PhonePe ನಲ್ಲಿ ಆಧಾರ್ e-KYC ಗಾಗಿ ನಿಯಮಗಳು
ಆಧಾರ್ ನಂಬರ್/VID ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಯನ್ನು ಒದಗಿಸುವ ಮೂಲಕ, ಈ ಕೆಳಗಿನ ನಿಯಮಗಳ
ಪ್ರಕಾರ ನಿಮ್ಮ ಆಧಾರ್ ಮಾಹಿತಿಯನ್ನು ಬಳಸಿಕೊಂಡು ನಿಮ್ಮ e-KYC ನಿರ್ವಹಿಸಲು ನೀವು PhonePe ಗೆ ಅನುಮತಿಯನ್ನು ನೀಡುತ್ತೀರಿ:
-
PhonePe ವಾಲೆಟ್ ಅಪ್‌ಗ್ರೇಡ್ ಮಾಡಲು e-KYC ದೃಢೀಕರಣಕ್ಕಾಗಿ UIDAI ಗೆ ಸಲ್ಲಿಸಲು ನಿಮ್ಮ ಆಧಾರ್ ಮಾಹಿತಿಯನ್ನು/VID
ಬಳಸುವುದಕ್ಕಾಗಿ ನೀವು PhonePe ಗೆ ಅಧಿಕಾರ ನೀಡುತ್ತೀರಿ.
-
ದೃಢೀಕರಣ ಯಶಸ್ವಿಯಾದ ನಂತರ, ಮಾಸ್ಕ್ ಆದ ಆಧಾರ್, ಜನಸಂಖ್ಯಾ ಮಾಹಿತಿ, ಗುರುತಿನ ಮಾಹಿತಿ, ಆಧಾರ್ ನೋಂದಾಯಿತ ಮೊಬೈಲ್
ಸಂಖ್ಯೆಯನ್ನು PhonePe ನೊಂದಿಗೆ UIDAI ಹಂಚಿಕೊಳ್ಳುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಂಡಿದ್ದೀರಿ (ಒಟ್ಟಾರೆಯಾಗಿ,
"ಮಾಹಿತಿ").
-
ಸ್ವೀಕರಿಸಿದ ಮಾಹಿತಿಯನ್ನು ನೀವು ಯಶಸ್ವಿಯಾಗಿ ಆನ್‌ಬೋರ್ಡ್ ಮಾಡಲು ಅಗತ್ಯವಿರುವ ಪರಿಶೀಲನೆಯ ಉದ್ದೇಶಕ್ಕಾಗಿ ಮಾತ್ರ PhonePe
ಬಳಸುತ್ತದೆ.
-
ಆಧಾರ್ e-KYC ಪ್ರಕ್ರಿಯೆಗಾಗಿ ಸಂಗ್ರಹಿಸಿದ ನಿಮ್ಮ e-KYC ಮಾಹಿತಿ ಸಂಗ್ರಹಿಸಲು ನೀವು ನಮಗೆ ನೀಡಿದ ಸಮ್ಮತಿಯನ್ನು ಯಾವುದೇ
ಸಮಯದಲ್ಲಾದರೂ ಹಿಂಪಡೆಯಬಹುದು. ನಿಮ್ಮ ಸಮ್ಮತಿಯನ್ನು ಹಿಂಪಡೆಯಲು, ಆ್ಯಪ್‌ನಲ್ಲಿನ ಸಪೋರ್ಟ್ ಮೂಲಕ ಸಂಪರ್ಕಿಸಿ ಅಥವಾ ನಿಮ್ಮ
ನೋಂದಾಯಿತ ಇಮೇಲ್ ಐಡಿಯಿಂದ https://support.phonepe.comಗೆ ಇಮೇಲ್ ಮಾಡಿ.
-
ಆಧಾರ್ ಸಲ್ಲಿಕೆ ಸ್ವಯಂಪ್ರೇರಿತವಾದುದಾಗಿದೆ ಮತ್ತು ನೀವು ಅಪ್‌ಗ್ರೇಡ್ ಮಾಡದೆಯೇ ಕಡಿಮೆ ಮಿತಿಗಳೊಂದಿಗೆ PhonePe ವ್ಯಾಲೆಟ್
ಅನ್ನು ಬಳಸುವುದನ್ನು ಮುಂದುವರಿಸಬಹುದು.
-
ನೀವು ಒದಗಿಸಿದ ಮಾಹಿತಿಯು ಕ್ರಮಬದ್ಧವಾಗಿರದಿದ್ದರೆ ಅಥವಾ ನೀವು ಒದಗಿಸಿದ ಯಾವುದೇ ಮಾಹಿತಿಯು ತಪ್ಪಾಗಿದ್ದರೆ ಅಂತಹ
ಸಂದರ್ಭದಲ್ಲಿ ನೀವು PhonePe ಅಥವಾ ಅದರ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುವುದಿಲ್ಲ.
-
ಯಾವುದೇ ಕುಂದುಕೊರತೆಗೆ ಸಂಬಂಧಿಸಿದ ಮಾರ್ಗದರ್ಶನ ಅಥವಾ ಪರಿಹಾರಕ್ಕಾಗಿ, ನೀವು ಆ್ಯಪ್‌ನಲ್ಲಿನ ಸಪೋರ್ಟ್ ತಂಡವನ್ನು
ಸಂಪರ್ಕಿಸಬಹುದು ಅಥವಾ ನಿಮ್ಮ ನೋಂದಾಯಿತ ಇಮೇಲ್ ಐಡಿಯಿಂದ https://support.phonepe.com ಗೆ
ಮೇಲ್ ಕಳುಹಿಸಬಹುದು ಅಥವಾ 080-68727374 / 022-68727374 ಗೆ ಕರೆ ಮಾಡಿ ಅಂತರ್ ಬೆಂಬಲ ತಂಡವನ್ನು ಸಂಪರ್ಕಿಸಬಹುದು.