Trust & Safety
SMS ವಂಚನೆಯಂತಹ ಮೋಸದ ಗುರುತುಗಳ ಗಮನಿಸುವಿಕೆ
PhonePe Regional|2 min read|24 July, 2023
ನಾವು ಇಂದು ಬದಲಾಗುತ್ತಿರುವ ಕಾಲದಲ್ಲಿ ಬದುಕುತ್ತಿದ್ದೇವೆ. ಇಂದು ನಮ್ಮ ಜೀವನದ ಪ್ರತಿಯೊಂದು ಅಂಶವೂ ಡಿಜಿಟಲ್ ಆಗಿ ಮಾರ್ಪಟ್ಟಿದೆ. ದಿನಸಿ ಮತ್ತು ತಾಜಾ ಆಹಾರವನ್ನು ಕೆಲವೇ ನಿಮಿಷಗಳಲ್ಲಿ ಡೆಲಿವರಿ ಮಾಡಲಾಗುತ್ತದೆ ಮತ್ತು ಪಾವತಿಗಳು ಮತ್ತು ಬ್ಯಾಂಕಿಂಗ್‌ನಂತಹ ಕೆಲಸಗಳು ಕೆಲವೇ ಕ್ಲಿಕ್‌ಗಳಲ್ಲಿ ನಡೆಯುತ್ತವೆ. ಆದರೂ, ಅನುಕೂಲವು ಕೆಲವು ಅಪಾಯಗಳನ್ನು ತರುತ್ತದೆ, ಆದ್ದರಿಂದ ನಾವು ಮೋಸಗಳಿಗೆ ಬಲಿಯಾಗದಂತೆ ಜಾಗರೂಕರಾಗಿರಬೇಕು.
ಮುಗ್ಧರನ್ನು ವಂಚಿಸಿ, ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ದೋಚಲು ಮೋಸಗಾರರು ನಿರಂತರವಾಗಿ ಹೊಸ ವಿಧಾನಗಳನ್ನು ರಚಿಸುತ್ತಿರುತ್ತಾರೆ. ಇತ್ತೀಚಿಗೆ SMS ಮಾದರಿಯ ಮೂಲಕ ವಂಚಿಸುತ್ತಿದ್ದಾರೆ. ಇದರಿಂದ ವಂಚಕರು ನಿಮ್ಮ UPI ಖಾತೆಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.
SMS ವಂಚನೆ ಎಂದರೇನು?
ನೀವು ಯಾವುದೇ UPI ಆ್ಯಪ್‌ನಲ್ಲಿ ಖಾತೆಯನ್ನು ರಚಿಸಿದಾಗ, ಅದನ್ನು SMS ಸಹಾಯದಿಂದ ದೃಢೀಕರಿಸಲಾಗುತ್ತದೆ. ದೃಢೀಕರಣದ ನಂತರ, UPI ಖಾತೆಯನ್ನು ನಿಮ್ಮ ಸಾಧನಕ್ಕೆ ಲಿಂಕ್ ಮಾಡಲಾಗಿರುತ್ತದೆ. ಇದನ್ನು ಡಿವೈಸ್ ಬೈಂಡಿಂಗ್ ಎಂದು ಕರೆಯಲಾಗುತ್ತದೆ. ಡಿವೈಸ್ ಬೈಂಡಿಂಗ್ ಸಂದೇಶವನ್ನು ಫಾರ್ವರ್ಡ್ ಮಾಡಲು SMS ಫಾರ್ವರ್ಡ್ ಮಾಡುವ ಆ್ಯಪ್‌ಗಳನ್ನು ಬಳಸಿಕೊಂಡು ವಂಚಕರು ಈಗ ಅಮಾಯಕರ UPI ಖಾತೆಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ಇದನ್ನು ಅನೇಕ ವಿಧಗಳಲ್ಲಿ ಮಾಡುತ್ತಾರೆ — ಇತ್ತೀಚೆಗೆ ಗಮನಿಸಿದ ಒಂದು ಸಾಮಾನ್ಯ ವಿಧಾನವೆಂದರೆ, ನಿಮ್ಮ ಸಾಧನಕ್ಕೆ ಮಾಲ್‌ವೇರ್ ಕಳುಹಿಸಲಾಗುತ್ತದೆ. ಇದರಿಂದ ಬೈಂಡಿಂಗ್ ಸಂದೇಶವು ವರ್ಚುವಲ್ ಮೊಬೈಲ್ ಸಂಖ್ಯೆಗೆ ಫಾರ್ವರ್ಡ್ ಆಗುತ್ತದೆ.
SMS ವಂಚನೆಯು ಹೇಗೆ ಉಂಟಾಗುತ್ತದೆ?
- ವಂಚಕರು ಆಸ್ಪತ್ರೆ, ಕೊರಿಯರ್, ರೆಸ್ಟೋರೆಂಟ್ ಇತ್ಯಾದಿಗಳ ಹೆಸರಿನಲ್ಲಿ ರಚಿಸಲಾದ ವಾಟ್ಸಾಪ್ ಖಾತೆಗಳ ಮೂಲಕ ದುರುದ್ದೇಶಪೂರಿತ ಫೈಲ್‌ಗಳನ್ನು ಸಂಭಾವ್ಯ ಅಮಾಯಕರಿಗೆ ಕಳುಹಿಸುತ್ತಾರೆ.
- ಅಮಾಯಕ ವ್ಯಕ್ತಿಯು ಈ ದುರುದ್ದೇಶಿತ ಲಿಂಕ್ ಅನ್ನು ಒಮ್ಮೆ ಕ್ಲಿಕ್ ಮಾಡಿದರೆ, ಅಂತಹ ವಂಚನೆಗಳ ಸಂದರ್ಭದಲ್ಲಿ, ವರ್ಚುವಲ್ ಮೊಬೈಲ್ ಸಂಖ್ಯೆಯಾಗಿರುವ ಬ್ಯಾಂಕ್‌ನ ನೋಂದಣಿ ಸಂಖ್ಯೆಗೆ SMS ಗಳನ್ನು ಫಾರ್ವರ್ಡ್ ಮಾಡಲು ಮಾಲ್‌ವೇರ್ ಅನ್ನು ಅವರ ಸಾಧನದಲ್ಲಿ ಹಾರ್ಡ್‌ಕೋಡ್ ಮಾಡಲಾಗುತ್ತದೆ.
- ನಂತರ, ವಂಚಕರು UPI ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ. ಡಿವೈಸ್ ಬೈಂಡಿಂಗ್ SMS ಅನ್ನು ಅಮಾಯಕರಿಗೆ ಕಳುಹಿಸಲಾಗುತ್ತದೆ, ಇದು ನೋಂದಣಿಯನ್ನು ಪ್ರಾರಂಭಿಸಲು ಬ್ಯಾಂಕ್‌ಗೆ ದುರುದ್ದೇಶಪೂರಿತ ಆ್ಯಪ್‌ನಿಂದ ಫಾರ್ವರ್ಡ್ ಆಗುತ್ತದೆ.
- ವಂಚಕರು ನಂತರ UPI ನೋಂದಣಿಯನ್ನು ವರ್ಚುವಲ್ ಸಂಖ್ಯೆಯ ಮೂಲಕ ದೃಢೀಕರಿಸುತ್ತಾರೆ, ಅಮಾಯಕರ UPI ಖಾತೆಯನ್ನು ಅವರ ಫೋನ್‌ಗೆ ಬೈಂಡಿಂಗ್ ಮಾಡುತ್ತಾರೆ.
- ವಹಿವಾಟುಗಳನ್ನು ನಡೆಸುವ ಉದ್ದೇಶದಿಂದ, ವಂಚಕರು ‘MPIN’ ಅನ್ನು ಪಡೆಯುವುದಕ್ಕಾಗಿ ಮತ್ತು ಅನಧಿಕೃತ UPI ವಹಿವಾಟುಗಳನ್ನು ನಿರ್ವಹಿಸುವುದಕ್ಕಾಗಿ ಸೋಶಿಯಲ್ ಎಂಜಿನಿಯರಿಂಗ್ ತಂತ್ರಗಳನ್ನು ಬಳಸುತ್ತಾರೆ.
ಆದ್ದರಿಂದ, ನಿಮ್ಮ ಖಾತೆ ಮತ್ತು ಹಣವನ್ನು ಸುರಕ್ಷಿತವಾಗಿರಿಸಲು ನೀವು ಯಾವುದೇ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬಾರದು ಎಂದು ಖಚಿತವಾಗಿರಬೇಕು.
ಭದ್ರತೆಯ ವಿಷಯಕ್ಕೆ ಬಂದರೆ, PhonePe ನಿಮ್ಮನ್ನು ಸುರಕ್ಷಿತವಾಗಿರಿಸಿದೆ. ಯಾವುದೇ ವಹಿವಾಟು ವೈಫಲ್ಯಗಳಿಲ್ಲದೆ ಪ್ರತಿದಿನವೂ ಕೋಟಿಗಟ್ಟಲೆ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ. ಟ್ರಿಪಲ್-ಲೇಯರ್ ಭದ್ರತೆಯನ್ನು ಒಳಗೊಂಡಿದೆ:
- ಲಾಗಿನ್ ಪಾಸ್‌ವರ್ಡ್: ಆ್ಯಪ್ ಭದ್ರತೆಯ ಮೊದಲ ಲೇಯರ್ ಲಾಗಿನ್ ಪಾಸ್‌ವರ್ಡ್ ಆಗಿರುತ್ತದೆ.
- PhonePe ಆ್ಯಪ್ ಲಾಕ್: PhonePe ಆ್ಯಪ್ ಬಳಕೆಯನ್ನು ಪ್ರಾರಂಭಿಸಲು, ನಿಮ್ಮ ಫಿಂಗರ್‌ಪ್ರಿಂಟ್ ಐಡಿ, ಫೇಸ್ ಐಡಿ ಅಥವಾ ನಂಬರ್ ಲಾಕ್ ಅನ್ನು ಬಳಸಿಕೊಂಡು ನೀವು ಅದನ್ನು ಅನ್‌ಲಾಕ್ ಮಾಡಬೇಕಾಗುತ್ತದೆ.
- UPI ಪಿನ್: PhonePe ನಲ್ಲಿ ಪ್ರತಿ ಪಾವತಿಗೆ, ಅಂದರೆ ಅದು ರೂ.1 ಅಥವಾ ರೂ. 1 ಲಕ್ಷ ಆಗಿರಬಹುದು. UPI ಪಿನ್ ಇಲ್ಲದೆ ಯಾವುದೇ ಪಾವತಿಯನ್ನು ಮಾಡಲಾಗುವುದಿಲ್ಲ.
PhonePe, ಹೀಗೆ, ಎಲ್ಲ ಪಾವತಿಗಳನ್ನು ಸುರಕ್ಷಿತವಾಗಿರಿಸಲು ಮತ್ತು ಭಧ್ರವಾಗಿರಿಸಲು ಸದಾ ಮುಂದಿರುತ್ತದೆ.
SMS ವಂಚನೆ ಹಗರಣಗಳನ್ನು ತಪ್ಪಿಸುವುದು ಹೇಗೆ
- ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ, ಅದರ ಜೊತೆಗೆ ಬರುವ ಮಾಲ್‌ವೇರ್ ನಿಮ್ಮ ಫೋನ್‌ನಲ್ಲಿರುವ ಆ್ಯಪ್‌ಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ.
- PhonePe ಅಧಿಕಾರಿಗಳು ಸೇರಿದಂತೆ ಯಾರೊಂದಿಗೂ ಕ್ರೆಡಿಟ್/ಡೆಬಿಟ್ ಕಾರ್ಡ್ ಸಂಖ್ಯೆ, ಕಾರ್ಡ್ ಮುಕ್ತಾಯ ದಿನಾಂಕ, CVV, OTP, ಇತ್ಯಾದಿಗಳಂತಹ ಗೌಪ್ಯ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬೇಡಿ.
- ಅಂತಿಮವಾಗಿ, ವರದಿ ಮಾಡಿ ಮತ್ತು ಬ್ಲಾಕ್ ಮಾಡಿ. ಈ ಸಂಖ್ಯೆಗಳನ್ನು ವರದಿ ಮಾಡುವುದು ಮತ್ತು ಬ್ಲಾಕ್ ಮಾಡುವುದು ಉತ್ತಮ.
ವಂಚಕರು ನಿಮ್ಮ UPI ಖಾತೆಯ ನೋಂದಣಿಯನ್ನು ಪ್ರಾರಂಭಿಸಲು ಪ್ರಯತ್ನಿಸಿದರೆ ನೀವು ಏನು ಮಾಡಬೇಕು?
PhonePe ಅಪ್ಲಿಕೇಶನ್‌ನಲ್ಲಿ ನೀವು ಸ್ಕ್ಯಾಮರ್‌ನಿಂದ ವಂಚನೆಗೆ ಒಳಗಾದರೆ, ನೀವು ತಕ್ಷಣ ಈ ಕೆಳಗಿನ ವಿಧಾನಗಳ ಮೂಲಕ ಸಮಸ್ಯೆಯನ್ನು ತಿಳಿಸಬಹುದು:
- PhonePe ಗ್ರಾಹಕ ಸೇವೆ ಸಂಖ್ಯೆ: ಸಮಸ್ಯೆಯನ್ನು ಸಲ್ಲಿಸಲು ನೀವು PhonePe ಗ್ರಾಹಕ ಸೇವೆಯ 80–68727374 / 022–68727374 ಸಂಖ್ಯೆಗೆ ಕರೆ ಮಾಡಬಹುದು, ನಂತರ ಗ್ರಾಹಕ ಸೇವಾ ಏಜೆಂಟ್ ಟಿಕೆಟ್ ಸಲ್ಲಿಸುತ್ತಾರೆ ಮತ್ತು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತಾರೆ.
- ವೆಬ್‌ಫಾರ್ಮ್ ಸಲ್ಲಿಕೆ: ನೀವು PhonePe ನ ವೆಬ್‌ಫಾರ್ಮ್ ಅನ್ನು ಬಳಸಿಕೊಂಡು ಟಿಕೆಟ್ ಅನ್ನು ಸಲ್ಲಿಸಬಹುದು, https://support.phonepe.com/ ಮತ್ತು “ನಾನು PhonePe ನಲ್ಲಿ UPI ಪಾವತಿಗಳ ನೋಂದಣಿಯನ್ನು ಪ್ರಾರಂಭಿಸಿಲ್ಲ” ಎಂಬುದನ್ನು ಆಯ್ಕೆ ಮಾಡಿ.
- ಸಾಮಾಜಿಕ ಮಾಧ್ಯಮ: ನೀವು PhonePe ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಮೋಸದ ಘಟನೆಗಳನ್ನು ವರದಿ ಮಾಡಬಹುದು
- ಕುಂದುಕೊರತೆ: ಅಸ್ತಿತ್ವದಲ್ಲಿರುವ ದೂರಿನ ಮೇಲಿನ ಕುಂದುಕೊರತೆಯನ್ನು ವರದಿ ಮಾಡಲು, ನೀವು https://grievance.phonepe.com/ ಗೆ ಲಾಗಿನ್ ಮಾಡಬಹುದು ಮತ್ತು ಈ ಹಿಂದೆ ಸಲ್ಲಿಸಿರುವ ಟಿಕೆಟ್ ಐಡಿಯನ್ನು ಹಂಚಿಕೊಳ್ಳಬಹುದು.
- ಸೈಬರ್ ಸೆಲ್: ಅಂತಿಮವಾಗಿ, ನೀವು ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ವಂಚನೆ ದೂರುಗಳನ್ನು ವರದಿ ಮಾಡಬಹುದು ಅಥವಾ https://www.cybercrime.gov.in/ ಮೂಲಕ ಆನ್‌ಲೈನ್‌ನಲ್ಲಿ ದೂರನ್ನು ನೋಂದಾಯಿಸಬಹುದು ಅಥವಾ 1930 ಮೂಲಕ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಪ್ರಮುಖ ರಿಮೈಂಡರ್ — PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. pPhonepe.com ಡೊಮೇನ್‌ನಿಂದ ಅಲ್ಲದಿದ್ದರೂ PhonePe ನಿಂದ ಎಂದು ಹೇಳಿಕೊಳ್ಳುವ ಎಲ್ಲ ಮೇಲ್‌ಗಳನ್ನು ನಿರ್ಲಕ್ಷಿಸಿ. ನಿಮಗೆ ವಂಚನೆಯ ಕುರಿತು ಅನುಮಾನ ಮೂಡಿದರೆ ದಯವಿಟ್ಟು ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿ.
—