Trust & Safety
PhonePe ಯಲ್ಲಿ ಬ್ಯುಸಿನೆಸ್ ನಡೆಸುತ್ತಿದ್ದೀರಾ?
PhonePe Regional|3 min read|16 July, 2020
ನಿಮ್ಮ ಗಳಿಕೆಯನ್ನು ಸುರಕ್ಷಿತವಾಗಿರಿಸಿಕೊಳ್ಳಿ. ವ್ಯಾಪಾರಿ ವಂಚನೆಗಳ ಬಗ್ಗೆ ಎಚ್ಚರದಿಂದಿರಿ.
ಡಿಜಿಟಲ್ ಪೇಮೆಂಟ್ ವಿಧಾನಗಳ ಬಳಕೆ ಹೆಚ್ಚಾದಂತೆ, ಅದು ಜನಜೀವನವನ್ನು ಬಹಳಷ್ಟು ಸುಧಾರಿಸಿದೆ. ಜನರು ಡಿಜಿಟಲ್ ಪೇಮೆಂಟ್ ಆ್ಯಪ್‌ಗಳ ಮೂಲಕ ಹಣವನ್ನು ಕಳಿಸುವುದು, ಪಡೆಯುವುದು, ಬಿಲ್ ಪಾವತಿ, ಮೊಬೈಲ್ / DTH ಇತ್ಯಾದಿಗಳ ರೀಚಾರ್ಜ್ ಮಾಡುವುದು, ಆನ್‌ಲೈನ್ ಶಾಪಿಂಗ್ ಮತ್ತು ಸ್ಥಳೀಯ ಕಿರಾಣಿ ಅಂಗಡಿಗಳಲ್ಲಿ ಕೂಡಾ ಡಿಜಿಟಲ್ ಪೇಮೆಂಟ್ ಮಾಡುತ್ತಿರುವುದರಿಂದಾಗಿ, ನಗದು ಹಣದ ಬಳಕೆ ಬಹಳಷ್ಟು ಕಡಿಮೆಯಾಗಿದೆ.
ಡಿಜಿಟಲ್ ಪೇಮೆಂಟ್ ನಮಗೆಲ್ಲಾ ಅತಿದೊಡ್ಡ ವರದಾನವಾಗಿದ್ದರೂ, ಅದನ್ನು ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿರುತ್ತಾರೆ ಮತ್ತು ಗ್ರಾಹಕರನ್ನು ಮಾತ್ರವಲ್ಲದೆ ಸಣ್ಣ ವ್ಯಾಪಾರಿಗಳನ್ನೂ ಕೂಡಾ ವಂಚಿಸಲು ಹೊಸ ಮಾರ್ಗಗಳಿಗಾಗಿ ನಿರಂತರ ಹುಡುಕುತ್ತಿರುತ್ತಾರೆ.
ಈ ಕೆಳಗೆ ಕೆಲವು ಸನ್ನಿವೇಶಗಳನ್ನು ನೀಡಲಾಗಿದ್ದು, ಅವುಗಳಲ್ಲಿ ವಂಚಕರು ಹೇಗೆ ಕಿರಾಣಿ ವ್ಯಾಪಾರಿಗಳನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡು ತಮ್ಮ ಮೋಸದ ಚಟುವಟಿಕೆಗಳನ್ನು ನಡೆಸುತ್ತಾರೆ ಎಂಬುದನ್ನು ವಿವರಿಸಲಾಗುತ್ತದೆ.
ಸ್ಕ್ರೀನ್-ಶೇರಿಂಗ್ ಆ್ಯಪ್‌ಗಳ ಮೂಲಕ ವಂಚನೆಗಳು
ಇದರಲ್ಲಿ, ವಂಚಕ ತಾನು ಪೇಮೆಂಟ್ ಕಂಪನಿಯ ಪ್ರತಿನಿಧಿಯೆಂಬಂತೆ ಕರೆ ಮಾಡಿ ವ್ಯಾಪಾರಿಯ ದೈನಂದಿನ ಮಾರಾಟವನ್ನು ಪರಿಶೀಲಿಸುವ ನೆಪವೊಡ್ಡಿ, ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ. ಮಾತನಾಡುತ್ತಾ, ಆತ ವ್ಯಾಪಾರಿಯ ಕಾರ್ಡ್ ಅಥವಾ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯಲು ಪ್ರಯತ್ನ ಮಾಡುತ್ತಾನೆ, ಅಥವಾ ವ್ಯಾಪಾರಿಯ ಫೋನ್ ಮೇಲೆ ನಿಯಂತ್ರಣ ಪಡೆದುಕೊಳ್ಳುತ್ತಾನೆ. ಅಷ್ಟು ಸಿಕ್ಕಮೇಲೆ, ಆತ ಮೋಸದ ವಹಿವಾಟು ಮಾಡಿ ವ್ಯಾಪಾರಿಯನ್ನು ವಂಚಿಸುತ್ತಾನೆ.
ಉದಾಹರಣೆ:-
ವಂಚಕ: ನಾನು ಸೇಲ್ಸ್ ಸಪೋರ್ಟ್ ಟೀಮ್‌ನಿಂದ ಕರೆ ಮಾಡುತ್ತಿದ್ದೇನೆ, ಕೆಲವು ತಾಂತ್ರಿಕ ದೋಷಗಳಿಂದಾಗಿ, ಕಳೆದ ಕೆಲವು ದಿನಗಳಲ್ಲಿ ನಿಮ್ಮ ಗ್ರಾಹಕರು ಮಾಡಿದ ವಹಿವಾಟುಗಳನ್ನು ದಾಖಲಿಸಲು ನಮಗೆ ಸಾಧ್ಯವಾಗಲಿಲ್ಲ. ಈ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ನಿಮ್ಮ ಸಮಸ್ಯೆಯನ್ನು ಪರಿಹರಿಸಲು ನಿಮಗೆ ಸಹಾಯ ಮಾಡಲು ನಾನು ಕರೆ ಮಾಡಿದ್ದೇನೆ. ನೀವು ಈ ಕೆಳಗಿನವುಗಳನ್ನು ಮಾಡಬೇಕಾಗುತ್ತದೆ:
- ನಿಮ್ಮ ಬ್ಯಾಂಕ್ ಖಾತೆ / ಡೆಬಿಟ್ / ಕ್ರೆಡಿಟ್ ಕಾರ್ಡ್ ವಿವರಗಳು / BHIM UPI ಪಿನ್ ಅನ್ನು ನಮಗೆ ಕಳುಹಿಸಿ
- ನಿಮ್ಮ ಸಮಸ್ಯೆಯನ್ನು ಪರಿಹರಿಸಲು ನೀವು ಈ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಬೇಕಾಗಿದೆ. ಅದಕ್ಕಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ. <ವಂಚಕ ನಿಮಗೆ Anydesk / ScreenShare ನಂತಹ ಸ್ಕ್ರೀನ್-ಶೇರಿಂಗ್ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಲು ಲಿಂಕ್ ಅನ್ನು ಕಳುಹಿಸುತ್ತಾನೆ>.
ವ್ಯಾಪಾರಿಯು ಆ ವಂಚಕನ ಮಾತನ್ನು ನಂಬಿ, ಕೇಳಿದ ವಿವರಗಳನ್ನು ಆತನಿಗೆ ಕೊಡುತ್ತಾರೆ ಮತ್ತು ಅವನು ಹೇಳಿದ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ. ವ್ಯಾಪಾರಿ ಆ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡ ತಕ್ಷಣ, ವಂಚಕನು ವ್ಯಾಪಾರಿಯ ಫೋನ್ ಮೇಲೆ ನಿಯಂತ್ರಣವನ್ನು ಸಾಧಿಸುತ್ತಾನೆ ಮತ್ತು ವ್ಯಾಪಾರಿಯ ಹಣವನ್ನು ಕದಿಯುತ್ತಾನೆ.
ಕ್ಯಾಶ್‌ಬ್ಯಾಕ್ ಅಥವಾ ಆಫರ್ ಸ್ಕೀಮ್ ವಂಚನೆಗಳು
ಕೆಲವೊಮ್ಮೆ ವ್ಯಾಪಾರಿಗಳಿಗೆ ಅವರ ಪೇಮೆಂಟ್ ಪಾರ್ಟ್‌ನರ್ ಸಂಸ್ಥೆಯ ವ್ಯಾಪಾರಿ ಪ್ರತಿನಿಧಿಗಳೆಂದು ಹೇಳಿಕೊಂಡು ಕೂಡಾ ವಂಚಕರು ಕರೆಗಳನ್ನು ಮಾಡುವ ಉದಾಹರಣೆಗಳಿವೆ. ವಂಚಕರು ತಮ್ಮಲ್ಲಿ ಆಕರ್ಷಕ ಕ್ಯಾಶ್‌ಬ್ಯಾಕ್ ಕೊಡುಗೆಗಳಿವೆ ಎಂದು ಹೇಳಿ ವ್ಯಾಪಾರಿಗಳನ್ನು ದಾರಿ ತಪ್ಪಿಸುವ ಉದ್ದೇಶದಿಂದ ಈ ಕರೆಯನ್ನು ಮಾಡುತ್ತಾರೆ.
ದೃಶ್ಯ 1
ವಂಚಕ: ನಾನು ಮರ್ಚಂಟ್ ಸಪೋರ್ಟ್ ಟೀಮ್‌ನಿಂದ ಕರೆ ಮಾಡುತ್ತಿದ್ದೇನೆ. ಈ ವಾರ ನಮ್ಮಲ್ಲಿ ವಿಶೇಷ ಕ್ಯಾಶ್‌ಬ್ಯಾಕ್ ಯೋಜನೆ ನಡೆಯುತ್ತಿದೆ. ಈ ಲಿಂಕ್‌ಗೆ ಪಾವತಿ ಮಾಡಿ ಮತ್ತು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕ್ಯಾಶ್‌ಬ್ಯಾಕ್ ಮೊತ್ತವನ್ನು ಪಡೆಯಿರಿ.
- ₹500 ಪಾವತಿ ಮಾಡಿ ಮತ್ತು ₹1000 ಕ್ಯಾಶ್‌ಬ್ಯಾಕ್ ಪಡೆಯಿರಿ
- ₹10,000 ಪಾವತಿ ಮಾಡಿ ಮತ್ತು ₹15,000 ಕ್ಯಾಶ್‌ಬ್ಯಾಕ್ ಪಡೆಯಿರಿ
ವ್ಯಾಪಾರಿ ಆ ವಂಚಕನ ಮಾತನ್ನು ನಂಬಿ, 1ನೇ ವಹಿವಾಟು ನಡೆಸುತ್ತಾರೆ ಮತ್ತು ವಂಚಕನಿಂದ ₹1000 ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ನಂತರ, ಆ ವಂಚಕ ದೊಡ್ಡ ಮೊತ್ತವನ್ನು ವರ್ಗಾಯಿಸಲು ವ್ಯಾಪಾರಿಗೆ ತಿಳಿಸುತ್ತಾನೆ. ದೊಡ್ಡ ಕ್ಯಾಶ್‌ಬ್ಯಾಕ್ ಪಡೆಯುವ ಭರವಸೆಯಲ್ಲಿ, ವ್ಯಾಪಾರಿ ₹10,000 ಅನ್ನು ವರ್ಗಾಯಿಸಿದಾಗ, ವಂಚಕನು ಕರೆಯನ್ನು ಕಡಿತಗೊಳಿಸಿ ಕಣ್ಮರೆಯಾಗುತ್ತಾನೆ.
ದೃಶ್ಯ 2
ವಂಚಕರು ವಿಶೇಷ ಕೊಡುಗೆಗಳು ಅಥವಾ ಯೋಜನೆಗಳು ಇವೆ ಎಂದು ಹೇಳಿ ವ್ಯಾಪಾರಿಗಳಿಗೆ ಕರೆ ಮಾಡುತ್ತಾರೆ ಮತ್ತು QR ಕೋಡ್ ಬಳಸಿ ಅವರ ಹಣವನ್ನು ವಂಚಿಸುತ್ತಾರೆ.
ಉದಾಹರಣೆ:
ವಂಚಕ — ಈ ವಾರ ನಮ್ಮಲ್ಲಿ ವಿಶೇಷ ಕ್ಯಾಶ್‌ಬ್ಯಾಕ್ ಯೋಜನೆ ನಡೆಯುತ್ತಿದೆ. ನಾವು ನಿಮಗೆ ಕಳುಹಿಸುವ QR ಕೋಡ್ ಮೂಲಕ ಪೇಮೆಂಟ್ ಮಾಡಿ ಮತ್ತು ನಿಮ್ಮ ಹಣವನ್ನು ದ್ವಿಗುಣಗೊಳಿಸಿಕೊಳ್ಳಿ.
- ₹100 ರ ವಹಿವಾಟಿಗೆ, ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ₹200 ಕ್ಯಾಶ್‌ಬ್ಯಾಕ್ ಕಳಿಸಲಾಗುತ್ತದೆ.
- ₹10,000 ದ ವಹಿವಾಟಿಗೆ, ನೀವು ಬಂಪರ್ ₹20,000 ಕ್ಯಾಶ್‌ಬ್ಯಾಕ್ ಅನ್ನು ಪಡೆಯುತ್ತೀರಿ ಮತ್ತು ಅದನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈಗಲೇ ಪ್ರಯತ್ನಿಸಿ!
ವ್ಯಾಪಾರಿಗೆ ಈ ಆಫರ್ ಇಷ್ಟವಾಗುತ್ತದೆ. ಆದ್ದರಿಂದ ವ್ಯಾಪಾರಿಯು ವಂಚಕರು ಕಳುಹಿಸಿದ QR ಕೋಡ್ ಮೂಲಕ ₹100 ವಹಿವಾಟು ನಡೆಸುತ್ತಾರೆ ಮತ್ತು ₹200 ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಅನಂತರ ದೊಡ್ಡ ಮೊತ್ತವನ್ನು ವ್ಯಾಪಾರಿ ಪಾವತಿಸಿದ ತಕ್ಷಣ, ವಂಚಕನು ಕರೆಯನ್ನು ಸಂಪರ್ಕ ಕಡಿತಗೊಳಿಸುತ್ತಾನೆ ಮತ್ತು ಹಣವನ್ನು ಹಿಂದಕ್ಕೆ ಕಳಿಸದೆ ಮಾಯವಾಗುತ್ತಾನೆ.
Google Forms ಮೂಲಕ ವಂಚನೆ
ಇಲ್ಲಿ, ವಂಚಕರು ವಿಭಿನ್ನ ಕಾರಣಗಳನ್ನು ನೀಡಿ ವ್ಯಾಪಾರಿಗಳಿಗೆ ಗೂಗಲ್ ಫಾರ್ಮ್ ಕಳಿಸಿ, ವ್ಯಾಪಾರಿಗಳಿಗೆ ಅವುಗಳನ್ನು ತುಂಬುವಂತೆ ಹೇಳುತ್ತಾರೆ. ಆ ವಿವರಗಳನ್ನು ಪಡೆದುಕೊಂಡ ನಂತರ ವ್ಯಾಪಾರಿಗಳ ಹಣವನ್ನು ಕದಿಯುತ್ತಾರೆ.
ಉದಾಹರಣೆ:
ವಂಚಕ: ನಾನು ಮರ್ಚಂಟ್ ಟೀಮ್‌ನಿಂದ ಕರೆ ಮಾಡುತ್ತಿದ್ದು, ನಿಮ್ಮ ಕೆಲವು ವಿವರಗಳನ್ನು ನಮ್ಮ ಸಿಸ್ಟಂನಲ್ಲಿ ಅಪ್‌ಡೇಟ್ ಮಾಡಲಾಗಿಲ್ಲ. ಇದರಿಂದಾಗಿ ನಾವು ನಿಮ್ಮ ಖಾತೆಯನ್ನು ಕೆಲವು ದಿನಗಳವರೆಗೆ ಅಮಾನತು ಮಾಡಬೇಕಾಗಬಹುದು. ಇದನ್ನು ತಪ್ಪಿಸಲು, ದಯವಿಟ್ಟು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ವಿವರಗಳನ್ನು Google ಫಾರ್ಮ್‌ನಲ್ಲಿ ತುಂಬಿರಿ.
ವ್ಯಾಪಾರಿ ಆ ವಂಚಕನ ಮಾತುಗಳನ್ನು ನಂಬಿಬಿಡುತ್ತಾರೆ ಮತ್ತು ಫಾರ್ಮ್‌ನಲ್ಲಿ ತಮ್ಮ ಖಾತೆ ಸಂಖ್ಯೆ, BHIM UPI ಪಿನ್, ನೋಂದಾಯಿತ ಮೊಬೈಲ್ ನಂಬರ್, ಹೆಸರು, ಇಮೇಲ್ ಐಡಿ ಮುಂತಾದ ವೈಯಕ್ತಿಕ / ಸೂಕ್ಷ್ಮ ಮಾಹಿತಿಯನ್ನು ಭರ್ತಿ ಮಾಡುತ್ತಾರೆ. ಅನಂತರ, ಆ ವಂಚಕ ಈ ವ್ಯಾಪಾರಿ ತುಂಬಿದ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಾನೆ ಮತ್ತು ಹಣ ಕದಿಯುತ್ತಾನೆ.
ನೆನಪಿಡಬೇಕಾದ ಅಂಶಗಳು:
- ಯಾವತ್ತೂ ನಿಮ್ಮ ಪಿನ್‌ಗಳು ಮತ್ತು OTP ಗಳನ್ನು ಯಾರಿಗೂ ನೀಡಬೇಡಿ, ಮತ್ತು ಅಪರಿಚಿತರು ಕಳಿಸುವ ಹಣದ ಕೋರಿಕೆಯನ್ನು ಸ್ವೀಕರಿಸಬೇಡಿ.
- ಅಜ್ಞಾತ ಮೂಲದಿಂದ ಬರುವ ಹಣಕ್ಕಾಗಿನ ಕೋರಿಕೆಯನ್ನು ಸ್ವೀಕರಿಸಬೇಡಿ / ಪಾವತಿಸಬೇಡಿ ಅಥವಾ ಅಂಥವರಿಗೆ ಹಣ ಕಳಿಸಬೇಡಿ.
- ಅಪರಿಚಿತರು ಉಚಿತ ಕೊಡುಗೆ ಅಥವಾ ಆಕರ್ಷಕ ಕ್ಯಾಶ್‌ಬ್ಯಾಕ್‌ಗಾಗಿ ಮಾಡುವ ಕರೆಗಳಿಗೆ ಉತ್ತರಿಸಬೇಡಿ.
- ಯಾವುದೇ ಫಾರ್ಮ್‌ನಲ್ಲಿ ನಿಮ್ಮ ಬ್ಯಾಂಕ್ ವಿವರಗಳು, ಪಿನ್ ಇತ್ಯಾದಿಗಳಂತಹ ಸೂಕ್ಷ್ಮ ಮಾಹಿತಿಯನ್ನು ಯಾವತ್ತೂ ತುಂಬಬೇಡಿ.
- ಯಾವುದೇ ಅಪರಿಚಿತ ವ್ಯಕ್ತಿ / ವ್ಯಾಪಾರಿ ಹಣಕ್ಕಾಗಿ ಕೋರಿಕೆ ಸಲ್ಲಿಸಿದಾಗ ಅಥವಾ ಅಂಥವವರಿಗೆ ಹಣ ಕಳಿಸುವ ಮೊದಲು, ಮೊದಲು ಅವರ ಕುರಿತಾದ ವಿವರಗಳನ್ನು ಪರಿಶೀಲಿಸಿ
- ಹಣವನ್ನು ಸ್ವೀಕರಿಸುವ ಸಂದರ್ಭ್ದಲ್ಲಿ ನಿಮ್ಮ UPI ಪಿನ್ ಅನ್ನು ನಮೂದಿಸಬೇಡಿ.
- ವಂಚಕರು ದುರುಪಯೋಗಪಡಿಸಿಕೊಳ್ಳಬಹುದಾದ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಟ್ವಿಟರ್, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮದಲ್ಲಿ ಎಂದಿಗೂ ಹಂಚಿಕೊಳ್ಳಬೇಡಿ.
- ಒಂದು ವೇಳೆ ಅಪರಿಚಿತರು ಹಣಕ್ಕಾಗಿ ಮಾಡಿದ ಕೋರಿಕೆಯನ್ನು ನೀವು ಸ್ವೀಕರಿಸಿದ್ದು, ನಿಮ್ಮ ಹಣ ಡೆಬಿಟ್ ಆಗಿದ್ದಲ್ಲಿ, ತಕ್ಷಣ ಅದನ್ನು ಸೈಬರ್ ಸೆಲ್ / ಬ್ಯಾಂಕ್‌ಗೆ ವರದಿ ಮಾಡಿ.
- ದಯವಿಟ್ಟು PhonePe ಆ್ಯಪ್‌ನಲ್ಲಿ ಆ ಹಣ ಸ್ವೀಕರಿಸುವವರ ಖಾತೆಯನ್ನು ತಕ್ಷಣ ನಿರ್ಬಂಧಿಸಿ.
- ಯಾವುದೇ ಮೋಸದ ವಹಿವಾಟನ್ನು PhonePe ಆ್ಯಪ್‌ನಲ್ಲಿ ವರದಿ ಮಾಡಿ. ಆ್ಯಪ್‌ನಲ್ಲಿ ‘ವಂಚನೆಯ ಕುರಿತು ವರದಿ ಮಾಡಿ’ ಕ್ಲಿಕ್ ಮಾಡಿ ಮತ್ತು ನಂತರ “PhonePe ಸಹಾಯ ವಿಭಾಗವನ್ನು ಸಂಪರ್ಕಿಸಿ” ಆಯ್ಕೆಮಾಡಿ, ವರದಿ ಮಾಡಿ.