Investments
ಹೆಚ್ಚಿನ ಆದಾಯ ಗಳಿಸುವ ಸರಳ ಮಂತ್ರ!
PhonePe Regional|1 min read|26 July, 2021
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಲೇ ಇರಿ
ಸ್ಟಾಕ್ ಮಾರುಕಟ್ಟೆ ಕುರಿತು ಭವಿಷ್ಯ ಹೇಳುವುದು ಅಸಾಧ್ಯ. ಆದರೆ ತಾಳ್ಮೆ ಮತ್ತು ದೀರ್ಘಾವಧಿಯ ಹೂಡಿಕೆಯು ಅತ್ಯುತ್ತಮ ಆದಾಯ ಗಳಿಸಲು ಮತ್ತು ನಿಮ್ಮ ಸಂಪತ್ತನ್ನು ಬೆಳೆಸಲು ಪ್ರಮುಖ ಮಾರ್ಗವಾಗಿದೆ.
ನೀವು ಬೆಳವಣಿಗೆ ಆಧಾರಿತ ಫಂಡ್‌ಗಳಾದ ಇಕ್ವಿಟಿ ಅಥವಾ ಹೈಬ್ರಿಡ್ ಮ್ಯುಚ್ಯುವಲ್ ಫಂಡ್ಸ್‌ನಲ್ಲಿ ಹೂಡಿಕೆ ಮಾಡಿದಾಗ, ಹೂಡಿಕೆಯಿಂದ ನಿಮ್ಮ ಆದಾಯವನ್ನು ವ್ಯಾಖ್ಯಾನಿಸುವ ದೃಷ್ಟಿಯಿಂದ ನಂತರದ ಹೂಡಿಕೆಯ ನಡವಳಿಕೆ ಮಹತ್ವದ ಪಾತ್ರ ವಹಿಸುತ್ತದೆ. ಮಾರುಕಟ್ಟೆಯಲ್ಲಿನ ಅಲ್ಪಾವಧಿಯ ಏರಿಳಿತಗಳಿಂದ ಪ್ರಭಾವಿತರಾಗಲು ಕಲಿಯಿರಿ ಮತ್ತು ದೀರ್ಘಾವಧಿಯವರೆಗೆ ಹೂಡಿಕೆ ಮಾಡಿ.
ಅಮೇರಿಕಾದ ಹೂಡಿಕೆದಾರ ಮತ್ತು ಜಗತ್ತಿನ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿ ವಾರನ್ ಬಪ್ಪೆಟ್ ಪ್ರಕಾರ, “ಷೇರು ಮಾರುಕಟ್ಟೆಯು ತಾಳ್ಮೆಯಿಲ್ಲದವರಿಂದ ತಾಳ್ಮೆ ಇದ್ದವರಿಗೆ ಹಣವನ್ನು ವರ್ಗಾಯಿಸುವ ಸಾಧನವಾಗಿದೆ.”
ದೀರ್ಘಾವಧಿ ಹೂಡಿಕೆಯ ಬಗ್ಗೆ ಉದಾಹರಣೆಗಳು ಇಲ್ಲಿವೆ
ಇಕ್ವಿಟಿ ಫಂಡ್ ಹೂಡಿಕೆದಾರರ 4 ಗುಂಪುಗಳಿವೆ ಎಂದಿಟ್ಟುಕೊಳ್ಳೋಣ:
- ಗ್ರೂಪ್ 1: 3 ತಿಂಗಳುಗಳ ಕಾಲ ಹೂಡಿಕೆ ಮಾಡಲಾಗಿದೆ
- ಗ್ರೂಪ್ 2: 1 ವರ್ಷದ ಕಾಲ ಹೂಡಿಕೆ ಮಾಡಲಾಗಿದೆ
- ಗ್ರೂಪ್ 3: 5 ವರ್ಷಗಳ ಕಾಲ ಹೂಡಿಕೆ ಮಾಡಲಾಗಿದೆ
- ಗ್ರೂಪ್ 4: 10 ವರ್ಷಗಳ ಕಾಲ ಹೂಡಿಕೆ ಮಾಡಲಾಗಿದೆ
ಪ್ರತಿಯೊಬ್ಬ ಹೂಡಿಕೆದಾರರು ಬೇರೆ ಬೇರೆ ಸಮಯದಲ್ಲಿ ರೂ.10,000 ಹೂಡಿಕೆ ಮಾಡಿದರು. ಈಗ, ಅವರ ಹೂಡಿಕೆಯ ಅವಧಿಯ ಕೊನೆಯಲ್ಲಿ ಅವರ ಹೂಡಿಕೆಯ ರೂ.10,000 ಸರಾಸರಿ ಎಷ್ಟು ಬೆಳೆದಿತ್ತು ಎಂದು ನೋಡೋಣ.
ಈ ವಿಶ್ಲೇಷಣೆಯ ಹೆಚ್ಚುವರಿ ಮುಖ್ಯಾಂಶಗಳು:
10 ವರ್ಷಗಳ ಕಾಲ ಹೂಡಿಕೆ ಮಾಡಿದ 50% ಕ್ಕಿಂತ ಹೆಚ್ಚು ಹೂಡಿಕೆದಾರರ ಹೂಡಿಕೆಯು ನಾಲ್ಕು ಪಟ್ಟು ಹೆಚ್ಚಾಗಿದೆ ಮತ್ತು 98% ಹೂಡಿಕೆದಾರರು 10 ವರ್ಷಗಳ ಅವಧಿಯಲ್ಲಿ ತಮ್ಮ ಹಣವನ್ನು ದ್ವಿಗುಣಗೊಳಿಸಿದ್ದಾರೆ
3 ತಿಂಗಳ ಅವಧಿಗೆ ಮಾತ್ರ ಹೂಡಿಕೆ ಮಾಡಿದ ಹೂಡಿಕೆದಾರರಲ್ಲಿ, 1/3 ಕ್ಕಿಂತ ಹೆಚ್ಚು ಜನರು ನಷ್ಟ ಅನುಭವಿಸಿದರುಮತ್ತು ಕೇವಲ 10% ಹೂಡಿಕೆದಾರರು ಕೇವಲ 20% ಕ್ಕಿಂತ ಹೆಚ್ಚಿನ ಲಾಭಗಳನ್ನು ಕಂಡರು.
ಕಲಿಕೆ:ದೀರ್ಘಾವಧಿಯವರೆಗೆ ಹೂಡಿಕೆ ಮಾಡಿದ ಹೂಡಿಕೆದಾರರು ತಮ್ಮ ಸಂಪತ್ತನ್ನು ಗಣನೀಯವಾಗಿ ಬೆಳೆಸಲು ಸ್ಪಷ್ಟವಾಗಿ ಸಾಧ್ಯವಾಯಿತು. ನೀವು ದೀರ್ಘಾವಧಿಯವರೆಗೆ ಹೂಡಿಕೆ ಮಾಡುತ್ತಿದ್ದರೆ, ಉತ್ತಮ ಆದಾಯವನ್ನು ಗಳಿಸುವ ಸಾಧ್ಯತೆ ಹೆಚ್ಚು.
ಇಕ್ವಿಟಿ ಅಥವಾ ಹೈಬ್ರಿಡ್ ಫಂಡ್‌ಗಳಂತಹ ಬೆಳವಣಿಗೆಯ ಆಧಾರಿತ ಫಂಡ್ ಗಳಲ್ಲಿ ಹೂಡಿಕೆ ಮಾಡಿ ಮತ್ತು ದೀರ್ಘಾವಧಿಯವರೆಗೆ (ಕನಿಷ್ಠ 5 ವರ್ಷಗಳು) ಹೂಡಿಕೆ ಮಾಡಿ. ದೀರ್ಘಾವಧಿಯವರೆಗೆ ಹೂಡಿಕೆ ಮಾಡುವುದು ನಿಮ್ಮ ಹೂಡಿಕೆಗಳನ್ನು ಗಣನೀಯವಾಗಿ ಮತ್ತು ಹೆಚ್ಚಿನ ನಿಶ್ಚಿತತೆಯೊಂದಿಗೆ ಬೆಳೆಯಲು ಸಹಾಯ ಮಾಡುತ್ತದೆ.
ಮ್ಯುಚ್ಯುವಲ್ ಫಂಡ್ ಹೂಡಿಕೆಯು ಮಾರುಕಟ್ಟೆಯ ಅಪಾಯಕ್ಕೆ ಒಳಪಟ್ಟಿರುತ್ತದೆ, ಹೂಡಿಕೆ ಮಾಡುವ ಮೊದಲು ಯೋಜನೆಗೆ ಸಂಬಂಧಿಸಿದ ದಾಖಲೆಯನ್ನು ಗಮನವಿಟ್ಟು ಓದಿ