PhonePe Blogs Main Featured Image

Trust & Safety

ನಕಲಿ ಆ್ಯಪ್‌ಗಳಿಂದ ದೂರವಿದ್ದು ಸುರಕ್ಷಿತವಾಗಿರಿ!

PhonePe Regional|1 min read|27 April, 2021

URL copied to clipboard

ಪರಸ್ಪರ ನಿರಂತರ ಸಂಪರ್ಕದಲ್ಲಿರುವ ಇಂದಿನ ಜಗತ್ತಿನಲ್ಲಿ, ನಮ್ಮ ಎಲ್ಲಾ ವೈಯಕ್ತಿಕ ಮತ್ತು ಅಮೂಲ್ಯ ಮಾಹಿತಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಮೊಬೈಲ್ ಫೋನ್ ಅನ್ನೇ ಪ್ರಮುಖ ಸಾಧನವಾಗಿ ಬಳಸುತ್ತಿದ್ದೇವೆ. ಆದರೆ, ಹ್ಯಾಕರ್‌ಗಳು ಮತ್ತು ವಂಚಕರು ನಮ್ಮ ವೈಯಕ್ತಿಕ ಸಾಧನಗಳ ಸುರಕ್ಷತೆಯನ್ನು ಒಡೆದು ಒಳನುಗ್ಗುವ ಹೊಸ ಮಾರ್ಗಗಳಿಗಾಗಿ ನಿರಂತರವಾಗಿ ಹುಡುಕುತ್ತಿರುತ್ತಾರೆ.

ಸೈಬರ್ ದಾಳಿಗಳು ಮತ್ತು ಅವುಗಳಿಂದ ನಿಮ್ಮ ಸುರಕ್ಷತೆ ಹೇಗೆ ಎಂಬ ಕುರಿತು ಇನ್ನಷ್ಟು ತಿಳಿದುಕೊಳ್ಳಿ

ಇತ್ತೀಚಿನ ಕೆಲವು ಸೈಬರ್-ಬೆದರಿಕೆ ಸುದ್ದಿಗಳ ಪ್ರಕಾರ, ಹ್ಯಾಕರ್‌ಗಳು ನಿಮ್ಮ ಮೊಬೈಲ್ ಫೋನ್‌ ಮೇಲೆ ನಿಯಂತ್ರಣವನ್ನು ಪಡೆಯಲು ಮತ್ತು ನಿಮ್ಮ ಸೂಕ್ಷ್ಮ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಲು, ವೈರಸ್ / ಟ್ರೋಜನ್‌ಗಳನ್ನು ನಕಲಿ ಆ್ಯಪ್‌ಗಳ ರೂಪದಲ್ಲಿ ಬಳಸುತ್ತಿದ್ದಾರೆ.

ಈ ವೈರಸ್ / ಟ್ರೋಜನ್‌ಗಳು ಕಾನೂನುಬದ್ಧ ಫೋಟೋ ಎಡಿಟಿಂಗ್, ಟೆಕ್ಸ್ಟ್ ಎಡಿಟಿಂಗ್, ಪೇಮೆಂಟ್, ಬ್ಯಾಂಕಿಂಗ್ ಮತ್ತು ಗೇಮಿಂಗ್ ಆ್ಯಪ್‌ಗಳ ಮುಖವಾಡ ಧರಿಸಿರುತ್ತವೆ.

ಒಮ್ಮೆ ನೀವು ಈ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿದಿರಿ ಎಂದಾದರೆ, ಆಗ ಹ್ಯಾಕರ್‌ಗಳು ನಿಮಗೆ ತಿಳಿಯದಂತೆ ಇವುಗಳನ್ನು ನಿಮ್ಮ ಫೋನ್‌ನಲ್ಲಿ ಹಲವಾರು ಕಾರ್ಯಗಳನ್ನು ನಿರ್ವಹಿಸಲು ಬಳಸುತ್ತಾರೆ. ಅವರು ಇವುಗಳ ಮೂಲಕ ನಿಮ್ಮ ಇಂಟರ್ನೆಟ್‌ಗೆ ಪ್ರವೇಶವನ್ನು ಪಡೆಯಬಹುದು, ಸಿಸ್ಟಮ್ ಅಲರ್ಟ್ಸ್‌ ಬದಲಾಯಿಸಬಹುದು, ಹೆಚ್ಚುವರಿ ಪ್ಯಾಕೇಜ್‌ಗಳನ್ನು ಇನ್‌ಸ್ಟಾಲ್ ಮಾಡಬಹುದು, ರೀಬೂಟ್ ಮಾಡಿದ ನಂತರ ಸ್ವಯಂ-ಪ್ರಾರಂಭಗೊಳ್ಳಬಹುದು, ಸಂಪರ್ಕಗಳು, ಮೀಡಿಯಾ ಫೈಲ್‌ಗಳನ್ನು ನೋಡಬಹುದು, ಚಿತ್ರಗಳನ್ನು ತೆಗೆಯಬಹುದು, ನಿಮ್ಮ ಪ್ರಸ್ತುತ ಸ್ಥಳವನ್ನು ಪತ್ತೆ ಮಾಡಬಹುದು ಹಾಗೂ ಲಾಕ್ ಸ್ಕ್ರೀನ್ ಕೋಡ್‌ಗಳನ್ನು, OTP ವಿವರಗಳು ಸೇರಿದಂತೆ ನಿಮ್ಮ ಆ್ಯಪ್‌ ಪಿನ್‌ಗಳು ಮತ್ತು SMS ಗಳನ್ನುಓದಬಹುದು.

ನಿಮ್ಮ ಡಿವೈಸ್‌ ಮತ್ತು ಡೇಟಾವನ್ನು ಸುರಕ್ಷಿತವಾಗಿರಿಸಲು ಈ ಸಲಹೆಗಳನ್ನು ನೆನಪಿಡಿ!

  1. ವಿಶ್ವಾಸಾರ್ಹವಲ್ಲದ ಮೂಲಗಳಿಂದ ಆ್ಯಪ್‌ಗಳನ್ನು ಡೌನ್‌ಲೋಡ್ ಅಥವಾ ಇನ್‌ಸ್ಟಾಲ್ ಮಾಡಬೇಡಿ. Google Play Store & App Store ನಂತಹ ವಿಶ್ವಾಸಾರ್ಹ ಮೂಲಗಳಿಂದ ಡೌನ್‌ಲೋಡ್ ಮಾಡಿದ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ.
  2. ಆ್ಯಪ್‌ ಅನುಮತಿಗಳನ್ನು ಪರಿಶೀಲಿಸಿ ಮತ್ತು ಆ್ಯಪ್‌ನ ಉದ್ದೇಶಕ್ಕೆ ಸಂಬಂಧಿಸಿದ ಸಂದರ್ಭವಿದ್ದಲ್ಲಿ ಮಾತ್ರ ಅನುಮತಿಗಳನ್ನು ನೀಡಿ.
  3. ನಿಮ್ಮ ಫೋನ್ ಸೆಟ್ಟಿಂಗ್ಸ್‌ನಲ್ಲಿ, “ವಿಶ್ವಾಸಾರ್ಹವಲ್ಲದ ಮೂಲಗಳಿಂದ” ಆ್ಯಪ್‌ಗಳ‌ನ್ನು ಇನ್‌ಸ್ಟಾಲ್ ಮಾಡುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಲು ಮರೆಯದಿರಿ.
  4. ಸಾರ್ವಜನಿಕ Wi-Fi ನೆಟ್‌ವರ್ಕ್‌ಗಳನ್ನು ಬಳಸುವುದನ್ನು ತಪ್ಪಿಸಿ ಮತ್ತು ಅಗತ್ಯವಿಲ್ಲದಿದ್ದಾಗ ನಿಮ್ಮ Wi-Fi ಸಂಪರ್ಕವನ್ನು ಆಫ್ ಮಾಡಿ. ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ವಂಚಕ Wi-Fi ಪ್ರವೇಶ ಕೇಂದ್ರಗಳು ಇರಬಹುದಾಗಿದ್ದು, ಅವುಗಳನ್ನು ಸೋಂಕಿತ ಆ್ಯಪ್‌ಗಳನ್ನು ವಿತರಿಸಲು ಬಳಸುವ ಸಾಧ್ಯತೆಯಿರುತ್ತದೆ.
  5. ಹೆಸರಾಂತ ಪೂರೈಕೆದಾರರ ಭದ್ರತಾ ಸಾಫ್ಟ್‌ವೇರ್ ಅನ್ನು ಮಾತ್ರ ಇನ್‌ಸ್ಟಾಲ್ ಮಾಡುವುದನ್ನು ಪರಿಗಣಿಸಿ ಮತ್ತು ಅವುಗಳನ್ನು ನಿಯಮಿತವಾಗಿ ಅಪ್ಡೇಟ್‌ ಮಾಡುತ್ತಿರಿ.
  6. ನೀವು ಯಾವುದೇ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಬಯಸಿದಲ್ಲಿ, ಆ ಆ್ಯಪ್‌ ಸುರಕ್ಷಿತವಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಅದರ ಕುರಿತ ವಿಮರ್ಶೆಗಳನ್ನು ಓದಿ.
  7. ಪಠ್ಯ ಸಂದೇಶಗಳಲ್ಲಿ ನೀಡಲಾಗುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಅಪರಿಚಿತ ಮೂಲಗಳಿಂದ ಬರುವ ಇಮೇಲ್‌ಗಳಲ್ಲಿ ಲಗತ್ತಿಸಲಾದ ಜಿಪ್ ಮಾಡಿದ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.
  8. ನಿಮ್ಮ ಬ್ರೌಸರ್‌ನಲ್ಲಿ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಪ್ರಯತ್ನಿಸುತ್ತಿರುವ ವೆಬ್‌ಪುಟಗಳನ್ನು ತಕ್ಷಣ ಮುಚ್ಚಿರಿ.

Keep Reading