PhonePe Blogs Main Featured Image

Trust & Safety

ಕ್ಯಾಶ್‌ಬ್ಯಾಕ್ ಮೋಸಗಳಿಂದ ಎಚ್ಚರವಿರಿ!

PhonePe Regional|2 min read|26 April, 2021

URL copied to clipboard

PhonePe ಕಡೆಯಿಂದ ಎಂದು ಹೇಳಿಕೊಂಡು ಲಿಂಕ್ ಒಳಗೊಂಡಿರುವ ಒಂದು SMS ನಿಮಗೆ ಬರುತ್ತದೆ ಮತ್ತು ಇದನ್ನು ಕ್ಲಿಕ್ ಮಾಡುವ ಮೂಲಕ ಆಕರ್ಷಕ ಕ್ಯಾಶ್‌ಬ್ಯಾಕ್ ಪಡೆಯಿರಿ ಎಂದು ನಿಮ್ಮನ್ನು ಪ್ರೋತ್ಸಾಹಿಸಲಾಗಿರುತ್ತದೆ. ಈ ಲಿಂಕ್ ಅಧಿಕೃತವೋ ಹೇಗೆ ಅಥವಾ ಕ್ಲಿಕ್ ಮಾಡಿ ರಿವಾರ್ಡ್ ಪಡೆಯಬೇಕೋ ಬೇಡವೋ ಎಂಬ ಅನುಮಾನದಲ್ಲಿ ಇರುತ್ತೀರಿ. ಕಡೆಗೆ ಹಾಗೆ ಮಾಡುವುದರಿಂದ ಹಿಂದೆ ಸರಿಯುತ್ತೀರಿ. ಇದು ಉತ್ತಮ ನಿರ್ಧಾರವಾಗಿರುತ್ತದೆ!

ನೀವೇನಾದರೂ ಲಿಂಕ್ ಅನ್ನು ಕ್ಲಿಕ್ ಮಾಡಿ, ರಿವಾರ್ಡ್ ಪಡೆಯಲು ಹಂತಗಳನ್ನು ಅನುಸರಿಸಿದ್ದರೆ, ಬಳಕೆದಾರರನ್ನು ಮೋಸಗೊಳಿಸುವಂತಹ ಹೀನ ವಂಚಕರಿಗೆ ನಿಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಿರಿ. ಕ್ಯಾಶ್‌ಬ್ಯಾಕ್ ಸ್ವೀಕರಿಸಲು ನಿಮ್ಮ UPI PIN ಅನ್ನು ನಮೂದಿಸಿ ಎಂದು ಕೇಳುವ ಯಾವುದೇ ಸಂದೇಶವನ್ನು ನಿರ್ಲಕ್ಷಿಸಬೇಕು.

ಕ್ಯಾಶ್‌ಬ್ಯಾಕ್ ಆಫರ್‌ಗಳು ಮತ್ತು ಸ್ಕ್ರ್ಯಾಚ್ ಕಾರ್ಡ್‌ಗಳ ಮೂಲಕ ರಿವಾರ್ಡ್ ಗೆಲ್ಲಿರಿ ಎಂದು ಹೇಳುವ ಮೂಲಕ ಮೋಸಗಾರರು ಬಳಕೆದಾರರನ್ನು ಆಕರ್ಷಿಸುತ್ತಿದ್ದಾರೆ. ಕೆಲವರು ನಿಮಗೆ ಆಫರ್‌ಗಳ ನಕಲಿ ಲಿಂಕ್‌ಗಳನ್ನು ಕಳುಹಿಸಬಹುದು ಅಥವಾ ನಕಲಿ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಕ್ಯಾಶ್‌ಬ್ಯಾಕ್ ಸಂಬಂಧಿತ ಪೋಸ್ಟ್‌ಗಳನ್ನು ಸಹ ನೀವು ನೋಡಬಹುದು. ಆಫರ್ ನೈಜ ಎಂದು ನಿಮಗೆ ನಂಬಿಸುವ ಉದ್ದೇಶದಿಂದ, ಈ ಲಿಂಕ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪುಟಗಳನ್ನು PhonePe ನ ಅಧಿಕೃತ ವೆಬ್‌ಸೈಟ್ ಮತ್ತು ಲೋಗೊವನ್ನು ಹೋಲುವಂತೆ ಜಾಣತನದಿಂದ ವಿನ್ಯಾಸಗೊಳಿಸಲಾಗಿರುತ್ತದೆ. ನಿಮ್ಮ ಅಧಿಸೂಚನೆಗಳು / ಬೆಲ್ ಐಕಾನ್‌ನಲ್ಲಿ ಗೋಚರಿಸುವ ಪಾವತಿ ಲಿಂಕ್ ಅನ್ನು ಸ್ವೀಕರಿಸುವ ಮೂಲಕ PhonePe ಅಪ್ಲಿಕೇಶನ್‌ನಲ್ಲಿ ಕ್ಯಾಶ್‌ಬ್ಯಾಕ್ ಸ್ವೀಕರಿಸಲು ಕೆಲವು ಹಂತಗಳನ್ನು ಪೂರ್ಣಗೊಳಿಸಿ ಎಂದು ಕೇಳಿಕೊಂಡು ಕೆಲವು ವಂಚಕರು ನಿಮಗೆ ಕರೆ ಮಾಡಬಹುದು.

PhonePe ಕ್ಯಾಶ್‌ಬ್ಯಾಕ್ ಹೇಗೆ ಕೆಲಸ ಮಾಡುತ್ತದೆ?

  • PhonePe ಕ್ಯಾಶ್‌ಬ್ಯಾಕ್ ಅನ್ನು ತಂತಾನೇ ನಿಮ್ಮ ವಾಲೆಟ್‌ಗೆ ಕ್ರೆಡಿಟ್ ಮಾಡಲಾಗುತ್ತದೆ

ಕ್ಯಾಶ್‌ಬ್ಯಾಕ್ ಕ್ಲೈಮ್ ಮಾಡಲು ಅಥವಾ ಸ್ವೀಕರಿಸಲು ನಿಮ್ಮಿಂದ ಯಾವುದೇ ಹೆಚ್ಚುವರಿ ಕ್ರಮಗಳ ಅಗತ್ಯವಿಲ್ಲ. ಫೋನ್ ಕರೆಗಳು ಅಥವಾ ಲಿಂಕ್‌ಗಳ ಮೂಲಕ PhonePe ಕ್ಯಾಶ್‌ಬ್ಯಾಕ್ ಅಥವಾ ಬಹುಮಾನಗಳನ್ನು ನೀಡುವುದಿಲ್ಲ. ಕ್ಯಾಶ್‌ಬ್ಯಾಕ್ ಭರವಸೆ ನೀಡುವ ಯಾವುದೇ URL ಗಳು, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಅಥವಾ ಫೋನ್ ಕರೆಗಳು ನಿಮ್ಮನ್ನು ದಾರಿತಪ್ಪಿಸುವಂತಹವು ಆಗಿರುತ್ತವೆ.

  • PhonePe ನಲ್ಲಿ ಕ್ಯಾಶ್‌ಬ್ಯಾಕ್ ಅಥವಾ ರಿವಾರ್ಡ್ ಅನ್ನು ಪಡೆಯಲು ನಿಮ್ಮ UPI PIN ಅನ್ನು ನಮೂದಿಸುವ ಅಗತ್ಯವಿಲ್ಲ

ಕ್ಯಾಶ್‌ಬ್ಯಾಕ್ ಅನ್ನು ಪಡೆಯಲು UPI PIN ನಮೂದಿಸುವಂತೆ ಗ್ರಾಹಕರನ್ನು ಎಂದೂ ಕೇಳಲಾಗುವುದಿಲ್ಲ. ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಳುಹಿಸುವ ಸಂದರ್ಭದಲ್ಲಿ ಮಾತ್ರ UPI PIN ಬೇಕಾಗುತ್ತದೆ. ಕ್ಯಾಶ್‌ಬ್ಯಾಕ್ ಅನ್ನು ಪಡೆಯಲು UPI ನಮೂದಿಸಿ ಎಂದು ನಿಮ್ಮನ್ನು ಕೇಳಿದರೆ, ಆ ವಹಿವಾಟನ್ನು ತಕ್ಷಣ ತಿರಸ್ಕರಿಸಿ ಮತ್ತು support.phonepe.com ಗೆ ವರದಿ ಮಾಡಿ.

  • ಎಲ್ಲಾ ಕ್ಯಾಶ್‌ಬ್ಯಾಕ್ ಮತ್ತು ಇತರ ಆಫರ್‌ಗಳನ್ನು ನಿಮ್ಮ PhonePe ಆ್ಯಪ್‌ನ ಹೋಮ್‌ಪೇಜ್‌ನಲ್ಲಿರುವ “ಎಲ್ಲಾ ಆಫರ್‌ಗಳನ್ನು ನೋಡಿ” ವಿಭಾಗದಲ್ಲಿ ಪಟ್ಟಿ ಮಾಡಲಾಗಿರುತ್ತದೆ

ನೈಜ PhonePe ಕ್ಯಾಶ್‌ಬ್ಯಾಕ್ ಆಫರ್‌ಗಳ ಬಗ್ಗೆ ತಿಳಿಯಲು ಈ ವಿಭಾಗವನ್ನು ನೋಡಿ. ಯಾವುದೇ ವಹಿವಾಟನ್ನು ಮಾಡುವ ಮೊದಲು ಅರ್ಹತಾ ಮಾನದಂಡಗಳು ಹಾಗೂ ನಿಯಮ ಮತ್ತು ನಿಬಂಧನೆಗಳನ್ನು ಒಮ್ಮೆ ಗಮನಕೊಟ್ಟು ಓದಿಕೊಳ್ಳಿ.

ವಂಚಕರಿಂದ ಸುರಕ್ಷಿತವಾಗಿರಲು ಸಲಹೆಗಳು:

ಪರಿಚಿತ ಮೂಲಗಳಿಂದ ಮಾತ್ರ ಪಾವತಿ ಮನವಿಗಳನ್ನು ಸ್ವೀಕರಿಸಿ

  1. ನಿಮ್ಮ UPI ID ಗೊತ್ತಿರುವ ಯಾರೇ ಆಗಲಿ ನಿಮಗೆ ಪಾವತಿ ಮನವಿಗಳನ್ನು ಕಳುಹಿಸಬಹುದು. ಅಪರಿಚಿತ ಮೂಲಗಳಿಂದ ಬರುವ ಪಾವತಿ ಮನವಿಗಳನ್ನು ತಿರಸ್ಕರಿಸಿ. ನಿಮ್ಮ ಫೋನ್ ಸಂಖ್ಯೆ ಗೊತ್ತಿರುವ ಯಾರೇ ಆಗಲಿ ನಿಮ್ಮ UPI ID ಯಿಂದ ಹಣಕ್ಕಾಗಿ ಮನವಿ ಸಲ್ಲಿಸಬಹುದು ಎಂಬುದು ನಿಮಗೆ ತಿಳಿದಿರಲಿ.

“ನಿಮ್ಮ UPI ID ಅನ್ನು ಹುಡುಕಲು, ನಿಮ್ಮ PhonePe ಆ್ಯಪ್‌ನಲ್ಲಿ ಪ್ರೊಫೈಲ್ ವಿಭಾಗಕ್ಕೆ ಹೋಗಿ ಮತ್ತು ‘’ನನ್ನ BHIM UPI ID” ಕೆಳಗಡೆ ನೋಡಿ.”

ನಿಮ್ಮ ಡಿಫಾಲ್ಟ್ PhonePe UPI ID ಹೀಗಿದೆ: yourphonenumber@ybl.”

ಅಪರಿಚಿತರಿಂದ ಬರುವ ನಕಲಿ ಕರೆಗಳನ್ನು/ಪಾವತಿ ಮನವಿಗಳನ್ನು ಕಡೆಗಣಿಸಿ

ನಿಮಗೆ ಕ್ಯಾಶ್‌ಬ್ಯಾಕ್ ಒದಗಿಸುತ್ತೇವೆ ಎಂದು ಹೇಳಿಕೊಂಡು ಬರುವ ಯಾವುದೇ ಕರೆಗಳನ್ನು ಲೆಕ್ಕಿಸಬೇಡಿ, ಅವರು PhonePe ಪ್ರತಿನಿಧಿಗಳು ಎಂದು ಹೇಳಿಕೊಂಡರೂ ಸಹ ಅಷ್ಟೇ. ಅಪರಿಚಿತ ಸಂಖ್ಯೆಯಿಂದ ನಿಮ್ಮ ಸ್ನೇಹಿತರು/ಕುಟುಂಬದವರು ಎಂದು ಹೇಳುಕೊಂಡು ಕರೆಗಳು ಬಂದರೆ, ಮೊದಲು ಅವರನ್ನು ಸರಿಯಾಗಿ ಗುರುತಿಸಿ, ಆನಂತರ ಪಾವತಿ ವಹಿವಾಟುಗಳನ್ನು ಮಾಡಿ.

ನೆನಪಿಡಿ: ನಿಮ್ಮ ಗೌಪ್ಯ ಮಾಹಿತಿಗಳಾದ UPI PIN, OTP, CVV ಮತ್ತು ಕಾರ್ಡ್ ವಿವರಗಳನ್ನು PhonePe ಅಧಿಕಾರಿಗಳನ್ನು ಒಳಗೊಂಡು ಯಾರೊಂದಿಗೂ ಹಂಚಿಕೊಳ್ಳಬೇಡಿ.

Keep Reading