PhonePe Blogs Main Featured Image

Trust & Safety

ಜನಗಣತಿ 2027 ವಂಚನೆ ಮುನ್ನೆಚ್ಚರಿಕೆ: ನಿಮ್ಮ ಗುರುತನ್ನು ರಕ್ಷಿಸಿಕೊಳ್ಳುವುದು ಹೇಗೆ

PhonePe Regional|2 min read|23 June, 2026

URL copied to clipboard

ಭಾರತದ 16ನೇ ಜನಗಣತಿಯು ವಿಶ್ವದ ಅತ್ಯಂತ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿಯಾಗಿದ್ದು, ಪ್ರಸ್ತುತ ಜಾರಿಯಲ್ಲಿದೆ. ಮನೆ ಪಟ್ಟಿಮಾಡುವಿಕೆಯನ್ನು ಒಳಗೊಂಡ ಮೊದಲ ಹಂತವು ಪೂರ್ಣಗೊಂಡಿದ್ದರೆ, ಪ್ರತಿ ನಾಗರಿಕನ ಸಾಮಾಜಿಕ, ಜನಸಂಖ್ಯಾ ಮತ್ತು ಆರ್ಥಿಕ ಡೇಟಾವನ್ನು ಸಂಗ್ರಹಿಸುವ ಜನಸಂಖ್ಯೆಯ ಎಣಿಕೆಯ ಎರಡನೇ ಹಂತವು ಈ ವರ್ಷದ ಫೆಬ್ರವರಿಯಲ್ಲಿ ಪ್ರಾರಂಭವಾಗಿದೆ.

ಆದರೆ ದುರದೃಷ್ಟವಶಾತ್, ಕಳೆದ ಕೆಲವು ತಿಂಗಳುಗಳಲ್ಲಿ, ವಂಚಕರು 2027 ರ ಜನಗಣತಿಯನ್ನು ಮುಗ್ಧ ಜನರನ್ನು ವಂಚಿಸಲು ಒಂದು ಮಾಧ್ಯಮವಾಗಿ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಅವರು ಸರ್ಕಾರಿ ಅಧಿಕಾರಿಗಳಂತೆ ನಟಿಸುವ ಮೂಲಕ ಜನರ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿದ್ದಾರೆ. ಆದ್ದರಿಂದ, ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ರಕ್ಷಿಸಲು ಅಂತಹ ನಕಲಿ ಅಧಿಕಾರಿಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಜನಗಣತಿ ವಂಚಕರು ಹೇಗೆ ಕಾರ್ಯನಿರ್ವಹಿಸುತ್ತಾರೆ?

ಜನಗಣತಿ ವಂಚಕರು ಹಣಕಾಸಿನ ಕಳ್ಳತನ ಮತ್ತು ಐಡೆಂಟಿಟಿ ಫ್ರಾಡ್‌ಗಾಗಿ ಜನಗಣತಿ ಪ್ರಕ್ರಿಯೆಯನ್ನು ಒಂದು ಮಾಧ್ಯಮವಾಗಿ ಬಳಸುತ್ತಾರೆ. ಅವರು ಬಳಸಿಕೊಳ್ಳುವ ಕೆಲವು ತಂತ್ರಗಳು ಇಲ್ಲಿವೆ:

  • ಬೇರೆಯವರಂತೆ ನಟಿಸುವುದು/ಸೋಗು ಹಾಕುವುದು: ವಂಚಕರು ಮನೆ-ಮನೆಗೆ ಭೇಟಿ ನೀಡುವ ಮೂಲಕ, WhatsApp ಅಥವಾ ಫೋನ್ ಕರೆಗಳ ಮೂಲಕ ಸರ್ಕಾರಿ ಜನಗಣತಿ ಅಧಿಕಾರಿಗಳಂತೆ ನಟಿಸುತ್ತಾರೆ. ಅವರು ಆಧಾರ್, PAN ಮತ್ತು ಬ್ಯಾಂಕಿಂಗ್ ಕ್ರೆಡೆನ್ಶಿಯಲ್‌ಗಳಂತಹ ಅತ್ಯಂತ ಮೌಲ್ಯಯುತ ಮಾಹಿತಿಯನ್ನು ಸಂಗ್ರಹಿಸಲು ಜನಗಣತಿಯನ್ನು ಒಂದು ನೆಪವಾಗಿ ಬಳಸಿಕೊಳ್ಳುತ್ತಾರೆ. ಅವರು ಈ ಮಾಹಿತಿಯನ್ನು ಪಡೆದ ನಂತರ, ಅವರು ನಿಮ್ಮ ಹೆಸರಿನಲ್ಲಿ ಅಪರಾಧಗಳನ್ನು ಮಾಡಬಹುದು. ಇದು ನಿಮ್ಮನ್ನು ದೊಡ್ಡ ಕಾನೂನು ತೊಂದರೆಗೆ ಸಿಲುಕಿಸಬಹುದು. ನಕಲಿ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳಿಗಾಗಿ ನಕಲಿ ಗುರುತಿನ ಚೀಟಿಗಳನ್ನು ರಚಿಸಲು ಅವರು ನಿಮ್ಮ ಮಾಹಿತಿಯನ್ನು ಬಳಸಬಹುದು.
  • ಫಿಶಿಂಗ್ ಲಿಂಕ್‌ಗಳು: ವಂಚಕರು ಜನಗಣತಿ ಡೇಟಾವನ್ನು ನವೀಕರಿಸಲು ಎಂದು ನಕಲಿ ಲಿಂಕ್‌ಗಳಿರುವ SMSಗಳನ್ನು ಕಳುಹಿಸುತ್ತಾರೆ, ಆದರೆ ಅವರ ನಿಜವಾದ ಉದ್ದೇಶ ವೈಯಕ್ತಿಕ ಡೇಟಾವನ್ನು ಕದಿಯುವುದಾಗಿವಾಗಿರುತ್ತದೆ. ಬ್ಯಾಂಕ್ ಖಾತೆಗಳು ಮತ್ತು UPI ವಾಲೆಟ್‌ಗಳಿಂದ ಹಣವನ್ನು ಖಾಲಿ ಮಾಡಲು ಅವರು OTP ಅಥವಾ QR ಕೋಡ್ ವಂಚನೆಗಳನ್ನು ಸಹ ಬಳಸಬಹುದು.
  • ದುರುದ್ದೇಶಪೂರಿತ ಆ್ಯಪ್‌ಗಳು: ನಿಮ್ಮ ಫೋನ್‌ನಲ್ಲಿರುವ ಮಾಹಿತಿಯನ್ನು ಕದಿಯಲು ಅಥವಾ ಕೀಸ್ಟ್ರೋಕ್‌ಗಳು ಮತ್ತು ಖಾಸಗಿ ಸಂದೇಶಗಳನ್ನು ಟ್ರ್ಯಾಕ್ ಮಾಡಲು ನಿಮ್ಮ ಸಾಧನಕ್ಕೆ ರಿಮೋಟ್ ಆಕ್ಸೆಸ್ ಒದಗಿಸಲು ನಿರ್ಮಿಸಲಾದ ನಕಲಿ ಜನಗಣತಿ ಆ್ಯಪ್‌ಗಳನ್ನು (APKs) ಡೌನ್‌ಲೋಡ್ ಮಾಡಲು ವಂಚಕರು ನಾಗರಿಕರಿಗೆ ಒತ್ತಡ ಹೇರುತ್ತಾರೆ.

ಜನಗಣತಿ ಅಧಿಕಾರಿಗಳಂತೆ ನಟಿಸುವ ವಂಚಕರನ್ನು ಗುರುತಿಸುವುದು ಹೇಗೆ

  1. ನಿಜವಾದ ಅಧಿಕಾರಿಗಳು ಎಂದಿಗೂ OTP, CVV, ಪಿನ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಕೇಳುವುದಿಲ್ಲ.
  2. ನಿಮ್ಮ ಆಧಾರ್ ಅಥವಾ PAN ಕಾರ್ಡ್‌ನ ಫೋಟೋಗಳನ್ನು ತೆಗೆದುಕೊಳ್ಳಲು ಅವರು ಒತ್ತಾಯಿಸಿದರೆ ಜಾಗರೂಕರಾಗಿರಿ, ಅವುಗಳನ್ನು ದುರುಪಯೋಗಪಡಿಸಿಕೊಳ್ಳಬಹುದು.
  3. ವಂಚಕರು Gmail ಅಥವಾ Yahoo ಇಮೇಲ್‌ಗಳನ್ನು ಮತ್ತು ಸರ್ಕಾರೇತರ ವೆಬ್‌ಸೈಟ್‌ಗಳನ್ನು ಬಳಸುತ್ತಾರೆ. ಅಧಿಕೃತ ಸರ್ಕಾರಿ ಸಂವಹನಗಳು ಕೇವಲ .gov.in ಡೊಮೇನ್‌ಗಳನ್ನು ಮಾತ್ರ ಬಳಸುತ್ತವೆ.
  4. ನಿಜವಾದ ಅಧಿಕಾರಿಗಳು ಸರ್ಕಾರ ನೀಡಿದ ಗುರುತಿನ ಚೀಟಿಗಳು ಮತ್ತು ಅಧಿಕಾರ ಪ್ರಮಾಣಪತ್ರಗಳನ್ನು ಹೊಂದಿರುತ್ತಾರೆ. ಅವರು ದತ್ತಾಂಶ ಸಂಗ್ರಹಣೆಗಾಗಿ ಸರ್ಕಾರ ನೀಡಿದ ವಿಶೇಷ ಮೊಬೈಲ್ ಫೋನ್‌ಗಳನ್ನು ಸಹ ಬಳಸುತ್ತಾರೆ.
  5. ಜನಗಣತಿಯು ಉಚಿತವಾಗಿದೆ, “ನೋಂದಣಿ ಶುಲ್ಕ” ಅಥವಾ “ಸೌಲಭ್ಯ ಶುಲ್ಕ” ಕ್ಕಾಗಿ ಯಾವುದೇ ಬೇಡಿಕೆಯು 100% ಎಚ್ಚರಿಕೆಯ ಸಂಕೇತವಾಗಿದೆ.

ನೀವು ವಂಚನೆಗೆ ಒಳಗಾದಲ್ಲಿ ಏನು ಮಾಡಬೇಕು?

  • ನಿಮ್ಮ ಬ್ಯಾಂಕ್‌ನ ಅಧಿಕೃತ ಆ್ಯಪ್ ಅಥವಾ ಶಾಖೆಯ ಮೂಲಕ ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು UPI ಆಕ್ಸೆಸ್ ಅನ್ನು ಫ್ರೀಜ್ ಮಾಡಿ.
  • ನೀವು ಅನುಮಾನಾಸ್ಪದ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿದ್ದರೆ, ಸ್ಪೈವೇರ್/ಮಾಲ್‌ವೇರ್ ಅನ್ನು ತೆಗೆದುಹಾಕಲು ಫ್ಯಾಕ್ಟರಿ ರಿಸೆಟ್ ಮಾಡಿ.
  • ನಕಲಿ ಅಧಿಕಾರಿಯು ನಿಮ್ಮ ಮನೆಗೆ ಖುದ್ದಾಗಿ ಭೇಟಿ ನೀಡಿದ್ದರೆ, ಅವರು ನೆರೆಹೊರೆಯವರನ್ನು ಗುರಿಯಾಗಿಸುವುದನ್ನು ತಡೆಯಲು ನಿಮ್ಮ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.

ವರದಿ ಮಾಡುವುದು ಹೇಗೆ

ನೀವು ವಂಚನೆಗೆ ಒಳಗಾಗಿದ್ದೀರಿ ಎಂದು ಅನುಮಾನ ಬಂದರೆ, ತಕ್ಷಣವೇ ಅದನ್ನು ವರದಿ ಮಾಡಿ:

PhonePe ನಲ್ಲಿ ವರದಿ ಮಾಡುವುದು:

  • PhonePe ಗ್ರೂಪ್ ಚಾಟ್: ಗ್ರೂಪ್ ವಂಚನೆಯಿಂದ ಕೂಡಿದೆ ಎಂದು ನಿಮಗೆ ಅನುಮಾನ ಬಂದರೆ, ಗ್ರೂಪ್ ಪ್ರೊಫೈಲ್ ಅಡಿಯಲ್ಲಿರುವ “Exit/ಎಕ್ಸಿಟ್ ಆಗಿ” ಮತ್ತು “Report/ರಿಪೋರ್ಟ್ ಮಾಡಿ” ಆಯ್ಕೆಯನ್ನು ಕ್ಲಿಕ್ ಮಾಡಬಹುದು.
  • PhonePe ಆ್ಯಪ್: ‘Help/ಸಹಾಯ’ ವಿಭಾಗಕ್ಕೆ ಹೋಗಿ ದೂರು ನೀಡಿ.
  • ಗ್ರಾಹಕ ಬೆಂಬಲ: 80-68727374 / 022-68727374 ಸಂಖ್ಯೆಗೆ ಕರೆ ಮಾಡಿ.
  • ಸಾಮಾಜಿಕ ಜಾಲತಾಣಗಳು:
  • ದೂರು ಪರಿಹಾರ: PhonePe ಕುಂದುಕೊರತೆ ಪೋರ್ಟಲ್ನಲ್ಲಿ ದೂರು ದಾಖಲಿಸಿ.

ಅಧಿಕಾರಿಗಳಿಗೆ ವರದಿ ಮಾಡುವುದು:

  • ಸೈಬರ್ ಕ್ರೈಮ್: ಸೈಬರ್ ಕ್ರೈಂ ಪೋರ್ಟಲ್ನಲ್ಲಿ ಆನ್‌ಲೈನ್ ದೂರು ನೀಡಿ ಅಥವಾ 1930 ಕ್ಕೆ ಕರೆ ಮಾಡಿ.
  • ದೂರಸಂಪರ್ಕ ಇಲಾಖೆ (DOT): ಸಂಚಾರ್ ಸಾಥಿ ಪೋರ್ಟಲ್‌ನಲ್ಲಿರುವ ಚಕ್ಷು ಸೌಲಭ್ಯದ ಮೂಲಕ ಅನುಮಾನಾಸ್ಪದ ಸಂದೇಶಗಳು, ಕರೆಗಳು ಅಥವಾ WhatsApp / ಟೆಲಿಗ್ರಾಮ್ ವಂಚನೆಯನ್ನು ವರದಿ ಮಾಡಿ.

ಮುಖ್ಯವಾದ ವಿಷಯ —  PhonePe ಎಂದಿಗೂ ನಿಮ್ಮ ಖಾಸಗಿ ಅಥವಾ ಗೌಪ್ಯ ವಿವರಗಳನ್ನು (PIN, OTP) ಕೇಳುವುದಿಲ್ಲ. phonepe.com ಡೊಮೇನ್‌ನಿಂದಲ್ಲದಿದ್ದರೆ PhonePe ನಿಂದ ಬಂದಿದೆ ಎಂದು ಹೇಳಿಕೊಳ್ಳುವ ಯಾವುದೇ ಇ-ಮೇಲ್ ಬಂದರೆ ಅದನ್ನು ನಂಬಬೇಡಿ. ನಿಮಗೆ ಅನುಮಾನ ಬಂದರೆ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಿ.

Keep Reading