
Investments
PhonePe ಭಾರತದ ಮೊಟ್ಟಮೊದಲ ಸೂಪರ್ ಫಂಡ್ ಅನ್ನು ಬಿಡುಗಡೆ ಮಾಡುತ್ತಿದೆ
PhonePe Regional|2 min read|17 August, 2021
ಸೂಪರ್ ಫಂಡ್‌ಗಳು ಎಂದರೇನು ಮತ್ತು ನೀವು ಅದರಲ್ಲಿ ಹೂಡಿಕೆ ಮಾಡಬಹುದೇ ಎಂಬುದರ ಕುರಿತು ಕುತೂಹಲ ಇದೆಯೇ?
ಇದರ ಕುರಿತು ವಿವರಗಳು ಇಲ್ಲಿವೆ.

ಮ್ಯೂಚುವಲ್ ಫಂಡ್ ನಿಮಗೆ ಸೂಕ್ತವಾದುದೇ?
ಮ್ಯೂಚ್ಯೂವಲ್ ಫಂಡ್ ಕುರಿತ ಹಲವಾರು ಚರ್ಚೆಗಳು ನಿಮ್ಮನ್ನು ಗೊಂದಲಗೊಳಿಸುತ್ತಿವೆಯೇ? ನಿಜಕ್ಕೂ ಅದು ತುಂಬಾ ಸರಳವಾದುದು.
ಮುಖ್ಯವಾಗಿ ಮೂರು ಪ್ರಕಾರದ ಮ್ಯೂಚುವಲ್ ಫಂಡ್‌ಗಳಿವೆ:
1)ಇಕ್ವಿಟಿ ಫಂಡ್‌ಗಳು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ ಮತ್ತು ಇವು ಹೆಚ್ಚು ಅಪಾಯ ಇರುವವುಗಳೆಂದು ಪರಿಗಣಿಸಲಾಗುತ್ತದೆ, ಆದರೆ ಹೆಚ್ಚು ಲಾಭವನ್ನು ಕೂಡಾ ನೀಡುತ್ತವೆ.
2) ಡೆಟ್ ಫಂಡ್‌ಗಳು ಸರ್ಕಾರವು ಬಿಡುಗಡೆಗೊಳಿಸಿರುವ ಬಾಂಡ್‌ಗಳಲ್ಲಿ (Gilts) ಅಥವಾ ಬ್ಯಾಂಕುಗಳನ್ನೂ ಒಳಗೊಂಡಂತೆ ಕಾರ್ಪೊರೇಟ್‌ಗಳ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು ಸಾಮಾನ್ಯವಾಗಿ ಕಡಿಮೆ ಅಪಾಯ ಹೊಂದಿರುವವುಗಳಾಗಿದ್ದು ಸ್ಥಿರವಾದ ಆದಾಯವನ್ನು ನೀಡುತ್ತವೆ.
3) ಹೈಬ್ರಿಡ್ ಫಂಡ್‌ಗಳು ಇಕ್ವಿಟಿ ಮತ್ತು ಡೆಟ್ ಇನ್ಸ್ಟ್ರುಮೆಂಟ್‌ಗಳು ಎರಡರಲ್ಲಿಯೂ ಹೂಡಿಕೆ ಮಾಡಲಾಗುತ್ತದೆ ಮತ್ತು ಇವು ಮಧ್ಯಮ ಅಪಾಯ ಹಾಗೂ ಆದಾಯವನ್ನು ಹೊಂದಿರುತ್ತವೆ.

ಫಂಡ್ಸ್ ಆಫ್ ಫಂಡ್ಸ್ ಎಂದರೇನು ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ?
ಫಂಡ್ ಆಫ್ ಫಂಡ್ಸ್ (FOF) ಗಳನ್ನು ಬಹುಪ್ರಕಾರದ ಫಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ ಮತ್ತು ಇವು ಹೂಡಿಕೆದಾರರಿಗೆ ಹೆಚ್ಚು ಹೊಂದಿಕೆಯಾಗುತ್ತದೆ ಹಾಗೂ ಹೆಚ್ಚಿನ ಲಾಭವನ್ನು ನೀಡುವ ಗುರಿಯನ್ನು ಹೊಂದಿವೆ. ಆದಾಗ್ಯೂ, ಹೆಚ್ಚಿನ ಮ್ಯೂಚುವಲ್ ಫಂಡ್ ಕಂಪನಿಗಳು ಕ್ಲೋಸ್ಡ್ ಫಂಡ್ ಆಫ್ ಫಂಡ್ಸ್ ಅನ್ನು ಆಫರ್ ಮಾಡುತ್ತವೆ, ಏಕೆಂದರೆ ಅವರು ತಮ್ಮದೇ ಕಂಪನಿಗಳ ಫಂಡ್‌ಗಳನ್ನು ಆಯ್ಕೆ ಮಾಡಲು ತಮ್ಮನ್ನು ನಿರ್ಬಂಧಿಸಿಕೊಂಡಿರುತ್ತಾರೆ. ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ ಕಂಪೆನಿಗಳು ಕೆಲವು ವಲಯಗಳಲ್ಲಿ ಉತ್ತಮವಾಗಿರಬಹುದು, ಆದರೆ ಇತರ ಕೆಲವು ವಲಯಗಳಲ್ಲಿ ದುರ್ಬಲವಾಗಿರಬಹುದು. ಇದು ಪ್ರತಿ ಕೆಟಗರಿಯಿಂದ ಉತ್ತಮ ಫಂಡ್ ಅನ್ನು ಆಯ್ಕೆ ಮಾಡುವ FOF ನ ಸಾಮರ್ಥ್ಯವನ್ನು ನಿರ್ಬಂಧಿಸುತ್ತದೆ.

ಓಪನ್ ಸೂಪರ್ ಫಂಡ್ಸ್‌ಗೆ ಸೇರಿ!
ಸೂಪರ್ ಫಂಡ್ಸ್ ವಿವಿಧ ಫಂಡ್ ಹೌಸ್‌ಗಳಿಂದ ಉತ್ತಮವಾದ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಇದರಿಂದಾಗಿ ಅವುಗಳು ಒಂದೇ ಕಂಪೆನಿಯ ಫಂಡ್ ಆಫ್ ಫಂಡ್ಸ್‌ನ ತೊಂದರೆಗಳಿಂದ ಹೊರಬರುವುದು ಸಾಧ್ಯವಾಗುತ್ತದೆ. ಉದಾಹರಣೆಗೆ;Aditya Birla Sunlife (ABSL) ಇಕ್ವಿಟಿಯಲ್ಲಿ ತುಂಬಾ ದೃಢವಾಗಿರಬಹುದು ಮತ್ತು Axis ಮ್ಯೂಚುವಲ್ ಫಂಡ್ ಡೆಟ್ ಫಂಡ್‌ನಲ್ಲಿ ದೃಢವಾಗಿರಬಹುದು. ಆದ್ದರಿಂದ ABSL ನಿಂದ ಉತ್ತಮವಾದ ಇಕ್ವಿಟಿ ಫಂಡ್ ಮತ್ತು ಉತ್ತಮವಾದ ಡೆಟ್ ಫಂಡ್ ಅನ್ನು Axis ನಿಂದ ತೆಗೆದುಕೊಳ್ಳುವ ಮೂಲಕ ಉತ್ತಮವಾದ ಓಪನ್ ಫಂಡ್ ಆಫ್ ಫಂಡ್ಸ್ ಅನ್ನು ರಚಿಸಬಹುದಾಗಿದೆ.
ಸೂಪರ್‌ಗಿಂತಲೂ ಸೂಪರ್: PhonePe ನಲ್ಲಿ ಸೂಪರ್ ಫಂಡ್ಸ್
PhonePe ನಲ್ಲಿರುವ ಸೂಪರ್ ಫಂಡ್ ಪರಿಹಾರವು ವಿವಿಧ ಮ್ಯೂಚ್ಯೂವಲ್ ಫಂಡ್ ಕಂಪೆನಿಗಳಿಂದ ಅತ್ಯುತ್ತಮವಾದ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಅಲ್ಲದೆ ಕನ್ಸರ್ವೇಟಿವ್ ಫಂಡ್, ಮಾಡರೇಟ್ ಫಂಡ್ ಮತ್ತು ಅಗ್ರೆಸ್ಸಿವ್ ಫಂಡ್ ಎನ್ನುವ ಮೂರು ಆಯ್ಕೆಗಳನ್ನು ನೀಡುತ್ತದೆ. ಇದರಿಂದಾಗಿ ನಿಮಗೆ ಸಾಧ್ಯವಾಗುವ ಅಪಾಯ ಮತ್ತು ಆದಾಯದ ಅತ್ಯುತ್ತಮ ಕಾಂಬಿನೇಶನ್ ಅನ್ನು ಆಯ್ಕೆ ಮಾಡಬಹುದಾಗಿದೆ.
ಆದ್ದರಿಂದ PhonePe ನಲ್ಲಿರುವ ಸೂಪರ್ ಫಂಡ್ಸ್ ಈ ಕೆಳಗಿನ ಕಾರಣಗಳಿಂದಾಗಿ ವಿಶಿಷ್ಟ ಎನಿಸುತ್ತವೆ
- .ನೀವು ತೆಗೆದುಕೊಳ್ಳಲು ತಯಾರಿರುವ ಅಪಾಯದ ಆಧಾರದ ಮೇಲೆ ನೀವು ನಿಮಗೆ ಸರಿಯಾದ ಸೂಪರ್ ಫಂಡ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾದ ಸರಳ ಮತ್ತು ಸಮಗ್ರ ಪರಿಹಾರವಾಗಿದೆ. ನಂತರದ್ದನ್ನು ಎಕ್ಸ್‌ಪರ್ಟ್ ಫಂಡ್ ಮ್ಯಾನೇಜರ್‌ಗಳಿಗೆ ಬಿಟ್ಟುಬಿಡಿ. ಅವರು ನೀವು ಆಯ್ಕೆ ಮಾಡಿಕೊಂಡ ಸೂಪರ್ ಫಂಡ್‌ನ ಆಧಾರದ ಮೇಲೆ ಯಾವ ಫಂಡ್‌ನ ಮೇಲೆ ಎಷ್ಟು ಪ್ರಮಾಣದ ಹೂಡಿಕೆ ಮಾಡಬಹುದು ಎಂದು ನಿರ್ಧರಿಸಿ ಹೂಡಿಕೆ ಮಾಡುತ್ತಾರೆ.
- ಎಕ್ಸ್‌ಪರ್ಟ್ ಫಂಡ್ ಮ್ಯಾನೇಜರ್‌ಗಳು ಹೂಡಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಅಗತ್ಯವಿದ್ದಲ್ಲಿ, ಮಾರುಕಟ್ಟೆ ಪರಿಸರ ಮತ್ತು ಆಧಾರವಾಗಿರುವ ಫಂಡ್‌ನ ಸ್ಥಿರತೆಗೆ ಅನುಗುಣವಾಗಿ ಬಂಡವಾಳದಲ್ಲಿನ ವಿವಿಧ ಫಂಡ್‌ಗಳ ಹಂಚಿಕೆಯಲ್ಲಿ ತೆರಿಗೆ ಸಮರ್ಥವಾಗುವ ರೀತಿಯಲ್ಲಿ ಬದಲಾವಣೆಗಳನ್ನು ಮಾಡುತ್ತಾರೆ. ಹೂಡಿಕೆ ಮಾಡಲು ಸರಿಯಾದ ಫಂಡ್ ಅನ್ನು ಆಯ್ಕೆ ಮಾಡಲು ಕಷ್ಟಪಡುತ್ತಿರುವ ಮತ್ತು ಅದನ್ನು ನಿರಂತರ ನಿಗಾವಹಿಸಲು ಸಾಧ್ಯವಾಗದ ಹೂಡಿಕೆದಾರರಿಗೆ ಇದು ಒಂದು ದೊಡ್ಡ ಸಮಾಧಾನ ಕೊಡುವ ಪರಿಹಾರವನ್ನು ಒದಗಿಸುತ್ತದೆ.
- AMC ಗಳಾದ್ಯಂತ ಸ್ಥಿರ ಯೋಜನೆಗಳನ್ನು ಆರಿಸುವ ಮತ್ತು ಫಂಡ್ ಮ್ಯಾನೇಜರ್ ಶೈಲಿಗಳಾದ್ಯಂತ ವೈವಿಧ್ಯತೆಯನ್ನು ಕಾಪಾಡುವ ಪ್ರಯತ್ನದೊಂದಿಗೆ ಬೇರೆ ಬೇರೆ ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಸೂಪರ್ ಫಂಡ್‌ಗಳು ಓಪನ್ ಆರ್ಕಿಟೆಕ್ಚರ್ ಫಂಡ್ ಆಫ್ ಫಂಡ್ಸ್ ಅನ್ನು ಅನುಸರಿಸುತ್ತವೆ.
- ಮ್ಯೂಚುವಲ್ ಫಂಡ್‌ಗಳ ಎಲ್ಲರಿಗೂ ಕೈಗೆಟುಕಬಹುದಾದ ಸಾಮರ್ಥ್ಯಕ್ಕೆ ಹೊಸ ಹಿರಿಮೆಯನ್ನು ನೀಡಿದೆ. ಏಕೆಂದರೆ ಹೂಡಿಕೆದಾರರು ಈಗ ಮ್ಯೂಚುವಲ್ ಫಂಡ್ ಸ್ಕೀಮ್‌ಗಳ ಸಾಲಿಡ್ ಪೋರ್ಟ್‌ಫೋಲಿಯೋದಲ್ಲಿ ಅತ್ಯಂತ ಕಡಿಮೆ ಅಂದರೆ ₹500 ರಷ್ಟು ಕೂಡಾ ಹೂಡಿಕೆ ಮಾಡಬಹುದು. ಹೀಗಾಗಿ ಸಣ್ಣ ಹೂಡಿಕೆದಾರರೂ ಕೂಡ ಈಗ ಉತ್ತಮ ದೀರ್ಘಕಾಲೀನ ಹೂಡಿಕೆ ಪರಿಹಾರವನ್ನು ಪಡೆಯಬಹುದಾಗಿದೆ
- 3 ವರ್ಷಗಳಿಗಿಂತ ದೀರ್ಘಾವಧಿಯ ಹೂಡಿಕೆಗೆ ಸೂಪರ್ ಫಂಡ್‌ಗಳು ಸೂಕ್ತವಾಗಿವೆ. ಅಲ್ಲದೆ ಹೂಡಿಕೆಯನ್ನು 3 ವರ್ಷಗಳಿಗಿಂತ ಹೆಚ್ಚು ಕಾಲ ಹಿಡಿದಿಟ್ಟರೆ ಇಂಡೆಕ್ಸೇಶನ್ ಪ್ರಯೋಜನಗಳನ್ನು ಕೂಡಾ ಪಡೆಯಬಹುದಾಗಿದೆ. ಇದು ಬ್ಯಾಂಕ್ ನಿಶ್ಚಿತ ಠೇವಣಿಗಳಂತಹ ಸಾಂಪ್ರದಾಯಿಕ ಹೂಡಿಕೆಯ ಹೋಲಿಕೆಯಲ್ಲಿ ಮತ್ತು ಬಹುತೇಕ ಇಕ್ವಿಟಿ ಫಂಡ್‌ಗಳಿಗೆ ಸಮನಾದ ತೆರಿಗೆ-ದಕ್ಷತೆಯನ್ನು ನೀಡುತ್ತದೆ.
Keep Reading
Investments
Simplifying the Mutual Fund Portfolio Puzzle
The article highlights key elements that will help the investor to arrive at a robust mutual fund portfolio. Having a structured portfolio construction approach goes a long way in achieving the investor’s wealth creation goals.
Investments
WealthTech Platforms: Paving the Way for young Investors to Create Wealth
The emergence of several wealthtech platforms has provided young investors across the country an opportunity to start their investing journey much earlier compared to previous generations taking them closer to their wealth creations at a early age.
Investments
Invest in Gold easily and systematically with UPI SIP on PhonePe
Indians love Gold. So, it is no surprise that Indians buy over 700 tonnes of gold in the form of jewelry, coins and bars every year! PhonePe, thus, offers its users an opportunity to invest in 99.99% pure 24K Gold