
Trust & Safety
ನಕಲಿ ಆ್ಯಪ್‌ಗಳಿಂದ ದೂರವಿದ್ದು ಸುರಕ್ಷಿತವಾಗಿರಿ!
PhonePe Regional|3 min read|27 April, 2021
ಸ್ಮಾರ್ಟ್‌ಫೋನ್‌ಗಳು ಮತ್ತು ಡಿಜಿಟಲ್ ಅನುಕೂಲತೆಯ ಯುಗದಲ್ಲಿ, ಮೊಬೈಲ್ ಅಪ್ಲಿಕೇಶನ್‌ಗಳು ಸಂವಹನ, ಮನರಂಜನೆ ಮತ್ತು ಉತ್ಪಾದಕತೆಗೆ ಅಗತ್ಯ ಸಂಪನ್ಮೂಲಗಳಾಗಿವೆ. ಆದಾಗ್ಯೂ, ಅನುಕೂಲವು ಅಪಾಯದೊಂದಿಗೆ ಬರುತ್ತದೆ: ಅಂದರೆ ಜನಪ್ರಿಯ ಮತ್ತು ವಿಶ್ವಾಸಾರ್ಹ ಆ್ಯಪ್‌ಗಳನ್ನು ಅನುಕರಿಸುವ ನಕಲಿ ಆ್ಯಪ್‌ಗಳ ರಚನೆ. ಈ ದುರುದ್ದೇಶಪೂರಿತ ಆ್ಯಪ್‌ಗಳು ಬಳಕೆದಾರರಿಗೆ ಡೇಟಾ ಕಳ್ಳತನ, ಹಣಕಾಸಿನ ನಷ್ಟ ಮತ್ತು ಗೌಪ್ಯತೆಯ ಆಕ್ರಮಣದಂತಹ ಗಂಭೀರ ಅಪಾಯಗಳನ್ನು ಉಂಟುಮಾಡುತ್ತವೆ ಮತ್ತು ಅವುಗಳನ್ನು ಮರೆಮಾಚಲು ಕಾನೂನುಬದ್ಧ ಆ್ಯಪ್‌ಗಳಂತೆ ಬುದ್ಧಿವಂತಿಕೆಯಿಂದ ವಿನ್ಯಾಸಗೊಳಿಸಲಾಗಿರುತ್ತದೆ.
ಈ ಬ್ಲಾಗ್, ಮೋಸದ ಆ್ಯಪ್‌ಗಳ ಜಗತ್ತನ್ನು, ಅವುಗಳ ಅಪಾಯಗಳು ಮತ್ತು ಅಂತಹ ಆ್ಯಪ್‌ಗಳಿಗೆ ಬಲಿಯಾಗುವುದನ್ನು ತಪ್ಪಿಸುವ ಮಾರ್ಗಗಳನ್ನು ಪರಿಶೋಧಿಸುತ್ತದೆ.
ನಕಲಿ ಅಪ್ಲಿಕೇಶನ್‌ಗಳನ್ನು ಅರ್ಥಮಾಡಿಕೊಳ್ಳುವುದು
ಅಧಿಕೃತ ಆ್ಯಪ್‌ಗಳ ವಿನ್ಯಾಸ ಮತ್ತು ಕ್ರಿಯಾತ್ಮಕತೆಯನ್ನು ಅನುಕರಿಸಲು ನಕಲಿ ಆ್ಯಪ್‌ಗಳನ್ನು ರಚಿಸಲಾಗಿರುತ್ತದೆ. ಅವುಗಳನ್ನು ಅಸಲಿಯಿಂದ ಪ್ರತ್ಯೇಕಿಸಲು ಕಷ್ಟವಾಗುತ್ತದೆ. ವಿಶ್ವಾಸಾರ್ಹವಾದ ಆ್ಯಪ್ ಸ್ಟೋರ್‌ಗಳಲ್ಲಿ ಅವು ಆಗಾಗ್ಗೆ ಕಾಣಿಸಿಕೊಳ್ಳುವುದರ ಮೂಲಕ ನಂಬಿಕೆಯನ್ನು ಮೂಡಿಸುತ್ತವೆ.
ನಕಲಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದಕ್ಕೆ ಬಳಕೆದಾರರನ್ನು ಮೋಸಗೊಳಿಸಲು ಸೈಬರ್ ಅಪರಾಧಿಗಳು ಇದನ್ನು ಬಳಸುತ್ತಾರೆ. ಇದು ಡೇಟಾ ಕಳ್ಳತನ, ಹಣಕಾಸು ವಂಚನೆ ಮತ್ತು ಗೌಪ್ಯತೆ ಆಕ್ರಮಣ ಸೇರಿದಂತೆ ಅನೇಕ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು.
ನಕಲಿ ಆ್ಯಪ್‌ಗಳ ಮೂಲಕ ವಂಚನೆ ನಡೆಯಬಹುದಾದ ಕೆಲವು ಸಾಮಾನ್ಯ ವಿಧಾನಗಳು ಇಲ್ಲಿವೆ:
- ಫಿಶಿಂಗ್
ನೀವು ನಕಲಿ ಆ್ಯಪ್ ಡೌನ್‌ಲೋಡ್ ಮಾಡಿದಾಗ, ಮಾಲ್‌ವೇರ್ ಮೂಲಕ ನಿಮ್ಮ ಸಾಧನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ನೀವು ಇನ್‌ಪುಟ್ ಮಾಡಿದ ಲಾಗಿನ್ ವಿವರಗಳನ್ನು ಅದು ಬಳಸಬಹುದು. ಈ ವಿವರಗಳನ್ನು ಇತರ ದುರುದ್ದೇಶಪೂರಿತ ಕಾರಣಕ್ಕಾಗಿಯೂ ಉಪಯೋಗಿಸಬಹುದು.
- ಸವಲತ್ತಿನ ಎಸ್ಕಲೇಷನ್
ಸ್ಕ್ಯಾಮ್‌ಸ್ಟರ್‌ಗಳು ನಿಮ್ಮ ಸಾಧನದಲ್ಲಿನ ಸವಲತ್ತುಗಳನ್ನು ಬೈಪಾಸ್ ಮಾಡುವುದಕ್ಕಾಗಿ ಸಹಾಯ ಮಾಡಲು ಅಸಲಿ ಆ್ಯಪ್‌ನ ಸೋಗಿನಲ್ಲಿ ನಕಲಿ ಆ್ಯಪ್ ವಿನ್ಯಾಸಗೊಳಿಸಬಹುದು. ಇದು ಬಳಕೆದಾರರಿಗೆ ಬೆದರಿಕೆಯಾಗಿದ್ದು, ಪ್ರಮುಖ ಭದ್ರತಾ ಕಾರ್ಯಗಳಲ್ಲಿ ಹಸ್ತಕ್ಷೇಪಕ್ಕೆ ಕಾರಣವಾಗಬಹುದು.
- ರಾನ್ಸಮ್‌ವೇರ್
ಕೆಲವು ನಕಲಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವಾಗ, ನಿಮ್ಮ ಸಾಧನವು ರಾನ್ಸಮ್‌ವೇರ್‌ನಿಂದ ಆವರಿಸಿಕೊಳ್ಳುತ್ತದೆ. ಅದು ನಿಮ್ಮ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುತ್ತದೆ ಮತ್ತು ಓದಲಾಗುವುದಿಲ್ಲ. ನಿಮ್ಮ ಡೇಟಾಗೆ ಆ್ಯಕ್ಸೆಸ್ ಪಡೆಯಲು, ವಂಚಕರು ನಿಮ್ಮಿಂದ ಹಣವನ್ನು ಕೇಳುತ್ತಾರೆ.
ನಕಲಿ ಆ್ಯಪ್‌ಗಳನ್ನು ಗುರುತಿಸುವುದು ಹೇಗೆ
ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ನಕಲಿ ಆ್ಯಪ್‌ಗಳಿಂದ ಸುರಕ್ಷಿತವಾಗಿರಬಹುದು:
- ಆ್ಯಪ್ ಪರಿಶೀಲಿಸಿ: ಮೊದಲಿಗೆ, ಡೆವಲಪರ್ ಹೆಸರನ್ನು ದೃಢೀಕರಿಸಿಕೊಳ್ಳಿ. ನಕಲಿ ಆ್ಯಪ್‌ಗಳ ಹೆಸರುಗಳು ಸಾಮಾನ್ಯವಾಗಿ ಅಸಲಿ ಆ್ಯಪ್‌ನೊಂದಿಗೆ ಹೋಲಿಕೆಯನ್ನು ಹೊಂದಿರುತ್ತವೆ. ಆದರೆ ಅಸಲಿಗಳಿಂದ ಪ್ರತ್ಯೇಕಿಸಲು ಸಹಾಯ ಮಾಡುವಂತಹ ದೋಷವನ್ನು ಹೊಂದಿರುತ್ತವೆ. ಲೋಗೋದಲ್ಲಿನ ಸಣ್ಣ ಮುದ್ರಣದೋಷಗಳು ಅಥವಾ ಬದಲಾವಣೆಗಳನ್ನು ಪರಿಶೀಲಿಸಿ. ನೀವು ಅಸಲಿ ಆ್ಯಪ್ ಡೌನ್‌ಲೋಡ್ ಮಾಡುವುದನ್ನು ಖಚಿತಪಡಿಸಿಕೊಳ್ಳಲು, ನೀವು ಅಧಿಕೃತ ವೆಬ್‌ಸೈಟ್‌ನೊಂದಿಗೆ ಇವುಗಳನ್ನು ತಾಳೆ ಮಾಡಬಹುದು.
- ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ಪರೀಕ್ಷಿಸಿ: ಉತ್ತಮವಾಗಿ ಸ್ಥಾಪಿತವಾಗಿರುವ ಆ್ಯಪ್‌ಗಳು ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ಹೊಂದಿರುತ್ತವೆ. ಆ್ಯಪ್ ತುಂಬ ಕಡಿಮೆ ವಿಮರ್ಶೆಗಳನ್ನು ಹೊಂದಿದ್ದರೆ ಅಥವಾ ಅಸಾಮಾನ್ಯವಾದ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯ ಸಕಾರಾತ್ಮಕ ವಿಮರ್ಶೆಗಳನ್ನು ಒಂದೇ ತರಹ ತೋರುತ್ತಿದ್ದರೆ, ಅದು ನಕಲಿ ಆ್ಯಪ್ ಆಗಿರಬಹುದು ಎಂಬ ಎಚ್ಚರಿಕೆಯ ಸಂಕೇತವಾಗಿರುತ್ತದೆ.
- ಅನುಮತಿಗಳನ್ನು ವಿಶ್ಲೇಷಿಸಿ: ಬೇಸಿಕ್ ಗೇಮ್ ಅಥವಾ ಯುಟಿಲಿಟಿ ಆ್ಯಪ್‌ಗಳು ಅಗತ್ಯವಿಲ್ಲದಿದ್ದಾಗಲೂ ಸಂಪರ್ಕಗಳು, ಕ್ಯಾಮರಾ ಅಥವಾ ಮೈಕ್ರೋಫೋನ್‌ಗೆ ಅನುಮತಿಗಳನ್ನು ವಿನಂತಿಸುತ್ತಿದ್ದರೆ ಅಂತಹ ಆ್ಯಪ್‌ಗಳು ದುರುದ್ದೇಶಪೂರಿತವಾಗಿರುವುದರ ಸಾಧ್ಯತೆಯನ್ನು ಸೂಚಿಸಬಹುದು.
- ಸ್ಕ್ರೀನ್‌ಶಾಟ್‌ಗಳು ಮತ್ತು ವಿವರಣೆಯನ್ನು ಪರೀಕ್ಷಿಸಿ: ಆ್ಯಪ್ ವಿವರಣೆ ಅಥವಾ ಸ್ಕ್ರೀನ್‌ಶಾಟ್‌ಗಳಲ್ಲಿನ ಕಳಪೆ ವ್ಯಾಕರಣ, ಕಾಗುಣಿತದ ತಪ್ಪುಗಳು ಮತ್ತು ಕಡಿಮೆ-ಗುಣಮಟ್ಟದ ಚಿತ್ರಗಳು ನಕಲಿ ಆ್ಯಪ್ ಅನ್ನು ಗುರುತಿಸಲು ಸಹಾಯ ಮಾಡುತ್ತವೆ.
- ಅಧಿಕೃತ ಮೂಲಗಳು: ಸಾಧ್ಯವಾದಾಗಲೆಲ್ಲಾ, ಅಧಿಕೃತ ವೆಬ್‌ಸೈಟ್‌ಗಳು ಅಥವಾ ವಿಶ್ವಾಸಾರ್ಹ ಆ್ಯಪ್ ಸ್ಟೋರ್‌ಗಳಿಂದ ಆ್ಯಪ್ಗಳನ್ನು ಡೌನ್‌ಲೋಡ್ ಮಾಡಿ.
ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವ ಮಾರ್ಗಗಳು
ಮೋಸದ ಆ್ಯಪ್ಗಳಿಂದ ನಿಮ್ಮ ಸಾಧನ ಮತ್ತು ಖಾಸಗಿ ಡೇಟಾವನ್ನು ರಕ್ಷಿಸಲು ಈ ಕ್ರಮಗಳನ್ನು ಕೈಗೊಳ್ಳಿ:
- ನಿಮ್ಮ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿ: ನಿಮ್ಮ ಸಾಧನದಲ್ಲಿನ ಆಪರೇಟಿಂಗ್ ಸಿಸ್ಟಂ ಮತ್ತು ಆ್ಯಪ್ಗಳನ್ನು ಅಪ್‌ಡೇಟ್ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಮೋಸದ ಆ್ಯಪ್ಗಳು ನ್ಯೂನ್ಯತೆಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುತ್ತವೆ. ಆದರೆ ಅಂತಹ ಪ್ರಯತ್ನಗಳಿಂದ ರಕ್ಷಿಸಲು ಸೆಕ್ಯುರಿಟಿ ಪ್ಯಾಚ್‌ಗಳನ್ನು ಆಗಾಗ್ಗೆ ಅಪ್‌ಡೇಟ್‌ನಲ್ಲಿ ಸೇರಿಸಲಾಗುತ್ತದೆ.
- ಭದ್ರತಾ ಸಾಫ್ಟ್‌ವೇರ್ ಅನ್ನು ಸೆಟಪ್ ಮಾಡಿ: ನಕಲಿ ಆ್ಯಪ್ಗಳಂತಹ ದುರುದ್ದೇಶಪೂರಿತ ಸಾಫ್ಟ್‌ವೇರ್ ಅನ್ನು ಹುಡುಕಲು ಮತ್ತು ನಿವಾರಿಸಲು, ವಿಶ್ವಾಸಾರ್ಹ ಆ್ಯಂಟಿವೈರಸ್ ಮತ್ತು ಆ್ಯಂಟಿ-ಮಾಲ್‌ವೇರ್ ಸಾಫ್ಟ್‌ವೇರ್ ಬಳಸಿ.
- ಟು-ಫ್ಯಾಕ್ಟರ್ ಅಥೆಂಟಿಕೇಶನ್(2FA)ಆನ್ ಮಾಡಿ: ಎಲ್ಲ ಖಾತೆಗಳಿಗೆ 2FA ಆನ್ ಮಾಡಿ. ಹೀಗೆ ಮಾಡುವುದರ ಮೂಲಕ, ನೀವು ಸುರಕ್ಷತೆಯನ್ನು ಹೆಚ್ಚಿಸಬಹುದು ಮತ್ತು ನಿಮ್ಮ ಡೇಟಾವನ್ನು ಆ್ಯಕ್ಸೆಸ್ ಮಾಡಲು ಹ್ಯಾಕರ್‌ಗಳಿಗೆ ಕಷ್ಟವಾಗಬಹುದು.
- ಲಿಂಕ್‌ಗಳು ಮತ್ತು ಅಟ್ಯಾಚ್‌ಮೆಂಟ್‌ಗಳ ಬಗ್ಗೆ ಎಚ್ಚರಿಕೆಯಿಂದಿರಿ: ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಪರಿಚಯವಿಲ್ಲದ ಮೂಲಗಳಿಂದ ಬಂದ ಅಟ್ಯಾಚ್‌ಮೆಂಟ್‌ಗಳನ್ನು ತೆರೆಯಬೇಡಿ.
- ವಿನಂತಿಗಳನ್ನು ಪರಿಶೀಲಿಸಿ: ಸೂಕ್ಷ್ಮ ಮಾಹಿತಿಯನ್ನು ಒದಗಿಸುವ ಮುಂಚೆ ಯಾವಾಗಲೂ ಮಾಹಿತಿಯನ್ನು ಪರಿಶೀಲಿಸಿ.
- ದೃಢವಾದ, ಅನನ್ಯ ಪಾಸ್‌ವರ್ಡ್‌ಗಳನ್ನು ಬಳಸಿ: ಬೇರೆ ಬೇರೆ ಖಾತೆಗಳಿಗೆ ಬೇರೆ ಬೇರೆ ಪಾಸ್‌ವರ್ಡ್‌ಗಳನ್ನು ಬಳಸಿ ಮತ್ತು ಅವುಗಳನ್ನು ನಿಯಮಿತವಾಗಿ ಬದಲಾಯಿಸುತ್ತಿರಿ.
ನೀವು ನಕಲಿ ಆ್ಯಪ್ ಡೌನ್‌ಲೋಡ್ ಮಾಡಿದರೆ ಏನು ಮಾಡಬೇಕು
ಮೋಸದ ಆ್ಯಪ್ ಡೌನ್‌ಲೋಡ್ ಮಾಡಿರಬಹುದು ಎಂದು ನೀವು ಭಾವಿಸಿದರೆ, ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:
- ತಕ್ಷಣವೇ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಿ
- ನಿಮ್ಮ ಖಾತೆಗೆ ಅಪರಿಚಿತರು ಪ್ರವೇಶಿಸಿದ್ದಾರೆ ಎಂದು ನೀವು ಭಾವಿಸಿದರೆ ನಿಮ್ಮ ಪಾಸ್‌ವರ್ಡ್ ಬದಲಾಯಿಸಿ
- ಯಾವುದೇ ಅನುಮಾನಾಸ್ಪದ ಚಟುವಟಿಕೆಗಾಗಿ ನಿಮ್ಮ ಬ್ಯಾಂಕ್ ಮತ್ತು ಆನ್‌ಲೈನ್ ಖಾತೆಗಳ ಮೇಲೆ ನಿಗಾ ಇರಿಸಿ
- ಭದ್ರತಾ ಸಾಫ್ಟ್‌ವೇರ್ ಬಳಸಿಕೊಂಡು ಭದ್ರತಾ ಸ್ಕ್ಯಾನ್ ರನ್ ಮಾಡಿ
- ಆ್ಯಪ್ ಅನ್ನು ರಿಪೋರ್ಟ್ ಮಾಡಿ
ಸಂಕ್ಷಿಪ್ತವಾಗಿ ಹೇಳುವುದಾದರೆ, ನಕಲಿ ಆ್ಯಪ್‌ಗಳು ನಿಮ್ಮ ಡೇಟಾಗೆ ಗಂಭೀರ ಅಪಾಯವನ್ನುಂಟುಮಾಡುತ್ತವೆ. ಜಾಗೃತರಾಗುವ ಮತ್ತು ಎಚ್ಚರದಿಂದಿರುವ ಮೂಲಕ ನೀವು ಇಂತಹ ದುರುದ್ದೇಶಪೂರಿತ ಆ್ಯಪ್‌ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ನಿಮ್ಮ ಗೌಪ್ಯತೆ ಮತ್ತು ಮನಃಶಾಂತಿಯನ್ನು ರಕ್ಷಿಸಲು, ಹೊಸ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವಾಗ ಯಾವಾಗಲೂ ಜಾಗರೂಕರಾಗಿರಿ ಮತ್ತು ನಿಮ್ಮ ಡಿಜಿಟಲ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ.
ನೀವು ನಕಲಿ ಆ್ಯಪ್ ಹಗರಣಕ್ಕೆ ಬಲಿಯಾಗಿದ್ದರೆ ನೀವು ಏನು ಮಾಡಬೇಕು
ಒಂದು ವೇಳೆ ನೀವು PhonePe ನಲ್ಲಿ ನಕಲಿ ಆ್ಯಪ್ ಸ್ಕ್ಯಾಮ್‌ನಿಂದ ವಂಚನೆಗೊಳಗಾಗಿದ್ದರೆ ನೀವು ತಕ್ಷಣ ಈ ಕೆಳಗಿನ ವಿಧಾನಗಳ ಮೂಲಕ ಸಮಸ್ಯೆಯನ್ನು ಸಲ್ಲಿಸಬಹುದು:
- PhonePe ಆ್ಯಪ್: ಸಹಾಯ ವಿಭಾಗಕ್ಕೆ ಹೋಗಿ ಮತ್ತು “ವ್ಯವಹಾರದಲ್ಲಿ ಸಮಸ್ಯೆ ಇದೆ” ಎಂಬ ಆಯ್ಕೆಯ ಅಡಿಯಲ್ಲಿ ಸಮಸ್ಯೆಯನ್ನು ಸಲ್ಲಿಸಿ
- PhonePe ಗ್ರಾಹಕ ಸೇವಾ ಸಂಖ್ಯೆ: ಸಮಸ್ಯೆಯನ್ನು ಸಲ್ಲಿಸಲು ನೀವು PhonePe ಗ್ರಾಹಕ ಸೇವೆಗೆ 80–68727374 / 022–68727374 ಮೂಲಕ ಕರೆ ಮಾಡಬಹುದು, ನಂತರ ಕಸ್ಟಮರ್ ಕೇರ್ ಏಜೆಂಟ್ ಟಿಕೆಟ್ ಸಲ್ಲಿಸುತ್ತಾರೆ ಮತ್ತು ನಿಮ್ಮ ಸಮಸ್ಯೆಗೆ ಪರಿಹಾರ ನೀಡಲು ಸಹಾಯ ಮಾಡುತ್ತಾರೆ.
- ವೆಬ್‌ಫಾರ್ಮ್ ಸಲ್ಲಿಕೆ: PhonePe ನ ವೆಬ್‌ಫಾರ್ಮ್ ಬಳಸಿಕೊಂಡು ನೀವು ಟಿಕೆಟ್ ಸಲ್ಲಿಸಬಹುದು, https://support.phonepe.com/
- ಸಾಮಾಜಿಕ ಮಾಧ್ಯಮ: ನೀವು PhonePe ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಮೋಸದ ಘಟನೆಗಳನ್ನು ವರದಿ ಮಾಡಬಹುದು.
Twitter — https://twitter.com/PhonePeSupport
Facebook — https://www.facebook.com/OfficialPhonePe
- ಕುಂದುಕೊರತೆ: ಅಸ್ತಿತ್ವದಲ್ಲಿರುವ ದೂರಿನ ಮೇಲಿನ ಕುಂದುಕೊರತೆಯನ್ನು ವರದಿ ಮಾಡಲು, ನೀವು https://grievance.phonepe.com/ ಗೆ ಲಾಗಿನ್ ಮಾಡಬಹುದು ಮತ್ತು ಈ ಹಿಂದೆ ಸಲ್ಲಿಸಿರುವ ಟಿಕೆಟ್ ಐಡಿಯನ್ನು ಹಂಚಿಕೊಳ್ಳಬಹುದು.
- ಸೈಬರ್ ಸೆಲ್: ಕೊನೆಯದಾಗಿ, ನೀವು ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ವಂಚನೆ ದೂರುಗಳನ್ನು ವರದಿ ಮಾಡಬಹುದು ಅಥವಾ https://www.cybercrime.gov.in/ ನಲ್ಲಿ ಆನ್‌ಲೈನ್ ಮೂಲಕ ದೂರು ನೋಂದಾಯಿಸಬಹುದು ಅಥವಾ 1930 ರಲ್ಲಿ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಪ್ರಮುಖ ರಿಮೈಂಡರ್ – PhonePe ಎಂದಿಗೂ ಗೌಪ್ಯ ಅಥವಾ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ. PhonePe ಎಂದು ಹೇಳಿಕೊಳ್ಳುವ ಆದರೆ ಅವರು phonepe.com ಡೊಮೇನ್‌ಗೆ ಸಂಬಂಧಿಸದವರಾಗಿದ್ದರೆ ಅಂತಹ ಮೇಲ್‌ಗಳನ್ನು ನಿರ್ಲಕ್ಷಿಸಿ. ನಿಮಗೆ ವಂಚನೆ ಎಂದು ಅನುಮಾನ ಉಂಟಾದರೆ, ದಯವಿಟ್ಟು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ..
Keep Reading
Trust & Safety
PhonePe’s Guardrails: Future of Payment Security
The world of digital payments is changing rapidly and with consumers expecting more reliable and seamless transactions, the payments ecosystem has become more complex. The future of digital payments therefore depends on trust, privacy, and security. In this blog, we illustrate our continued efforts in creating secure and trustworthy systems.
Trust & Safety
Gift Card Scam: Know When to Share Your Information
In a Gift Card scam, a scamster approaches a potential victim and tricks them into buying a Gift Card. After the purchase, scammers use deception and false pretenses to obtain the gift card number, code, PINs, etc. associated with the gift card. Once the scammers have the necessary information, they quickly redeem the value, leaving the victims with little to no chance of recovering their money.
Trust & Safety
Protect your Mobile Phone from SIM Takeover Fraud
Fraudsters manipulate mobile carriers into transferring your phone number to a SIM card they control by raising a false “SIM card lost” complaint with the telecom company. They use all the personal information they have collected about you for verification purposes and port your SIM to a SIM card they own – giving them access to your incoming calls, text messages, and most critically—verification codes for your banking and payment apps