್ಸ್ಟ್‌ ಮೂಲಕ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ — ನಿಮ್ಮ ಸರ್ಕಾರಿ ಗುರುತು, ನಿಮ್ಮ UPI ಐಡಿ, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ನಿಮ್ಮ PIN, ನಿಮ್ಮ ಒಂದು ಬಾರಿಯ ಪಾಸ್‌ವರ್ಡ್ ಅಥವಾ ನಿಮ್ಮ ಸಾಮಾನ್ಯ ಪಾಸ್‌ವರ್ಡ್ ಸೇರಿದಂತೆ ಯಾವುದನ್ನೂ ಹಂಚಿಕೊಳ್ಳಬೇಡಿ.

ವಂಚಕರು ನಿಮ್ಮನ್ನು ಸಂಪರ್ಕಿಸಿದಾಗ ನೀವು ಏನು ಮಾಡಬೇಕು?

ಗ್ರಾಹಕರು PhonePe ನಲ್ಲಿ ವಂಚನೆಯ ವಿವಾದವನ್ನು ಎತ್ತಲು ಹಲವಾರು ಮಾರ್ಗಗಳಿವೆ. ಅವುಗಳೆಂದರೆ:

 1. PhonePe ಆ್ಯಪ್‌ : ಸಹಾಯ ವಿಭಾಗಕ್ಕೆ ಹೋಗಿ ಮತ್ತು “ವ್ಯವಹಾರದಲ್ಲಿ ಸಮಸ್ಯೆ ಇದೆ” ಆಯ್ಕೆಯ ಅಡಿಯಲ್ಲಿ ಸಮಸ್ಯೆಯನ್ನು ಎತ್ತಿಕೊಳ್ಳಿ.

2. PhonePe ಕಸ್ಟಮರ್ ಕೇರ್ ಸಂಖ್ಯೆ: ಸಮಸ್ಯೆಯನ್ನು ಸಲ್ಲಿಸಲು ನೀವು PhonePe ಗ್ರಾಹಕ ಸೇವೆಗೆ 80–68727374 / 022–68727374 ಗೆ ಕರೆ ಮಾಡಬಹುದು, ಅದನ್ನು ಪೋಸ್ಟ್ ಮಾಡಿ ಕಸ್ಟಮರ್ ಕೇರ್ ಏಜೆಂಟ್ ಟಿಕೆಟ್ ಸಂಗ್ರಹಿಸುತ್ತಾರೆ ಮತ್ತು ನಿಮ್ಮ ಸಮಸ್ಯೆಗೆ ಸಹಾಯ ಮಾಡುತ್ತಾರೆ.

3. ವೆಬ್‌ ಫಾರ್ಮ್‌ ಸಲ್ಲಿಕೆ: ನೀವು PhonePe’ಯ ವೆಬ್‌ ಫಾರಂ ಉಪಯೋಗಿಸಿಯೂ ಟಿಕೆಟ್‌ ರಚಿಸಬಹುದು- https://support.phonepe.com/

4. ಸೋಷಿಯಲ್‌ ಮೀಡಿಯಾ: ನೀವು ವಂಚನೆಯನ್ನು PhonePe’ಯ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ ಮೂಲಕವೂ ವರದಿ ಮಾಡಬಹುದು:

5. ಕುಂದುಕೊರತೆ: ಅಸ್ತಿತ್ವದಲ್ಲಿರುವ ದೂರಿನ ಮೇಲಿನ ಕುಂದುಕೊರತೆಯನ್ನು ವರದಿ ಮಾಡಲು, ನೀವು https://grievance.phonepe.com/ ಗೆ ಲಾಗಿನ್ ಮಾಡಬಹುದು ಮತ್ತು ಈ ಹಿಂದೆ ಎತ್ತಿರುವ ಟಿಕೆಟ್ ಐಡಿಯನ್ನು ಹಂಚಿಕೊಳ್ಳಬಹುದು.

6. ಸೈಬರ್ ಸೆಲ್: ಕೊನೆಯದಾಗಿ, ನೀವು ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ವಂಚನೆ ದೂರುಗಳನ್ನು ಸಲ್ಲಿಸಬಹುದು ಅಥವಾ https://www.cybercrime.gov.in/ ನಲ್ಲಿ ಆನ್‌ಲೈನ್‌ನಲ್ಲಿ ದೂರನ್ನು ನೋಂದಾಯಿಸಬಹುದು ಅಥವಾ 1930 ರಲ್ಲಿ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು ಸಂಪರ್ಕಿಸಬಹುದು.

Keep Reading