Trust & Safety
ಪ್ರತಿ ವ್ಯಾಪಾರಿಯೂ ಹೊಸ ಹೊಸ ವಂಚನೆ ಪ್ರವೃತ್ತಿಗಳ ಬಗ್ಗೆ ಏನೆಲ್ಲಾ ತಿಳಿದುಕೊಂಡಿರಬೇಕು
PhonePe Regional|2 min read|06 September, 2024
ಸಣ್ಣ ಪಟ್ಟಣದಿಂದ ಬಂದ ಕಿರಾಣಿದಾರ ಮಹೇಶ್ ಒಂದು ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದ. ಅಲ್ಲಿಗೆ ಬಂದ ಹೊಸ ನಿವಾಸಿಯೊಬ್ಬ ಆಗಾಗ್ಗೆ ಅಂಗಡಿಗೆ ಬರುತ್ತಿದ್ದ, ಬಂದು ಪ್ರತಿದಿನ ಸಣ್ಣ ಪುಟ್ಟ ವಸ್ತುಗಳನ್ನು ಖರೀದಿಸಿಲು ಪ್ರಾರಂಭಿಸಿದ. ಹಾಗೇ ಕ್ರಮೇಣ ಮಹೇಶ್ ಜೊತೆ ವಿಶ್ವಾಸವನ್ನು ಬೆಳೆಸಿಕೊಂಡ. ಒಂದು ದಿನ, ಆತ ಗೃಹಪ್ರವೇಶ ಸಮಾರಂಭ ಮಾಡುತ್ತಿದ್ದು ಪಟ್ಟಿಯಲ್ಲಿರುವ ಐಟಂಗಳನ್ನು ತೆಗೆದುಕೊಳ್ಳಲು ಮಹೇಶ್ ಅವರ ಸಹಾಯದ ಅಗತ್ಯವಿದೆ ಎಂದು ಹೇಳಿದ. ಒಟ್ಟು ವೆಚ್ಚ ರೂ. 10,000 ಗಳಾಯಿತು. ಸರಕುಗಳನ್ನು ಪಡೆದ ನಂತರ, ನಿವಾಸಿ ಕೌಂಟರ್ ಬಳಿ ಮಹೇಶ್ ಪಕ್ಕದಲ್ಲಿ ನಿಂತು, QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಪಾವತಿ ಮಾಡುತ್ತಿರುವಂತೆ ಮಾಡಿದ. ಆತನ ಫೋನ್‌ನಲ್ಲಿ ಸಂಪೂರ್ಣ ವಹಿವಾಟಿನ ಹರಿವನ್ನು ನೋಡಿದ ಮಹೇಶ್, ಪಾವತಿ ಯಶಸ್ವಿಯಾಗಿದೆ ಎಂದು ನಂಬಿದ್ದ. ಆದರೆ, ಆತ ವಾಸ್ತವವಾಗಿ ವಂಚಕನಾಗಿದ್ದ, ಅವನು ಅಧಿಕೃತವಾದದ್ದಂತೆ ವಿನ್ಯಾಸಗೊಳಿಸಿದ ನಕಲಿ ಪೇಮೆಂಟ್ ಆ್ಯಪ್ ಬಳಸುತ್ತಿದ್ದ, ವಾಸ್ತವವಾಗಿ ಯಾವುದೇ ಪಾವತಿಯನ್ನು ಮಾಡದೇ ಹಣವನ್ನು ವರ್ಗಾಯಿಸಲಾಗಿದೆ ಎಂದು ಮಹೇಶ್‌ಗೆ ಅನಿಸುವಂತೆ ಮಾಡಿದ.
ನೀವು ವ್ಯಾಪಾರಿಯಾಗಿದ್ದರೆ, ನಕಲಿ ಪೇಮೆಂಟ್ ಆ್ಯಪ್‌ಗಳನ್ನು ಬಳಸುವ ಈ ಆತಂಕಕಾರಿ ವಂಚನೆ ಪ್ರವೃತ್ತಿಯ ಬಗ್ಗೆ ನೀವು ತಿಳಿದಿರಬೇಕು. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ!
ನಕಲಿ ಪೇಮೆಂಟ್ ಆ್ಯಪ್‌ಗಳು ಯಾವುವು?
ನಕಲಿ ಪೇಮೆಂಟ್ ಆ್ಯಪ್‌ಗಳೆಂದರೆ ಕಾನೂನುಬದ್ಧ ಪೇಮೆಂಟ್ ಆ್ಯಪ್‌ಗಳ ರೀತಿ ಕಾಣುವ ನಕಲಿ ಆ್ಯಪ್‌ಗಗಳಾಗಿವೆ. ಅವು UI, ಕಲರ್ ಸ್ಕೀಮ್ ಮತ್ತು ಒಟ್ಟಾರೆ ನೋಟದಲ್ಲಿ ಜನಪ್ರಿಯ ಪೇಮೆಂಟ್ ಆ್ಯಪ್‌ಗಳನ್ನು ನಿಕಟವಾಗಿ ಹೋಲುತ್ತವೆ, ಆಗಾಗ್ಗೆ ಸಂಪೂರ್ಣ ಪಾವತಿ ಪ್ರಕ್ರಿಯೆಯನ್ನು ಪುನರಾವರ್ತಿಸುತ್ತವೆ – ಅವುಗಳನ್ನು ಒಮ್ಮೆಲೆ ಪ್ರತ್ಯೇಕಿಸುವುದು ಕಷ್ಟ. ಈ ಕೆಲವು ಮೋಸದ ಆ್ಯಪ್‌ಗಳು ಪಾವತಿಯನ್ನು ಸ್ವೀಕರಿಸಲಾಗಿದೆ ಎಂದು ತಪ್ಪಾಗಿ ಸೂಚಿಸಲು ಬೀಪ್ ಅಥವಾ ಚೈಮ್‌ನಂತಹ ಪೇಮೆಂಟ್ ನೋಟಿಫಿಕೇಶನ್ ಶಬ್ದವನ್ನು ಅನುಕರಿಸುವ ಮೂಲಕ ಭ್ರಮೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಅಲ್ಲದೆ, ಅವರು ಯಶಸ್ವಿ ವಹಿವಾಟನ್ನು ತೋರಿಸಲು ಮನವೊಲಿಸುವ ಪಾವತಿ ಮಾಹಿತಿಯನ್ನು ಸೃಷ್ಟಿಸಬಹುದು, ಇದರ ವ್ಯತ್ಯಾಸವನ್ನು ಒಮ್ಮೆಲೆ ಗುರುತಿಸುವುದು ಸವಾಲೇ ಸರಿ.
ನಕಲಿ ಪೇಮೆಂಟ್ ಆ್ಯಪ್‌ಗಳಿಂದ ಸುರಕ್ಷಿತವಾಗಿರಲು ಸಲಹೆಗಳು
ನಿಮ್ಮ ವ್ಯಾಪಾರವನ್ನು ಕಾಪಾಡಿಕೊಳ್ಳಲು, ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಲು ಈ ಸಲಹೆಗಳನ್ನು ಅನುಸರಿಸಿ:
- ವಹಿವಾಟಿನ ಇತಿಹಾಸವನ್ನು ಪರಿಶೀಲಿಸಿ: ನಿಮ್ಮ ಪೇಮೆಂಟ್ ಆ್ಯಪ್ ಅಥವಾ ಬ್ಯಾಂಕ್ ಖಾತೆಯ ಮೂಲಕ ಯಾವಾಗಲೂ ವಹಿವಾಟುಗಳನ್ನು ಪರಿಶೀಲಿಸಿ. ಸ್ಕ್ರೀನ್‌ಶಾಟ್‌ಗಳು ಅಥವಾ ನೋಟಿಫಿಕೇಶನ್‌ಗಳನ್ನು ಮಾತ್ರ ಅವಲಂಬಿಸಬೇಡಿ.
- ಅಸಮಂಜಸ ಮಾಹಿತಿ: ವಹಿವಾಟಿನ ವಿವರಗಳಲ್ಲಿನ ವ್ಯತ್ಯಾಸಗಳನ್ನು ನೋಡಿ. ನಕಲಿ ಆ್ಯಪ್‌ಗಳು ಸೂಕ್ಷ್ಮ ದೋಷಗಳು ಅಥವಾ ಅಸಂಗತತೆಗಳನ್ನು ಹೊಂದಿರಬಹುದು, ಅದು ನಿಮ್ಮನ್ನು ಮೋಸದ ಬಗ್ಗೆ ಎಚ್ಚರಿಸಬಹುದು.
- ಒತ್ತಡ ತಂತ್ರಗಳು: ಸರಿಯಾದ ಪರಿಶೀಲನೆಗಾಗಿ ಸಮಯ ಕೊಡದೆ ವಹಿವಾಟನ್ನು ಪೂರ್ಣಗೊಳಿಸಲು ಅವಸರ ಮಾಡುವ ಗ್ರಾಹಕರ ಬಗ್ಗೆ ಜಾಗರೂಕರಾಗಿರಿ.
- ಅಪರಿಚಿತ ಆ್ಯಪ್‌ಗಳು: ನಿಮ್ಮ ಪ್ರದೇಶದಲ್ಲಿ ಸಾಮಾನ್ಯವಾಗಿ ಬಳಸುವ ಕಾನೂನುಬದ್ಧ ಪಾವತಿ ಆ್ಯಪ್‌ಗಳ ಬಗ್ಗೆ ಪರಿಚಿತರಾಗಿರಿ. ಗ್ರಾಹಕರು ಪರಿಚಯವಿಲ್ಲದ ಆ್ಯಪ್ ಮೂಲಕ ಪಾವತಿ ಮಾಡುತ್ತಿದ್ದರೆ, ಎಚ್ಚರಿಕೆಯಿಂದ ಮುಂದುವರಿಯಿರಿ.
ವ್ಯಾಪಾರಿಗಳಿಗೆ ಉತ್ತಮ ಅಭ್ಯಾಸಗಳು
ನಕಲಿ ಪೇಮೆಂಟ್ ಆ್ಯಪ್‌ಗಳ ವಂಚನೆಗಳಿಂದ ನಿಮ್ಮ ವ್ಯವಹಾರವನ್ನು ರಕ್ಷಿಸಲು ನೀವು ತೆಗೆದುಕೊಳ್ಳಬಹುದಾದ ಕೆಲವು ಕ್ರಮಗಳು ಇಲ್ಲಿವೆ:
- ನಿಮ್ಮ ಸಿಬ್ಬಂದಿಗೆ ಶಿಕ್ಷಣ ನೀಡಿ: ಎಲ್ಲಾ ಉದ್ಯೋಗಿಗಳು ಈ ವಂಚನೆಗಳ ಬಗ್ಗೆ ಮತ್ತು ಮೋಸದ ವಹಿವಾಟುಗಳನ್ನು ಗುರುತಿಸುವುದು ಹೇಗೆಂದು ತಿಳಿದಿರುವಂತೆ ನೋಡಿಕೊಳ್ಳಿ.
- ಪರಿಶೀಲನಾ ಕಾರ್ಯವಿಧಾನಗಳನ್ನು ಕಾರ್ಯಗತಗೊಳಿಸಿ: ಸರಕುಗಳು ಅಥವಾ ಸೇವೆಗಳನ್ನು ಒದಗಿಸುವ ಮೊದಲು ಪಾವತಿಗಳನ್ನು ಪರಿಶೀಲಿಸಲು ಪ್ರಮಾಣಿತ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿ. ಇದು ವಹಿವಾಟು ಐಡಿಯನ್ನು ಪರಿಶೀಲಿಸುವುದು ಅಥವಾ ನಿಮ್ಮ ಪೇಮೆಂಟ್ ಪ್ರೊಸೆಸರ್‌ನಿಂದ ದೃಢೀಕರಣಕ್ಕಾಗಿ ಕಾಯುವುದನ್ನು ಒಳಗೊಂಡಿರಬಹುದು.
- ಅನುಮಾನಾಸ್ಪದ ಚಟುವಟಿಕೆಯನ್ನು ವರದಿ ಮಾಡಿ: ನೀವು ಶಂಕಿತ ನಕಲಿ ಪೇಮೆಂಟ್ ಆ್ಯಪ್ ಕಂಡುಬಂದರೆ, ತಕ್ಷಣವೇ ಸಂಬಂಧಿತ ಅಧಿಕಾರಿಗಳು ಮತ್ತು ನಿಮ್ಮ ಪೇಮೆಂಟ್ ಪ್ರೊಸೆಸರ್‌ಗೆ ವರದಿ ಮಾಡಿ.
ಪಾವತಿ ಮಾಡುತ್ತಿರುವಂತೆ ವಂಚಿಸಿದರೆ ಅಥವಾ ನಕಲಿ ಪೇಮೆಂಟ್ ಆ್ಯಪ್ ಕಂಡುಬಂದರೆ, ನೀವು ತಕ್ಷಣ ಈ ಕೆಳಗಿನ ವಿಧಾನಗಳಲ್ಲಿ ದೂರು ನೀಡಬಹುದು:
- PhonePe ಆ್ಯಪ್: ಸಹಾಯ ವಿಭಾಗಕ್ಕೆ ಹೋಗಿ ಮತ್ತು “ವ್ಯವಹಾರದಲ್ಲಿ ಸಮಸ್ಯೆ” ಆಯ್ಕೆಯ ಅಡಿಯಲ್ಲಿ ಸಮಸ್ಯೆಯನ್ನು ಎತ್ತಿ.
- PhonePe ಗ್ರಾಹಕರ ಸಹಾಯವಾಣಿ ಸಂಖ್ಯೆ: ಸಮಸ್ಯೆಯನ್ನು ಎತ್ತಲು ನೀವು PhonePe ಗ್ರಾಹಕರ ಸಹಾಯವಾಣಿ 80–68727374 / 022–68727374 ಗೆ ಕರೆ ಮಾಡಬಹುದು, ನಂತರ ಗ್ರಾಹಕರ ಸಹಾಯವಾಣಿ ಏಜೆಂಟ್ ಟಿಕೆಟ್ ರಚಿಸಿ, ನಿಮ್ಮ ಸಮಸ್ಯೆಗೆ ಸಹಾಯ ಮಾಡುತ್ತಾರೆ.
- ವೆಬ್‌ಫಾರ್ಮ್ ಸಲ್ಲಿಕೆ: PhonePe ವೆಬ್‌ಫಾರ್ಮ್ https://support.phonepe.com/ ಬಳಸಿ ಸಹ ನೀವು ಟಿಕೆಟ್ ರಚಿಸಬಹುದು.
- ಸಾಮಾಜಿಕ ಮಾಧ್ಯಮ: ನೀವು PhonePe ಯ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳ ಮೂಲಕ ಮೋಸದ ಘಟನೆಗಳ ಬಗ್ಗೆ ವರದಿ ಮಾಡಬಹುದು:
- Twitter: https://twitter.com/PhonePeSupport
- Facebook: https://www.facebook.com/OfficialPhonePe
- ಕುಂದುಕೊರತೆ: ಅಸ್ತಿತ್ವದಲ್ಲಿರುವ ದೂರಿನ ಮೇಲಿನ ಕುಂದುಕೊರತೆಯನ್ನು ವರದಿ ಮಾಡಲು, ನೀವು https://grievance.phonepe.com/ ಗೆ ಲಾಗಿನ್ ಮಾಡಿ, ಈ ಹಿಂದೆ ಎತ್ತಿರುವ ಟಿಕೆಟ್ ಐಡಿಯನ್ನು ಹಂಚಿಕೊಳ್ಳಬಹುದು.
- ಸೈಬರ್ ಸೆಲ್: ಕೊನೆಯದಾಗಿ, ನೀವು ಆನ್‌ಲೈನ್‌ನಲ್ಲಿ ಹತ್ತಿರದ ಸೈಬರ್ ಕ್ರೈಮ್ ಸೆಲ್‌ನಲ್ಲಿ ಅಥವಾ https://www.cybercrime.gov.in/ ನಲ್ಲಿ ವಂಚನೆ ದೂರುಗಳನ್ನು ನೋಂದಾಯಿಸಬಹುದು ಅಥವಾ 1930 ರಲ್ಲಿ ಸೈಬರ್ ಕ್ರೈಮ್ ಸೆಲ್ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಸುರಕ್ಷಿತವಾಗಿರಿ, ಜಾಗರೂಕರಾಗಿರಿ ಮತ್ತು ನಿಮ್ಮ ವ್ಯವಹಾರವನ್ನು ಸುಭದ್ರಗೊಳಿಸಿ.