PhonePe | Logo
Our Solutions
For Businesses
For Consumers
menu
Offline PaymentsAccept payments & get notified
menu
Payment GatewayAccept online payments
menu
Payment Gateway PartnerRefer and earn commissions
menu
Payment LinksCreate links to collect payments
menu
Merchant LendingAccess business loans
menu
PhonePe AdsAdvertise on PhonePe apps
menu
PhonePe GuardianDetect fraud and manage risk
See Allright-arrow
menu
InsuranceSecure your financial future
menu
InvestmentsManage and grow wealth
menu
Consumer LendingSecure personal loans
menu
GoldInvest in digital gold
menu
Credit CardSimplify and manage expenses
Press
Careers
About Us
Blog
Contact Us
Trust & Safety
PhonePe | Hamburger Menu
✕
Home
Our Solutions
For Businessesarrow
icon
Offline Payments
icon
Payment Gateway
icon
Payment Gateway Partner
icon
Payment Links
icon
Merchant Lending
icon
PhonePe Ads
icon
PhonePe Guardian
See all

For Consumersarrow
icon
Insurance
icon
Investments
icon
Consumer Lending
icon
Gold
icon
Credit Card
Press
Careers
About Us
Blog
Contact Us
Trust & Safety
Privacy Policy

PhonePe HDFC ಬ್ಯಾಂಕ್ ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್‌ ನಿಯಮಗಳು ಮತ್ತು ಷರತ್ತುಗಳು

Englishગુજરાતીதமிழ்తెలుగుमराठीമലയാളംঅসমীয়াবাংলাहिन्दीಕನ್ನಡଓଡ଼ିଆ
< Back

ಈ ನಿಯಮಗಳು ಮತ್ತು ಷರತ್ತುಗಳು PhonePe HDFC ಕೋ-ಬ್ರ್ಯಾ೦ಡೆಡ್ ಕಾರ್ಡ್‌ಗಾಗಿ “PhonePe” (“PhonePe ಆ್ಯಪ್”) ಅಥವಾ www.phonepe.com ವೆಬ್‌ಸೈಟ್‌ನ ನಿಮ್ಮ ಬಳಕೆಯನ್ನು ನಿಯಂತ್ರಿಸುವ ಮತ್ತು ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು (ಕೆಳಗೆ ವ್ಯಾಖ್ಯಾನಿಸಲಾಗಿದೆ) ಮತ್ತು ಕಾರ್ಡ್‌ಗೆ ಸಂಬಂಧಿಸಿದ PhonePe ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಯಾವುದೇ ವೈಶಿಷ್ಟ್ಯಗಳನ್ನು ಬಳಸಲು ಇರುವ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳನ್ನು (ಒಟ್ಟಾರೆಯಾಗಿ “PhonePe ಪ್ಲಾಟ್‌ಫಾರ್ಮ್”) ಸೂಚಿಸುತ್ತದೆ. PhonePe HDFC ಕೋ-ಬ್ರ್ಯಾ೦ಡೆಡ್ ಕಾರ್ಡ್ (“ಕಾರ್ಡ್“) ಗಾಗಿ PhonePe ಪ್ಲಾಟ್‌ಫಾರ್ಮ್ ಅನ್ನು ಬಳಸಲು ಮುಂದುವರಿಯುವ ಮೂಲಕ ನೀವು PhonePe HDFC ಕೋ-ಬ್ರ್ಯಾಂಡೆಡ್ ಕಾರ್ಡ್‌ಗಳ ಈ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳು (“ನಿಯಮಗಳು ಮತ್ತು ಷರತ್ತುಗಳು”), (https://www.phonepe.com/terms-conditions) ನಲ್ಲಿ ಲಭ್ಯವಿರುವ PhonePe ನಿಯಮಗಳು ಮತ್ತು ಷರತ್ತುಗಳು ಸೇರಿದಂತೆ ಈ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲೇಖಿಸಿ ಅಳವಡಿಸಿಕೊಂಡ ಎಲ್ಲಾ ಇತರ ನಿಯಮಗಳು ಹಾಗೂ https://www.phonepe.com/privacy-policy/ ರಲ್ಲಿ ಲಭ್ಯವಿರುವ ಗೌಪ್ಯತೆ ನೀತಿ ಹಾಗೂ PhonePe (ಕೆಳಗೆ ವ್ಯಾಖ್ಯಾನಿಸಲಾಗಿದೆ) ಕಾಲಕಾಲಕ್ಕೆ ಹೊರಡಿಸಿದ ಎಲ್ಲಾ ಇತರ ಅನ್ವಯವಾಗುವ ನಿಯಮಗಳು, ನೀತಿಗಳು ಮತ್ತು ಮಾರ್ಗಸೂಚಿಗಳಿಗೆ (ಒಟ್ಟಾರೆಯಾಗಿ “ನಿಯಮಗಳು” ಎಂದು ಉಲ್ಲೇಖಿಸಲಾಗಿದೆ) ಬದ್ದವಾಗಿರಲು ನಿಮ್ಮ ಸಮ್ಮತಿ ವ್ಯಕ್ತಪಡಿಸುತ್ತಿದ್ದೀರಿ. ನೀವು ಈ ನಿಯಮಗಳನ್ನು ಒಪ್ಪದಿದ್ದರೆ, PhonePe ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಡ್ ಅಥವಾ ಯಾವುದೇ ಇತರ ಸಂಪರ್ಕಿತ ಅಥವಾ ಪೂರಕ ಸೇವೆಯನ್ನು ಬಳಸಬಾರದು.

ಕೋ-ಬ್ರ್ಯಾ೦ಡೆಡ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಾರಂಭಕ್ಕಾಗಿ ಮತ್ತು ಕಾರ್ಡ್ ಮಾರಾಟ ಮಾಡುವ ಮತ್ತು ಪ್ರಚಾರ ಮಾಡುವ ಉದ್ದೇಶಕ್ಕಾಗಿ PhonePe ಲಿಮಿಟೆಡ್ (“PhonePe”, “ನಾವು”, “ನಮ್ಮ, ನಮ್ಮ”) HDFC ಬ್ಯಾಂಕ್ ಲಿಮಿಟೆಡ್ (“ಬ್ಯಾಂಕ್”) ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ನಾವು ತಿಳಿಸುತ್ತೇವೆ ಮತ್ತು ನೀವು ಅಂಗೀಕರಿಸುತ್ತೀರಿ. ಕಾರ್ಡ್‌ಗಳನ್ನು PhonePe ಮತ್ತು ಬ್ಯಾಂಕ್ ಎರಡೂ ಪ್ರಚಾರ ಮತ್ತು ಮಾರಾಟ ಮಾಡಿದರು ಕೂಡ, ಕೇವಲ ಬ್ಯಾಂಕ್ ಮಾತ್ರ ಕಾರ್ಡ್ ವಿತರಿಸುವ ಸಂಸ್ಥೆಯಾಗಿದ್ದು, PhonePe ಕೇವಲ ಕೋ-ಬ್ರ್ಯಾಂಡೆಡ್ ಪಾಲುದಾರನಾಗಿದೆ ಹಾಗೂ ಸ್ವತಂತ್ರ್ಯವಾಗಿ ಕಾರ್ಡ್‌ಗಳನ್ನು ವಿತರಿಸುವುದಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ ಮತ್ತು ನೀವು ಅಂಗೀಕರಿಸುತ್ತಿದ್ದೀರಿ. 

  1. ಪ್ರಾಥಮಿಕ ಅರ್ಹತೆ

ಕಾರ್ಡಿಗೆ ಅರ್ಜಿ ಸಲ್ಲಿಸಲು ನೀವು ಕಾನೂನಾತ್ಮಕವಾಗಿ ಬದ್ಧರಿರಬೇಕು. ನೀವು ಹದಿನೆಂಟು (18) ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು, ಸ್ವಸ್ಥ ಮಾನಸಿಕ ಸ್ಥಿತಿಯನ್ನು ಹೊಂದಿರಬೇಕು, ಭಾರತದ ನಿವಾಸಿಯಾಗಿರಬೇಕು ಹಾಗೂ ಅನ್ವಯವಾಗುವ ಕಾನೂನುಗಳು ನಿಮ್ಮನ್ನು ಕಾರ್ಡ್‌ಗೆ ಅರ್ಜಿ ಸಲ್ಲಿಸುವುದರಿಂದ ನಿಷೇಧಿಸಿರಬಾರದು. ಅರ್ಹತಾ ಷರತ್ತುಗಳನ್ನು ತಿದ್ದುಪಡಿ ಮಾಡುವ/ವಿಧಿಸುವ ಮತ್ತು ಕಾರ್ಡ್‌ಗೆ ಅರ್ಜಿ ಸಲ್ಲಿಸಲು ನಿಮ್ಮ ಅರ್ಹತೆಯನ್ನು ನಿರ್ಧರಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಸಮ್ಮತಿಸುತ್ತೀರಿ. 

  1. ಕಾರ್ಡ್

ಕಾರ್ಡ್ ಅನ್ನು ಬ್ಯಾಂಕ್ ವಿತರಿಸುತ್ತದೆ. ಖಂಡಿತವಾಗಿಯೂ ನಿಮಗೆ ಕಾರ್ಡ್ ವಿತರಿಸಲಾಗುವುದು ಎಂದು PhonePe ಖಾತ್ರಿಪಡಿಸುವುದಿಲ್ಲ. ಕ್ರೆಡಿಟ್ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು, ಕೇವಲ ತಮ್ಮ ವಿವೇಚನೆಯಿಂದ ಕಾರ್ಡ್ ವಿತರಣೆಯನ್ನು ಅನುಮೋದಿಸಲು/ನಿರಾಕರಿಸಲು, ಕಾರ್ಡ್‌ ಬಳಸಿ ನೀವು ಮಾಡಬಹುದಾದ ವೆಚ್ಚದ ಮಿತಿಗಳನ್ನು ನಿರ್ಧರಿಸಲು ಮತ್ತು ಕಾರ್ಡ್ ವಿತರಣೆ ಮತ್ತು ಬಳಕೆಗೆ ಸಂಬಂಧಿಸಿದ ಇತರ ಎಲ್ಲಾ ವಿಷಯಗಳನ್ನು ನಿರ್ಧರಿಸಲು ಬ್ಯಾಂಕ್ ತನ್ನ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಿದೆ. 

  1. ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವುದು

ಕಾರ್ಡ್‌ಗೆ ಅರ್ಜಿ ಸಲ್ಲಿಸಲು, ನೀವು PhonePe ಪ್ಲಾಟ್‌‌ಫಾರ್ಮ್‌ನಲ್ಲಿ PhonePe HDFC ಕೋ-ಬ್ರ್ಯಾ೦ಡೆಡ್ ಕಾರ್ಡ್ ಲ್ಯಾಂಡಿಂಗ್ ಪೇಜ್‌ಗೆ ಭೇಟಿ ನೀಡಿ, ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ ಮತ್ತು ಕಾರ್ಡ್‌ಗಾಗಿ ಅರ್ಜಿ ನಮೂನೆಯಲ್ಲಿ ಬ್ಯಾಂಕ್ ಕೋರಿದ ಮಾಹಿತಿಯನ್ನು ಒದಗಿಸಿ. ಅರ್ಜಿಯಲ್ಲಿ ನೀವು ಒದಗಿಸುವ ಎಲ್ಲಾ ಮಾಹಿತಿಗಳು ಸತ್ಯವಾಗಿವೆ, ಸಂಪೂರ್ಣವಾಗಿವೆ, ನಿಖರವಾಗಿವೆ ಮತ್ತು ಅಪ್ಡೇಟೆಡ್ ಮಾಹಿತಿಗಳಾಗಿವೆ ಎಂದು ನೀವು ದೃಢೀಕರಿಸುತ್ತೀರಿ. ಅರ್ಜಿ ಮತ್ತು ಅದರಲ್ಲಿರುವ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಲು ಮತ್ತು ಬ್ಯಾಂಕ್‌ಗೆ ರವಾನಿಸಲು ನೀವು PhonePe ಗೆ ಸ್ಪಷ್ಟವಾಗಿ ಅಧಿಕಾರ ನೀಡುತ್ತೀರಿ. ಬ್ಯಾಂಕ್ ಕೇವಲ ತನ್ನ ವಿವೇಚನೆ ಮಾತ್ರದಿಂದ ಕಾರ್ಡ್ ವಿತರಣೆಯನ್ನು ಅನುಮೋದಿಸಬಹುದು ಅಥವಾ ತಿರಸ್ಕರಿಸಬಹುದು ಮತ್ತು ನಾವು ಆ ನಿರ್ಧಾರದಲ್ಲಿ ಯಾವುದೇ ಪಾತ್ರ ಹೊಂದಿರುವುದಿಲ್ಲ. ಜೊತೆಗೆ, ಬ್ಯಾಂಕ್‌ನಿಂದ ನಿಮ್ಮ ಕಾರ್ಡ್ ಅರ್ಜಿಯ ಅಂತಹ ಅನುಮೋದನೆ ಅಥವಾ ತಿರಸ್ಕಾರಕ್ಕೆ ಸಂಬಂಧಿಸಿದಂತೆ ನಾವು ನಿಮ್ಮ ಪರವಾಗಿ ಯಾವುದೇ ಪ್ರಾತಿನಿಧ್ಯಗಳು, ಭರವಸೆಗಳು ಅಥವಾ ಖಾತರಿಗಳನ್ನು ನೀಡುವುದಿಲ್ಲ ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಸಮ್ಮತಿಸುತ್ತೀರಿ. ನಿಮ್ಮ ಮತ್ತು ಬ್ಯಾಂಕ್ ನಡುವಿನ ಒಪ್ಪಂದದ  ನಿಯಮಗಳ ಪ್ರಕಾರ ಇದನ್ನು ನಿಯಂತ್ರಿಸಲಾಗುತ್ತದೆ.

  1. ಸಂವಹನಗಳು

ಈ ಕೆಳಗಿನವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ನಾವು ನಿಮ್ಮನ್ನು ಸಂಪರ್ಕಿಸಬಹುದು ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಸಮ್ಮತಿಸುತ್ತೀರಿ: (ಎ) ಕಾರ್ಡ್; (ಬಿ) ಕಾರ್ಡ್‌ಗೆ ಸಂಬಂಧಿಸಿದಂತೆ ನೀವು PhonePe ಪ್ಲಾಟ್‌ಫಾರ್ಮ್‌ನಲ್ಲಿ ಕೈಗೊಳ್ಳುವ ಚಟುವಟಿಕೆಗಳು; (ಸಿ) ನಮ್ಮ ಬಗ್ಗೆ, ಬ್ಯಾಂಕ್ ಮತ್ತು ಅವರ ಉತ್ಪನ್ನಗಳು ಅಥವಾ ಸೇವೆಗಳ ಬಗ್ಗೆ ಮಾಹಿತಿ; (ಡಿ) ಕಾರ್ಡ್‌ನ ಮಾರ್ಕೆಟಿಂಗ್ ಮತ್ತು ಪ್ರಚಾರ, ಅದಕ್ಕೆ ಸಂಬಂಧಿಸಿದ ಪ್ರಯೋಜನಗಳು, ಯಾವುದೇ ಥರ್ಡ್ ಪಾರ್ಟಿ ನೀಡುವ ಉತ್ಪನ್ನಗಳು ಅಥವಾ ಸೇವೆಗಳು, (ಇ) ಯಾವುದೇ ಕೊಡುಗೆಗಳು, ಮಾರ್ಕೆಟಿಂಗ್ ಅಭಿಯಾನಗಳು ಅಥವಾ ವೆಲ್ಕಮ್ ಬೆನಿಫಿಟ್ ಅಥವಾ ರಿವಾರ್ಡ್ಸ್ ಕಾರ್ಯಕ್ರಮ ಮತ್ತು (ಎಫ್) ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಇತರ ವಿಷಯ ಅಥವಾ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿಸಲು. ನೀವು ಥರ್ಡ್ ಪಾರ್ಟಿ ಪರವಾಗಿ PhonePe ಪ್ಲಾಟ್‌ಫಾರ್ಮ್ ಪ್ರವೇಶಿಸಿದರೆ, ನೀವು PhonePe ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗುವಂತೆ ಮಾಡಿದ ಅಂತಹ ಥರ್ಡ್ ಪಾರ್ಟಿಗೆ ಮೇಲಿನ ಯಾವುದೇ ಅಥವಾ ಎಲ್ಲಾ ಸಂವಹನಗಳನ್ನು ಕಳುಹಿಸಲು ನಮಗೆ ಅನುಮತಿ ಇದೆ ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಸಮ್ಮತಿಸುತ್ತೀರಿ. ನಾವು ಈ ಸಂವಹನಗಳನ್ನು ಕಳುಹಿಸಲು ಅಂತಹ ಥರ್ಡ್ ಪಾರ್ಟಿಗಳಿಂದ ಎಲ್ಲಾ ರೀತಿಯ ಸಮ್ಮತಿಯನ್ನು ಪಡೆಯಲಾಗಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. 

ನಮ್ಮ ಸಂವಹನಗಳು ಪ್ಲಾಟ್‌ಫಾರ್ಮ್ ನೋಟಿಫಿಕೇಶನ್‌ಗಳು, ಅಲರ್ಟ್‌ಗಳು, ಇಮೇಲ್‌ಗಳು, ವಾಟ್ಸಾಪ್ ಸಂದೇಶಗಳು, ಫೋನ್ ಕರೆಗಳು ಅಥವಾ ಇತರ ಕಾರ್ಯಸಾಧ್ಯವಾದ ಸಂವಹನ ವಿಧಾನಗಳ ರೂಪದಲ್ಲಿರಬಹುದು ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಸಮ್ಮತಿಸುತ್ತೀರಿ.

ಮೇಲೆ ತಿಳಿಸಿದ ವಿಧಾನಗಳ ಅಡಿಯಲ್ಲಿ ಹೇಳಲಾದ ಯಾವುದೇ ಉದ್ದೇಶಗಳಿಗಾಗಿ ನಿಮ್ಮೊಂದಿಗೆ ಸಂವಹನ ನಡೆಸಲು ನೀವು ನಮಗೆ, ಬ್ಯಾಂಕಿಗೆ, ನಮ್ಮ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರಿಗೆ ಅಧಿಕಾರ ನೀಡುತ್ತೀರಿ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (“TRAI”) ನಿಬಂಧನೆಗಳನ್ನು ಒಳಗೊಂಡಂತೆ ಅನ್ವಯವಾಗುವ ಕಾನೂನಿನ ಅಡಿಯಲ್ಲಿ, ಡು ನಾಟ್ ಡಿಸ್ಟರ್ಬ್ (DND”)/ರಾಷ್ಟ್ರೀಯ ಗ್ರಾಹಕರ ಆದ್ಯತೆಯ ನೋಂದಣಿ (NCPR”) ಪಟ್ಟಿಯ ಅಡಿಯಲ್ಲಿ ನೀವು ಆಯ್ಕೆ ಮಾಡಿದ ಮೇಲಿನ ನಿಯಮಕ್ಕಿಂತ ವಿರುದ್ಧವಾದ ಯಾವುದೇ ಆದ್ಯತೆಯನ್ನು ನೀವು ಈ ಮೂಲಕ ಸ್ಪಷ್ಟವಾಗಿ ಮನ್ನಾ ಮಾಡುತ್ತೀರಿ. TRAI ವಿನಂತಿಸುವ ಯಾವುದೇ ಪ್ರಶ್ನೆಗೆ ಪ್ರತಿಕ್ರಿಯಿಸಲು ನಮಗೆ ಅಗತ್ಯವಿರುವ ಹೆಚ್ಚುವರಿ ಅಧಿಕಾರಗಳು, ದಾಖಲೆಗಳನ್ನು ಒದಗಿಸಲು ನೀವು ಸಮ್ಮತಿಸುತ್ತೀರಿ. 

ಸಮರ್ಪಕವಾಗಿ ನಿಮಗೆ ಸಂವಹನಗಳನ್ನು ಕಳುಹಿಸಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡರು ಕೂಡ, ಸಂಪರ್ಕ ಮಾಹಿತಿಯ ಮೇಲಿನ ಯಾವುದೇ ನಿರ್ಬಂಧ, DND ಪಟ್ಟಿಯಲ್ಲಿ ನಿಮ್ಮ ಫೋನ್ ಸಂಖ್ಯೆ ನೋಂದಾಯಿಸಿರುವ ಕಾರಣ, ಇಮೇಲ್ ಡೇಟಾ ಸಂಗ್ರಹಣೆಯಲ್ಲಿನ ಕೊರತೆ, ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ದೋಷಗಳು ಇತ್ಯಾದಿ ಯಾವುದೇ ನಿರ್ಬಂಧಗಳ ಕಾರಣದಿಂದಾಗಿ ಸಂವಹನಗಳನ್ನು ಕಳುಹಿಸುವಲ್ಲಿ ವಿಫಲವಾಗಬಹುದು.  ಆದ್ದರಿಂದ, ಯಾವುದೇ ಸಂವಹನಗಳನ್ನು ನೀವು ಸ್ವೀಕರಿಸದಿರುವುದಕ್ಕೆ ನಾವು ಜವಾಬ್ದಾರರಾಗಿರುವುದಿಲ್ಲ ಅಥವಾ ಹೊಣೆಗಾರರಾಗಿರುವುದಿಲ್ಲ.

ನಾವು ಸದ್ಭಾವನೆಯಿಂದ ಸಂವಹನಗಳನ್ನು ನಿಮಗೆ ತಲುಪಿಸುತ್ತೇವೆಯೇ ಹೊರತು  ಸಂವಹನದ ನಿಖರತೆ, ಸಮರ್ಪಕತೆ, ಲಭ್ಯತೆ, ಕಾನೂನುಬದ್ಧತೆ, ಸಿಂಧುತ್ವ, ವಿಶ್ವಾಸಾರ್ಹತೆ ಅಥವಾ ಸಂಪೂರ್ಣತೆಯ ಬಗ್ಗೆ ನಾವು ಯಾವುದೇ ರೀತಿಯ ಪ್ರಾತಿನಿಧ್ಯ ಅಥವಾ ಖಾತರಿಯನ್ನು ನೀಡುವುದಿಲ್ಲ, ವ್ಯಕ್ತಪಡಿಸುವುದಿಲ್ಲ ಅಥವಾ ಸೂಚಿಸುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಯಾವುದೇ ಸಂದರ್ಭದಲ್ಲಿ, ಯಾವುದೇ ಸಂವಹನದ ವಿಷಯದ ಯಾವುದೇ ಬಳಕೆ ಅಥವಾ ಅವಲಂಬನೆಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯು ಅನುಭವಿಸುವ ಯಾವುದೇ ನಷ್ಟ ಅಥವಾ ಹಾನಿಗೆ ನಾವು ಜವಾಬ್ದಾರರಾಗಿರುವುದಿಲ್ಲ ಅಥವಾ ಹೊಣೆಗಾರರಾಗಿರುವುದಿಲ್ಲ.

  1. ಪ್ರಯೋಜನಗಳು

ಕಾಲಕಾಲಕ್ಕೆ, ನಾವು ರಿವಾರ್ಡ್‌ಗಳು, ರಿಯಾಯಿತಿಗಳು, ಕ್ಯಾಶ್‌ಬ್ಯಾಕ್‌ಗಳು ಮತ್ತು ಇತರ ಕೊಡುಗೆಗಳನ್ನು (“ಪ್ರಯೋಜನ(ಗಳು)“) ಒದಗಿಸಬಹುದು. ಈ  ಪ್ರಯೋಜನಗಳನ್ನು ಪಡೆಯಲು ನೀವು ಅರ್ಹತಾ ಷರತ್ತುಗಳನ್ನು ಪೂರೈಸಬೇಕು ಮತ್ತು ಅಂತಹ ಪ್ರಯೋಜನಗಳಿಗೆ ಅನ್ವಯವಾಗುವ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳಿಗೆ ಸಮ್ಮತಿಸಬೇಕು.

ನೀವು ಪ್ರಯೋಜನಗಳನ್ನು ಪಡೆಯಲು ಅಗತ್ಯವಿರುವ ಮಾನದಂಡಗಳನ್ನು ಪೂರೈಸಲು ವಿಫಲವಾದರೆ ನಿಮ್ಮನ್ನು ಅನರ್ಹಗೊಳಿಸುವ, ಯಾವುದೇ ಸಮಯದಲ್ಲಿ ಯಾವುದೇ ಕೊಡುಗೆ ಅಥವಾ ಪ್ರಯೋಜನವನ್ನು ನಿಲ್ಲಿಸುವ ಅಥವಾ ಬದಲಾಯಿಸುವ ಹಕ್ಕನ್ನು ನಾವು ಕಾಯ್ದಿರಿಸುತ್ತೇವೆ.

ಯಾವುದೇ ಪ್ರಯೋಜನದಲ್ಲಿ ಭಾಗವಹಿಸುವುದರಿಂದ ಅಥವಾ ಪಡೆಯುವುದರಿಂದ ನಿಮ್ಮ ರಾಜ್ಯ/ಪ್ರದೇಶದ ಕಾನೂನುಗಳು ನಿಮ್ಮನ್ನು ನಿಷೇಧಿಸಿದರೆ ಅದರಲ್ಲಿ ನೀವು ಪಾಲ್ಗೊಳ್ಳಬಾರದು ಎಂಬುದನ್ನು ದಯವಿಟ್ಟು ಗಮನಿಸಿ.

  1. ಬ್ಯಾಂಕ್ ನಿಯಮಗಳು ಮತ್ತು ಷರತ್ತುಗಳು.

[MITC, KFS ಇತ್ಯಾದಿ] ಒಳಗೊಂಡಂತೆ ಕಾರ್ಡ್‌ಗೆ ಸಂಬಂಧಿಸಿದಂತೆ ಬ್ಯಾಂಕ್ ನಿಗದಿಪಡಿಸಿದ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ನೀವು ಪಾಲಿಸಬೇಕು ಮತ್ತು ಅವುಗಳಿಗೆ ಬದ್ಧರಾಗಿರಬೇಕು.

  1. PhonePe ಪ್ಲಾಟ್‌‌ಫಾರ್ಮ್

PhonePe ಪ್ಲಾಟ್‌ಫಾರ್ಮ್‌ನಲ್ಲಿ ನಿಮಗೆ ಪ್ರದರ್ಶಿಸಲಾದ ಕಾರ್ಡ್‌ನ ಎಲ್ಲಾ ಮಾಹಿತಿಯನ್ನು ಬ್ಯಾಂಕ್ ನಿಮಗೆ ನೇರವಾಗಿ ಪ್ರಸಾರ ಮಾಡುತ್ತದೆ ಮತ್ತು PhonePe  ಪ್ಲಾಟ್‌ಫಾರ್ಮ್ ಮೂಲಕ ನೀವು ಕಾರ್ಡ್ ವಿಷಯದಲ್ಲಿ ಕೈಗೊಂಡ ಯಾವುದೇ ಕ್ರಿಯೆಯನ್ನು ತಾಂತ್ರಿಕ ಏಕೀಕರಣದ ಮೂಲಕ ನೇರವಾಗಿ ಬ್ಯಾಂಕ್‌ನ ತಾಂತ್ರಿಕ ಘಟಕಕ್ಕೆ ರವಾನಿಸಲಾಗುತ್ತದೆ ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಸಮ್ಮತಿಸುತ್ತೀರಿ. ಬ್ಯಾಂಕ್‌ಗೆ ಕೋಬ್ರ್ಯಾ೦ಡ್ ಪಾಲುದಾರರಾಗಿ,  ನಮಗೆ ನಿಮ್ಮ ಕಾರ್ಡ್ ಮಾಹಿತಿಗೆ ಪ್ರವೇಶವಿಲ್ಲ.

  1. ನಷ್ಟ ಪರಿಹಾರ

ಕೆಳಗಿನ ಸಂದರ್ಭದ ಪರಿಣಾಮವಾಗಿ ಅಥವಾ ಅದಕ್ಕೆ ಸಂಬಂಧಿಸಿದಂತೆ ಕ್ಲೈಮ್‌ಗಳು, ಬೇಡಿಕೆಗಳು, ಕ್ರಮಗಳು ಅಥವಾ ಇತರ ಪ್ರಕ್ರಿಯೆಗಳಿ೦ದ (ಥರ್ಡ್ ಪಾರ್ಟಿ ಪ್ರಾರಂಭಿಸಿದವುಗಳನ್ನು ಒಳಗೊಂಡಂತೆ) ಉಂಟಾಗುವ ಎಲ್ಲಾ ನಷ್ಟಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ ಮತ್ತು ಅವುಗಳ ವಿರುದ್ಧ ನಮ್ಮ ಅಂಗಸಂಸ್ಥೆಗಳು, ಬ್ಯಾಂಕ್, ಪಾಲುದಾರರು, ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರು, ಗುತ್ತಿಗೆದಾರರು, ಪರವಾನಗಿದಾರರು, ಅವರ ನಿರ್ದೇಶಕರು, ವ್ಯವಸ್ಥಾಪಕರು, ಅಧಿಕಾರಿಗಳು, ಉದ್ಯೋಗಿಗಳು ಮತ್ತು ಏಜೆಂಟರಿಗೆ ನೀವು ನಷ್ಟ ಪರಿಹಾರ ಒದಗಿಸುತ್ತೀರಿ

  1. ಇಲ್ಲಿ ಅಳವಡಿಸಿಕೊಳ್ಳಲಾದ ಯಾವುದೇ ನಿಯಮಗಳನ್ನು ಒಳಗೊಂಡಂತೆ ಅಥವಾ ಇವುಗಳನ್ನು ಒಳಗೊಂಡ ಯಾವುದೇ ನಿಯಮಗಳ ಉಲ್ಲಂಘನೆ. 
  2. ನಿಮ್ಮಿಂದ ಯಾವುದೇ ಅನ್ವಯವಾಗುವ ಕಾನೂನಿನ ಉಲ್ಲಂಘನೆ ಅಥವಾ ಅನುಸರಣೆಯಲ್ಲಿ ಕರ್ತವ್ಯಲೋಪ.
  3. ನಿಮ್ಮಿಂದ ಕೈಗೊಳ್ಳಲಾದ ಯಾವುದೇ ವಂಚನೆ, ಉದ್ದೇಶಪೂರ್ವಕ ದುರ್ನಡತೆ ಅಥವಾ ನಿರ್ಲಕ್ಷ್ಯ.
  4. ನೀವು ಒದಗಿಸಿದ ಯಾವುದೇ ತಪ್ಪು, ದಾರಿತಪ್ಪಿಸುವ ಅಥವಾ ಅಪೂರ್ಣ ಮಾಹಿತಿ.
  5. ನಿಮ್ಮ PhonePe ಪ್ಲಾಟ್‌ಫಾರ್ಮ್‌ನ ಬಳಕೆ ಅಥವಾ ಪ್ರವೇಶದ ಕಾರಣದಿಂದಾಗಿ ಯಾವುದೇ ಶಾಸನಬದ್ಧ, ನಿಯಂತ್ರಕ, ಸರ್ಕಾರಿ ಪ್ರಾಧಿಕಾರ ಅಥವಾ ಯಾವುದೇ ಇತರ ಪ್ರಾಧಿಕಾರದಿಂದ ವಿಧಿಸಲಾದ ದಂಡಗಳು ಮತ್ತು ಶುಲ್ಕಗಳು.
  6. PhonePe ಪ್ಲಾಟ್‌ಫಾರ್ಮ್ ಬಳಸುವಲ್ಲಿ ನಿಮ್ಮ ಯಾವುದೇ ಕಾರ್ಯಗಳು ಅಥವಾ ಲೋಪಗಳು.  

  1. ಹೊಣೆಗಾರಿಕೆಯ ಹೊರಗಿಡುವಿಕೆ

ಈ ಕೆಳಗಿನ ಯಾವುದಕ್ಕೂ ನಾವು ಜವಾಬ್ದಾರರಾಗಿರುವುದಿಲ್ಲ ಅಥವಾ ಹೊಣೆಗಾರರಾಗಿರುವುದಿಲ್ಲ ಎಂದು ನೀವು ಅಂಗೀಕರಿಸುತ್ತೀರಿ ಮತ್ತು ಸಮ್ಮತಿಸುತ್ತೀರಿ

  1. ಯಾವುದೇ ಥರ್ಡ್ ಪಾರ್ಟಿಯಿಂದ ಕಾರ್ಡ್ ಬಳಕೆಗೆ ಸಂಬಂಧಿಸಿದಂತೆ ಯಾವುದೇ ವಂಚನೆ ಅಥವಾ ದುರುಪಯೋಗ ಸೇರಿದಂತೆ ಕಾರ್ಡ್ ಅನ್ನು ಹೊಂದಿರುವುದರಿಂದ/ಬಳಸುವುದರಿಂದ ನಿಮಗೆ ಉಂಟಾದ ಯಾವುದೇ ನಷ್ಟ ಅಥವಾ ಹಾನಿ.
  2. ಕಾರ್ಡ್‌ನ ನಿಮ್ಮ ಸ್ವಾಧೀನ/ಬಳಕೆಯಿಂದ ಅಥವಾ ಅದಕ್ಕೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ವಿವಾದ.
  3. ಯಾವುದೇ ವ್ಯಕ್ತಿ/ವ್ಯಾಪಾರಿ ಸಂಸ್ಥೆಯು ಕಾರ್ಡ್  ಮಾನ್ಯತೆಯನ್ನು ಗುರುತಿಸಲು ಅಥವಾ ಸ್ವೀಕರಿಸಲು ನಿರಾಕರಿಸುವುದು/ ವಿಫಲವಾಗುವುದು.
  4. ಕಾರ್ಡ್‌ಗೆ ಸಂಬಂಧಿಸಿದಂತೆ ನಿಮ್ಮ ಮತ್ತು ಬ್ಯಾಂಕ್ ನಡುವಿನ ಯಾವುದೇ ವಿವಾದಗಳನ್ನು ಒಳಗೊಂಡಂತೆ ನಿಮ್ಮ ಕಾರ್ಡ್‌ಗೆ ಸಂಬಂಧಿಸಿದಂತೆ ಬ್ಯಾಂಕ್‌ನ ಯಾವುದೇ ಕ್ರಮ ಅಥವಾ ಲೋಪಗಳು ಅಥವಾ ಬ್ಯಾಂಕ್ ನೀಡುವ ರಿವಾರ್ಡ್‌ಗಳು/ಪ್ರಯೋಜನಗಳು.
  5. ನಿಮ್ಮ ಕಾರ್ಡ್ ಅಥವಾ ಅದರ ಬಳಕೆಯ ಮೇಲೆ ವಿಧಿಸಲಾಗುವ ಯಾವುದೇ ಶುಲ್ಕಗಳು.

ನಿಯಮಗಳಲ್ಲಿ ಯಾವುದೇ ವೈರುಧ್ಯಗಳನ್ನು ಪರಿಗಣಿಸದೆ, (i)  ವಿಶೇಷ, ಪ್ರಾಸಂಗಿಕ, ಪರೋಕ್ಷ ಅಥವಾ ಪರಿಣಾಮಕಾರಿ ಹಾನಿಗಳಿಗೆ (ಅನಿಯಮಿತವಾಗಿ ಡೌನ್‌ಟೈಮ್ ವೆಚ್ಚಗಳು, ಡೇಟಾ ನಷ್ಟ, ಕಳೆದುಹೋದ ಲಾಭಗಳು ಅಥವಾ ಬ್ಯಾಂಕುಗಳು, ಥರ್ಡ್ ಪಾರ್ಟಿಗಳು, ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರು, ಗುತ್ತಿಗೆದಾರರು, ನಮ್ಮ ಪರವಾನಗಿದಾರರ ಕ್ರಮಗಳಿಂದಾಗಿ ಯಾವುದೇ ನಷ್ಟಗಳು ಸೇರಿದಂತೆ) – ಅಂತಹ ಹಕ್ಕುಗಳು ಒಪ್ಪಂದ, ಅಪರಾಧ, ಖಾತರಿ ಅಥವಾ ಯಾವುದೇ ಇತರ ಕಾನೂನು ಸಿದ್ಧಾಂತವನ್ನು ಆಧರಿಸಿವೆಯೇ ಎಂಬುದನ್ನು ಲೆಕ್ಕಿಸದೆ, ನಾವು ಜವಾಬ್ದಾರರಾಗಿರುವುದಿಲ್ಲ, (ii) ನಮ್ಮ ಮತ್ತು ನಮ್ಮ ಅಂಗಸಂಸ್ಥೆಗಳು, ಅಧಿಕಾರಿಗಳು, ಉದ್ಯೋಗಿಗಳು ಮತ್ತು ಏಜೆಂಟ್‌ಗಳ ಸಂಚಿತ ಗರಿಷ್ಠ ಹೊಣೆಗಾರಿಕೆಯು ನೂರು ರೂಪಾಯಿಗಳು ಮಾತ್ರ ಆಗಿದ್ದು ಅದನ್ನು ಮೀರುವುದಿಲ್ಲ (iii) ಈ ಪರಿಹಾರವು ಅದರ ಅಗತ್ಯ ಉದ್ದೇಶದ ಯಾವುದೇ ನಷ್ಟ ಅಥವಾ ವೈಫಲ್ಯಗಳಿಗೆ ನಿಮಗೆ ಸಂಪೂರ್ಣವಾಗಿ ಪರಿಹಾರ ನೀಡದಿದ್ದರೆ ಮಿತಿಗಳು ಮತ್ತು ಹೊರಗಿಡುವಿಕೆಗಳು ಸಹ ಅನ್ವಯಿಸುತ್ತವೆ.

  1. ಸಮ್ಮತಿಗಳನ್ನು ವ್ಯಕ್ತಪಡಿಸಿ

ಕಾರ್ಡ್‌ಗಾಗಿ ನಿಮ್ಮ ಅರ್ಜಿಯನ್ನು ಪ್ರಕ್ರಿಯೆಗೊಳಿಸುವ ಉದ್ದೇಶಕ್ಕಾಗಿ ಬ್ಯಾಂಕಿಗೆ ಮತ್ತು ಅಥವಾ ಪ್ರಯೋಜನಗಳ ನಿರ್ವಹಣೆಯ ಉದ್ದೇಶಕ್ಕಾಗಿ ಯಾವುದೇ ಇತರ ಘಟಕಕ್ಕೆ ನಿಮ್ಮ ಮಾಹಿತಿಯನ್ನು ಬಹಿರಂಗಪಡಿಸಲು ನೀವು ನಮಗೆ ಅಧಿಕಾರ ನೀಡುತ್ತೀರಿ.

ನಿಮ್ಮ ಸಮ್ಮತಿ(ಗಳನ್ನು) ದಾಖಲಿಸಲು ಮತ್ತು ಸಂಗ್ರಹಿಸಲು ಮತ್ತು ನ್ಯಾಯಾಲಯ, ಯಾವುದೇ ಪ್ರಾಧಿಕಾರ ಅಥವಾ ಮಧ್ಯಸ್ಥಿಕೆ ಸೇರಿದಂತೆ ದಾಖಲೆ ನಿರ್ವಹಣೆ ಮತ್ತು ಸಾಕ್ಷ್ಯ ಉದ್ದೇಶಗಳಿಗಾಗಿ ನಿಮ್ಮ ಸಮ್ಮತಿಗಳನ್ನು ಬಳಸಲು ನೀವು ನಮಗೆ ಅಧಿಕಾರ ಮತ್ತು ಸಮ್ಮತಿ ನೀಡುತ್ತೀರಿ.

  1. ಎಲೆಕ್ಟ್ರಾನಿಕ್ ದಾಖಲೆ

ಈ ನಿಯಮಗಳು ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ಮತ್ತು ಅದರ ಅಡಿಯಲ್ಲಿ ಅನ್ವಯವಾಗುವ ಮತ್ತು ಕಾಲಕಾಲಕ್ಕೆ ಮಾಡಿದ ತಿದ್ದುಪಡಿ ನಿಯಮಗಳ (“IT ಕಾಯಿದೆ“) ಅನುಸಾರದ ಎಲೆಕ್ಟ್ರಾನಿಕ್ ದಾಖಲೆಯಾಗಿದೆ ಈ ಎಲೆಕ್ಟ್ರಾನಿಕ್ ದಾಖಲೆಯನ್ನು ಕಂಪ್ಯೂಟರ್ ಸಿಸ್ಟಂನಿಂದ ರಚಿಸಲಾಗಿದೆ ಮತ್ತು ಯಾವುದೇ ಭೌತಿಕ ಅಥವಾ ಡಿಜಿಟಲ್ ಸಹಿಗಳ ಅಗತ್ಯವಿಲ್ಲ. ನಿಯಮಗಳನ್ನು IT ಕಾಯಿದೆ (ಕಾಲಕಾಲಕ್ಕೆ ಮಾಡಿದ ತಿದ್ದುಪಡಿ ಅನ್ವಯ) ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳಿಗೆ ಅನುಗುಣವಾಗಿ ಪ್ರಕಟಿಸಲಾಗುತ್ತದೆ. ನಿಯಮಗಳು ಬಾಧ್ಯತೆಯನ್ನು ಮತ್ತು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಒಪ್ಪಂದವನ್ನು ರೂಪಿಸುತ್ತವೆ.

  1. ಪ್ರಶ್ನೆಗಳು 

ಯಾವುದೇ ಪ್ರಶ್ನೆಗಳಿಗೆ, ನೀವು PhonePe ಪ್ಲಾಟ್‌ಫಾರ್ಮ್‌ನಲ್ಲಿನ ನಿರ್ದಿಷ್ಟ ಪುಟದಲ್ಲಿ ಪ್ರಶ್ನಾವಳಿ ವಿಭಾಗವನ್ನು ನೋಡಬಹುದು. ಪ್ರಶ್ನಾವಳಿ ವಿಭಾಗದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ಸಿಗದಿದ್ದರೆ, PhonePe ಪ್ಲಾಟ್‌ಫಾರ್ಮ್‌ನಲ್ಲಿ ಟಿಕೆಟ್ ರಚಿಸುವ ಮೂಲಕ ನಮ್ಮ ಬೆಂಬಲ ತಂಡಕ್ಕೆ ನಿಮ್ಮ ಪ್ರಶ್ನೆಯನ್ನು ವರದಿ ಮಾಡಬಹುದು.

  1. ಇತರ ನಿಯಮಗಳು

ನಾವು ಯಾವುದೇ ಸಮಯದಲ್ಲಿ ನಿಯಮಗಳನ್ನು ಮಾರ್ಪಡಿಸಲು ಮತ್ತು ಹೊಸ ಅಥವಾ ಹೆಚ್ಚುವರಿ ನಿಯಮಗಳು ಅಥವಾ ಷರತ್ತುಗಳನ್ನು ಸೇರಿಸಲು ಹಕ್ಕನ್ನು ಕಾಯ್ದಿರಿಸುತ್ತೇವೆ. ನಿಯಮಗಳಿಗೆ ಅಥವಾ ನಿಯಮಗಳಲ್ಲಿ ಉಲ್ಲೇಖಿಸಲಾದ URL ಗಳಿಗೆ ಯಾವುದೇ ಮಾರ್ಪಾಡುಗಳು ಸಂಬಂಧಿತ URL ನಲ್ಲಿ ಲಭ್ಯವಿರುತ್ತವೆ (ಅಥವಾ ನಾವು ಕಾಲಕಾಲಕ್ಕೆ ಒದಗಿಸಬಹುದಾದ ಬೇರೆ URL). ನಿಯಮಗಳ ಮಾರ್ಪಾಡು ಅಥವಾ ಸೇರ್ಪಡೆಯ ನಂತರದ PhonePe ಪ್ಲಾಟ್‌ಫಾರ್ಮ್‌ನ ಬಳಕೆಯನ್ನು ಅಂತಹ ಮಾರ್ಪಡಿಸಿದ ಅಥವಾ ಹೆಚ್ಚುವರಿ ನಿಯಮಗಳ ಸ್ವೀಕಾರ ಎಂದು ಪರಿಗಣಿಸಲಾಗುತ್ತದೆ.

PhonePe ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲೇಖಿಸಿ ಬಳಕೆದಾರರ ನೋಂದಣಿ, ಗೌಪ್ಯತೆ, ಬಳಕೆದಾರರ ಜವಾಬ್ದಾರಿಗಳು, ಆಡಳಿತ ಕಾನೂನು, ಹೊಣೆಗಾರಿಕೆ, ಬೌದ್ಧಿಕ ಆಸ್ತಿ, ಗೌಪ್ಯತೆ ಮತ್ತು ಸಾಮಾನ್ಯ ನಿಬಂಧನೆಗಳು ಮುಂತಾದ ನಿಯಮಗಳನ್ನು ಒಳಗೊಂಡಂತೆ ಎಲ್ಲಾ ಇತರ ನಿಯಮಗಳನ್ನು PhonePe HDFC ಕೋ-ಬ್ರಾಂಡೆಡ್ ಕಾರ್ಡ್‌ನ ಈ ನಿಯಮಗಳು ಮತ್ತು ಷರತ್ತುಗಳಲ್ಲಿ ಸೇರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಇಲ್ಲಿ ವ್ಯಾಖ್ಯಾನಿಸದ ಕ್ಯಾಪಿಟಲ್ ಅಕ್ಷರದ ಪದಗಳು PhonePe ನಿಯಮಗಳು ಮತ್ತು ಷರತ್ತುಗಳಲ್ಲಿ ಅವುಗಳಿಗೆ ನೀಡಲಾದ ಅರ್ಥವನ್ನು ಹೊಂದಿರುತ್ತವೆ.

PhonePe Logo

Business Solutions

  • Payment Gateway
  • E-commerce PG
  • UPI Payment Gateway
  • Guardian by PhonePe
  • Express Checkout
  • Offline Merchant
  • Advertise on PhonePe
  • SmartSpeaker
  • POS Machine
  • Payment Links
  • Travel and Commute

Insurance

  • Motor Insurance
  • Bike Insurance
  • Car Insurance
  • Health Insurance
  • Arogya Sanjeevani Policy
  • Life Insurance
  • Term Life Insurance
  • Personal Accident Insurance
  • Travel Insurance
  • International Travel Insurance

Investments

  • 24K Gold
  • Liquid Funds
  • Tax Saving Funds
  • Equity Funds
  • Debt Funds
  • Hybrid Funds

Lending

  • Consumer Lending
  • Merchant Lending

General

  • About Us
  • Careers
  • Contact Us
  • Press
  • Ethics
  • Report Vulnerability
  • Merchant Partners
  • Blog
  • Tech Blog
  • PhonePe Pulse

Legal

  • Terms & Conditions
  • Privacy Policy
  • Grievance Policy
  • How to Pay
  • E-Waste Policy
  • Trust & Safety
  • Global Anti-Corruption Policy

See All Apps

Download PhonePe App Button Icon

PhonePe Group

  • Indus Appstoreexternal link icon
  • Share.Marketexternal link icon
  • Pincodeexternal link icon

Credit Cards

  • PhonePe HDFC Bank Co-Branded Credit Cards

Certification

Sisa Logoexternal link icon
LinkedIn Logo
Twitter Logo
Fb Logo
YT Logo
© 2025, All rights reserved
PhonePe Logo

Business Solutions

arrow icon
  • Payment Gateway
  • E-commerce PG
  • UPI Payment Gateway
  • Guardian by PhonePe
  • Express Checkout
  • Offline Merchant
  • Advertise on PhonePe
  • SmartSpeaker
  • POS Machine
  • Payment Links
  • Travel and Commute

Insurance

arrow icon
  • Motor Insurance
  • Bike Insurance
  • Car Insurance
  • Health Insurance
  • Arogya Sanjeevani Policy
  • Life Insurance
  • Term Life Insurance
  • Personal Accident Insurance
  • Travel Insurance
  • International Travel Insurance

Investments

arrow icon
  • 24K Gold
  • Liquid Funds
  • Tax Saving Funds
  • Equity Funds
  • Debt Funds
  • Hybrid Funds

Lending

arrow icon
  • Consumer Lending
  • Merchant Lending

General

arrow icon
  • About Us
  • Careers
  • Contact Us
  • Press
  • Ethics
  • Report Vulnerability
  • Merchant Partners
  • Blog
  • Tech Blog
  • PhonePe Pulse

Legal

arrow icon
  • Terms & Conditions
  • Privacy Policy
  • Grievance Policy
  • How to Pay
  • E-Waste Policy
  • Trust & Safety
  • Global Anti-Corruption Policy

PhonePe Group

arrow icon
  • Indus Appstoreexternal link icon
  • Share.Marketexternal link icon
  • Pincodeexternal link icon

Credit Cards

arrow icon
  • PhonePe HDFC Bank Co-Branded Credit Cards

Certification

Sisa Logo

See All Apps

Download PhonePe App Button Icon
LinkedIn Logo
Twitter Logo
Fb Logo
YT Logo
© 2025, All rights reserved