Privacy Policy

ಕುಂದುಕೊರತೆ ನೀತಿ

Englishગુજરાતીதமிழ்తెలుగుमराठीമലയാളംঅসমীয়াবাংলাहिन्दीಕನ್ನಡଓଡ଼ିଆ

ಆವೃತ್ತಿ ಸಂಖ್ಯೆ 10

ದಿನಾಂಕ: ಜುಲೈ 16, 2026

1. ಹಿನ್ನೆಲೆ

PhonePe ಲಿಮಿಟೆಡ್ (“PhonePe”) (ಹಿಂದೆ ‘PhonePe ಪ್ರೈವೇಟ್ ಲಿಮಿಟೆಡ್’ ಎಂದು ಕರೆಯಲಾಗುತ್ತಿತ್ತು) ಭಾರತದಲ್ಲಿ ಪ್ರಿಪೇಯ್ಡ್ ಪಾವತಿ ಸಾಧನಗಳನ್ನು (“PPI”) ವಿತರಿಸಲು ಮತ್ತು ನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ (“RBI”) ನಿಂದ ಅಧಿಕಾರ ಪಡೆದಿದೆ, ಪಾವತಿ ಮತ್ತು ಸೆಟಲ್‌ಮೆಂಟ್‌ ವ್ಯವಸ್ಥೆಗಳ ಕಾಯ್ದೆ, 2007 ರ ನಿಬಂಧನೆಗಳು ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ನಿರ್ದೇಶನಗಳು ಮತ್ತು ನಿಯಮಗಳಿಗೆ ಅನುಸಾರವಾಗಿದೆ. ಭಾರತ್ ಬಿಲ್ ಪೇಮೆಂಟ್‌ ಆಪರೇಟಿಂಗ್‌ ಯುನಿಟ್‌ (“BBPOU”) ಆಗಿ ಕಾರ್ಯನಿರ್ವಹಿಸಲು PhonePe ಗೆ RBI ಅಧಿಕಾರ ನೀಡಿದೆ ಮತ್ತು PhonePe ಗೆ ಪಾವತಿ ಸಂಗ್ರಾಹಕ (PA) ಆಗಿ ಕಾರ್ಯನಿರ್ವಹಿಸಲು RBI ಅಧಿಕಾರ ನೀಡಿದೆ.

ಬ್ಯಾಂಕ್‌ಗಳು ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (“NPCI”) ಪಾಲುದಾರಿಕೆಯೊಂದಿಗೆ UPI ಸೇವೆಗಳಿಗಾಗಿ PhonePe ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ (TPAP) ಆಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚುವರಿಯಾಗಿ, PhonePe ಪ್ಲಾಟ್‌ಫಾರ್ಮ್‌ಗಳಲ್ಲಿ ಬ್ಯಾಂಕ್‌ಗಳು ವಿತರಿಸುವ ಕೋ-ಬ್ರ್ಯಾಂಡೆಡ್‌ ಕ್ರೆಡಿಟ್ ಕಾರ್ಡ್‌ಗಳು / ಕ್ರೆಡಿಟ್ ಕಾರ್ಡ್‌ಗಳು, ಫಿಕ್ಸೆಡ್ ಡೆಪಾಸಿಟ್‌ಗಳು, ರೀಚಾರ್ಜ್‌ಗಳು ಮತ್ತು ಡಿಜಿಟಲ್ ಲೋಹಗಳು (ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ) ಇತ್ಯಾದಿ ಉತ್ಪನ್ನಗಳನ್ನು ವಿತರಿಸಲು PhonePe ಥರ್ಡ್ ಪಾರ್ಟಿಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಅದರಂತೆ, PhonePe ತನ್ನ ಎಲ್ಲ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಕುಂದುಕೊರತೆ ಪರಿಹಾರ ಪ್ರಕ್ರಿಯೆಯನ್ನು ಕುಂದುಕೊರತೆ ನೀತಿಯ ಮೂಲಕ ಪ್ರಮಾಣೀಕರಿಸಿದೆ.

2. ವ್ಯಾಪ್ತಿ

ಈ ನೀತಿಯು ಕೆಳಗಿನ ಅಂಶಗಳನ್ನು ಒಳಗೊಂಡಿದೆ :

i. ಗ್ರಾಹಕರಿಗಾಗಿ ರೀಚಾರ್ಜ್, ಬಿಲ್ ಪಾವತಿ, PhonePe ವ್ಯಾಲೆಟ್, PhonePe ಗಿಫ್ಟ್ ಕಾರ್ಡ್‌ಗಳು, UPI, ಕ್ರೆಡಿಟ್ ಕಾರ್ಡ್‌ಗಳು, ಪ್ರಯಾಣ ಮತ್ತು ಸಾರಿಗೆ, ಡಿಜಿಟಲ್ ಲೋಹಗಳ (ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ) ಖರೀದಿಗಳು, ಫಿಕ್ಸೆಡ್ ಡೆಪಾಸಿಟ್ ವಿತರಣೆ ಇತ್ಯಾದಿಗಳನ್ನು ಒಳಗೊಂಡಂತೆ ಸ್ಮಾರ್ಟ್‌ಫೋನ್‌ಗಳು ಮತ್ತು ಫೀಚರ್ ಫೋನ್‌ಗಳೆರಡರಲ್ಲೂ PhonePe ಆ್ಯಪ್‌ನಲ್ಲಿ PhonePe ನೀಡುವ ಉತ್ಪನ್ನ ಮತ್ತು ಸೇವೆಗೆ ಸಂಬಂಧಿಸಿದ ದೂರುಗಳನ್ನು ಈ ನೀತಿಯು ಪರಿಹರಿಸುತ್ತದೆ. ಈ ನೀತಿಯು PhonePe Rupay ಆನ್-ದಿ-ಗೋ ಕಾರ್ಡ್‌ (NCMC) ಗೆ ಸಂಬಂಧಿಸಿದ ಗ್ರಾಹಕರ ದೂರುಗಳನ್ನು ಸಹ ಪರಿಹರಿಸುತ್ತದೆ.

ii. ಈ ನೀತಿಯು, PhonePe Business ಆ್ಯಪ್‌ನಲ್ಲಿ PhonePe ನೀಡುವ ಉತ್ಪನ್ನ ಮತ್ತು ಸೇವೆಗಳು ಮತ್ತು ಸಲ್ಲಿಸಲಾದ ಆಧಾರ್ eKYC-ಸಂಬಂಧಿತ ಸಮಸ್ಯೆಗಳನ್ನು ಒಳಗೊಂಡಂತೆ ವ್ಯಾಪಾರಿ ಕುಂದುಕೊರತೆ ಪರಿಹಾರವನ್ನು ಸಹ ತಿಳಿಸುತ್ತದೆ.

3. ಉದ್ದೇಶ:

PhonePe ಲಿಮಿಟೆಡ್‌ನ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ರೂಪಿಸುವುದು ಈ ನೀತಿಯ ಉದ್ದೇಶವಾಗಿದೆ.

ದೂರನ್ನು ಸಂಬಂಧಪಟ್ಟ ತಂಡಕ್ಕೆ ಹೇಗೆ ತಿಳಿಸಲಾಗುತ್ತದೆ ಎಂಬ ಎಸ್ಕಲೇಷನ್‌ ಮ್ಯಾಟ್ರಿಕ್ಸ್ ಪ್ರಕ್ರಿಯೆಯನ್ನು ಈ ನೀತಿಯು ಕ್ರಮವಾಗಿ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ವಿವರಿಸುತ್ತದೆ.

4. ಉದ್ದೇಶಿತ ಪ್ರೇಕ್ಷಕರು

ಈ ನೀತಿಯು PhonePe ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುವ ಎಲ್ಲ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಅನ್ವಯಿಸುತ್ತದೆ.

5. ಗ್ರಾಹಕರಿಗೆ ಸೇವಾ ಹಂತಗಳು:

ಗ್ರಾಹಕರಿಗೆ ರೀಚಾರ್ಜ್, ಬಿಲ್ ಪಾವತಿ, PhonePe ವ್ಯಾಲೆಟ್, PhonePe ಗಿಫ್ಟ್ ಕಾರ್ಡ್‌ಗಳು, UPI (ಯುನಿಫೈಡ್ ಪೇಮೆಂಟ್‌ ಇಂಟರ್ಫೇಸ್), ಕ್ರೆಡಿಟ್ ಕಾರ್ಡ್‌ಗಳು, ಪ್ರಯಾಣ ಮತ್ತು ಸಾರಿಗೆ, ಡಿಜಿಟಲ್ ಮೆಟಲ್ (ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ) ಖರೀದಿಗಳು, ಫಿಕ್ಸೆಡ್ ಡೆಪಾಸಿಟ್ ವಿತರಣೆ, PhonePe Rupay ಆನ್-ದಿ-ಗೋ ಕಾರ್ಡ್ (NCMC) ಇತ್ಯಾದಿಗಳನ್ನು ಒಳಗೊಂಡಂತೆ PhonePe ಆ್ಯಪ್‌ನಲ್ಲಿ PhonePe ನೀಡುವ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ದೂರುಗಳಿಗಾಗಿ ಸೇವಾ ಹಂತಗಳು.

ಹಂತ 1: ನಾವು ದಿನದ 24 ಗಂಟೆ ಮತ್ತು ವಾರದ 7 ದಿನವೂ ಗ್ರಾಹಕ ಬೆಂಬಲ ಸೇವೆಯನ್ನು ಒದಗಿಸುತ್ತೇವೆ.

  1. ಗ್ರಾಹಕರು ಸ್ಮಾರ್ಟ್‌ಫೋನ್‌ಗಳಿಗಾಗಿ PhonePe ಆ್ಯಪ್‌ನಲ್ಲಿ “History”/”ಇತಿಹಾಸ” ವಿಭಾಗದಿಂದ ಆಯಾ ವಹಿವಾಟನ್ನು ಆಯ್ಕೆ ಮಾಡಿ “Contact PhonePe Support”/”PhonePe ಬೆಂಬಲವನ್ನು ಸಂಪರ್ಕಿಸಿ” ಎಂಬುದನ್ನು ಕ್ಲಿಕ್ ಮಾಡುವ ಮೂಲಕ PhonePe ಗ್ರಾಹಕ ಬೆಂಬಲದೊಂದಿಗೆ ತಮ್ಮ ದೂರನ್ನು ಸಲ್ಲಿಸಬಹುದು.
    ಗ್ರಾಹಕರು ಸ್ಮಾರ್ಟ್‌ಫೋನ್‌ಗಳಿಗಾಗಿ PhonePe ಆ್ಯಪ್‌ನ ಹೋಂಪೇಜ್‌ನಲ್ಲಿರುವ (?) ಐಕಾನ್ ಮೇಲೆ ಕ್ಲಿಕ್ ಮಾಡಬಹುದು, ಅವರು ಯಾವ ವಿಷಯದ ಬಗ್ಗೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದನ್ನು ಆಯ್ಕೆ ಮಾಡಿ ಮತ್ತು ತಮ್ಮ ದೂರನ್ನು ಸಲ್ಲಿಸಬಹುದು.
  2. ಬದಲಾಗಿ, ಗ್ರಾಹಕರು ನಮ್ಮ ಗ್ರಾಹಕ ಬೆಂಬಲ ಕೇಂದ್ರವನ್ನು 080-68727374 / 022-68727374 ಗೆ ಕರೆ ಮಾಡುವ ಮೂಲಕ ದೂರು ನೀಡಬಹುದು.
  3. ಹೆಚ್ಚುವರಿಯಾಗಿ, ಗ್ರಾಹಕರು ಈ ಲಿಂಕ್ https://support.phonepe.com/ ಅನ್ನು ಕ್ಲಿಕ್ ಮಾಡುವ ಮೂಲಕ ಯಾವುದೇ ಲಾಗಿನ್-ಸಂಬಂಧಿತ ಸಮಸ್ಯೆಗಳನ್ನು ವರದಿ ಮಾಡಬಹುದು.

ದೂರುಗಳ ಪರಿಹಾರ:

  • ದೂರು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ಗ್ರಾಹಕರಿಗೆ ಮೊದಲ ಪ್ರತಿಕ್ರಿಯೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.
  • ದೂರು ಸ್ವೀಕರಿಸಿದ 15 ದಿನಗಳ ಒಳಗಾಗಿ ಎಲ್ಲ ಗ್ರಾಹಕರ ದೂರುಗಳನ್ನು ಪರಿಹರಿಸುವುದು ನಮ್ಮ ಗುರಿಯಾಗಿದೆ. ಭಾರತ್ ಕನೆಕ್ಟ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮತ್ತು ಇತರ ಕೆಲವು ಸಂದರ್ಭಗಳಲ್ಲಿ, “ಟಿಪ್ಪಣಿಗಳು” ವಿಭಾಗದಲ್ಲಿ (5.1) ಉಲ್ಲೇಖಿಸಲಾದ ವಿನಾಯಿತಿಗಳೊಂದಿಗೆ ನಾವು ದೂರನ್ನು ಸ್ವೀಕರಿಸಿದ ದಿನದಿಂದ 30 ವ್ಯವಹಾರ ದಿನಗಳಲ್ಲಿ ಪರಿಹರಿಸುವ ಗುರಿಯನ್ನು ಹೊಂದಿದ್ದೇವೆ.
  • ಅನಧಿಕೃತ ವಹಿವಾಟುಗಳಿಗೆ ಸಂಬಂಧಿಸಿದ ದೂರುಗಳನ್ನು ಈ ನೀತಿಯ ‘ಗ್ರಾಹಕ ಹೊಣೆಗಾರಿಕೆಯ ಮಿತಿ’ ವಿಭಾಗ 5.2 ರ ಪ್ರಕಾರ ನಿರ್ವಹಿಸಲಾಗುತ್ತದೆ.

ದಯವಿಟ್ಟು ವಿಭಾಗ 5.1 ರ ಅಡಿಯಲ್ಲಿ ಟಿಪ್ಪಣಿಗಳು ಎಂಬಲ್ಲಿ ನೀಡಿರುವ ವಿವರಗಳನ್ನು ನೋಡಿ.

ಹಂತ 2 – ಕುಂದುಕೊರತೆ ನೋಂದಣಿ:

i. ಹಂತ 1 ರಲ್ಲಿ ವ್ಯಾಖ್ಯಾನಿಸಲಾದ ಸಮಯದ ನಂತರ ದೂರು ಬಗೆಹರಿಯದೆ ಉಳಿದರೆ ಅಥವಾ ಹಿಂದಿನ ಹಂತದಲ್ಲಿ ಒದಗಿಸಲಾದ ಪರಿಹಾರದ ಬಗ್ಗೆ ಗ್ರಾಹಕರು ಅತೃಪ್ತರಾಗಿದ್ದರೆ, ಗ್ರಾಹಕರು ಇಲ್ಲಿ ಕ್ಲಿಕ್ ಮಾಡುವ ಮೂಲಕ ತಮ್ಮ ಸಮಸ್ಯೆಯನ್ನು ಕುಂದುಕೊರತೆ ತಂಡಕ್ಕೆ ತಿಳಿಸಬಹುದು. – https://grievance.phonepe.com/

ಹಂತ 2 ದೂರುಗಳ ಪರಿಹಾರ:

  • ನಾವು 24 ಗಂಟೆಗಳ ಒಳಗಾಗಿ ಮೊದಲ ಪ್ರತಿಕ್ರಿಯೆಯನ್ನು ಒದಗಿಸಲು ಬದ್ಧರಾಗಿದ್ದೇವೆ. ಎಲ್ಲ ಹಂತ 2 ದೂರುಗಳನ್ನು 7 ವ್ಯವಹಾರ ದಿನಗಳಲ್ಲಿ ಪರಿಹರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಭಾರತ್ ಕನೆಕ್ಟ್, ಡಿಜಿಟಲ್ ಮೆಟಲ್ಸ್ (ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ), ಕೋ-ಬ್ರ್ಯಾಂಡೆಡ್‌ ಕ್ರೆಡಿಟ್ ಕಾರ್ಡ್‌ಗಳು, ಫಿಕ್ಸೆಡ್ ಡೆಪಾಸಿಟ್ ವಿತರಣೆ ಮುಂತಾದ ಕೆಲವು ವಿಭಾಗಗಳಿಗೆ, ಥರ್ಡ್‌ ಪಾರ್ಟಿಯನ್ನು ಒಳಗೊಳ್ಳಬಹುದಾದ ದೂರುಗಳನ್ನು ಸ್ವೀಕರಿಸಿದ 30 ದಿನಗಳಲ್ಲಿ “ಟಿಪ್ಪಣಿ” ವಿಭಾಗದಲ್ಲಿ ಉಲ್ಲೇಖಿಸಲಾದ ವಿನಾಯಿತಿಗಳೊಂದಿಗೆ ಪರಿಹರಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ದಯವಿಟ್ಟು ವಿಭಾಗ 5.1 ರ ಅಡಿಯಲ್ಲಿ ಟಿಪ್ಪಣಿಗಳು ಎಂಬಲ್ಲಿ ನೀಡಿರುವ ವಿವರಗಳನ್ನು ನೋಡಿ.

ಹಂತ 3- ನೋಡಲ್ ಅಧಿಕಾರಿ ಸಂಪರ್ಕಗಳು:

ಹಂತ 2 ರಲ್ಲಿ ವ್ಯಾಖ್ಯಾನಿಸಲಾದ ಸಮಯದ ನಂತರ ದೂರು ಬಗೆಹರಿಯದೆ ಉಳಿದರೆ, ಗ್ರಾಹಕರು ನೋಡಲ್ ಮತ್ತು ಪ್ರಧಾನ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಲು ಆಯ್ಕೆ ಮಾಡಬಹುದು.

ನೋಡಲ್ ಅಧಿಕಾರಿ: ಶ್ರೀಮತಿ ದೀಪಾ ಶೆಟ್ಟಿ
ಪ್ರಧಾನ ನೋಡಲ್ ಅಧಿಕಾರಿ – ಶ್ರೀ ಅನಿಕೇತ್ ಬಹೇತಿ
ಸಂಪರ್ಕ ಸಂಖ್ಯೆ.: 080-68727105
ಇಮೇಲ್‌ ಐಡಿ: [email protected]
ವೆಬ್‌ಫಾರ್ಮ್: nodalofficerdesk.phonepe.com
ವಿಳಾಸ: ಕಚೇರಿ-2, ಮಹಡಿ 4,5,6,7, ವಿಂಗ್ A, ಬ್ಲಾಕ್ A, ಸಲಾರ್‌ಪುರಿಯಾ ಸಾಫ್ಟ್‌ಜೋನ್, ಸರ್ವಿಸ್ ರಸ್ತೆ, ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು, ಬೆಂಗಳೂರು, ಕರ್ನಾಟಕ-KA, ಪಿನ್- 560103. 
ಕೆಲಸದ ಸಮಯ: ಸೋಮ-ಶುಕ್ರ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ.

ಅಂಗವಿಕಲ ವ್ಯಕ್ತಿಗಾಗಿ ನೋಡಲ್ ಅಧಿಕಾರಿ:

ಹಿಂದಿನ ಹಂತ 2 ರಲ್ಲಿ ವ್ಯಾಖ್ಯಾನಿಸಲಾದ ಸಮಯದ ನಂತರ ದೂರು ಸಮಸ್ಯೆ ಬಗೆಹರಿಯದೆ ಉಳಿದರೆ, ಗ್ರಾಹಕರು ನೋಡಲ್ ಮತ್ತು ಪ್ರಧಾನ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಲು ಆಯ್ಕೆ ಮಾಡಬಹುದು.

ನೋಡಲ್ ಅಧಿಕಾರಿ: ಶ್ರೀಮತಿ ದೀಪಾ ಶೆಟ್ಟಿ
ಪ್ರಧಾನ ನೋಡಲ್ ಅಧಿಕಾರಿ – ಶ್ರೀ ಅನಿಕೇತ್ ಬಹೇತಿ
ಸಂಪರ್ಕ ಸಂಖ್ಯೆ.: 080-68727105
ಇಮೇಲ್‌ ಐಡಿ: [email protected]
ವೆಬ್‌ಫಾರ್ಮ್: nodalofficerdesk.phonepe.com
ವಿಳಾಸ: ಕಚೇರಿ-2, ಮಹಡಿ 4,5,6,7, ವಿಂಗ್ A, ಬ್ಲಾಕ್ A, ಸಲಾರ್‌ಪುರಿಯಾ ಸಾಫ್ಟ್‌ಜೋನ್, ಸರ್ವಿಸ್ ರಸ್ತೆ, ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು, ಬೆಂಗಳೂರು, ಕರ್ನಾಟಕ-KA, ಪಿನ್- 560103.  
ಕೆಲಸದ ಸಮಯ: ಸೋಮ-ಶುಕ್ರ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ.

ಹಂತ 3 ದೂರುಗಳ ಪರಿಹಾರ:

  • 24 ವ್ಯವಹಾರ ಗಂಟೆಗಳ ಒಳಗಾಗಿ ಮೊದಲ ಪ್ರತಿಕ್ರಿಯೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ನಾವು ಎಲ್ಲ 3ನೇ ಹಂತದ ದೂರುಗಳನ್ನು 7 ವ್ಯವಹಾರ ದಿನಗಳಲ್ಲಿ ಪರಿಹರಿಸುವ ಗುರಿಯನ್ನು ಹೊಂದಿದ್ದೇವೆ. ಭಾರತ್ ಕನೆಕ್ಟ್, ಡಿಜಿಟಲ್ ಮೆಟಲ್ಸ್(ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ), ಕೋ-ಬ್ರ್ಯಾಂಡೆಡ್‌ ಕ್ರೆಡಿಟ್ ಕಾರ್ಡ್‌ಗಳು, ಫಿಕ್ಸೆಡ್ ಡೆಪಾಸಿಟ್ ವಿತರಣೆ ಮುಂತಾದ ಕೆಲವು ಕೆಟಗರಿಗಳಿಗೆ ಥರ್ಡ್‌ ಪಾರ್ಟಿಯನ್ನು ಒಳಗೊಳ್ಳಬಹುದಾದರೆ, ದೂರು ಸ್ವೀಕರಿಸಿದ 30 ದಿನಗಳಲ್ಲಿ “ಟಿಪ್ಪಣಿ” ವಿಭಾಗದಲ್ಲಿ ಉಲ್ಲೇಖಿಸಲಾದ ವಿನಾಯಿತಿಗಳೊಂದಿಗೆ ನಾವು ಪರಿಹರಿಸುವ ಗುರಿಯನ್ನು ಹೊಂದಿದ್ದೇವೆ.

ದಯವಿಟ್ಟು ವಿಭಾಗ 5.1 ರ ಅಡಿಯಲ್ಲಿ ಟಿಪ್ಪಣಿಗಳು ಎಂಬಲ್ಲಿ ನೀಡಿರುವ ವಿವರಗಳನ್ನು ನೋಡಿ.

ಹಂತ 4- RBI ಓಂಬುಡ್ಸ್‌ಮನ್ (ಪ್ರಿಪೇಯ್ಡ್ ಇನ್‌ಸ್ಟ್ರುಮೆಂಟ್‌ಗಳಿಗೆ (PPI ಗಳು) ಮಾತ್ರ ಅನ್ವಯಿಸುತ್ತದೆ, ಅಂದರೆ PhonePe ವ್ಯಾಲೆಟ್, PhonePe ಗಿಫ್ಟ್ ಕಾರ್ಡ್‌ಗಳು ಮತ್ತು PhonePe Rupay ಆನ್‌-ದಿ-ಗೋ ಕಾರ್ಡ್ (NCMC)) 

PhonePe PPI ಗಳಿಗೆ ಸಂಬಂಧಿಸಿದ ದೂರುಗಳು 30 ದಿನಗಳ ಒಳಗೆ ಹಿಂದಿನ ಹಂತಗಳಲ್ಲಿ ತೃಪ್ತಿಕರವಾಗಿ ಪರಿಹಾರವಾಗದಿದ್ದರೆ, ಗ್ರಾಹಕರು RBI ಓಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದು. 

RBI ಓಂಬುಡ್ಸ್‌ಮನ್‌ಗೆ ದೂರನ್ನು ಮೂರು ವಿಧಾನಗಳಲ್ಲಿ ಸಲ್ಲಿಸಬಹುದು: (i) ಆನ್‌ಲೈನ್ CMS ಪೋರ್ಟಲ್ https://cms.rbi.org.in ಮೂಲಕ; ಅಥವಾ (ii) [email protected] ಗೆ ಇಮೇಲ್ ಮಾಡುವ ಮೂಲಕ; ಅಥವಾ (iii) ಭರ್ತಿ ಮಾಡಿದ ದೂರು ನಮೂನೆಯನ್ನು ಪೋಷಕ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್/ಕೊರಿಯರ್ ಮೂಲಕ ಕಳುಹಿಸುವ ಮುಖಾಂತರ: ಸೆಂಟ್ರಲೈಸ್ಡ್ ರಿಸೀಪ್ಟ್ ಆ್ಯಂಡ್‌ ಪ್ರೊಸೆಸಿಂಗ್ ಸೆಂಟರ್ (CRPC), ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ವಿಸ್ಟಾ, ಸೆಕ್ಟರ್ 17, ಚಂಡೀಗಢ – 160 017.

ರಿಸರ್ವ್ ಬ್ಯಾಂಕ್ – ಇಂಟಿಗ್ರೇಟೆಡ್ ಓಂಬುಡ್ಸ್‌ಮನ್ ಸ್ಕೀಮ್, 2026 ರ ಕುರಿತಾದ ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸ್ಕೀಮ್‌ನ ಪ್ರತಿಯ ಲಿಂಕ್ ಅನ್ನು ನೋಡಿ –  RBI ಇಂಟಿಗ್ರೇಟೆಡ್ ಓಂಬುಡ್ಸ್‌ಮನ್ ಸ್ಕೀಮ್  RBI – IO ಸ್ಕೀಮ್, 2026 ರ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಈ ನೀತಿಯ ವಿಭಾಗ 8 ರ ಅಡಿಯಲ್ಲಿ ಒದಗಿಸಲಾಗಿದೆ.

5.1 ಗ್ರಾಹಕ ಸೇವಾ ಹಂತಗಳ ಕುರಿತು ಟಿಪ್ಪಣಿಗಳು (ಎಲ್ಲ ಹಂತಗಳಿಗೂ ಅನ್ವಯಿಸುತ್ತದೆ)

  1. ನಿಮ್ಮಿಂದ ಮಾಹಿತಿಗಾಗಿ ನಾವು ಕಾಯುತ್ತಿದ್ದರೆ, ಸಮಸ್ಯೆಯನ್ನು ಪರಿಹರಿಸಲು ನಿಗದಿತ ಸಮಯಕ್ಕಿಂತ  ಹೆಚ್ಚು ಸಮಯ ತೆಗೆದುಕೊಳ್ಳಬಹುದು.
  2. ಬಾಹ್ಯ ಅವಲಂಬನೆಗಳು ಅಥವಾ ಕಾರ್ಯಾಚರಣೆ/ತಾಂತ್ರಿಕ ಕಾರಣಗಳಿಂದಾಗಿ ಯಾವುದೇ ದೂರನ್ನು ಪರಿಹರಿಸಲು ಹೆಚ್ಚುವರಿ ಸಮಯದ ಅವಶ್ಯಕತೆ ಇದ್ದರೆ, ವಿಳಂಬ ಮತ್ತು ನಿರೀಕ್ಷಿತ ಪರಿಹಾರ ಸಮಯದ ಬಗ್ಗೆ ಗ್ರಾಹಕರಿಗೆ ತಿಳಿಸಲಾಗುತ್ತದೆ.
  3. ಕೆಲವು ಸಂದರ್ಭಗಳಲ್ಲಿ, ತಕ್ಷಣವೇ ಪರಿಹಾರ ದೊರೆಯಬಹುದು, ಆದರೂ, ಅದು ಸಿಸ್ಟಂನಲ್ಲಿ ಕಾಣಿಸಿಕೊಳ್ಳಲು ಸಮಯ ತೆಗೆದುಕೊಳ್ಳಬಹುದು. ಉದಾಹರಣೆಗೆ, ರೀಫಂಡ್‌ ಆರಂಭವು ತಕ್ಷಣವೇ ಆಗಿರಬಹುದು, ಆದರೆ ಪಾವತಿ ಸಾಧನವನ್ನು ಅವಲಂಬಿಸಿ ಮೊತ್ತವು ಖಾತೆಯಲ್ಲಿ ಕಾಣಿಸಿಕೊಳ್ಳಲು 3-10 ದಿನಗಳನ್ನು ತೆಗೆದುಕೊಳ್ಳಬಹುದು. 
  4. ಭಾರತೀಯ ರಿಸರ್ವ್ ಬ್ಯಾಂಕ್, ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI), ಅಥವಾ ಕಾರ್ಡ್ ನೆಟ್‌ವರ್ಕ್ ಮಾರ್ಗಸೂಚಿಗಳು ದೂರುಗಳ ಪರಿಹಾರಕ್ಕಾಗಿ ನಿರ್ದಿಷ್ಟ ಸಮಯದ ಚೌಕಟ್ಟನ್ನು ನಿರ್ದಿಷ್ಟಪಡಿಸಿದ ಸಂದರ್ಭಗಳಲ್ಲಿ, ಆ ಗೊತ್ತುಪಡಿಸಿದ ಪರಿಹಾರ ಸಮಯ ಅನ್ವಯಿಸುತ್ತದೆ.
  5. ಥರ್ಡ್ ಪಾರ್ಟಿಯನ್ನು ಒಳಗೊಂಡಿರಬಹುದಾದ ಡಿಜಿಟಲ್ ಲೋಹಗಳ (ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ) ಖರೀದಿಗಳು (ಕೆಳಗಿನ ಪಾಯಿಂಟ್ 7 ರ ಅಡಿಯಲ್ಲಿ ಉಲ್ಲೇಖಿಸಲಾದ ವಿನಾಯಿತಿಗಳೊಂದಿಗೆ), ಕೋ-ಬ್ರ್ಯಾಂಡೆಡ್‌ ಕ್ರೆಡಿಟ್ ಕಾರ್ಡ್‌ಗಳು, ಫಿಕ್ಸೆಡ್ ಡೆಪಾಸಿಟ್ ವಿತರಣೆ ಇತ್ಯಾದಿ ಕೆಲವು ವರ್ಗಗಳಿಗೆ, ದೂರನ್ನು ಸ್ವೀಕರಿಸಿದ ನಂತರ ಪರಿಹಾರವು 30 ದಿನಗಳವರೆಗೆ ತೆಗೆದುಕೊಳ್ಳಬಹುದು.
  6. ಫೀಚರ್ ಫೋನ್‌ಗಳಿಗಾಗಿ PhonePe ಆ್ಯಪ್‌ನಲ್ಲಿ ನೀಡಲಾಗುವ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗಾಗಿ, ಗ್ರಾಹಕರು ಮೀಸಲಾದ ಸಹಾಯವಾಣಿ ಸಂಖ್ಯೆ 080-61123123 ಅಥವಾ 022-61123123 ಗೆ ಕರೆ ಮಾಡಬಹುದು. 
  7. ಭಾರತ್ ಕನೆಕ್ಟ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ – ಬಾಹ್ಯ ಅಂಶಗಳ ಮೇಲೆ ಯಾವುದೇ ಅವಲಂಬನೆ ಇಲ್ಲದ ಸಂದರ್ಭಗಳಲ್ಲಿ – PhonePe ತಾನು ಬದ್ಧವಾಗಿರುವ ಸಮಯದೊಳಗೆ ದೂರುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಬಾಹ್ಯ ಅಂಶಗಳ ಮೇಲೆ ಅವಲಂಬನೆ ಅಗತ್ಯವಿರುವ ಸಂದರ್ಭಗಳಲ್ಲಿ, ನಿಜವಾದ ಪರಿಹಾರ ಸಮಯಗಳು NBBL ಮತ್ತು/ಅಥವಾ ಆಯಾ ಬಿಲ್ಲರ್‌ಗಳು/ಬಿಲ್ಲರ್ ಕಾರ್ಯಾಚರಣಾ ಘಟಕಗಳು ಸಮಸ್ಯೆಯನ್ನು ಮುಕ್ತಾಯಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಅವಲಂಬಿಸಿರುತ್ತದೆ. ಬಾಹ್ಯ ಅಂಶಗಳ ಮೇಲೆ ಅವಲಂಬನೆಯನ್ನು ಒಳಗೊಂಡಿರುವ ದೂರುಗಳು ಡೆಬಿಟ್ ಮಾಡಿದ ಮೊತ್ತಗಳಿಗೆ ಸಂಬಂಧಿಸಿದವುಗಳನ್ನು ಮಾತ್ರವಲ್ಲದೆ ಈ ಕೆಳಗಿನವುಗಳನ್ನು ಸಹ ಒಳಗೊಂಡಿರುತ್ತವೆ:
    1. ಸೇವೆಗಳು ಸಿಗಲಿಲ್ಲ
    2. ಸೇವೆ ಸಂಪರ್ಕ ಕಡಿತಗೊಂಡಿದೆ/ನಿಲ್ಲಿಸಲ್ಪಟ್ಟಿದೆ
    3. ಮುಂದಿನ ಬಿಲ್‌ನಲ್ಲಿ ತಡವಾಗಿ ಪಾವತಿಸುವ ಸರ್‌ಚಾರ್ಜ್ ಅನ್ನು ಸೇರಿಸಲಾಗಿದೆ.
    4. ತಪ್ಪು ಖಾತೆಗೆ ಪಾವತಿಸಲಾಗಿದೆ
    5. ಎರಡು ಬಾರಿ ಪಾವತಿ ಮಾಡಿರುವುದು
    6. ಬಿಲ್ಲರ್‌ನಿಂದ ಪಾವತಿ ಮಾಹಿತಿ ಬಂದಿಲ್ಲ ಅಥವಾ ಬಿಲ್ಲರ್‌ನಿಂದ ಪಾವತಿ ಮಾಹಿತಿ ಬರುವಲ್ಲಿ ವಿಳಂಬವಾಗಿದೆ.
    7. ಬಿಲ್ ಪಾವತಿಸಲಾಗಿದೆ ಆದರೆ ಮೊತ್ತವನ್ನು ಸರಿಹೊಂದಿಸಲಾಗಿಲ್ಲ ಅಥವಾ ಇನ್ನೂ ಬಾಕಿ ಮೊತ್ತವನ್ನು ತೋರಿಸಲಾಗುತ್ತಿದೆ.
  8. ಡಿಜಿಟಲ್ ಚಿನ್ನ, ಬೆಳ್ಳಿ ಅಥವಾ ಪ್ಲಾಟಿನಂ ವಹಿವಾಟುಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ರೀತಿಯ ದೂರುಗಳು ಈ ನೀತಿಯ ವ್ಯಾಪ್ತಿಯಲ್ಲಿ ಬರುವುದಿಲ್ಲ; ಅವುಗಳ ಪರಿಹಾರಕ್ಕಾಗಿ, ನೀವು ನೇರವಾಗಿ ಈ ಕೆಳಗೆ ತಿಳಿಸಿದಂತೆ ಸಂಬಂಧಿತ ಪೂರೈಕೆದಾರರನ್ನು ಸಂಪರ್ಕಿಸಬೇಕು: 
    1. ಆಭರಣ ಸ್ಕೀಮ್‌ನ ಸೇವಾ ಪೂರೈಕೆದಾರರು: 
      1. ಪ್ಲ್ಯಾನ್‌ ಅರ್ಹತೆ ಮತ್ತು ಪ್ರಯೋಜನಗಳು
      2. ಆಭರಣಗಳ ಲಭ್ಯತೆ, ಬೆಲೆ ನಿಗದಿ, ರಿಡೆಂಪ್ಶನ್‌, ಶುಲ್ಕಗಳು ಮತ್ತು ಡೆಲಿವರಿ.
    2. ಡಿಜಿಟಲ್ ಚಿನ್ನ, ಬೆಳ್ಳಿ ಅಥವಾ ಪ್ಲಾಟಿನಂ ಸೇವಾ ಪೂರೈಕೆದಾರರು:
      1. ಭೌತಿಕ ಚಿನ್ನ, ಬೆಳ್ಳಿ ಅಥವಾ ಪ್ಲಾಟಿನಂ ರಿಡೆಂಪ್ಶನ್ ಸಂದರ್ಭದಲ್ಲಿ ನಾಣ್ಯ/ಭೌತಿಕ ಚಿನ್ನ, ಬೆಳ್ಳಿ ಅಥವಾ ಪ್ಲಾಟಿನಂ SKU ಗಳ ಲಭ್ಯತೆ, ಬೆಲೆ, ರಿಡೆಂಪ್ಶನ್, ಮೇಕಿಂಗ್ ಶುಲ್ಕಗಳು ಮತ್ತು ಡೆಲಿವರಿ (ಎಲ್ಲಿ ಅನ್ವಯವಾಗುತ್ತದೆಯೋ ಅಲ್ಲಿ)
      2. ಖರೀದಿ ಮತ್ತು ಮಾರಾಟ ಎರಡಕ್ಕೂ ಬೆಲೆ ನಿಗದಿ ಮಾಡುವುದರಿಂದ ಯಾವುದೇ ರಿಯಾಯಿತಿ / ಶುಲ್ಕಗಳನ್ನು ಕಡಿತಗೊಳಿಸಲಾಗುತ್ತದೆ.

5.2 ಗ್ರಾಹಕರ ಹೊಣೆಗಾರಿಕೆಯ ಮಿತಿ

ಅನಧಿಕೃತ ಪಾವತಿ ವಹಿವಾಟಿನಿಂದ ಉಂಟಾಗುವ ಗ್ರಾಹಕರ ಹೊಣೆಗಾರಿಕೆಯು ಇವುಗಳಿಗೆ ಸೀಮಿತವಾಗಿರುತ್ತದೆ:

ಕ್ರ.ಸಂವಿವರಗಳುಗ್ರಾಹಕರ ಗರಿಷ್ಠ ಹೊಣೆಗಾರಿಕೆ
1PhonePe ಯಿಂದ ವಂಚನೆ/ನಿರ್ಲಕ್ಷ್ಯ/ಕೊರತೆ ಉಂಟಾಗಿರುವುದು, (ಗ್ರಾಹಕರು ವಹಿವಾಟನ್ನು ವರದಿ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ)ಹೊಣೆಗಾರಿಕೆ ಇಲ್ಲ(ಶೂನ್ಯ)
2ಥರ್ಡ್‌-ಪಾರ್ಟಿ ಉಲ್ಲಂಘನೆ, ಇದರಲ್ಲಿ ನ್ಯೂನತೆಯು PhonePe ನಲ್ಲಿ ಅಥವಾ ಗ್ರಾಹಕರಲ್ಲಿ ಆಗಿರುವುದಿಲ್ಲ, ಬದಲಾಗಿ ವ್ಯವಸ್ಥೆಯ ಬೇರೆಡೆ ಆಗಿರುತ್ತದೆ ಮತ್ತು ಗ್ರಾಹಕರು ಅನಧಿಕೃತ ಪಾವತಿ ವಹಿವಾಟಿನ ಬಗ್ಗೆ PhonePe ಗೆ ತಿಳಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಪ್ರತಿ ವಹಿವಾಟಿನ ಗ್ರಾಹಕರ ಹೊಣೆಗಾರಿಕೆಯು ಗ್ರಾಹಕರು PhonePe ನಿಂದ ವಹಿವಾಟಿನ ಸಂವಹನವನ್ನು ಸ್ವೀಕರಿಸಿದ ಮತ್ತು ಗ್ರಾಹಕರು PhonePe ಗೆ ಅನಧಿಕೃತ ವಹಿವಾಟುಗಳನ್ನು ವರದಿ ಮಾಡುವ ನಡುವಿನ ದಿನಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ –
i. ಮೂರು ದಿನಗಳಲ್ಲಿಹೊಣೆಗಾರಿಕೆ ಇಲ್ಲ(ಶೂನ್ಯ)
ii. ನಾಲ್ಕರಿಂದ ಏಳು ದಿನಗಳಲ್ಲಿವಹಿವಾಟಿನ ಮೌಲ್ಯ ಅಥವಾ ಪ್ರತಿ ವಹಿವಾಟಿಗೆ ₹10,000 – ಯಾವುದು ಕಡಿಮೆಯೋ ಅದು ಅನ್ವಯಿಸುತ್ತದೆ.
iii. ಏಳು ದಿನಗಳನ್ನು ಮೀರಿಪ್ರಕರಣದಿಂದ ಪ್ರಕರಣಕ್ಕೆ ಅನುಗುಣವಾಗಿ PhonePe ನಿರ್ಧರಿಸುತ್ತದೆ.
3ಗ್ರಾಹಕರ ನಿರ್ಲಕ್ಷ್ಯದಿಂದಾಗಿ ನಷ್ಟ ಉಂಟಾದರೆ, ಉದಾಹರಣೆಗೆ ಅವರು ಪಾವತಿ ಕ್ರೆಡೆನ್ಶಿಯಲ್‌ಗಳನ್ನು ಹಂಚಿಕೊಂಡಿದ್ದರೆ, ಅನಧಿಕೃತ ವಹಿವಾಟನ್ನು PhonePe ಗೆ ವರದಿ ಮಾಡುವವರೆಗೆ ಗ್ರಾಹಕರು ಸಂಪೂರ್ಣ ನಷ್ಟವನ್ನು ಭರಿಸುತ್ತಾರೆ. ಅನಧಿಕೃತ ವಹಿವಾಟಿನ ವರದಿಯ ನಂತರ ಸಂಭವಿಸುವ ಯಾವುದೇ ನಷ್ಟವನ್ನು PhonePe ಭರಿಸುತ್ತದೆ.
4ಅನಧಿಕೃತ ಎಲೆಕ್ಟ್ರಾನಿಕ್ ಪಾವತಿ ವಹಿವಾಟುಗಳ ಸಂದರ್ಭಗಳಲ್ಲಿ, ಗ್ರಾಹಕರ ನಿರ್ಲಕ್ಷ್ಯ ಇದ್ದರೂ, PhonePe ತನ್ನ ಸ್ವಂತ ವಿವೇಚನೆಯಿಂದ, ನಷ್ಟವನ್ನು ಭರಿಸುವ ಹೊಣೆಗಾರಿಕೆಯಿಂದ ಗ್ರಾಹಕರಿಗೆ ವಿನಾಯಿತಿ ನೀಡಲು ನಿರ್ಧರಿಸಬಹುದು.
5ಅನಧಿಕೃತ ವಹಿವಾಟುಗಳಿಗೆ ಸಂಬಂಧಿಸಿದ ನಿಯಮಗಳು PPI-ಮಾಸ್ ಟ್ರಾನ್ಸಿಟ್ ಸಿಸ್ಟಮ್ಸ್ (MTS) – ನಿರ್ದಿಷ್ಟವಾಗಿ PhonePe RuPay ಆನ್-ದಿ-ಗೋ ಕಾರ್ಡ್ (ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್ (NCMC)) ಗೆ ಅನ್ವಯಿಸುವುದಿಲ್ಲ. ಈ ಸಂದರ್ಭಗಳಲ್ಲಿ, ಬ್ಯಾಂಕೇತರ PPI ನೀಡುವವರ ಕಡೆಯಿಂದ ವಂಚನೆ, ನಿರ್ಲಕ್ಷ್ಯ ಅಥವಾ ಸೇವಾ ಕೊರತೆಯಿಂದಾಗಿ ಅನಧಿಕೃತ ವಹಿವಾಟು ಸಂಭವಿಸಿದಲ್ಲಿ ಮಾತ್ರ ಹೊಣೆಗಾರಿಕೆಯಿಂದ ರಕ್ಷಣೆ ಅನ್ವಯಿಸುತ್ತದೆ.

ಸೀಮಿತ ಹೊಣೆಗಾರಿಕೆಯ ಮೇಲೆ ಗ್ರಾಹಕರ ಜವಾಬ್ದಾರಿ.

  • ಗ್ರಾಹಕರು ತಮ್ಮ ಖಾತೆಗಳನ್ನು ಸುರಕ್ಷಿತವಾಗಿಡಲು ಬಲವಾದ ಪಾಸ್‌ವರ್ಡ್‌ಗಳು ಮತ್ತು ಪಿನ್‌ಗಳನ್ನು ಬಳಸಬೇಕು, ಇವುಗಳನ್ನು ನಿಯಮಿತವಾಗಿ ಆಗಾಗ್ಗೆ ಬದಲಾಯಿಸಬೇಕಾಗುತ್ತದೆ. ಪಿನ್‌ಗಳು/ ಪಾಸ್‌ವರ್ಡ್‌ಗಳು ಮತ್ತು OTP ಗಳನ್ನು PhonePe ಉದ್ಯೋಗಿಗಳು ಸೇರಿದಂತೆ ಯಾರೊಂದಿಗೂ ಇಮೇಲ್/ದೂರವಾಣಿ ಮೂಲಕ ಹಂಚಿಕೊಳ್ಳಬಾರದು. PhonePe ಎಂದಿಗೂ ಅಂತಹ ಲಾಗಿನ್‌ ಮಾಹಿತಿಗಳನ್ನು ಕೇಳುವುದಿಲ್ಲ.
  • ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯಲ್ಲಿ ಬದಲಾವಣೆಗಳಿದ್ದಲ್ಲಿ, ಗ್ರಾಹಕರು ನಮ್ಮ ಗ್ರಾಹಕ ಬೆಂಬಲ ತಂಡವನ್ನು ಸಂಪರ್ಕಿಸುವ ಮೂಲಕ ಲಿಖಿತವಾಗಿ PhonePe ಗೆ ತಕ್ಷಣವೇ ತಿಳಿಸಬೇಕು.
  • ಎಲೆಕ್ಟ್ರಾನಿಕ್ ಪಾವತಿ ವಹಿವಾಟುಗಳಿಗಾಗಿ ಗ್ರಾಹಕರು ಕಡ್ಡಾಯವಾಗಿ SMS ಅಲರ್ಟ್‌ಗಳು ಮತ್ತು ಇ-ಮೇಲ್ ಅಲರ್ಟ್‌ಗಳಿಗೆ (ಅನ್ವಯವಾಗುವಲ್ಲೆಲ್ಲ) ನೋಂದಾಯಿಸಿಕೊಳ್ಳಬೇಕು.
  • ಯಾವುದೇ ಅನಧಿಕೃತ ವಹಿವಾಟನ್ನು ಗುರುತಿಸಲು ಗ್ರಾಹಕರು SMS ಅಲರ್ಟ್‌ಗಳಿಂದ ಅಥವಾ ಮೊಬೈಲ್ ಆ್ಯಪ್‌ ಮೂಲಕ ನಿಯಮಿತವಾಗಿ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ.
  • ಖಾತೆಯಲ್ಲಿನ ಯಾವುದೇ ಅನಧಿಕೃತ ವಹಿವಾಟನ್ನು PhonePe ಗೆ ತಕ್ಷಣ ವರದಿ ಮಾಡುವುದು ಗ್ರಾಹಕರ ಜವಾಬ್ದಾರಿಯಾಗಿದೆ, ವರದಿ ಮಾಡುವಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಬೇಕಾಗುತ್ತದೆ.
  • ಮಾರ್ಗಸೂಚಿಗಳ ಪ್ರಕಾರ, ದೂರು ದಾಖಲಾದ 10 ದಿನಗಳಲ್ಲಿ ಜವಾಬ್ದಾರಿಯನ್ನು ನಿರ್ಧರಿಸುವ ವಿಚಾರಣೆಯನ್ನು ಪೂರ್ಣಗೊಳಿಸದಿದ್ದರೆ, PhonePe ಗ್ರಾಹಕರ ವ್ಯಾಲೆಟ್‌ಗೆ ನಾಮಮಾತ್ರದ ಕ್ರೆಡಿಟ್ ಅನ್ನು ಜಮಾ ಮಾಡುತ್ತದೆ. 10 ದಿನಗಳ ನಂತರ – ಮತ್ತು 90 ದಿನಗಳ ಅವಧಿಯೊಳಗೆ – ಗ್ರಾಹಕರು ಜವಾಬ್ದಾರರಾಗಿರುತ್ತಾರೆ ಎಂದು ನಿರ್ಧರಿಸಿದರೆ, ನಾಮಮಾತ್ರ ಕ್ರೆಡಿಟ್ ಮೊತ್ತವನ್ನು ಮರುಪಡೆಯಲಾಗುತ್ತದೆ. 90 ದಿನಗಳ ಒಳಗೆ ವಿವಾದ ಬಗೆಹರಿಯದಿದ್ದರೆ, ನಾಮಮಾತ್ರದ ಕ್ರೆಡಿಟ್ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ ಮತ್ತು ಗ್ರಾಹಕರ ವ್ಯಾಲೆಟ್‌ಗೆ ನಿಜವಾದ ಕ್ರೆಡಿಟ್ ಆಗಿ ಜಮಾ ಮಾಡಲಾಗುತ್ತದೆ. ಆ್ಯಪ್‌ನಲ್ಲಿನ ನೋಟಿಫಿಕೇಶನ್‌ ಮೂಲಕ ಗ್ರಾಹಕರಿಗೆ ಇದರ ಬಗ್ಗೆ ತಿಳಿಸಲಾಗುತ್ತದೆ.

5.3 ವಿವಾದ ಸಲ್ಲಿಕೆ

ಭಾರತ್ ಕನೆಕ್ಟ್‌ಗೆ ಸಂಬಂಧಿಸಿದ ಸಮಸ್ಯೆಗಳಿಗಾಗಿ, ಗ್ರಾಹಕರು ಪರ್ಯಾಯವಾಗಿ ಸ್ಮಾರ್ಟ್‌ಫೋನ್‌ಗಳಿಗಾಗಿ PhonePe ಆ್ಯಪ್‌ನಲ್ಲಿ ಭಾರತ್ ಕನೆಕ್ಟ್‌ನಲ್ಲಿ ಬಿಲ್ ಪಾವತಿ ವಿವಾದವನ್ನು ಇಲ್ಲಿ ಕ್ಲಿಕ್ ಮಾಡುವ ಮೂಲಕವೂ ಸಲ್ಲಿಸಬಹುದು. ಅಂತಹ ದೂರುಗಳ ಪರಿಹಾರಕ್ಕಾಗಿ ಅಗತ್ಯವಿರುವ ಕಡೆಗಳಲ್ಲಿ NBBL, PhonePe ಅನ್ನು ಸಂಪರ್ಕಿಸಬಹುದು. ಅಂತಹ ದೂರು ಬಗೆಹರಿದಾಗ ನಾವು ಗ್ರಾಹಕರಿಗೆ ಯಾವುದೇ ನೋಟಿಫಿಕೇಶನ್‌ ಅನ್ನು ಕಳುಹಿಸುವ ಅಗತ್ಯವಿಲ್ಲ.

5.4 ಆಧಾರ್ eKYC ಕುಂದುಕೊರತೆ ಪರಿಹಾರ

ಆಧಾರ್ eKYC ಮತ್ತು ಒಪ್ಪಿಗೆಯನ್ನು ಹಿಂತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ, ಗ್ರಾಹಕರು, ಗ್ರಾಹಕರಿಗೆ ಒದಗಿಸಲಾದ ಸೇವಾ ಹಂತಗಳ ಕುರಿತು ಪ್ಯಾರಾಗ್ರಾಫ್ 5 ರ ಪ್ರಕಾರ ಸಂಪರ್ಕಿಸಬಹುದು ಅಥವಾ ದೂರು ಸಲ್ಲಿಸಬಹುದು.

6. ವ್ಯಾಪಾರಿಗಳಿಗೆ ಸೇವಾ ಹಂತಗಳು – ಆಫ್‌ಲೈನ್ ಮತ್ತು ಆನ್‌ಲೈನ್

ಸೇವಾ ಹಂತಗಳು ಆಫ್‌ಲೈನ್ ವ್ಯಾಪಾರಿ ಕುಂದುಕೊರತೆ ಪರಿಹಾರ ಆನ್‌ಲೈನ್ ವ್ಯಾಪಾರಿ ಕುಂದುಕೊರತೆ ಪರಿಹಾರ
ಹಂತ 1

ದೂರು ನೋಂದಣಿ:

PhonePe Business ಆ್ಯಪ್‌ನ ಹೋಂಪೇಜ್‌ನಲ್ಲಿರುವ ಸಹಾಯ ಐಕಾನ್ (‘?’) ಮೇಲೆ ಕ್ಲಿಕ್ ಮಾಡುವ ಮೂಲಕ ಆಫ್‌ಲೈನ್ ವ್ಯಾಪಾರಿಗಳು PhonePe ವ್ಯಾಪಾರಿ ಬೆಂಬಲದಲ್ಲಿ ತಮ್ಮ ದೂರನ್ನು ನೋಂದಾಯಿಸಬಹುದು.

ಸಹಾಯ ವಿಭಾಗದಲ್ಲಿ, ವ್ಯಾಪಾರಿಯು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ದೂರನ್ನು ಸಲ್ಲಿಸಲು “Chat with Us”/”ನಮ್ಮೊಂದಿಗೆ ಚಾಟ್ ಮಾಡಿ” ಎಂಬುದನ್ನು ಕ್ಲಿಕ್ ಮಾಡಬಹುದು.

ಬದಲಾಗಿ, ವ್ಯಾಪಾರಿಯು PhonePe Business ಡ್ಯಾಶ್‌ಬೋರ್ಡ್‌ನ ಹೋಂಪೇಜ್‌ನಲ್ಲಿರುವ ಸಹಾಯ ಐಕಾನ್ (‘?’) ಮೇಲೆ ಕ್ಲಿಕ್ ಮಾಡುವ ಮೂಲಕ https://business.phonepe.com/faq ನಲ್ಲಿ ದೂರು ದಾಖಲಿಸಬಹುದು.

ಬದಲಾಗಿ, ವ್ಯಾಪಾರಿಗಳು ನಮ್ಮ ವ್ಯಾಪಾರಿ ಬೆಂಬಲ ಕೇಂದ್ರಕ್ಕೆ 080-6872-7777 / 022-6872-7777 ಗೆ ಕರೆ ಮಾಡುವ ಮೂಲಕ ದೂರು ಸಲ್ಲಿಸಬಹುದು.

ನಾವು ದಿನದ 24 ಗಂಟೆ ಮತ್ತು ವಾರದ 7 ದಿನವೂ ಗ್ರಾಹಕ ಬೆಂಬಲ ಸೇವೆಯನ್ನು ಒದಗಿಸುತ್ತೇವೆ.

ಆನ್‌ಲೈನ್ ವ್ಯಾಪಾರಿಗಳು ತಮ್ಮ PhonePe Business ಡ್ಯಾಶ್‌ಬೋರ್ಡ್‌ನಲ್ಲಿರುವ ಸಹಾಯ ವಿಭಾಗದಿಂದ PhonePe ಪೇಮೆಂಟ್‌ ಅಗ್ರಿಗೇಟರ್‌/ ಗೇಟ್‌ವೇ ಬೆಂಬಲದೊಂದಿಗೆ ತಮ್ಮ ದೂರುಗಳನ್ನು ಸಲ್ಲಿಸಬಹುದು.

ಸಹಾಯ ವಿಭಾಗದಲ್ಲಿ, ವ್ಯಾಪಾರಿಯು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ದೂರನ್ನು ಸಲ್ಲಿಸಲು “Contact Us”/”ನಮ್ಮನ್ನು ಸಂಪರ್ಕಿಸಿ” ಎಂಬುದನ್ನು ಕ್ಲಿಕ್ ಮಾಡಬಹುದು.

ಬದಲಾಗಿ, ಆನ್‌ಲೈನ್ ವ್ಯಾಪಾರಿಗಳು ನಮ್ಮ ಆನ್‌ಲೈನ್ ವ್ಯಾಪಾರಿ ಬೆಂಬಲ ಕೇಂದ್ರಕ್ಕೆ 080-6872-7778 ಗೆ ಕರೆ ಮಾಡುವ ಮೂಲಕ ದೂರುಗಳನ್ನು ಸಲ್ಲಿಸಬಹುದು.

ವ್ಯಾಪಾರಿಗಳು ತಮ್ಮ Phonepe Business ಡ್ಯಾಶ್‌ಬೋರ್ಡ್‌ಗೆ ಲಾಗಿನ್ ಆಗಲು ಸಾಧ್ಯವಾಗದಿದ್ದರೆ, ಅವರು https://tickets.phonepe.com/en/support ಮೂಲಕ ದೂರು ನೀಡಬಹುದು.

ನಾವು ದಿನದ 24 ಗಂಟೆಗಳು ಮತ್ತು ವಾರದ 7 ದಿನಗಳು ಬೆಂಬಲ ಸೇವೆಯನ್ನು ನೀಡುತ್ತೇವೆ.

ದೂರುಗಳ ಪರಿಹಾರ:

● ದೂರು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ವ್ಯಾಪಾರಿಗಳಿಗೆ ಮೊದಲ ಪ್ರತಿಕ್ರಿಯೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.

● ದೂರು ಸ್ವೀಕರಿಸಿದ 15 ವ್ಯವಹಾರ ದಿನಗಳಲ್ಲಿ ಎಲ್ಲ ದೂರುಗಳನ್ನು ಪರಿಹರಿಸುವುದು ನಮ್ಮ ಗುರಿಯಾಗಿದೆ. ಸಾಧನ ಸೇವೆಗೆ ಸಂಬಂಧಿಸಿದಂತೆ ಆಫ್‌ಲೈನ್ ವ್ಯಾಪಾರಿಗಳಿಗೆ ಮಾತ್ರ, ನಾವು ದೂರನ್ನು ಸ್ವೀಕರಿಸಿದ ದಿನದಿಂದ 30 ವ್ಯವಹಾರ ದಿನಗಳಲ್ಲಿ ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದ್ದೇವೆ.

ವಿಭಾಗ 6.1 ರ ಟಿಪ್ಪಣಿಯಲ್ಲಿ ಉಲ್ಲೇಖಿಸಲಾದ ವಿವರಗಳನ್ನು ದಯವಿಟ್ಟು ನೋಡಿ.

ಹಂತ 2

ಕುಂದುಕೊರತೆ ನೋಂದಣಿ:

ಹಂತ 1 ರಲ್ಲಿ ವ್ಯಾಖ್ಯಾನಿಸಲಾದ ಸಮಯದ ನಂತರ ದೂರು ಬಗೆಹರಿಯದೆ ಉಳಿದರೆ ಅಥವಾ ಒದಗಿಸಿದ ಪರಿಹಾರದ ಬಗ್ಗೆ ವ್ಯಾಪಾರಿಗಳು ಅತೃಪ್ತರಾಗಿದ್ದರೆ, ಅವರು ಇಲ್ಲಿ ಕ್ಲಿಕ್ ಮಾಡುವ ಮೂಲಕ ತಮ್ಮ ಸಮಸ್ಯೆಯನ್ನು ಕುಂದುಕೊರತೆ ತಂಡಕ್ಕೆ ತಿಳಿಸಬಹುದು – https://grievance.phonepe.com/

ಹಂತ 2 ದೂರುಗಳ ಪರಿಹಾರ:

● ಹಂತ 2 ರ ದೂರು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ಮೊದಲ ಪ್ರತಿಕ್ರಿಯೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.

● ದೂರು ಸ್ವೀಕರಿಸಿದ ದಿನಾಂಕದಿಂದ 7 ವ್ಯವಹಾರ ದಿನಗಳಲ್ಲಿ ಎಲ್ಲ ಹಂತ 2 ದೂರುಗಳನ್ನು ಪರಿಹರಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ವಿಭಾಗ 6.1 ರ ಟಿಪ್ಪಣಿಯಲ್ಲಿ ಉಲ್ಲೇಖಿಸಲಾದ ವಿವರಗಳನ್ನು ದಯವಿಟ್ಟು ನೋಡಿ.

ಹಂತ 3

ನೋಡಲ್ ಅಧಿಕಾರಿ ಸಂಪರ್ಕಗಳು:

ಹಂತ 2 ರಲ್ಲಿ ವ್ಯಾಖ್ಯಾನಿಸಲಾದ ಸಮಯದ ನಂತರ ದೂರು ಬಗೆಹರಿಯದೆ ಉಳಿದರೆ, ವ್ಯಾಪಾರಿಗಳು ನೋಡಲ್ ಮತ್ತು ಪ್ರಧಾನ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಲು ಆಯ್ಕೆ ಮಾಡಬಹುದು.


ನೋಡಲ್ ಅಧಿಕಾರಿ: ಶ್ರೀಮತಿ ದೀಪಾ ಶೆಟ್ಟಿ
ಪ್ರಧಾನ ನೋಡಲ್ ಅಧಿಕಾರಿ: ಶ್ರೀ ಅನಿಕೇತ್ ಬಹೇತಿ

ಸಂಪರ್ಕ ಸಂಖ್ಯೆ.: 080-68727105
ಇಮೇಲ್ ಐಡಿ: [email protected]
ವೆಬ್‌ಫಾರ್ಮ್: nodalofficerdesk.phonepe.com
ವಿಳಾಸ: ಕಚೇರಿ-2, ಮಹಡಿ 4,5,6,7, ವಿಂಗ್ A, ಬ್ಲಾಕ್ A, ಸಲಾರ್‌ಪುರಿಯಾ ಸಾಫ್ಟ್‌ಜೋನ್, ಸರ್ವಿಸ್ ರಸ್ತೆ, ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು, ಬೆಂಗಳೂರು, ಕರ್ನಾಟಕ-KA, ಪಿನ್- 560103.
ಕೆಲಸದ ಸಮಯ: ಸೋಮ-ಶುಕ್ರ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ.

ಅಂಗವಿಕಲ ವ್ಯಕ್ತಿಗಳಿಗಾಗಿ ನೋಡಲ್ ಅಧಿಕಾರಿ:

ಹಂತ 2 ರಲ್ಲಿ ವ್ಯಾಖ್ಯಾನಿಸಲಾದ ಸಮಯದ ನಂತರ ದೂರು ಬಗೆಹರಿಯದೆ ಉಳಿದರೆ, ವ್ಯಾಪಾರಿಗಳು ನೋಡಲ್ ಮತ್ತು ಪ್ರಧಾನ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಲು ಆಯ್ಕೆ ಮಾಡಬಹುದು.


ನೋಡಲ್ ಅಧಿಕಾರಿ: ಶ್ರೀಮತಿ ದೀಪಾ ಶೆಟ್ಟಿ
ಪ್ರಧಾನ ನೋಡಲ್ ಅಧಿಕಾರಿ: ಶ್ರೀ ಅನಿಕೇತ್ ಬಹೇತಿ

ಸಂಪರ್ಕ ಸಂಖ್ಯೆ.: 080-68727105
ಇಮೇಲ್ ಐಡಿ: [email protected]
ವೆಬ್‌ಫಾರ್ಮ್: nodalofficerdesk.phonepe.com
ವಿಳಾಸ: ಕಚೇರಿ-2, ಮಹಡಿ 4,5,6,7, ವಿಂಗ್ A, ಬ್ಲಾಕ್ A, ಸಲಾರ್‌ಪುರಿಯಾ ಸಾಫ್ಟ್‌ಜೋನ್, ಸರ್ವಿಸ್ ರಸ್ತೆ, ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು, ಬೆಂಗಳೂರು, ಕರ್ನಾಟಕ-KA, ಪಿನ್- 560103.
ಕೆಲಸದ ಸಮಯ: ಸೋಮ-ಶುಕ್ರ ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ.

ಹಂತ 3 ದೂರುಗಳ ಪರಿಹಾರ:

● ಹಂತ 3 ರ ದೂರು ಸ್ವೀಕರಿಸಿದ 24 ಗಂಟೆಗಳ ಒಳಗಾಗಿ ಮೊದಲ ಪ್ರತಿಕ್ರಿಯೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.

● ದೂರು ಸ್ವೀಕರಿಸಿದ ದಿನಾಂಕದಿಂದ 7 ವ್ಯವಹಾರ ದಿನಗಳಲ್ಲಿ ಹಂತ 3 ರ ಎಲ್ಲ ದೂರುಗಳನ್ನು ಪರಿಹರಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ವಿಭಾಗ 6.1 ರ ಟಿಪ್ಪಣಿಯಲ್ಲಿ ಉಲ್ಲೇಖಿಸಲಾದ ವಿವರಗಳನ್ನು ದಯವಿಟ್ಟು ನೋಡಿ.

6.1 ವ್ಯಾಪಾರಿ ಸೇವಾ ಹಂತಗಳ ಕುರಿತು ಟಿಪ್ಪಣಿಗಳು (ಎಲ್ಲ ಹಂತಗಳಿಗೂ ಅನ್ವಯಿಸುತ್ತದೆ)

  1. ಸಮಸ್ಯೆಯನ್ನು ಪರಿಹರಿಸಲು ಅಗತ್ಯವಾದ ಮಾಹಿತಿ ಅಥವಾ ದಾಖಲೆಗಳನ್ನು ಒದಗಿಸಲು ವ್ಯಾಪಾರಿಗಳ ಮೇಲೆ ಅವಲಂಬಿತವಾಗಬೇಕಾದರೆ, ಪರಿಹಾರ ಸಮಯವು ನಿಗದಿತ ಸಮಯ ಮಿತಿಗಳನ್ನು ಮೀರಬಹುದು.
  2. ಯಾವುದೇ ಬಾಹ್ಯ ಅವಲಂಬನೆ ಇಲ್ಲದಿರುವ ಕಡೆಗಳಲ್ಲಿ, PhonePe ಬದ್ಧವಾಗಿರುವ ಕಾಲಮಿತಿಯೊಳಗೆ ದೂರುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ದೂರಿನ ಅಂತಿಮ ಪರಿಹಾರದ ಸಮಯವು ಆಯಾ ಬಾಹ್ಯ ಸಂಸ್ಥೆಗಳಾದ ಬ್ಯಾಂಕ್‌ಗಳು ಇತ್ಯಾದಿಗಳು ಸಮಸ್ಯೆಯನ್ನು ಮುಕ್ತಾಯಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಅವಲಂಬಿಸಿರುತ್ತದೆ. 
  3. ಬಾಹ್ಯ ಅಂಶಗಳ ಮೇಲಿನ ಅವಲಂಬನೆಯಿಂದಾಗಲಿ ಅಥವಾ ಕಾರ್ಯಾಚರಣೆ/ತಾಂತ್ರಿಕ ಕಾರಣಗಳಿಂದಾಗಲಿ ದೂರನ್ನು ಪರಿಹರಿಸಲು ಹೆಚ್ಚುವರಿ ಸಮಯ ಬೇಕಾದರೆ, ವ್ಯಾಪಾರಿಗಳಿಗೆ ವಿಳಂಬದ ಬಗ್ಗೆ ಮತ್ತು ಅಂದಾಜು ಪರಿಹಾರ ಸಮಯದ ಬಗ್ಗೆ ತಿಳಿಸಲಾಗುತ್ತದೆ.
  4. PhonePe Business ಆ್ಯಪ್‌ನಲ್ಲಿ ಆಫ್‌ಲೈನ್ ವ್ಯಾಪಾರಿಗಳು ನಡೆಸುವ ಡಿಜಿಟಲ್ ಚಿನ್ನ, ಬೆಳ್ಳಿ ಅಥವಾ ಪ್ಲಾಟಿನಂ ವಹಿವಾಟುಗಳಿಗಾಗಿ, ಆಫ್‌ಲೈನ್ ವ್ಯಾಪಾರಿಗಳು ಕೇವಲ ಖರೀದಿ-ನಂತರದ ಸಂಬಂಧಿತ ಸಮಸ್ಯೆಗಳಿಗಾಗಿ ಮಾತ್ರ PhonePe Business ಬೆಂಬಲವನ್ನು ಸಂಪರ್ಕಿಸಬಹುದು. ಈ ಕೆಳಗಿನ ರೀತಿಯ ದೂರುಗಳು ಈ ನೀತಿಯ ವ್ಯಾಪ್ತಿಯಿಂದ ಹೊರಗಿವೆ ಮತ್ತು ಇವುಗಳಿಗಾಗಿ ನೇರವಾಗಿ ಇವರೊಂದಿಗೆ ವ್ಯವಹರಿಸಬೇಕು:
    1. ಎಲ್ಲ ಪಾವತಿ ಸಂಬಂಧಿತ ಸಮಸ್ಯೆಗಳಿಗಾಗಿ ಆಯಾ UPI ಆ್ಯಪ್. PhonePe ಆ್ಯಪ್ ಮೂಲಕ ಮಾಡಿದ ಪಾವತಿಗಾಗಿ, ಗ್ರಾಹಕರು ಈ ನೀತಿಯ ಮೇಲಿನ ವಿಭಾಗ 5 ರ ಪ್ರಕಾರ PhonePe ಆ್ಯಪ್‌ನಲ್ಲಿ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ದಾಖಲಿಸಬಹುದು.  
    2.  ಇವುಗಳಿಗಾಗಿ ಆಭರಣ ಸ್ಕೀಮ್ ಸೇವಾ ಪೂರೈಕೆದಾರರು:
      1. ಸ್ಕೀಮ್‌ನ ಅರ್ಹತೆ ಮತ್ತು ಪ್ರಯೋಜನಗಳು
      2. ಆಭರಣಗಳ ಲಭ್ಯತೆ, ಬೆಲೆ, ರಿಡೆಂಪ್ಶನ್, ಮೇಕಿಂಗ್ ಶುಲ್ಕಗಳು ಮತ್ತು ಡೆಲಿವರಿ. 
    1. ಇವುಗಳಿಗಾಗಿ ಡಿಜಿಟಲ್ ಚಿನ್ನ, ಬೆಳ್ಳಿ ಅಥವಾ ಪ್ಲಾಟಿನಂ ಸೇವಾ ಪೂರೈಕೆದಾರರು:
      1. ಭೌತಿಕ ಚಿನ್ನ, ಬೆಳ್ಳಿ ಅಥವಾ ಪ್ಲಾಟಿನಂ ರಿಡೆಂಪ್ಶನ್ ಸಂದರ್ಭದಲ್ಲಿ ನಾಣ್ಯ/ಭೌತಿಕ ಚಿನ್ನ, ಬೆಳ್ಳಿ ಅಥವಾ ಪ್ಲಾಟಿನಂ SKU ಗಳ ಲಭ್ಯತೆ, ಬೆಲೆ, ರಿಡೆಂಪ್ಶನ್, ಮೇಕಿಂಗ್ ಶುಲ್ಕಗಳು ಮತ್ತು ಡೆಲಿವರಿ (ಎಲ್ಲಿ ಅನ್ವಯವಾಗುತ್ತದೆಯೋ ಅಲ್ಲಿ)
      2. ಯಾವುದೇ ರಿಯಾಯಿತಿ / ಶುಲ್ಕಗಳನ್ನು ಕಳೆದ ನಂತರ ಖರೀದಿ ಮತ್ತು ಮಾರಾಟ ಎರಡಕ್ಕೂ ಬೆಲೆ ನಿಗದಿಪಡಿಸುವಿಕೆ.

6.2 ಆಧಾರ್ eKYC ಕುಂದುಕೊರತೆ ಪರಿಹಾರ

ಆಧಾರ್ eKYC ಮತ್ತು ಸಮ್ಮತಿ ಹಿಂಪಡೆಯುವಿಕೆ ಸಂಬಂಧಿತ ಸಮಸ್ಯೆಗಳಿಗಾಗಿ, ಒಬ್ಬ ವ್ಯಾಪಾರಿಯು ಎಲ್ಲ 7 ದಿನಗಳಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 11 ರ ನಡುವೆ 080-6872-7777/ 022-6872-7777 ಗೆ ಕರೆ ಮಾಡಬಹುದು. ಆನ್‌ಬೋರ್ಡಿಂಗ್ ಸಂಬಂಧಿತ ಸಮಸ್ಯೆಗಳ ಪರಿಹಾರ ಮತ್ತು ಸಮ್ಮತಿ ಹಿಂಪಡೆಯುವಿಕೆಗೆ 30 ದಿನಗಳವರೆಗೆ ತೆಗೆದುಕೊಳ್ಳಬಹುದು.

7.  ವಿವಾದ ನಿರ್ವಹಣಾ ಪ್ರಕ್ರಿಯೆ

PhonePe QR ಮತ್ತು/ಅಥವಾ PhonePe POS ಸಾಧನ ಅಥವಾ PhonePe ಪೇಮೆಂಟ್‌ ಅಗ್ರಿಗೇಟರ್‌ ಸೇವೆಗಳನ್ನು ಬಳಸಿಕೊಂಡು ಯಾವುದೇ ವ್ಯಾಪಾರಿಯಿಂದ ಉತ್ಪನ್ನ/ಸೇವೆಯ ಖರೀದಿ/ಆರ್ಡರ್‌ನಿಂದ ಖರೀದಿದಾರರು ತೃಪ್ತರಾಗದಿದ್ದರೆ, ಅವರು ವಿವಾದವನ್ನು ಸಲ್ಲಿಸಬಹುದು.

ಖರೀದಿದಾರರು ವಿವಾದವನ್ನು ಸಲ್ಲಿಸಬಹುದಾದ ಸನ್ನಿವೇಶಗಳು:

  • ಯಾವುದೇ ಉತ್ಪನ್ನ/ಸೇವೆಯನ್ನು ಸ್ವೀಕರಿಸದಿರುವುದು.
  • ವ್ಯಾಪಾರಿ ಒದಗಿಸಿದ ಗರಿಷ್ಠ ಅಂದಾಜು ಡೆಲಿವರಿ ದಿನಾಂಕಕ್ಕಿಂತ ನಂತರ ಉತ್ಪನ್ನ/ಸೇವೆಯನ್ನು ಸ್ವೀಕರಿಸಲಾಗಿರುವುದು.
  • ಉತ್ಪನ್ನವನ್ನು ಸ್ವೀಕರಿಸಲಾಗಿದೆ ಆದರೆ ಅದು ದೋಷಪೂರಿತವಾಗಿತ್ತು, ಹಾನಿಗೊಳಗಾಗಿತ್ತು, ಭಾಗಗಳು ಕಾಣೆಯಾಗಿದ್ದವು ಅಥವಾ ವ್ಯಾಪಾರಿ ಒದಗಿಸಿದ ವಿವರಣೆಗೆ ಹೊಂದಿಕೆಯಾಗಿರಲಿಲ್ಲ.
  • ವ್ಯಾಪಾರಿಯೊಂದಿಗಿನ ಒಪ್ಪಂದದ ಪ್ರಕಾರ ಉತ್ಪನ್ನವನ್ನು ಹಿಂತಿರುಗಿಸಲಾಗಿದೆ ಆದರೆ ಉತ್ಪನ್ನವನ್ನು ಸ್ವೀಕರಿಸಿದ ನಂತರ ವ್ಯಾಪಾರಿಯು ಒಪ್ಪಿಕೊಂಡ ಮರುಪಾವತಿಯನ್ನು ಒದಗಿಸಲಿಲ್ಲ.
  • ವ್ಯಾಪಾರಿಯು ವೆಬ್‌ಸೈಟ್/ಮೊಬೈಲ್ ಆ್ಯಪ್‌ನಲ್ಲಿ ಪ್ರದರ್ಶಿಸಲಾದ ರೀಫಂಡ್‌ ನೀತಿಯನ್ನು ಪಾಲಿಸಲು ವ್ಯಾಪಾರಿಯು ನಿರಾಕರಿಸುವುದು.
  • ಖರೀದಿಗೆ ಅನುಮತಿಸಲಾದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ವಿಧಿಸಲಾಗಿದೆ.

ವಿವಾದ ಸಲ್ಲಿಸುವ ಪ್ರಕ್ರಿಯೆ:

  1. ಖರೀದಿದಾರರು ತಮ್ಮ ಖರೀದಿ/ಆರ್ಡರ್‌ನ ಸಮಸ್ಯೆ(ಗಳು) ಪರಿಹಾರಕ್ಕಾಗಿ ಮೊದಲು ನೇರವಾಗಿ ವ್ಯಾಪಾರಿಗಳನ್ನು ಸಂಪರ್ಕಿಸಬೇಕೆಂದು PhonePe ಶಿಫಾರಸು ಮಾಡುತ್ತದೆ.
  2. ವ್ಯಾಪಾರಿಯಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಅಥವಾ ಸ್ವೀಕರಿಸಿದ ಪ್ರತಿಕ್ರಿಯೆಯು ಅತೃಪ್ತಿಕರವಾಗಿದ್ದರೆ, ಖರೀದಿದಾರರು ತಮ್ಮ ಬ್ಯಾಂಕ್ ಅಥವಾ NPCI (UPI ಗಾಗಿ) ಅನ್ನು ಸಂಪರ್ಕಿಸಿ ಆ ವಹಿವಾಟಿನ ಮೇಲೆ ಚಾರ್ಜ್‌ಬ್ಯಾಕ್ ಸಲ್ಲಿಸಬೇಕೆಂದು ಸೂಚಿಸಲಾಗುತ್ತದೆ.

ಗ್ರಾಹಕರು ತಮ್ಮ ಬ್ಯಾಂಕ್ ಅಥವಾ NPCI ಗೆ ಚಾರ್ಜ್‌ಬ್ಯಾಕ್ ವಿನಂತಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಸಂಬಂಧಪಟ್ಟ ಸ್ವಾಧೀನಪಡಿಸಿಕೊಳ್ಳುವ ಬ್ಯಾಂಕ್ ಗ್ರಾಹಕರ ವಿವಾದವನ್ನು PhonePe ಗೆ ರವಾನಿಸುತ್ತದೆ; ತರುವಾಯ, PhonePe ಆ ಬ್ಯಾಂಕ್‌ಗೆ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಲು ಸಹಾಯ ಮಾಡುತ್ತದೆ. PhonePe ವ್ಯಾಪಾರಿಯೊಂದಿಗೆ ವಿವರಗಳನ್ನು ಮೌಲ್ಯೀಕರಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಬ್ಯಾಂಕ್‌ಗೆ ಪ್ರತಿಕ್ರಿಯೆಯನ್ನು ಒದಗಿಸುತ್ತದೆ. ಖರೀದಿದಾರರ ಬ್ಯಾಂಕ್/NPCI ಅಂತಿಮ ನಿರ್ಣಯದ ಬಗ್ಗೆ ಖರೀದಿದಾರರಿಗೆ ತಿಳಿಸುತ್ತದೆ. ಇದು ವ್ಯಾಪಾರಿಯು ವಿವಾದವನ್ನು ಒಪ್ಪಿಕೊಂಡಿದ್ದಾರೆಯೇ ಅಥವಾ ತಿರಸ್ಕರಿಸಿದ್ದಾರೆಯೇ ಎಂಬುದನ್ನು ಸೂಚಿಸುತ್ತದೆ. 

8. ರಿಸರ್ವ್ ಬ್ಯಾಂಕ್ – ಇಂಟಿಗ್ರೇಟೆಡ್ ಓಂಬುಡ್ಸ್‌ಮನ್ ಸ್ಕೀಮ್, 2026 ರ ಪ್ರಮುಖ ವೈಶಿಷ್ಟ್ಯಗಳು

RBI ಪರಿಷ್ಕೃತ ರಿಸರ್ವ್ ಬ್ಯಾಂಕ್ – ಇಂಟಿಗ್ರೇಟೆಡ್ ಓಂಬುಡ್ಸ್‌ಮನ್ ಸ್ಕೀಮ್ (RB-IOS), 2026 ಅನ್ನು ಜನವರಿ 16, 2026 ರಂದು ಹೊರಡಿಸಿತು. RBI – IOS, 2026 ರ ಕೆಲವು ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿವೆ: 

  1. ಪರಿಷ್ಕೃತ ಸ್ಕೀಮ್ ಜುಲೈ 1, 2026 ರಿಂದ ಜಾರಿಗೆ ಬರಲಿದೆ.  
  2. ಸ್ಕೀಮ್‌ನ ಸೆಕ್ಷನ್ 1(3)(c) ಪ್ರಕಾರ, RBI-IOS, 2026 PhonePe ಗೆ ಕೇವಲ ಪ್ರಿಪೇಯ್ಡ್ ಇನ್‌ಸ್ಟ್ರುಮೆಂಟ್‌ಗಳಿಗೆ (PPIಗಳು) (ಅಂದರೆ PhonePe ವ್ಯಾಲೆಟ್, PhonePe ಗಿಫ್ಟ್ ಕಾರ್ಡ್‌ಗಳು ಮತ್ತು PhonePe Rupay ಆನ್‌-ದಿ-ಗೋ ಕಾರ್ಡ್ (NCMC)) ಸಂಬಂಧಿಸಿದ ಸೇವೆಗಳಿಗೆ ಮಾತ್ರ ಅನ್ವಯಿಸುತ್ತದೆ.
  3. ಸ್ಕೀಮ್‌ನ ಅಡಿಯಲ್ಲಿ ದಾಖಲಾದ ದೂರುಗಳನ್ನು ಸ್ವೀಕರಿಸಲು ಮತ್ತು ಅವುಗಳನ್ನು ಪ್ರಕ್ರಿಯೆಗೊಳಿಸಲು ರಿಸರ್ವ್ ಬ್ಯಾಂಕ್ ತಾನು ನಿರ್ಧರಿಸಬಹುದಾದ ಒಂದು ಅಥವಾ ಹೆಚ್ಚಿನ ಸ್ಥಳಗಳಲ್ಲಿ ಸೆಂಟ್ರಲೈಸ್ಡ್ ರಿಸೀಪ್ಟ್ ಆ್ಯಂಡ್‌ ಪ್ರೊಸೆಸಿಂಗ್ ಸೆಂಟರ್ (CRPC) ಅನ್ನು ಸ್ಥಾಪಿಸುತ್ತದೆ. 
  4. RBI ಓಂಬುಡ್ಸ್‌ಮನ್/RBI ಡೆಪ್ಯುಟಿ ಓಂಬುಡ್ಸ್‌ಮನ್ ಅವರು ನಿಯಂತ್ರಿತ ಘಟಕಗಳ ಗ್ರಾಹಕರ ಸೇವೆಯಲ್ಲಿನ ನ್ಯೂನತೆಗೆ ಸಂಬಂಧಿಸಿದ ದೂರುಗಳನ್ನು ಪರಿಗಣಿಸುತ್ತಾರೆ.
  5. ಸೇವೆಯಲ್ಲಿನ ನ್ಯೂನತೆಗೆ ಕಾರಣವಾಗುವ ನಿಯಂತ್ರಿತ ಘಟಕದ ಕಾರ್ಯ ಅಥವಾ ಲೋಪದಿಂದ ನೊಂದ ಯಾವುದೇ ಗ್ರಾಹಕರು ಸ್ಕೀಮ್‌ನ ಅಡಿಯಲ್ಲಿ ದೂರನ್ನು ದಾಖಲಿಸಬಹುದು.
  6. ದೂರಿನ ನಿರ್ವಹಣೆಯ ಮಾನದಂಡಗಳಿಗೆ ಅರ್ಹತೆ ಪಡೆಯುವ ದೂರುಗಳನ್ನು ಮಾತ್ರ RBI ಪರಿಶೀಲಿಸುತ್ತದೆ ಮತ್ತು ನಿರ್ವಹಿಸಲಾಗದ ದೂರುಗಳನ್ನು ಹೆಚ್ಚಿನ ಪರಿಶೀಲನೆ ಇಲ್ಲದೆಯೇ ತಿರಸ್ಕರಿಸಲಾಗುತ್ತದೆ.
  7. ದೂರನ್ನು ನೋಂದಾಯಿಸುವುದು ಮತ್ತು ಅದನ್ನು RBI ಓಂಬುಡ್ಸ್‌ಮನ್ ಕಚೇರಿಗೆ ನಿಯೋಜಿಸುವುದನ್ನು ಅದರ ನಿರ್ವಹಣೆಯ ನಿರ್ಧಾರ ಎಂದು ಅರ್ಥೈಸಲಾಗುವುದಿಲ್ಲ.
  8. PhonePe PPI ಗಳಿಗೆ ಸಂಬಂಧಿಸಿದ ದೂರುಗಳು 30 ದಿನಗಳ ಒಳಗೆ ಹಿಂದಿನ ಹಂತಗಳಲ್ಲಿ ತೃಪ್ತಿಕರವಾಗಿ ಪರಿಹಾರವಾಗದಿದ್ದರೆ, ಗ್ರಾಹಕರು RBI ಓಂಬುಡ್ಸ್‌ಮನ್ ಅನ್ನು ಸಂಪರ್ಕಿಸಬಹುದು.
  9. RBI ಓಂಬುಡ್ಸ್‌ಮನ್‌ಗೆ ದೂರನ್ನು ಮೂರು ವಿಧಾನಗಳಲ್ಲಿ ಸಲ್ಲಿಸಬಹುದು: (i) ಆನ್‌ಲೈನ್ CMS ಪೋರ್ಟಲ್ https://cms.rbi.org.in ಮೂಲಕ; ಅಥವಾ (ii) [email protected] ಗೆ ಇಮೇಲ್ ಮಾಡುವ ಮೂಲಕ; ಅಥವಾ (iii) ಭರ್ತಿ ಮಾಡಿದ ದೂರು ನಮೂನೆಯನ್ನು ಪೋಷಕ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್/ಕೊರಿಯರ್ ಮೂಲಕ ಕಳುಹಿಸುವ ಮುಖಾಂತರ: ಸೆಂಟ್ರಲೈಸ್ಡ್ ರಿಸೀಪ್ಟ್ ಆ್ಯಂಡ್‌ ಪ್ರೊಸೆಸಿಂಗ್ ಸೆಂಟರ್ (CRPC), ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ವಿಸ್ಟಾ, ಸೆಕ್ಟರ್ 17, ಚಂಡೀಗಢ – 160 017.
  10. ದೂರುದಾರರು ಸ್ಕೀಮ್ ಮತ್ತು ದೂರು ದಾಖಲಿಸುವ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ಇಂಟರ್ಯಾಕ್ಟಿವ್‌ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (IVRS) ಹೊಂದಿರುವ CRPC ಟೋಲ್ ಫ್ರೀ ಸಂಖ್ಯೆ 14448 ದಿನದ 24×7 ಗಂಟೆಗಳೂ ಲಭ್ಯವಿರುತ್ತದೆ. ಕಾಂಟ್ಯಾಕ್ಟ್ ಸೆಂಟರ್ ಸಿಬ್ಬಂದಿಯನ್ನು ಸಂಪರ್ಕಿಸುವ ಸೌಲಭ್ಯವು ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8:00 ರಿಂದ ರಾತ್ರಿ 10:00 ರವರೆಗೆ ಇಂಗ್ಲಿಷ್, ಹಿಂದಿ ಮತ್ತು ಹತ್ತು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುತ್ತದೆ.
  11. ನಿಯಂತ್ರಿತ ಘಟಕವು ತನ್ನ ಪರವಾಗಿ ಪ್ರತಿನಿಧಿಸಲು ಮತ್ತು ನಿಯಂತ್ರಿತ ಘಟಕದ ವಿರುದ್ಧ ದಾಖಲಾದ ದೂರುಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸಲು ಪ್ರಧಾನ ನೋಡಲ್ ಅಧಿಕಾರಿಯನ್ನು ನೇಮಿಸಬೇಕು.

RB-IOS, 2026 ರ ಕುರಿತಾದ ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸ್ಕೀಮ್‌ನ ಪ್ರತಿಯ ಲಿಂಕ್ ಅನ್ನು ನೋಡಿ – RBI ಇಂಟಿಗ್ರೇಟೆಡ್ ಓಂಬುಡ್ಸ್‌ಮನ್ ಸ್ಕೀಮ್.