
Trust & Safety
ಹೊಸ ವಂಚನೆ ಟ್ರೆಂಡ್: ಮುಗ್ಧರನ್ನು ವಂಚಿಸಲು ಮಿಲಿಟರಿ ಸಿಬ್ಬಂದಿಯಂತೆ ನಟಿಸುವ ವಂಚಕರು
PhonePe Regional|3 min read|29 July, 2026
ಮುಗ್ಧ ನಾಗರಿಕರನ್ನು ವಂಚಿಸಲು ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಯಂತೆ ನಟಿಸುವ ವಂಚಕರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವನ್ನು ನಮ್ಮ ಟ್ರಸ್ಟ್ & ಸೇಫ್ಟಿ ತಂಡವು ಪತ್ತೆಹಚ್ಚಿದೆ. ಮಿಲಿಟರಿ ಮೇಲಿರುವ ಅಪಾರ ಗೌರವ ಮತ್ತು ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಈ ವಂಚಕರು, ತೀವ್ರ ಮಾನಸಿಕ ಒತ್ತಡದ ಪರಿಸ್ಥಿತಿಗಳನ್ನು ಸೃಷ್ಟಿಸಿ ಜನರಿಂದ ಹಣವನ್ನು ದೋಚುತ್ತಾರೆ. ಈ ರೀತಿಯ ವಂಚನೆಯು ಭಾರತದಾದ್ಯಂತ ವೇಗವಾಗಿ ಹರಡುತ್ತಿರುವುದರಿಂದ, ಈ ಟ್ರಿಕ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.
ಸಾಮಾನ್ಯ ವಂಚನೆ ವಿಧಾನ
ಇದು ಎಷ್ಟು ಬೇಗನೆ ಸಂಭವಿಸಬಹುದು ಎಂಬುದರ ಕಲ್ಪನೆಯನ್ನು ನೀಡಲು, ಸಾಮಾನ್ಯ ವಂಚನೆ ವಿಧಾನದ ಸರಳ ವಿವರಣೆ ಇಲ್ಲಿದೆ. ವಂಚಕನೊಬ್ಬ ಪೀಠೋಪಕರಣಗಳ ಆನ್‌ಲೈನ್ ಜಾಹೀರಾತನ್ನು ನೀಡಿದ ವ್ಯಕ್ತಿಯನ್ನು ಸಂಪರ್ಕಿಸುತ್ತಾನೆ ಮತ್ತು ಅದನ್ನು ಖರೀದಿಸಲು ಆಸಕ್ತಿ ಹೊಂದಿರುವ ಮಿಲಿಟರಿ ಅಧಿಕಾರಿಯಂತೆ ನಟಿಸುತ್ತಾನೆ. ಮಾರಾಟಗಾರನನ್ನು ಒತ್ತಾಯಿಸಲು, ಆತುರಪಡಿಸಲು ಮತ್ತು ಗೊಂದಲಗೊಳಿಸಲು ಅವನು ತನ್ನ ನಕಲಿ ಗುರುತನ್ನು ಬಳಸುತ್ತಾನೆ – ಅಂತಿಮವಾಗಿ ಹಣವನ್ನು ಪಡೆಯುವ ಬದಲು ಪಾವತಿಸುವಂತೆ ಮೋಸಗೊಳಿಸುತ್ತಾನೆ.

ಈ ಸೋಶಿಯಲ್ ಇಂಜಿನಿಯರಿಂಗ್ ಅಟ್ಯಾಕ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಈ ಬ್ಲಾಗ್ ವಿವರಿಸುತ್ತದೆ. ಜೊತೆಗೆ ನಿಮ್ಮ ಹಣವನ್ನು ಸುರಕ್ಷಿತವಾಗಿಡಲು PhonePe ನಿಯೋಜಿಸುವ ಸುಧಾರಿತ ಭದ್ರತಾ ಪರಿಕರಗಳ ವಿವರಗಳನ್ನು ನೀಡುತ್ತದೆ.
ಈ ವಂಚನೆ ಹೇಗೆ ಕೆಲಸ ಮಾಡುತ್ತದೆ?
ಇದು ಕ್ಲಾಸಿಕ್ ಸೋಶಿಯಲ್ ಇಂಜಿನಿಯರಿಂಗ್ ಅಟ್ಯಾಕ್ ಆಗಿದೆ. ವಂಚಕರು ವಾಯ್ಸ್ ಅಥವಾ ವಿಡಿಯೋ ಕರೆಗಳ ಮೂಲಕ ಸಂಭಾವ್ಯ ಬಲಿಪಶುಗಳನ್ನು ಸಂಪರ್ಕಿಸುತ್ತಾರೆ. ಜನರು ತಾರ್ಕಿಕವಾಗಿ ಆಲೋಚಿಸುವ ಮುನ್ನವೇ ಗಡಿಬಿಡಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಲು ತೀವ್ರ ಮಾನಸಿಕ ಒತ್ತಡವನ್ನು ಬಳಸುತ್ತಾರೆ. ಮೇಲಿನ ಸನ್ನಿವೇಶದಲ್ಲಿ ನೋಡಿದಂತೆ, ಮಿಲಿಟರಿ ಅಧಿಕಾರಿಯನ್ನು ನಂಬಿ ಮತ್ತು ಹಣವನ್ನು ಸ್ವೀಕರಿಸುವ ನಿರೀಕ್ಷೆಯಲ್ಲಿ ಜನರು ತಿಳಿಯದೆಯೇ ತಮ್ಮ UPI ಪಿನ್ ಅನ್ನು ನಮೂದಿಸಿದಾಗ ಕೆಲವೇ ಸೆಕೆಂಡುಗಳಲ್ಲಿ ಹಣವನ್ನು ಕಳೆದುಕೊಳ್ಳುತ್ತಾರೆ.
ಸೈನಿಕರಂತೆ ನಟಿಸುವ ಮೋಸದ ವಿಧಾನಗಳು
1. ವ್ಯಕ್ತಿಗಳನ್ನು ಗುರಿಯಾಗಿಸುವ ಪೇಮೆಂಟ್ ಟ್ರ್ಯಾಪ್
- ಗುರಿಗಳು: ವಂಚಕರು ದಿನನಿತ್ಯದ ಡಿಜಿಟಲ್ ಮಾರಾಟಗಾರರು, ಬಾಡಿಗೆದಾರರನ್ನು ಹುಡುಕುತ್ತಿರುವ ಆಸ್ತಿ ಮಾಲೀಕರು, ವೈದ್ಯರು ಅಥವಾ ಸ್ಥಳೀಯ ಟ್ಯೂಟರ್‌ಗಳು ಮತ್ತು ಸೇವಾ ಪೂರೈಕೆದಾರರನ್ನು ಗುರಿಯಾಗಿಸುತ್ತಾರೆ.
- ಸಂಚು (ಟ್ರ್ಯಾಪ್): ಅವರು ಮಿಲಿಟರಿ ಅಧಿಕಾರಿ ಅಥವಾ ಜವಾನ್ (ಮೇಲಿನ ಸನ್ನಿವೇಶದಲ್ಲಿ “ಕ್ಯಾಪ್ಟನ್ ಕುಮಾರ್” ಇದ್ದಂತೆ) ಸೋಗಿನಲ್ಲಿ ಬರುತ್ತಾರೆ. ಅವರಿಗೆ ನಿಮ್ಮ ಸೇವೆ ಅಥವಾ ವಸ್ತು ತುರ್ತಾಗಿ ಬೇಕಾಗಿರುತ್ತದೆ. ಆದರೆ “ಕಟ್ಟುನಿಟ್ಟಾದ ಆರ್ಮಿ ಕ್ಯಾಂಪ್ ನಿಯಮಗಳ” ಕಾರಣಗಳನ್ನು ನೀಡಿ ಮುಖಾಮುಖಿ ಭೇಟಿಯಾಗಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
- ಸೈಕಲಾಜಿಕಲ್ ಹುಕ್: ನಂಬಿಕೆಯನ್ನು ಬೆಳೆಸಲು ಅವರು ನಕಲಿ ಆಧಾರ್, ನಕಲಿ ಆರ್ಮಿ ಐಡಿ ಮತ್ತು ತಮ್ಮದೇ ಆದ ನಕಲಿ ಫೋಟೋಗಳಂತಹ ನಕಲಿ ದಾಖಲೆಗಳನ್ನು ಹಂಚಿಕೊಳ್ಳುತ್ತಾರೆ. ನಂತರ, ಅಧಿಕೃತ “ಗವರ್ನಮೆಂಟ್ ಮರ್ಚೆಂಟ್ ವಾಲೆಟ್” ಮೂಲಕ ನೀವು ಮುಂಗಡ ಹಣವನ್ನು ಸ್ವೀಕರಿಸುತ್ತಿದ್ದೀರಿ ಎಂದು ನಂಬುವಂತೆ ನಿಮ್ಮನ್ನು ವಂಚಿಸುತ್ತಾರೆ.
- ದೋಚುವಿಕೆ (ಸ್ಟಿಂಗ್): “ಬರುತ್ತಿರುವ ಹಣದ ವರ್ಗಾವಣೆಯನ್ನು ಅಧಿಕೃತಗೊಳಿಸಲು” ನಿಮ್ಮ UPI ಪಿನ್ ಅನ್ನು ನಮೂದಿಸುವಂತೆ ಕೋರುವ ಪೇಮೆಂಟ್ ರಿಕ್ವೆಸ್ಟ್ ಅಥವಾ QR ಕೋಡ್ ಅನ್ನು ಅವರು ನಿಮಗೆ ಕಳುಹಿಸುತ್ತಾರೆ. ವಾಸ್ತವದಲ್ಲಿ, ನಿಮ್ಮ UPI ಪಿನ್ ಅನ್ನು ನಮೂದಿಸಿದರೆ ನಿಮ್ಮ ಖಾತೆಯಿಂದ ಹಣ ಕಡಿತಗೊಳ್ಳಲು ನೀವು ಅನುಮತಿ ನೀಡಿದಂತಾಗುತ್ತದೆ ಮತ್ತು ನಿಮ್ಮ ಖಾತೆ ಖಾಲಿಯಾಗುತ್ತದೆ.
2. ವ್ಯವಹಾರಗಳನ್ನು ಗುರಿಯಾಗಿಸುವ ಅಡ್ವಾನ್ಸ್ ಟ್ರ್ಯಾಪ್
- ಗುರಿಗಳು: ಸಗಟು ವ್ಯಾಪಾರಿಗಳು ಮತ್ತು ಸಣ್ಣ-ಮಧ್ಯಮ ಉದ್ಯಮಗಳು.
- ಆಮಿಷ (ಬೆಟ್): ಮಿಲಿಟರಿ ಅಧಿಕಾರಿಯಂತೆ ನಟಿಸುವ ವಂಚಕನು ಆರ್ಮಿ ಕ್ಯಾಂಪ್ ಪರವಾಗಿ ಭಾರಿ ಪ್ರಮಾಣದಲ್ಲಿ ಖರೀದಿಸಲು ತೀವ್ರ ಆಸಕ್ತಿಯನ್ನು ತೋರಿಸುತ್ತಾನೆ.
- ವಿಶ್ವಾಸ ವರ್ಧನೆ: ನಂತರ, ಕಟ್ಟುನಿಟ್ಟಾದ ಆರ್ಮಿ ಖರೀದಿ ನಿಯಮಗಳನ್ನು ಉಲ್ಲೇಖಿಸಿ, ವ್ಯಾಪಾರಿಯು “ಮರ್ಚೆಂಟ್ ರಿಜಿಸ್ಟ್ರೇಷನ್ ಫೀಸ್” ಅಥವಾ “ಕನಿಷ್ಠ ಸೆಕ್ಯುರಿಟಿ ಡೆಪಾಸಿಟ್” ಅನ್ನು ಪಾವತಿಸಬೇಕಾಗುತ್ತದೆ ಎಂದು ವಂಚಕನು ಹೇಳುತ್ತಾನೆ.
- ದೋಚುವಿಕೆ: ಆ ಕಲ್ಪಿತ ಶುಲ್ಕವನ್ನು ಪಾವತಿಸಿದ ತಕ್ಷಣ, ವಂಚಕನು ಮಾಯವಾಗುತ್ತಾನೆ ಮತ್ತು ಅವರನ್ನು ಸಂಪರ್ಕಿಸಲು ಯಾವುದೇ ಮಾರ್ಗವಿರುವುದಿಲ್ಲ.
PhonePe ಯ ಸ್ವಯಂಚಾಲಿತ ಭದ್ರತಾ ವ್ಯವಸ್ಥೆಗಳು
ಮೇಲೆ ವಿವರಿಸಿದಂತಹ ವಂಚನೆಗಳನ್ನು ಮುಂಜಾಗ್ರತೆಯಾಗಿ ತಡೆಗಟ್ಟಲು PhonePe ಬಲಿಷ್ಠ ಸೈಬರ್ ಭದ್ರತಾ ಕ್ರಮಗಳನ್ನು ಹೊಂದಿದೆ. ಅದರ ಪ್ರಮುಖ ನೈಜ-ಸಮಯದ ಭದ್ರತಾ ವೈಶಿಷ್ಟ್ಯಗಳಲ್ಲಿ ಒಂದು PhonePe Protect, ಇದು ದೂರಸಂಪರ್ಕ ಇಲಾಖೆಗೆ (DoT) ನೇರವಾಗಿ ಸಂಪರ್ಕ ಹೊಂದಿದ AI-ಆಧಾರಿತ ಭದ್ರತಾ ಚೌಕಟ್ಟು. ಇದು ಸ್ವೀಕರಿಸುವವರ ಫೋನ್ ಸಂಖ್ಯೆಯನ್ನು ವಂಚನೆ ಎಂದು ವರದಿ ಮಾಡಲಾದ ಸಂಖ್ಯೆಗಳ ರಾಷ್ಟ್ರೀಯ ಡೇಟಾಬೇಸ್ ವಿರುದ್ಧ ಪರಿಶೀಲಿಸುತ್ತದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇಲ್ಲಿದೆ:
- ತಕ್ಷಣ ನಿರ್ಬಂಧಿಸುವಿಕೆ: PhonePe ಪ್ರೊಟೆಕ್ಟ್ ಯಾವುದಾದರೂ ಫೋನ್ ಸಂಖ್ಯೆಯನ್ನು ಹೆಚ್ಚಿನ ರಿಸ್ಕ್ ಎಂದು ಗುರುತಿಸಿದರೆ, PhonePe ಸ್ವಯಂಚಾಲಿತವಾಗಿ ಆ ಪಾವತಿಯನ್ನು ತಕ್ಷಣವೇ ಬ್ಲಾಕ್ ಮಾಡುತ್ತದೆ ಮತ್ತು ನಿರಾಕರಿಸುತ್ತದೆ.
- ಭದ್ರತಾ ಎಚ್ಚರಿಕೆಗಳು: ಪಾವತಿ ಅನುಮಾನಾಸ್ಪದವಾಗಿದ್ದರೆ, PhonePe ಉದ್ದೇಶಪೂರ್ವಕವಾಗಿ ಅದನ್ನು ವಿರಾಮಗೊಳಿಸುತ್ತದೆ ಮತ್ತು ಸ್ಕ್ರೀನ್ ಮೇಲೆ ಭದ್ರತಾ ಎಚ್ಚರಿಕೆಯನ್ನು ಪ್ರದರ್ಶಿಸುತ್ತದೆ. ಯಾರಾದರೂ ಫೋನ್ ಕರೆಯ ಮೂಲಕ ಅವರನ್ನು ವಂಚಿಸಲು ಪ್ರಯತ್ನಿಸುತ್ತಿಲ್ಲ ಎಂದು ಪರಿಶೀಲಿಸಿದ ನಂತರವೇ ಬಳಕೆದಾರರು ಪಿನ್ ಅನ್ನು ನಮೂದಿಸಲು ಇದು ಅನುಮತಿಸುತ್ತದೆ. ಅದು ಈ ರೀತಿ ಕಾಣುತ್ತದೆ:

ವರದಿ ಮಾಡುವುದು ಹೇಗೆ
ನೀವು ವಂಚನೆಗೆ ಒಳಗಾಗಿದ್ದೀರಿ ಎಂದು ಅನುಮಾನ ಬಂದರೆ, ತಕ್ಷಣವೇ ಅದನ್ನು ವರದಿ ಮಾಡಿ:
PhonePe ನಲ್ಲಿ ವರದಿ ಮಾಡುವುದು:
- PhonePe ಗ್ರೂಪ್ ಚಾಟ್: ಗ್ರೂಪ್ ವಂಚನೆಯಿಂದ ಕೂಡಿದೆ ಎಂದು ನಿಮಗೆ ಅನುಮಾನ ಬಂದರೆ, ಗ್ರೂಪ್ ಪ್ರೊಫೈಲ್ ಅಡಿಯಲ್ಲಿರುವ “Exit/ಎಕ್ಸಿಟ್ ಆಗಿ” ಮತ್ತು “Report/ರಿಪೋರ್ಟ್ ಮಾಡಿ” ಆಯ್ಕೆಯನ್ನು ಕ್ಲಿಕ್ ಮಾಡಬಹುದು.
- PhonePe ಆ್ಯಪ್: ‘Help/ಸಹಾಯ’ ವಿಭಾಗಕ್ಕೆ ಹೋಗಿ ದೂರು ನೀಡಿ.
- ಗ್ರಾಹಕ ಬೆಂಬಲ: 80-68727374 / 022-68727374 ಸಂಖ್ಯೆಗೆ ಕರೆ ಮಾಡಿ.
- ಸಾಮಾಜಿಕ ಜಾಲತಾಣಗಳು:
- Twitter: PhonePe Support
- Facebook: PhonePe Official
- ದೂರು ಪರಿಹಾರ: PhonePe ಕುಂದುಕೊರತೆ ಪೋರ್ಟಲ್ನಲ್ಲಿ ದೂರು ದಾಖಲಿಸಿ.
ಅಧಿಕಾರಿಗಳಿಗೆ ವರದಿ ಮಾಡುವುದು:
- ಸೈಬರ್ ಕ್ರೈಮ್: ಸೈಬರ್ ಕ್ರೈಂ ಪೋರ್ಟಲ್ನಲ್ಲಿ ಆನ್‌ಲೈನ್ ದೂರು ನೀಡಿ ಅಥವಾ 1930 ಕ್ಕೆ ಕರೆ ಮಾಡಿ.
- ದೂರಸಂಪರ್ಕ ಇಲಾಖೆ (DOT): ಸಂಚಾರ್ ಸಾಥಿ ಪೋರ್ಟಲ್‌ನಲ್ಲಿರುವ ಚಕ್ಷು ಸೌಲಭ್ಯದ ಮೂಲಕ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ WhatsApp / ಟೆಲಿಗ್ರಾಮ್ ವಂಚನೆಯನ್ನು ವರದಿ ಮಾಡಿ.
ಮುಖ್ಯವಾದ ವಿಷಯ — PhonePe ಎಂದಿಗೂ ನಿಮ್ಮ ಖಾಸಗಿ ಅಥವಾ ಗೌಪ್ಯ ವಿವರಗಳನ್ನು (PIN, OTP) ಕೇಳುವುದಿಲ್ಲ. phonepe.com ಡೊಮೇನ್‌ನಿಂದಲ್ಲದಿದ್ದರೆ PhonePe ನಿಂದ ಬಂದಿದೆ ಎಂದು ಹೇಳಿಕೊಳ್ಳುವ ಯಾವುದೇ ಇ-ಮೇಲ್ ಬಂದರೆ ಅದನ್ನು ನಂಬಬೇಡಿ. ನಿಮಗೆ ಅನುಮಾನ ಬಂದರೆ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿ.
