ಈ ನಿಯಮಗಳು ಮತ್ತು ಷರತ್ತುಗಳು (“ಕೋ-ಬ್ರ್ಯಾ೦ಡೆಡ್ ಕಾರ್ಡ್ ನಿಯಮಗಳು ಮತ್ತು ಷರತ್ತುಗಳು“) PhonePe ಲಿಮಿಟೆಡ್(ಈ ಹಿಂದೆ PhonePe ಪ್ರೈವೇಟ್ ಲಿಮಿಟೆಡ್) (“PhonePe”, “ನಾವು“, “ನಮ್ಮ“, “ನಾವು“) ನೊಂದಿಗೆ ವ್ಯವಸ್ಥೆ(ಗಳ) ಅಡಿಯಲ್ಲಿ ವಿವಿಧ ಕಾರ್ಡ್ ವಿತರಕರು (ಕೆಳಗೆ ವ್ಯಾಖ್ಯಾನಿಸಿದಂತೆ) ವಿತರಿಸಿದ ವಿವಿಧ ಕೋ-ಬ್ರ್ಯಾ೦ಡೆಡ್ ಕ್ರೆಡಿಟ್ ಕಾರ್ಡ್‌ಗಳನ್ನು (“ಕೋ-ಬ್ರಾಂಡೆಡ್ ಕಾರ್ಡ್ (ಗಳು)“) ನಿಯಂತ್ರಿಸುತ್ತವೆ. ಇಂತಹ ಕೊ-ಬ್ರ್ಯಾಂಡೆಡ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ನಾವು ಕೋ-ಬ್ರ್ಯಾಂಡಿಂಗ್ ಪಾಲುದಾರರಾಗಿದ್ದೇವೆ. ಇಲ್ಲಿ ನಿಗದಿಪಡಿಸಲಾದ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳು ನಿಮ್ಮ (“ನೀವು” / “ನಿಮ್ಮ“) “PhonePe” ಮೊಬೈಲ್ ಅಪ್ಲಿಕೇಶನ್ (“PhonePe ಆ್ಯಪ್“) ಅಥವಾ www.phonepe.com ವೆಬ್‌ಸೈಟ್‌ನ (ಒಟ್ಟಾರೆಯಾಗಿ, “PhonePe ಪ್ಲಾಟ್‌ಫಾರ್ಮ್“) ಬಳಕೆಯನ್ನು, ಅನ್ವಯವಾಗುವಂತೆ ನಿಯಂತ್ರಿಸುತ್ತವೆ, ಅದು ನೀವು ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳ ವಿತರಣೆಗಾಗಿ ಕಾರ್ಡ್ ವಿತರಕರಿಗೆ ಅರ್ಜಿ ಸಲ್ಲಿಸುವುದಿರಬಹುದು ಮತ್ತು/ಅಥವಾ PhonePe ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳಿಗೆ ಸಂಬಂಧಿಸಿದ ಯಾವುದೇ ವೈಶಿಷ್ಟ್ಯಗಳು/ಅಂಶಗಳನ್ನು ಪ್ರವೇಶಿಸುವುದು/ಬಳಸುವುದಿರಬಹುದು.
ಭಾಗ A – ಎಲ್ಲಾ ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳಿಗೆ ಅನ್ವಯವಾಗುವ ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳು
ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ PhonePe ಪ್ಲಾಟ್‌ಫಾರ್ಮ್ ಬಳಸಲು ಮುಂದುವರಿಯುವ ಮೂಲಕ, ಇವುಗಳಿಗೆ ಒಳಪಡಲು ನಿಮ್ಮ ಸಮ್ಮತಿಯನ್ನು ವ್ಯಕ್ತಪಡಿತ್ತೀರಿ: (i) ಈ ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳ ನಿಯಮಗಳು ಮತ್ತು ಷರತ್ತುಗಳು; (ii) https://www.phonepe.com/terms-conditions/ ರಲ್ಲಿ ಲಭ್ಯವಿರುವ PhonePe ನಿಯಮಗಳು ಮತ್ತು ಷರತ್ತುಗಳು ಮತ್ತು https://www.phonepe.com/privacy-policy/ರಲ್ಲಿ ಲಭ್ಯವಿರುವ PhonePe ಗೌಪ್ಯತೆ ನೀತಿ ಸೇರಿದಂತೆ ಈ ಕೋ-ಬ್ರ್ಯಾಂಡೆಡ್ ಕಾರ್ಡ್ ನಿಯಮಗಳು ಮತ್ತು ಷರತ್ತುಗಳಲ್ಲಿ ಉಲ್ಲೇಖದ ಮೂಲಕ ಸಂಯೋಜಿಸಲಾದ ಎಲ್ಲಾ ನಿಯಮಗಳು; ಮತ್ತು (iii) ಕಾಲಕಾಲಕ್ಕೆ PhonePe ಹೊರಡಿಸಿದ ಎಲ್ಲಾ ಇತರ ಅನ್ವಯವಾಗುವ ನಿಯಮಗಳು, ನೀತಿಗಳು ಮತ್ತು ಮಾರ್ಗಸೂಚಿಗಳು (ಒಟ್ಟಾರೆಯಾಗಿ “ನಿಯಮಗಳು” ಎಂದು ಉಲ್ಲೇಖಿಸಲಾಗುತ್ತದೆ). ನೀವು ನಿಯಮಗಳನ್ನು ಒಪ್ಪದಿದ್ದರೆ, ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್(ಗಳು) ಅಥವಾ PhonePe ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಯಾವುದೇ ಇತರ ಸಂಪರ್ಕಿತ ಅಥವಾ ಪೂರಕ ಸೇವೆಗೆ ಸಂಬಂಧಿಸಿದಂತೆ ನೀವು PhonePe ಪ್ಲಾಟ್‌ಫಾರ್ಮ್ ಬಳಸಬಾರದು.
ಈ ಕೆಳಗಿನಂತೆ ನಾವು ಘೋಷಿಸುತ್ತೇವೆ ಮತ್ತು ನೀವು ಇದನ್ನು ಹೀಗೆ ಅರ್ಥಮಾಡಿಕೊಳ್ಳಬೇಕು, ಇದಕ್ಕೆ ಸಮ್ಮತಿಸಬೇಕು ಮತ್ತು ಅಂಗೀಕರಿಸಬೇಕು:
- ವಿವಿಧ ಕೋ-ಬ್ರ್ಯಾಂಡೆಡ್ ಕಾರ್ಡ್ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಮತ್ತು ಉತ್ತೇಜಿಸುವ ಉದ್ದೇಶಕ್ಕಾಗಿ ಈ ಕೋ-ಬ್ರ್ಯಾಂಡೆಡ್ ಕಾರ್ಡ್ ನಿಯಮಗಳು ಮತ್ತು ಷರತ್ತುಗಳ (ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳು) ಭಾಗ B ಅಡಿಯಲ್ಲಿ ಪಟ್ಟಿ ಮಾಡಲಾದ ಪ್ರತಿಯೊಂದು ಬ್ಯಾಂಕ್‌ಗಳು/ಬ್ಯಾಂಕೇತರ ಹಣಕಾಸು ಸಂಸ್ಥೆಗಳೊಂದಿಗೆ (ಒಟ್ಟಾರೆಯಾಗಿ, “ಕಾರ್ಡ್ ವಿತರಕರು“) PhonePe ಒಪ್ಪಂದಗಳನ್ನು ಮಾಡಿಕೊಂಡಿದೆ.
- ನಾವು ಈ ಕೆಳಗಿನದನ್ನು ಸ್ಪಷ್ಟವಾಗಿ ತಿಳಿಸುತ್ತೇವೆ ಮತ್ತು ನೀವು ಇದನ್ನು ಹೀಗೆ ಅರ್ಥಮಾಡಿಕೊಳ್ಳಬೇಕು, ಅದಕ್ಕೆ ಸಮ್ಮತಿಸಬೇಕು ಮತ್ತು ಅಂಗೀಕರಿಸಬೇಕು:
- ಈ ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳ ನಿಯಮಗಳು & ಷರತ್ತುಗಳ ಭಾಗ B ಅಡಿಯಲ್ಲಿ ಪಟ್ಟಿ ಮಾಡಲಾದ ಆಯಾ ಬ್ಯಾಂಕುಗಳು/ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಆಯಾ ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳ ವಿತರಕರಾಗಿದ್ದು, PhonePe ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳನ್ನು ವಿತರಿಸುವುದಿಲ್ಲ;
- ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳನ್ನು ಕಾರ್ಡ್ ವಿತರಕರು ಹಾಗೂ PhonePe ಮೂಲಕ ಪ್ರಚಾರ ಮತ್ತು ಮಾರಾಟ ಮಾಡಲಾಗುತ್ತದೆ;
- ಅಂತಹ ಕಾರ್ಡ್ ವಿತರಕರ ಕೋ-ಬ್ರ್ಯಾಂಡೆಡ್ ಕಾರ್ಡ್‌ಗೆ ಸಂಬಂಧಿಸಿದಂತೆ ಪ್ರತಿ ಕಾರ್ಡ್ ವಿತರಕ ಕೋ-ಬ್ರ್ಯಾಂಡಿಂಗ್ ಪಾಲುದಾರನಾಗಿ ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳ ಪ್ರಚಾರ ಮತ್ತು ವಿತರಣೆಗೆ PhonePe ಪಾತ್ರವು ಸೀಮಿತವಾಗಿದೆ; ಮತ್ತು
- ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್ ಮೂಲಕ ಕೈಗೊಳ್ಳಲಾದ ವಹಿವಾಟುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಯಾವುದೇ ಸಮಯದಲ್ಲಿ PhonePe ನೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ಆದರೆ ಅನುಮತಿಗೆ ಅನುಗುಣವಾಗಿ ನೀವು PhonePe ಪ್ಲಾಟ್‌ಫಾರ್ಮ್‌ನಲ್ಲಿ ಆ ಮಾಹಿತಿಗಳನ್ನು ವೀಕ್ಷಿಸಬಹುದು.
- ಪ್ರಾಥಮಿಕ ಅರ್ಹತೆ
- ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ನೀವು ಕಾನೂನುಬದ್ಧವಾಗಿ ಅರ್ಹರಿರಬೇಕು. ನೀವು ಹದಿನೆಂಟು (18) ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು, ಸ್ವಸ್ಥ ಮಾನಸಿಕ ಅರೋಗ್ಯ ಹೊಂದಿರಬೇಕು, ಭಾರತದ ನಿವಾಸಿಯಾಗಿರಬೇಕು ಮತ್ತು ಕೋ-ಬ್ರ್ಯಾಂಡೆಡ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅನ್ವಯವಾಗುವ ಕಾನೂನಿನಿಂದ ನಿಷೇಧಿಸಲ್ಪಟ್ಟಿರಬಾರದು.
- ಕಾರ್ಡ್ ವಿತರಕರು ಸೂಚಿಸುವ ಅರ್ಹತಾ ಮಾನದಂಡಗಳನ್ನು ನೀವು ಪೂರೈಸಬೇಕು ಹಾಗೂ ಪ್ರತಿ ಕಾರ್ಡ್ ವಿತರಕರು ಹೆಚ್ಚುವರಿ ಅರ್ಹತಾ ಷರತ್ತುಗಳನ್ನು ವಿಧಿಸುವ ಹಕ್ಕನ್ನು ಕಾಯ್ದಿರಿಸುತ್ತಾರೆ ಎಂದು ನೀವು ಅರ್ಥಮಾಡಿಕೊಂಡಿದ್ದೀರಿ, ಅಂಗೀಕರಿಸಿದ್ದೀರಿ ಮತ್ತು ಸಮ್ಮತಿಸುತ್ತೀರಿ. ಈ ನಿಟ್ಟಿನಲ್ಲಿ ಕಾರ್ಡ್ ವಿತರಕರ ನಿರ್ಧಾರವೇ ಅಂತಿಮವಾಗಿರುತ್ತದೆ.
- ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳಿಗೆ ಅನ್ವಯವಾಗುವ ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳು
- ಪ್ರತಿ ಕೋ-ಬ್ರ್ಯಾಂಡೆಡ್ ಕಾರ್ಡ್ ಅನ್ನು ಆಯಾ ಕಾರ್ಡ್ ವಿತರಕರೇ ವಿತರಿಸುತ್ತಾರೆ ಮತ್ತು ಸಂಬಂಧಿತ ಕಾರ್ಡ್ ವಿತರಕರೇ ನಿಮ್ಮ ಅರ್ಹತೆ, ಕ್ರೆಡಿಟ್ ಅರ್ಹತೆ ಇತ್ಯಾದಿಗಳನ್ನು ಖಚಿತಪಡಿಸಿಕೊಳ್ಳಲು, ನಿಮಗೆ ನಿರ್ದಿಷ್ಟ ಕೋ-ಬ್ರ್ಯಾಂಡೆಡ್ ಕಾರ್ಡ್ ವಿತರಣೆಯನ್ನು ಅನುಮೋದಿಸಲು/ನಿರಾಕರಿಸಲು, ನಿರ್ದಿಷ್ಟ ಕೋ-ಬ್ರ್ಯಾಂಡೆಡ್ ಕಾರ್ಡ್‌ಗೆ ಅನ್ವಯವಾಗುವ ಮಿತಿಗಳನ್ನು ನಿರ್ಧರಿಸಲು, ಮತ್ತು ಕೋ-ಬ್ರಾಂಡೆಡ್ ಕಾರ್ಡ್‌ನ ವಿತರಣೆ ಮತ್ತು ಬಳಕೆಗೆ ಸಂಬಂಧಿಸಿದ ಎಲ್ಲಾ ಇತರ ವಿಷಯಗಳನ್ನು ನಿರ್ಧರಿಸಲು ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸುತ್ತಾರೆ.
- ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್‌ನ ನಿಮ್ಮ ಬಳಕೆಯನ್ನು ಆಯಾ ಕಾರ್ಡ್ ವಿತರಕರು ಕಾಲಕಾಲಕ್ಕೆ ನಿಮಗೆ ತಿಳಿಸುವ ನಿಯಮಗಳು ಮತ್ತು ಷರತ್ತುಗಳಿಂದ ನಿಯಂತ್ರಿಸಲಾಗುತ್ತದೆ. ಪ್ರತಿ ಕೋ-ಬ್ರ್ಯಾಂಡೆಡ್ ಕಾರ್ಡ್ ಅನ್ನು ನಿಯಂತ್ರಿಸುವ ಕಾರ್ಡ್ ವಿತರಕರ ನಿಯಮಗಳು ಮತ್ತು ಷರತ್ತುಗಳು ಕೆಳಗೆ ಈ ಕೋ-ಬ್ರ್ಯಾಂಡೆಡ್ ಕಾರ್ಡ್ ನಿಯಮಗಳು ಮತ್ತು ಷರತ್ತುಗಳ ಭಾಗ B ಅಲ್ಲಿ ನಿಗದಿಪಡಿಸಿದ ಹೈಪರ್ ಲಿಂಕ್‌ಗಳಲ್ಲಿ ಲಭ್ಯವಿದೆ.
- PhonePe ನಿಮ್ಮ ಮತ್ತು ಆಯಾ ಕಾರ್ಡ್ ವಿತರಕರ ನಡುವಿನ ಯಾವುದೇ ವಹಿವಾಟುಗಳು ಅಥವಾ ವ್ಯವಸ್ಥೆಗಳಿಗೆ ಒಂದು ಪಕ್ಷವಾಗಿಲ್ಲ ಅಥವಾ ಪಕ್ಷವಾಗಿರಲು ಸಾಧ್ಯವಿಲ್ಲ. ಮೇಲಿನ ನಿಯಮಗಳನ್ನು ಪರಿಗಣಿಸಿ, ನೀವು ಈ ಮೂಲಕ ಬೇಷರತ್ತಾಗಿ ಮತ್ತು ಬದಲಾಯಿಸಲಾಗದಂತೆ ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್‌ನ ನಿಮ್ಮ ಬಳಕೆಯಿಂದ ಉಂಟಾಗುವ ಯಾವುದೇ ಕ್ಲೈಮ್‌ಗಳು, ಕ್ರಮಗಳು, ಹೊಣೆಗಾರಿಕೆಗಳಿಂದ (ಯಾವುದೇ ವಂಚನೆ ಅಥವಾ ದುರುಪಯೋಗದ ಪರಿಣಾಮ ಸೇರಿದಂತೆ) PhonePe ಅನ್ನು ಹೊರಗಿಡುತ್ತೀರಿ ಮತ್ತು ಅಂತಹ ಯಾವುದೇ ಕ್ಲೈಮ್‌ಗಳು, ಕ್ರಮಗಳು, ಹೊಣೆಗಾರಿಕೆಗಳು ಕಾರ್ಡ್ ವಿತರಕರ ವಿರುದ್ಧ ಮಾತ್ರ ಇರುತ್ತದೆ ಎಂದು ಅರ್ಥಮಾಡಿಕೊಳ್ಳುತ್ತೀರಿ.
- ಕೋ-ಬ್ರ್ಯಾಂಡೆಡ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು
- ಕೋ-ಬ್ರ್ಯಾಂಡೆಡ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು, ನೀವು PhonePe ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಅಂತಹ ಕೋ-ಬ್ರ್ಯಾಂಡೆಡ್ ಕಾರ್ಡ್ ಸಂಬಂಧಿತ ಲ್ಯಾಂಡಿಂಗ್ ಪುಟಕ್ಕೆ ಭೇಟಿ ನೀಡಬಹುದು. ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ ಕೋ-ಬ್ರ್ಯಾಂಡೆಡ್ ಕಾರ್ಡ್‌ಗಾಗಿ ಅರ್ಜಿ ನಮೂನೆಯಲ್ಲಿ ಕಾರ್ಡ್ ವಿತರಕರು ಕೋರಿದ ಮಾಹಿತಿಯನ್ನು ಒದಗಿಸಬಹುದು.
- ಅರ್ಜಿಯಲ್ಲಿ ನೀವು ಒದಗಿಸುವ ಎಲ್ಲಾ ಮಾಹಿತಿಗಳು ಸತ್ಯವಾಗಿವೆ, ಸಂಪೂರ್ಣವಾಗಿವೆ, ನಿಖರವಾಗಿವೆ ಮತ್ತು ಇತ್ತೀಚಿನ ಮಾಹಿತಿಗಳಾಗಿವೆ ಎಂದು ನೀವು ದೃಢೀಕರಿಸುತ್ತೀರಿ. ಕೋ-ಬ್ರ್ಯಾಂಡೆಡ್ ಕಾರ್ಡ್‌ಗೆ ಸಂಬಂಧಿಸಿದಂತೆ ಒದಗಿಸಲಾದ ಎಲ್ಲಾ ಮಾಹಿತಿ ನಿಖರ ಮತ್ತು ಸರಿಯಾಗಿರುವುದಕ್ಕೆ ನೀವು ಜವಾಬ್ದಾರರಾಗಿರುತ್ತೀರಿ ಎಂದು ನೀವು ಅರ್ಥಮಾಡಿಕೊಂಡಿದ್ದೀರಿ. ಅರ್ಜಿ ನಮೂನೆಯಲ್ಲಿ ನೀವು ಒದಗಿಸುವ ಎಲ್ಲಾ ಮಾಹಿತಿಯನ್ನು ಸಂಬಂಧಿತ ಕಾರ್ಡ್ ವಿತರಕ ‘AS-IS’ ನೊಂದಿಗೆ ಹಂಚಿಕೊಳ್ಳಲಾಗುತ್ತದೆ ಮತ್ತು PhonePe ಇಲ್ಲಿಂದ ಮುಂದೆ ಯಾವುದೇ ಜವಾಬ್ದಾರಿಗಳನ್ನು ನಿರಾಕರಿಸುತ್ತದೆ.
- ನೀವು ಒದಗಿಸಿದ ದೋಷಯುಕ್ತ, ತಪ್ಪಾದ ಅಥವಾ ಅಪೂರ್ಣ ಮಾಹಿತಿಯಿಂದ ಉಂಟಾಗುವ ಯಾವುದೇ ಹೊಣೆಗಾರಿಕೆಯಿಂದ ನೀವು ಬೇಷರತ್ತಾಗಿ ಮತ್ತು ಬದಲಾಯಿಸಲಾಗದಂತೆ PhonePe ಅನ್ನು ಹೊರಗಿಡುತ್ತೀರಿ. ಕೋ-ಬ್ರ್ಯಾಂಡೆಡ್ ಕಾರ್ಡ್‌ಗೆ ಸಂಬಂಧಿಸಿದಂತೆ ನೀವು ಒದಗಿಸಿದ ಮಾಹಿತಿಯಲ್ಲಿ ಯಾವುದೇ ದೋಷವಿದ್ದರೆ ನೀವು ತಕ್ಷಣವೇ PhonePe ಮತ್ತು ಸಂಬಂಧಿತ ಕಾರ್ಡ್ ವಿತರಕರಿಗೆ ತಿಳಿಸಬೇಕಾಗುತ್ತದೆ.
- ಕಾರ್ಡ್ ವಿತರಕರು ಮತ್ತು PhonePe (ಅನ್ವಯವಾಗುವ ಮಟ್ಟಿಗೆ) ನಿಮ್ಮ ಮಾಹಿತಿ/ಡೇಟಾವನ್ನು (ವೈಯಕ್ತಿಕ ಅಥವಾ ಸೂಕ್ಷ್ಮ ವೈಯಕ್ತಿಕ ಡೇಟಾ ಅಥವಾ ಮಾಹಿತಿಯನ್ನು ಒಳಗೊಂಡಂತೆ) ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳಿಂದ ಅಥವಾ ಸಂಬಂಧದಲ್ಲಿ ಉಂಟಾಗುವ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಬಳಸಬಹುದು.
- ಕಾರ್ಡ್ ವಿತರಕರು ಕೇವಲ ತಮ್ಮ ವಿವೇಚನೆಯಿಂದ, ನಿಮಗೆ ಕೋ-ಬ್ರ್ಯಾಂಡೆಡ್ ಕಾರ್ಡ್ ವಿತರಿಸಲು ಸಮ್ಮತಿಸಬಹುದು ಅಥವಾ ನಿರಾಕರಿಸಬಹುದು ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಸಮ್ಮತಿಸುತ್ತೀರಿ. PhonePe ಕೇವಲ ಪ್ರಚಾರ ಮತ್ತು ವಿತರಣಾ ಪಾಲುದಾರನಾಗಿದ್ದು, ನಿಮಗೆ ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್‌ನ ವಿತರಣೆಯನ್ನು ಖಚಿತಪಡಿಸುವುದಿಲ್ಲ.
- ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್‌ಗಾಗಿ ನಿಮ್ಮ ಅರ್ಜಿಯ ಅನುಮೋದನೆ/ನಿರಾಕರಣೆ ಮತ್ತು ಅದರ ಬಳಕೆ/ಕಾರ್ಯಾಚರಣೆಗಳ ಸಂಬಂಧ ಕಾರ್ಡ್ ವಿತರಕರ ಯಾವುದೇ ವಿವೇಚನೆಗೆ ಸಂಬಂಧಿಸಿ PhonePe ಯಾವುದೇ ಪಾತ್ರವನ್ನು ಹೊಂದಿಲ್ಲ ಮತ್ತು ಯಾವುದೇ ಸ್ಪಷ್ಟ ಅಥವಾ ಸೂಚ್ಯ ಪ್ರಾತಿನಿಧ್ಯಗಳು, ಖಾತರಿಗಳು ಅಥವಾ ಭರವಸೆಗಳನ್ನು ನೀಡುವುದಿಲ್ಲ ಹಾಗೂ ಇದನ್ನು ನಿಮ್ಮ ಮತ್ತು ಕಾರ್ಡ್ ವಿತರಕರ ನಡುವಿನ ಒಪ್ಪಂದದ ನಿಯಮಗಳಿಂದ ನಿಯಂತ್ರಿಸಲಾಗುತ್ತದೆ.
- ಸಂವಹನಗಳು
- ಈ ಬಗ್ಗೆ ಮಾಹಿತಿಯನ್ನು ತಿಳಿಸಲು PhonePe ನಿಮ್ಮನ್ನು ಸಂಪರ್ಕಿಸಬಹುದು ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಸಮ್ಮತಿಸುತ್ತೀರಿ: (a) ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳು; (b) ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ PhonePe ಪ್ಲಾಟ್‌ಫಾರ್ಮ್‌ನಲ್ಲಿ ನೀವು ಕೈಗೊಳ್ಳುವ ಚಟುವಟಿಕೆಗಳು; (c) PhonePe, ಕಾರ್ಡ್ ವಿತರಕರು ಮತ್ತು ಅವರ ಉತ್ಪನ್ನಗಳು ಅಥವಾ ಸೇವೆಗಳು; (d) ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳ ಪ್ರಚಾರ ಮತ್ತು ಮಾರ್ಕೆಟಿಂಗ್, ಅವುಗಳಿಗೆ ಸಂಬಂಧಿಸಿದ ಪ್ರಯೋಜನಗಳು, ಯಾವುದೇ ಥರ್ಡ್ ಪಾರ್ಟಿಗಳು ಒದಗಿಸುವ ಸೇವೆಗಳು ಹಾಗೂ ಉತ್ಪನ್ನಗಳು; (e) ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳಿಗೆ ಸಂಬಂಧಿಸಿದ ಯಾವುದೇ ಕೊಡುಗೆಗಳು, ಮಾರ್ಕೆಟಿಂಗ್ ಪ್ರಚಾರಗಳು ಅಥವಾ ವೆಲ್ಕಮ್ ಬೆನಿಫಿಟ್‌ಗಳು ಅಥವಾ ರಿವಾರ್ಡ್ ಪ್ರೋಗ್ರಾ೦ಗಳು ಮತ್ತು (f) ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳು ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಇತರ ವಿಷಯ.
- ನೀವು ಥರ್ಡ್ ಪಾರ್ಟಿ ಪರವಾಗಿ PhonePe ಪ್ಲಾಟ್‌ಫಾರ್ಮ್ ಬಳಸಿದರೆ, ನೀವು PhonePe ಪ್ಲಾಟ್‌ಫಾರ್ಮ್‌ನಲ್ಲಿ ಮಾಹಿತಿಯನ್ನು ಲಭ್ಯವಾಗುವಂತೆ ಮಾಡಿರುವ ಅಂತಹ ಥರ್ಡ್ ಪಾರ್ಟಿಗೆ ಮೇಲಿನ ಯಾವುದೇ ಅಥವಾ ಎಲ್ಲಾ ಸಂವಹನಗಳನ್ನು ಕಳುಹಿಸಲು PhonePe ಗೆ ಅನುಮತಿಸಲಾಗಿದೆ ಎಂದು ಅಂಗೀಕರಿಸುತ್ತೀರಿ ಮತ್ತು ಸಮ್ಮತಿಸುತ್ತೀರಿ. ನಾವು ಅಂತಹ ಸಂವಹನಗಳನ್ನು ಕಳುಹಿಸಲು ಅಂತಹ ಥರ್ಡ್ ಪಾರ್ಟಿಯಿಂದ ಎಲ್ಲಾ ಒಪ್ಪಿಗೆಗಳನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನೀವು ಜವಾಬ್ದಾರರಾಗಿರುತ್ತೀರಿ.
- PhonePe ಸಂವಹನಗಳು PhonePe ಪ್ಲಾಟ್‌ಫಾರ್ಮಾನಲ್ಲಿ ನೋಟಿಫಿಕೇಶನ್‌ಗಳು, ಅಲರ್ಟ್‌ಗಳು, ಇಮೇಲ್‌ಗಳು, ಸಂದೇಶಗಳು, ಫೋನ್ ಕರೆಗಳು ಅಥವಾ ಇತರ ಕಾರ್ಯಸಾಧ್ಯವಾದ ಸಂವಹನ ವಿಧಾನಗಳ ರೂಪದಲ್ಲಿರಬಹುದು ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಸಮ್ಮತಿಸುತ್ತೀರಿ.
- ಮೇಲಿನ ಕ್ಲಾಸ್ 6.3 ರಲ್ಲಿ ನಿಗದಿಪಡಿಸಿದ ಯಾವುದೇ ವಿಧಾನಗಳ ಮೂಲಕ ಇಲ್ಲಿ ನಿಗದಿಪಡಿಸಿದ ಯಾವುದೇ ಉದ್ದೇಶಗಳಿಗಾಗಿ ನಿಮ್ಮೊಂದಿಗೆ ಸಂವಹನ ನಡೆಸಲು ನೀವು PhonePe, ಕಾರ್ಡ್ ವಿತರಕರು ಮತ್ತು PhonePe ನ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರಿಗೆ ಅಧಿಕಾರ ನೀಡುತ್ತೀರಿ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI”) ಮಾಡಿದ ನಿಬಂಧನೆಗಳನ್ನು ಒಳಗೊಂಡಂತೆ ಅನ್ವಯವಾಗುವ ಕಾನೂನಿನ ಅಡಿಯಲ್ಲಿ ನೀವು ಡು ನಾಟ್ ಡಿಸ್ಟರ್ಬ್(“DND“)/ರಾಷ್ಟ್ರೀಯ ಗ್ರಾಹಕ ಆದ್ಯತೆ ನೋಂದಣಿ (“NCPR“) ಪಟ್ಟಿಯ ಅಡಿಯಲ್ಲಿ ಮಾಡಿರಬಹುದಾದ ಯಾವುದೇ ಇತರ ವ್ಯತಿರಿಕ್ತ ಆದ್ಯತೆಯನ್ನು ನೀವು ಈ ಮೂಲಕ ಸ್ಪಷ್ಟವಾಗಿ ಮನ್ನಾ ಮಾಡುತ್ತೀರಿ. TRAI ವಿನಂತಿಸುವ ಯಾವುದೇ ಪ್ರಶ್ನೆಗೆ ಪ್ರತಿಕ್ರಿಯಿಸಲು PhonePeಗೆ ಅಗತ್ಯವಿರುವ ಹೆಚ್ಚುವರಿ ಅಧಿಕಾರಗಳು, ದಾಖಲೆಗಳನ್ನು ಒದಗಿಸಲು ನೀವು ಸಮ್ಮತಿಸುತ್ತೀರಿ.
- ಸಂವಹನಗಳನ್ನು ಸರಿಯಾಗಿ ಕಳುಹಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು PhonePe ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳುತ್ತದೆಯಾದರೂ, ಸಂಪರ್ಕ ಮಾಹಿತಿಯಲ್ಲಿ ಯಾವುದೇ ನಿರ್ಬಂಧಗಳು, DND ಪಟ್ಟಿಯ ಅಡಿಯಲ್ಲಿ ಫೋನ್ ಸಂಖ್ಯೆಯ ನೋಂದಣಿ, ಇಮೇಲ್ ಡೇಟಾ ಸ್ಟೋರೇಜ್ ಕೊರತೆ, ಟೆಲಿಕಾಂ ಸೇವಾ ಪೂರೈಕೆದಾರರ ದೋಷಗಳು ಇತ್ಯಾದಿ ಕಾರಣದಿಂದಾಗಿ ಸಂವಹನಗಳನ್ನು ಕಳುಹಿಸುವಲ್ಲಿ ವಿಫಲವಾಗಬಹುದು. ಮೇಲಿನವುಗಳನ್ನು ಪರಿಗಣಿಸಿ, ಯಾವುದೇ ಸಂವಹನಗಳನ್ನು ಸ್ವೀಕರಿಸದಿರುವುದಕ್ಕೆ PhonePe ಜವಾಬ್ದಾರನಾಗಿರುವುದಿಲ್ಲ ಅಥವಾ ಹೊಣೆಗಾರನಾಗಿರುವುದಿಲ್ಲ.
- PhonePe ಎಲ್ಲಾ ಸಂವಹನಗಳನ್ನು ಉತ್ತಮ ಭರವಸೆಯಿಂದಲೇ ಕಳುಹಿಸುತ್ತದೆಯಾದರೂ, ದಯವಿಟ್ಟು ಯಾವುದೇ ಸಂವಹನದ ನಿಖರತೆ, ಸಮರ್ಪಕತೆ, ಲಭ್ಯತೆ, ಕಾನೂನುಬದ್ಧತೆ, ಮಾನ್ಯತೆ, ವಿಶ್ವಾಸಾರ್ಹತೆ ಅಥವಾ ಸಂಪೂರ್ಣತೆಗೆ ಸಂಬಂಧಿಸಿದಂತೆ PhonePe ಯಾವುದೇ ರೀತಿಯ ಪ್ರಾತಿನಿಧ್ಯ ಅಥವಾ ಖಾತರಿಯನ್ನು ವ್ಯಕ್ತಪಡಿಸುವುದಿಲ್ಲ ಅಥವಾ ಸೂಚಿಸುವುದಿಲ್ಲ ಎಂಬುದನ್ನು ಗಮನಿಸಿ. PhonePe ಮಾಡಿದ ಯಾವುದೇ ಸಂವಹನದ ವಿಷಯದ ಯಾವುದೇ ಬಳಕೆ ಅಥವಾ ಅವಲಂಬನೆಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಗೆ ಉಂಟಾದ ಯಾವುದೇ ರೀತಿಯ ನಷ್ಟ ಅಥವಾ ಹಾನಿಗಾಗಿ ಯಾವುದೇ ಸಂದರ್ಭದಲ್ಲಿ PhonePe ಜವಾಬ್ದಾರನಾಗಿರುವುದಿಲ್ಲ ಅಥವಾ ಹೊಣೆಗಾರನಾಗಿರುವುದಿಲ್ಲ.
- ಸಮ್ಮತಿಗಳನ್ನು ವ್ಯಕ್ತಪಡಿಸಿ
- ಈ ಕೆಳಗಿನವುದಕ್ಕೆ ನೀವು PhonePe ಗೆ ಅಧಿಕಾರ ನೀಡುತ್ತೀರಿ ಮತ್ತು ಸಮ್ಮತಿಸುತ್ತೀರಿ:
- ಸಂಬಂಧಿತ ಕಾರ್ಡ್ ವಿತರಕರೊಂದಿಗೆ ಅರ್ಜಿಯಲ್ಲಿ ಒಳಗೊಂಡಿರುವ ಎಲ್ಲಾ ಮಾಹಿತಿ/ಡೇಟಾವನ್ನು (ವೈಯಕ್ತಿಕ ಅಥವಾ ಸೂಕ್ಷ್ಮ ವೈಯಕ್ತಿಕ ಡೇಟಾ ಅಥವಾ ಮಾಹಿತಿ ಸೇರಿದಂತೆ) ಹಂಚಿಕೊಳ್ಳಲು; ಮತ್ತು
- ನೀವು ಈ ಹಿಂದೆ PhonePe ಪ್ಲಾಟ್‌ಫಾರ್ಮ್‌ನಲ್ಲಿ ಒದಗಿಸಿದ ಯಾವುದೇ ಮಾಹಿತಿ/ಡೇಟಾವನ್ನು (ವೈಯಕ್ತಿಕ ಅಥವಾ ಸೂಕ್ಷ್ಮ ವೈಯಕ್ತಿಕ ಡೇಟಾ ಅಥವಾ ಮಾಹಿತಿ ಸೇರಿದಂತೆ) ಸಂಬಂಧಿತ ಕಾರ್ಡ್ ವಿತರಕರೊಂದಿಗೆ ಹಂಚಿಕೊಳ್ಳಲು.
- ಸಂಬಂಧಿತ ಕಾರ್ಡ್ ವಿತರಕರೊಂದಿಗೆ ಹಂಚಿಕೊಂಡ ಯಾವುದೇ ಮಾಹಿತಿ/ಡೇಟಾವನ್ನು (ವೈಯಕ್ತಿಕ ಅಥವಾ ಸೂಕ್ಷ್ಮ ವೈಯಕ್ತಿಕ ಡೇಟಾ ಅಥವಾ ಮಾಹಿತಿ ಸೇರಿದಂತೆ) ಈ ಕೆಳಗಿನ ಉದ್ದೇಶಗಳಿಗಾಗಿ ಕಾರ್ಡ್ ವಿತರಕರು ಬಳಸುತ್ತಾರೆ ಎಂದು ನೀವು ಅರ್ಥಮಾಡಿಕೊಂಡಿದ್ದೀರಿ:
- ಕ್ರೆಡಿಟ್ ನಿರ್ಧಾರ, ಕ್ರೆಡಿಟ್ ಮೌಲ್ಯಮಾಪನ, ಕ್ರೆಡಿಟ್ ಅಪಾಯ ವಿಶ್ಲೇಷಣೆ ಮತ್ತು ವಂಚನೆ ಮತ್ತು ಮನಿ ಲಾಂಡರಿಂಗ್ ನಿಗ್ರಹ ತಪಾಸಣೆಗಳನ್ನು ಕೈಗೊಳ್ಳುವ ಉದ್ದೇಶಗಳಿಗಾಗಿ ನಿಮ್ಮ ಮಾಹಿತಿ/ಡೇಟಾವನ್ನು ಪ್ರಕ್ರಿಯೆಗೊಳಿಸಲು;
- ನಂತರ ಕ್ರೆಡಿಟ್ ಸ್ಕೋರ್‌ಗಳು, ಕ್ರೆಡಿಟ್ ಮಾಹಿತಿ ಮತ್ತು/ಅಥವಾ ಕ್ರೆಡಿಟ್ ಮೌಲ್ಯಮಾಪನ ವರದಿಯನ್ನು ಪಡೆಯುವ ಉದ್ದೇಶಕ್ಕಾಗಿ ಕ್ರೆಡಿಟ್ ಮಾಹಿತಿ ಕಂಪನಿ(ಗಳ) ಜೊತೆಗೆ ನಿಮ್ಮ ಮಾಹಿತಿ/ಡೇಟಾ ಹಂಚಿಕೊಳ್ಳಲು; ಮತ್ತು
- ಹೊಸ ಉತ್ಪನ್ನಗಳು ಮತ್ತು/ಅಥವಾ ಸೇವೆಗಳನ್ನು ನೀಡಲು ವಿವಿಧ ಸಂವಹನ ವಿಧಾನಗಳ ಮೂಲಕ ನಿಮ್ಮನ್ನು ಸಂಪರ್ಕಿಸಲು.
- ಸಂಬಂಧಿತ ಕೋ-ಬ್ರ್ಯಾಂಡೆಡ್ ಕಾರ್ಡ್‌ಗಾಗಿ ನಿಮ್ಮ ಅರ್ಜಿಯನ್ನು ಪ್ರಕ್ರಿಯೆಗೊಳಿಸುವ ಉದ್ದೇಶಕ್ಕಾಗಿ ಮತ್ತು/ಅಥವಾ ಬೆನಿಫಿಟ್ಸ್ ಮ್ಯಾನೇಜ್ಮೆಂಟ್ ಉದ್ದೇಶಕ್ಕಾಗಿ ಯಾವುದೇ ಇತರ ಎಂಟಿಟಿಗಳಿಗೆ ನಿಮ್ಮ ಮಾಹಿತಿ/ಡೇಟಾವನ್ನು ಬಹಿರಂಗಪಡಿಸಲು (ವೈಯಕ್ತಿಕ ಅಥವಾ ಸೂಕ್ಷ್ಮ ವೈಯಕ್ತಿಕ ಡೇಟಾ ಅಥವಾ ಮಾಹಿತಿ ಸೇರಿದಂತೆ) ನೀವು PhonePe ಗೆ ಅಧಿಕಾರ ಮತ್ತು ಸಮ್ಮತಿಯನ್ನು ನೀಡುತ್ತೀರಿ.
- ನಿಮ್ಮ ಸಮ್ಮತಿಗಳನ್ನು ದಾಖಲಿಸಲು ಮತ್ತು ಸಂಗ್ರಹಿಸಲು ಮತ್ತು ನ್ಯಾಯಾಲಯ, ಅಥವಾ ಯಾವುದೇ ಪ್ರಾಧಿಕಾರ ಅಥವಾ ಮಧ್ಯಸ್ಥಿಕೆ ಪ್ರಕ್ರಿಯೆಯ ಮುಂದೆ ಸೇರಿದಂತೆ ದಾಖಲೆ ನಿರ್ವಹಣೆ ಮತ್ತು ಸಾಕ್ಷ್ಯದ ಉದ್ದೇಶಗಳಿಗಾಗಿ ನಿಮ್ಮ ಸಮ್ಮತಿಗಳನ್ನು ಬಳಸಲು ನೀವು PhonePe ಗೆ ಅಧಿಕಾರ ಮತ್ತು ಸಮ್ಮತಿ ನೀಡುತ್ತೀರಿ.
- ಪ್ರಯೋಜನಗಳು
- ಕಾಲಕಾಲಕ್ಕೆ, PhonePe ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ರಿವಾರ್ಡ್‌ಗಳು, ರಿಯಾಯಿತಿಗಳು, ಕ್ಯಾಶ್‌ಬ್ಯಾಕ್‌ಗಳು ಮತ್ತು ಇತರ ಕೊಡುಗೆಗಳನ್ನು ಒದಗಿಸಬಹುದು/ಸುಗಮಗೊಳಿಸಬಹುದು (ಒಟ್ಟಾರೆಯಾಗಿ, “ಪ್ರಯೋಜನ(ಗಳು)“). ಯಾವುದೇ ಪ್ರಯೋಜನಗಳನ್ನು ಪಡೆಯಲು, ನೀವು ಅರ್ಹತಾ ಷರತ್ತುಗಳನ್ನು ಪೂರೈಸಬೇಕು ಮತ್ತು ಅಂತಹ ಪ್ರಯೋಜನಗಳಿಗೆ ಅನ್ವಯವಾಗುವ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಬೇಕು.
- ಯಾವುದೇ ಪ್ರಯೋಜನ(ಗಳು)ಕ್ಕೆ ಅನ್ವಯವಾಗುವ ಅವಶ್ಯಕತೆಗಳನ್ನು ಪೂರೈಸಲು ನೀವು ವಿಫಲವಾದರೆ, ನಿಮ್ಮನ್ನು ಅನರ್ಹಗೊಳಿಸುವ ಅಥವಾ ಯಾವುದೇ ಹೊಣೆಗಾರಿಕೆಗೆ ಒಳಗಾಗದೆ ಯಾವುದೇ ಸಮಯದಲ್ಲಿ ಯಾವುದೇ ಕೊಡುಗೆ ಅಥವಾ ಪ್ರಯೋಜನವನ್ನು ನಿಲ್ಲಿಸಲು ಅಥವಾ ಬದಲಾಯಿಸಲು PhonePe ಹಕ್ಕನ್ನು ಕಾಯ್ದಿರಿಸಿದೆ.
- ನಿಮ್ಮ ರಾಜ್ಯ/ಪ್ರದೇಶದ ಕಾನೂನುಗಳು ನಿಮ್ಮನ್ನು ಯಾವುದೇ ಪ್ರಯೋಜನಗಳನ್ನು ಪಡೆಯುವುದರಿಂದ ನಿಷೇಧಿಸಿದ್ದರೆ ನೀವು ಅವುಗಳಲ್ಲಿ ಭಾಗವಹಿಸಬಾರದು ಎಂಬುದನ್ನು ದಯವಿಟ್ಟು ಗಮನಿಸಿ.
- ಕಾರ್ಡ್ ವಿತರಕರ ನಿಯಮಗಳು ಮತ್ತು ಷರತ್ತುಗಳು
ಈ ಕೋ-ಬ್ರ್ಯಾಂಡೆಡ್ ಕಾರ್ಡ್‌ನ ನಿಯಮಗಳು ಮತ್ತು ಷರತ್ತುಗಳು ಭಾಗ B ಅಲ್ಲಿ ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಒಳಗೊಂಡಂತೆ, ಆದರೆ ಅಷ್ಟಕ್ಕೇ ಸೀಮಿತವಾಗಿರದೆ, ಸಂಬಂಧಿತ ಕೋ-ಬ್ರ್ಯಾಂಡೆಡ್ ಕಾರ್ಡ್‌ಗೆ ಸಂಬಂಧಿಸಿದಂತೆ ಆಯಾ ಕಾರ್ಡ್ ವಿತರಕರು ನಿಗದಿಪಡಿಸಿದ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ನೀವು ಪಾಲಿಸುತ್ತೀರಿ ಮತ್ತು ಅವುಗಳಿಗೆ ಬದ್ಧರಾಗಿರುತ್ತೀರಿ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಕಾರ್ಡ್ ವಿತರಕರ ಪ್ಲಾಟ್‌ಫಾರ್ಮ್/ಸಂವಹನಗಳನ್ನು ನೋಡಿ
- PhonePe ಪ್ಲಾಟ್‌ಫಾರ್ಮ್
ಕಾರ್ಡ್ ವಿತರಕರ ಕೋ-ಬ್ರ್ಯಾಂಡಿಂಗ್ ಪಾಲುದಾರರಾಗಿ, PhonePe ನಿಮ್ಮ ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್ ಮಾಹಿತಿಗೆ ಪ್ರವೇಶ ಹೊಂದಿರುವುದಿಲ್ಲ. PhonePe ಪ್ಲಾಟ್‌ಫಾರ್ಮ್‌ನಲ್ಲಿ ನಿಮಗೆ ಪ್ರದರ್ಶಿಸಲಾದ ಕೊ-ಬ್ರ್ಯಾಂಡೆಡ್ ಕಾರ್ಡ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಆಯಾ ಕಾರ್ಡ್ ವಿತರಕರು ನೇರವಾಗಿ ನಿಮಗೆ ತಲುಪಿಸುತ್ತಿದ್ದಾರೆ ಮತ್ತು PhonePe ಪ್ಲಾಟ್‌ಫಾರ್ಮ್ ಮೂಲಕ ನೀವು ಕೈಗೊಳ್ಳಬಹುದಾದ ಯಾವುದೇ ಮತ್ತು ಎಲ್ಲಾ ಕಾರ್ಡ್ ಸಂಬಂಧಿತ ಚಟುವಟಿಕೆಗಳನ್ನು ತಾಂತ್ರಿಕ ಏಕೀಕರಣದ ಮೂಲಕ ಸಂಬಂಧಪಟ್ಟ ಕಾರ್ಡ್ ವಿತರಕರ ತಾಂತ್ರಿಕ ಮೂಲ ಸೌಕರ್ಯಕ್ಕೆ ರವಾನಿಸಲಾಗುತ್ತದೆ ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಸಮ್ಮತಿಸುತ್ತೀರಿ.
- ಕುಂದುಕೊರತೆ ಪರಿಹಾರ
- PhonePe ಪ್ಲಾಟ್‌ಫಾರ್ಮ್‌ಗೆ ಸಂಬಂಧಿಸಿದ ಯಾವುದೇ ಕುಂದುಕೊರತೆಗಳನ್ನು https://www.phonepe.com/grievance-policy/ ರಲ್ಲಿ ಲಭ್ಯವಿರುವ PhonePe ಕುಂದುಕೊರತೆ ಪರಿಹಾರ ನೀತಿಯಿಂದ ನಿಯಂತ್ರಿಸಲಾಗುತ್ತದೆ.
- ಕೋ-ಬ್ರ್ಯಾಂಡೆಡ್ ಕಾರ್ಡ್ ಬಳಕೆಗೆ ಸಂಬಂಧಿಸಿದ ಯಾವುದೇ ಕುಂದುಕೊರತೆಗಳನ್ನು ಆಯಾ ಕಾರ್ಡ್ ವಿತರಕರ ಕುಂದುಕೊರತೆ ಪರಿಹಾರ ನೀತಿಯಿಂದ ನಿಯಂತ್ರಿಸಲಾಗುತ್ತದೆ. PhonePe ಗಮನಕ್ಕೆ ತರಲಾದ ಅಂತಹ ಯಾವುದೇ ಕುಂದುಕೊರತೆಗಳನ್ನು ಸಂಬಂಧಿತ ಕಾರ್ಡ್ ವಿತರಕರಿಗೆ ಮರುನಿರ್ದೇಶಿಸಲಾಗುತ್ತದೆ ಮತ್ತು ಕೋ-ಬ್ರ್ಯಾಂಡೆಡ್ ಕಾರ್ಡ್ ಬಳಕೆಗೆ ಸಂಬಂಧಿಸಿದ ಯಾವುದೇ ಕುಂದುಕೊರತೆಗಳನ್ನು ಪರಿಹರಿಸಲು PhonePe ಜವಾಬ್ದಾರನಾಗಿರುವುದಿಲ್ಲ ಎಂದು ನೀವು ಈ ಮೂಲಕ ಸಮ್ಮತಿಸುತ್ತೀರಿ ಮತ್ತು ಅಂಗೀಕರಿಸುತ್ತೀರಿ.
- ನಷ್ಟ ಪರಿಹಾರ
ಇವುಗಳ ಪರಿಣಾಮವಾಗಿ ಅಥವಾ ಇವುಗಳಿಗೆ ಸಂಬಂಧಿಸಿದಂತೆ ಉದ್ಭವಿಸುವ ಯಾವುದೇ ಮತ್ತು ಎಲ್ಲಾ ನಷ್ಟಗಳು, ದಂಡಗಳು, ವೆಚ್ಚಗಳು, ಖರ್ಚುಗಳು (ವಕೀಲರ ಶುಲ್ಕಗಳು ಸೇರಿದಂತೆ) ಅಥವಾ ಯಾವುದೇ ಕ್ಲೈಮ್‌ಗಳು, ಬೇಡಿಕೆಗಳು, ಕ್ರಮಗಳು ಅಥವಾ ಇತರ ಪ್ರಕ್ರಿಯೆಗಳಿಂದ ಅಥವಾ ಅವುಗಳಿಗೆ ಸಂಬಂಧಿಸಿದಂತೆ (ಥರ್ಡ್ ಪಾರ್ಟಿ ಪ್ರಾರಂಭಿಸಿದವು ಸೇರಿದಂತೆ) ಉಂಟಾಗುವ ಯಾವುದೇ ಥರ್ಡ್ ಪಾರ್ಟಿ ಕ್ಲೈಮ್‌ಗಳಿಂದ ಮತ್ತು ಅವುಗಳ ವಿರುದ್ಧ ನೀವು PhonePe ಮತ್ತು ಅದರ ಅಂಗಸಂಸ್ಥೆಗಳು, ಆಯಾ ಕಾರ್ಡ್ ವಿತರಕರು, PhonePe ಮತ್ತು ಕಾರ್ಡ್ ವಿತರಕರ ಪಾಲುದಾರರು, ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರು, ಗುತ್ತಿಗೆದಾರರು, ಪರವಾನಗಿದಾರರು, ನಿರ್ದೇಶಕರು, ವ್ಯವಸ್ಥಾಪಕರು, ಅಧಿಕಾರಿಗಳು, ಉದ್ಯೋಗಿಗಳು ಮತ್ತು ಏಜೆಂಟ್‌ಗಳಿಗೆ ನಷ್ಟ ಪರಿಹಾರ ನೀಡುತ್ತೀರಿ ಮತ್ತು ಹಾನಿಯಾಗದಂತೆ ನೋಡಿಕೊಳ್ಳುತ್ತೀರಿ.
- ಇಲ್ಲಿ ಅಳವಡಿಸಿಕೊಂಡ ಯಾವುದೇ ನಿಯಮಗಳನ್ನು ಒಳಗೊಂಡಂತೆ, ಅಥವಾ ನಿಯಮಗಳನ್ನು ಒಳಗೊಂಡಿರುವ ಯಾವುದೇ ನಿಯಮಗಳನ್ನು ಒಳಗೊಂಡಂತೆ ನಿಮ್ಮಿಂದ ನಿಯಮಗಳ ಉಲ್ಲಂಘನೆ;
- ಅನ್ವಯವಾಗುವ ಯಾವುದೇ ಕಾನೂನನ್ನು ಅನುಸರಿಸುವಲ್ಲಿ ನಿಮ್ಮ ಉಲ್ಲಂಘನೆ ಅಥವಾ ಡೀಫಾಲ್ಟ್;
- ವಂಚನೆ, ಉದ್ದೇಶಪೂರ್ವಕ ದುರ್ನಡತೆ ಅಥವಾ ನಿಮ್ಮಿಂದ ನಿರ್ಲಕ್ಷಿತ ನಡೆ;
- ನೀವು ಒದಗಿಸಿದ ಯಾವುದೇ ಸುಳ್ಳು, ತಪ್ಪು, ತಪ್ಪುದಾರಿಗೆಳೆಯುವ ಅಥವಾ ಅಪೂರ್ಣ ಮಾಹಿತಿ;
- PhonePe ಪ್ಲಾಟ್‌ಫಾರ್ಮ್‌ನ ನಿಮ್ಮ ಬಳಕೆ ಅಥವಾ ಪ್ರವೇಶದ ಕಾರಣದಿಂದಾಗಿ ಯಾವುದೇ ಶಾಸನಬದ್ಧ, ನಿಯಂತ್ರಕ, ಸರ್ಕಾರಿ ಪ್ರಾಧಿಕಾರ ಅಥವಾ ಯಾವುದೇ ಇತರ ಪ್ರಾಧಿಕಾರದಿಂದ ವಿಧಿಸಲಾದ ದಂಡಗಳು ಮತ್ತು ಶುಲ್ಕಗಳು.
- PhonePe ಪ್ಲಾಟ್‌ಫಾರ್ಮ್ ಬಳಸುವಲ್ಲಿ ನಿಮ್ಮ ಯಾವುದೇ ಕಾರ್ಯಗಳು ಅಥವಾ ಲೋಪಗಳು.
- ಹೊಣೆಗಾರಿಕೆಯ ಹೊರಗಿಡುವಿಕೆ
ಈ ಕೆಳಗಿನವುದಕ್ಕೆ PhonePe ಜವಾಬ್ದಾರನಾಗಿರುವುದಿಲ್ಲ ಅಥವಾ ಹೊಣೆಗಾರನಾಗಿರುವುದಿಲ್ಲ ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಸಮ್ಮತಿಸುತ್ತೀರಿ:
- ಯಾವುದೇ ಥರ್ಡ್ ಪಾರ್ಟಿಯಿಂದ ಕೋ-ಬ್ರ್ಯಾಂಡೆಡ್ ಕಾರ್ಡ್‌ನ ಬಳಕೆಗೆ ಸಂಬಂಧಿಸಿದಂತೆ ವಂಚನೆ ಅಥವಾ ದುರುಪಯೋಗದ ಪರಿಣಾಮ ಸೇರಿದಂತೆ ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್ ಹೊಂದಿರುವುದರಿಂದಾಗಿ/ಬಳಕೆಯಿಂದಾಗಿ ನಿಮಗೆ ಉಂಟಾದ ಯಾವುದೇ ನಷ್ಟ ಅಥವಾ ಹಾನಿ;
- ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್‌ನ ಅರ್ಹತೆ ಅಥವಾ ನಿಮ್ಮ ಸ್ವಾಧೀನ/ಬಳಕೆಯಿಂದ ಉಂಟಾಗುವ ಅಥವಾ ಅದಕ್ಕೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ವಿವಾದ;
- ಯಾವುದೇ ವ್ಯಕ್ತಿ/ವ್ಯಾಪಾರಿ ಸಂಸ್ಥೆಯು ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್ ಅನ್ನು ಮಾನ್ಯ ಮಾಡಲು ಅಥವಾ ಸ್ವೀಕರಿಸಲು ನಿರಾಕರಿಸುವುದು/ವಿಫಲವಾಗುವುದು;
- ಯಾವುದೇ ಕೋ-ಬ್ರ್ಯಾಂಡೆಡ್ ಕಾರ್ಡ್ ಅಥವಾ ಕಾರ್ಡ್ ವಿತರಕರು ನೀಡುವ ರಿವಾರ್ಡ್‌ಗಳು/ಬೆನಿಫಿಟ್‌ಗಳು ಅಥವಾ ಪ್ರಯೋಜನಗಳಿಗೆ ಸಂಬಂಧಿಸಿದಂತೆ ನಿಮ್ಮ ಮತ್ತು ಕಾರ್ಡ್ ವಿತರಕರ ನಡುವಿನ ಯಾವುದೇ ವಿವಾದಗಳು ಸೇರಿದಂತೆ ನಿಮ್ಮ ಕೋ-ಬ್ರ್ಯಾಂಡೆಡ್ ಕಾರ್ಡ್‌ಗೆ ಸಂಬಂಧಿಸಿದಂತೆ ಕಾರ್ಡ್ ವಿತರಕರ ಯಾವುದೇ ಕ್ರಮ ಅಥವಾ ಲೋಪಗಳು; ಮತ್ತು
- ಬಳಕೆಗೆ ಸಂಬಂಧಿಸಿದಂತೆ ನಿಮ್ಮ ಕೋ-ಬ್ರ್ಯಾಂಡೆಡ್ ಕಾರ್ಡ್ ಮೇಲೆ ವಿಧಿಸಲಾದ ಯಾವುದೇ ಶುಲ್ಕಗಳು.
ಯಾವುದೇ ವೈರುಧ್ಯಗಳನ್ನು ಪರಿಗಣಿಸದೆ (i) ಅಂತಹ ಕ್ಲೈಮ್‌ಗಳು ಒಪ್ಪಂದ, ಅಪರಾಧ, ಖಾತರಿ ಅಥವಾ ಯಾವುದೇ ಇತರ ಕಾನೂನು ಸಿದ್ಧಾಂತವನ್ನು ಆಧರಿಸಿವೆಯೇ ಎಂಬುದನ್ನು ಲೆಕ್ಕಿಸದೆ ವಿಶೇಷ, ಪ್ರಾಸಂಗಿಕ, ಪರೋಕ್ಷ ಅಥವಾ ಪರಿಣಾಮಕಾರಿ ಹಾನಿಗಳಿಗೆ (ಬ್ಯಾಂಕುಗಳು, ಥರ್ಡ್ ಪಾರ್ಟಿಗಳು, ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರು, ಗುತ್ತಿಗೆದಾರರು, ನಮ್ಮ ಪರವಾನಗಿದಾರರ ಕ್ರಮಗಳಿಂದಾಗಿ ಉಂಟಾದ ಡೌನ್‌ಟೈಮ್ ವೆಚ್ಚಗಳು, ಡೇಟಾ ನಷ್ಟ, ಲಾಭದ ನಷ್ಟ ಅಥವಾ ಇತರ ಯಾವುದೇ ನಷ್ಟಗಳು ಸೇರಿದಂತೆ ಆದರೆ ಇಷ್ಟಕ್ಕೆ ಸೀಮಿತವಾಗಿರದೆ) PhonePe ಜವಾಬ್ದಾರನಾಗಿರುವುದಿಲ್ಲ (ii) PhonePe ಯ ಮತ್ತು ನಮ್ಮ ಅಂಗಸಂಸ್ಥೆಗಳು, ಅಧಿಕಾರಿಗಳು, ಉದ್ಯೋಗಿಗಳು ಮತ್ತು ಏಜೆಂಟ್‌ಗಳ ಸಂಚಿತ ಗರಿಷ್ಠ ಹೊಣೆಗಾರಿಕೆ ನೂರು ರೂಪಾಯಿ ಮಾತ್ರ ಆಗಿದ್ದು ಇದನ್ನು ಮೀರುವುದಿಲ್ಲ ಮತ್ತು (iii) ಈ ಪರಿಹಾರವು ನಿಮಗೆ ಯಾವುದೇ ನಷ್ಟಗಳನ್ನು ಸಂಪೂರ್ಣವಾಗಿ ತುಂಬಿಕೊಡದಿದ್ದರೆ ಅಥವಾ ಅದರ ಅಗತ್ಯ ಉದ್ದೇಶ ವಿಫಲವಾದರೆ ಮಿತಿಗಳು ಮತ್ತು ಹೊರಗಿಡುವಿಕೆಗಳು ಸಹ ಅನ್ವಯಿಸುತ್ತವೆ.
- ಎಲೆಕ್ಟ್ರಾನಿಕ್ ದಾಖಲೆ
ನಿಯಮಗಳು ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಮತ್ತು ಅದರ ಅಡಿಯಲ್ಲಿರುವ ನಿಯಮಗಳ ಪ್ರಕಾರ ಮತ್ತು ಕಾಲಕಾಲಕ್ಕೆ ಮಾಡಲಾದ ತಿದ್ದುಪಡಿ ಅನುಸಾರದ (“IT ಕಾಯ್ದೆ“) ಎಲೆಕ್ಟ್ರಾನಿಕ್ ದಾಖಲೆಯಾಗಿದೆ. ಈ ಎಲೆಕ್ಟ್ರಾನಿಕ್ ದಾಖಲೆಯನ್ನು ಕಂಪ್ಯೂಟರ್ ಸಿಸ್ಟಂನಿಂದ ರಚಿಸಲಾಗಿದೆ ಮತ್ತು ಯಾವುದೇ ಭೌತಿಕ ಅಥವಾ ಡಿಜಿಟಲ್ ಸಹಿಗಳ ಅಗತ್ಯವಿಲ್ಲ. ನಿಯಮಗಳನ್ನು IT ಕಾಯಿದೆ (ಕಾಲಕಾಲಕ್ಕೆ ಮಾಡಿದ ತಿದ್ದುಪಡಿಗಳ ಅನ್ವಯ) ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳಿಗೆ ಅನುಗುಣವಾಗಿ ಪ್ರಕಟಿಸಲಾಗುತ್ತದೆ. ನಿಯಮಗಳು ಬಾಧ್ಯತೆಯನ್ನು ಮತ್ತು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಒಪ್ಪಂದವನ್ನು ರೂಪಿಸುತ್ತವೆ.
- ಪ್ರಶ್ನೆಗಳು
ಯಾವುದೇ ಪ್ರಶ್ನೆಗಳಿದ್ದರೆ, ನೀವು PhonePe ಪ್ಲಾಟ್‌ಫಾರ್ಮ್‌ನಲ್ಲಿ ಸಂಬಂಧಿತ ಕೋ-ಬ್ರ್ಯಾಂಡೆಡ್ ಕಾರ್ಡ್‌ನ ನಿರ್ದಿಷ್ಟ ಪುಟದಲ್ಲಿರುವ ‘ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು’ ವಿಭಾಗವನ್ನು ನೋಡಬಹುದು. ಈ ‘ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು’ ವಿಭಾಗದಲ್ಲಿ ಕೂಡ ನಿಮಗೆ ಉತ್ತರ ದೊರೆಯದಿದ್ದರೆ, ಪರಿಹಾರಕ್ಕಾಗಿ PhonePe ಪ್ಲಾಟ್‌ಫಾರ್ಮ್‌ನಲ್ಲಿ ಟಿಕೆಟ್ ರಚಿಸುವ ಮೂಲಕ ನಿಮ್ಮ ಪ್ರಶ್ನೆಗಳನ್ನು ನಮ್ಮ ಬೆಂಬಲ ತಂಡಕ್ಕೆ ನಿರ್ದೇಶಿಸಬಹುದು.
- ಇತರ ನಿಯಮಗಳು
- ಸಂಬಂಧಿತ ಕಾರ್ಡ್ ವಿತರಕರ ನಿಯಮಗಳು ಮತ್ತು ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿಗೆ ಪೂರ್ವಾಗ್ರಹವಿಲ್ಲದೆ, ಯಾವುದೇ ಸಮಯದಲ್ಲಿ ನಿಯಮಗಳನ್ನು ಮಾರ್ಪಡಿಸಲು ಮತ್ತು ಹೊಸ ಅಥವಾ ಹೆಚ್ಚುವರಿ ನಿಯಮಗಳು ಅಥವಾ ಷರತ್ತುಗಳನ್ನು ಸೇರಿಸಲು PhonePe ಹಕ್ಕನ್ನು ಕಾಯ್ದಿರಿಸುತ್ತದೆ. ನಿಯಮಗಳಿಗೆ ಅಥವಾ ನಿಯಮಗಳಲ್ಲಿ ಉಲ್ಲೇಖಿಸಲಾದ URL ಗಳಿಗೆ ಯಾವುದೇ ಮಾರ್ಪಾಡುಗಳು ಸಂಬಂಧಿತ URL ನಲ್ಲಿ ಲಭ್ಯವಿರುತ್ತವೆ (ಅಥವಾ ನಾವು ಕಾಲಕಾಲಕ್ಕೆ ಒದಗಿಸಬಹುದಾದ ಬೇರೆ URL). ನಿಯಮಗಳಿಗೆ ಯಾವುದೇ ಬದಲಾವಣೆಗಳನ್ನು PhonePe ಪ್ಲಾಟ್‌ಫಾರ್ಮ್‌ನಲ್ಲಿ ಸೂಚಿಸಲಾಗುತ್ತದೆ. ಅಂತಹ ಪ್ರಕಟಣೆಯನ್ನು ನಿಮಗೆ ಸಾಕಷ್ಟು ಸೂಚನೆ ನೀಡಲಾಗಿದೆ ಎಂದು ಪರಿಗಣಿಸಲು ಸಾಕಾಗಿರುತ್ತದೆ. ನಿಯಮಗಳಿಗೆ ಯಾವುದೇ ನವೀಕರಣಗಳು, ತಿದ್ದುಪಡಿಗಳು, ಮಾರ್ಪಾಡುಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಹೊಂದುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.
- ಬಳಕೆದಾರರ ನೋಂದಣಿ, ಗೌಪ್ಯತೆ, ಬಳಕೆದಾರರ ಜವಾಬ್ದಾರಿಗಳು, ಆಡಳಿತ ಕಾನೂನು, ಹೊಣೆಗಾರಿಕೆ, ಬೌದ್ಧಿಕ ಆಸ್ತಿ, ಗೌಪ್ಯತೆ ಮತ್ತು ಸಾಮಾನ್ಯ ನಿಬಂಧನೆಗಳು ಇತ್ಯಾದಿ ನಿಯಮಗಳನ್ನು ಒಳಗೊಂಡಂತೆ ಎಲ್ಲಾ ಇತರ ನಿಯಮಗಳು https://www.phonepe.com/terms-conditions/ರಲ್ಲಿ ಲಭ್ಯವಿರುವ PhonePe ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲೇಖಿಸಿ ಈ ಕೋ-ಬ್ರ್ಯಾಂಡೆಡ್ ಕಾರ್ಡ್ ನಿಯಮಗಳು ಮತ್ತು ಷರತ್ತುಗಳಲ್ಲಿ ಸಂಯೋಜಿಸಲಾಗಿದೆ ಎಂದು ಪರಿಗಣಿಸಲಾಗಿದೆ.
- ಇಲ್ಲಿ ವ್ಯಾಖ್ಯಾನಿಸದ ಕ್ಯಾಪಿಟಲೈಸ್ ಮಾಡಲಾದ ಪದಗಳು ಮೇಲೆ ತಿಳಿಸಲಾದ PhonePe ನಿಯಮಗಳು ಮತ್ತು ಷರತ್ತುಗಳಿಂದ ತಮ್ಮ ಅರ್ಥ ಪಡೆದುಕೊಳ್ಳುತ್ತವೆ.
ಭಾಗ ಬಿ – ವಿಶೇಷ ನಿಯಮಗಳು ಮತ್ತು ಷರತ್ತುಗಳು
- PhonePe ULTIMO HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು PhonePe UNO HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್
- PhonePe ULTIMO HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು PhonePe UNO HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಬಳಕೆಯನ್ನುhttps://www.hdfcbank.com/content/bbp/repositories/723fb80a-2dde-42a3-9793-7ae1be57c87f/?path=/Personal/Pay/Cards/Credit%20Card/Credit%20Card%20Landing%20Page/Manage%20Your%20Credit%20Cards%20PDFs/MITC%201.64.pdf ರಲ್ಲಿ ಲಭ್ಯವಿರುವ HDFC ಬ್ಯಾಂಕ್‌ನ ನಿಯಮಗಳು ಮತ್ತು ಷರತ್ತುಗಳು ಮತ್ತು https://www.hdfcbank.com/content/bbp/repositories/723fb80a-2dde-42a3-9793-7ae1be57c87f/?path=/Personal/Borrow/Loan%20Against%20Asset%20Landing/LoanAgainst%20Property/KFS%20-%20APR%20Form/KFS-APR-English.pdf ರಲ್ಲಿ ಲಭ್ಯವಿರುವ ಕೀ ಫ್ಯಾಕ್ಟ್ಸ್ ಸ್ಟೇಟ್ಮೆಂಟ್‌ನಿಂದ ನಿಯಂತ್ರಿಸಲಾಗುತ್ತದೆ.
- PhonePe SBI ಕಾರ್ಡ್ PURPLE ಮತ್ತು PhonePe SBI ಕಾರ್ಡ್ SELECT BLACK
- PhonePe SBI ಕಾರ್ಡ್ PURPLE ಮತ್ತು PhonePe SBI ಕಾರ್ಡ್ SELECT BLACKನ ಬಳಕೆಯನ್ನು https://www.sbicard.com/en/most-important-terms-and-conditions.page ರಲ್ಲಿ ಲಭ್ಯವಿರುವಂತೆ SBI ಕಾರ್ಡ್ಸ್ ಅಂಡ್ ಪೇಮೆಂಟ್ ಸರ್ವಿಸಸ್ ಲಿಮಿಟೆಡ್‌ನ (“SBICPSL“) ನಿಯಮಗಳು ಮತ್ತು ಷರತ್ತುಗಳಿಂದ ಮತ್ತು https://www.sbicard.com/sbi-card-en/assets/docs/pdf/key-fact-statement.pdf ರಲ್ಲಿ ಲಭ್ಯವಿರುವ ಕೀ ಫ್ಯಾಕ್ಟ್ಸ್ ಸ್ಟೇಟ್ಮೆಂಟ್‌ನಿಂದ ನಿಯಂತ್ರಿಸಲಾಗುತ್ತದೆ.
- PhonePe SBI ಕಾರ್ಡ್ PURPLE/ PhonePe SBI ಕಾರ್ಡ್ SELECT BLACK, ವಿತರಣೆಯ ದೃಢೀಕರಣವನ್ನು ಸ್ವೀಕರಿಸಿದ ನಂತರ, ಅನ್ವಯವಾಗುವಂತೆ, ಮತ್ತು ಅನ್ವಯವಾಗುವ ವಾರ್ಷಿಕ ಶುಲ್ಕವನ್ನು SBICPSL ಗೆ ಯಶಸ್ವಿಯಾಗಿ ಪಾವತಿಸಿದ ನಂತರ, ನೀವು SBICPSL ನಿಯಮಗಳು ಮತ್ತು ಷರತ್ತುಗಳ ಪ್ರಕಾರ PhonePe eGV ಸ್ವೀಕರಿಸಲು ಅರ್ಹರಾಗಿರುತ್ತೀರಿ. PhonePe eGV ಅನ್ನು https://www.phonepe.com/terms-conditions/wallet/ ರಲ್ಲಿ ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳಿಂದ ನಿಯಂತ್ರಿಸಲಾಗುತ್ತದೆ.