ಈ ದಾಖಲೆ ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ಮತ್ತು ಅದರಲ್ಲಿನ ನಿಯಮಗಳು (ಕಾಲಕಾಲಕ್ಕೆ ಅನ್ವಯಿಸುವಂತೆ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ 2000 ರಲ್ಲಿ ತಿದ್ದುಪಡಿ ಮಾಡಿದಂತೆ ವಿವಿಧ ಶಾಸನಗಳಲ್ಲಿ ಎಲೆಕ್ಟ್ರಾನಿಕ್ ದಾಖಲೆಗಳಿಗೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿನ ಎಲೆಕ್ಟ್ರಾನಿಕ್ ದಾಖಲೆಯಾಗಿದೆ. ಈ ಎಲೆಕ್ಟ್ರಾನಿಕ್ ದಾಖಲೆಯನ್ನು ಕಂಪ್ಯೂಟರ್ ವ್ಯವಸ್ಥೆಯಿಂದ ರಚಿಸಲಾಗಿದೆ ಮತ್ತು ಯಾವುದೇ ಭೌತಿಕ ಅಥವಾ ಡಿಜಿಟಲ್ ಸಹಿಗಳ ಅಗತ್ಯವಿಲ್ಲ.
PhonePe ಆ್ಯಪ್ ಮೂಲಕ ಈ ಕಾರ್ಯಚಟುವಟಿಕೆಯನ್ನು ಬಳಸುವ ಅಥವಾ ಪ್ರವೇಶಿಸುವ ಮೊದಲು ಈ – ಆಟೋಪೇ [“ಆಟೋಪೇ”] ನಿಯಮಗಳು ಮತ್ತು ಷರತ್ತುಗಳನ್ನು ಗಮನವಿಟ್ಟು ಓದಿರಿ. ಈ ಆಟೋಪೇ ನಿಯಮಗಳು ನಿಮ್ಮ ಮತ್ತು ಕಚೇರಿ-2, ಮಹಡಿ-5, ವಿಂಗ್ A, ಬ್ಲಾಕ್ A, ಸಲರ್‌ಪುರಿಯ ಸಾಫ್ಟ್‌ಜೋನ್, ಬೆಳ್ಳಂದೂರು ಗ್ರಾಮ, ವರ್ತೂರ್ ಹೋಬಳಿ, ಹೊರ ವರ್ತುಲ ರಸ್ತೆ, ಬೆಂಗಳೂರು ದಕ್ಷಿಣ, ಬೆಂಗಳೂರು, ಕರ್ನಾಟಕ, ಭಾರತ, 560103 ಇಲ್ಲಿ ತನ್ನ ನೋಂದಾಯಿತ ಕಚೇರಿ ಹೊಂದಿರುವ PhonePe ಪ್ರೈವೇಟ್ ಲಿಮಿಟೆಡ್ (“PhonePe“) ಅನ್ನು ಕಾನೂನಾತ್ಮಕವಾಗಿ ಬಂಧಿಸುವ ಒಪ್ಪಂದವಾಗಿದೆ. ಕೆಳಗೆ ನೀಡಲಾದ ಆಟೋಪೇ ನಿಯಮಗಳನ್ನು ಓದಿದ್ದೀರಿ ಎಂದು ನೀವು ಒಪ್ಪಿಕೊಳ್ಳುತ್ತೀರಿ ಹಾಗೂ ಸಮ್ಮತಿಸುತ್ತೀರಿ. ನೀವು ಈ ಆಟೋಪೇ ನಿಯಮಗಳನ್ನು ಒಪ್ಪದಿದ್ದರೆ ಅಥವಾ ಈ ಆಟೋಪೇ ನಿಯಮಗಳಿಗೆ ಬದ್ಧವಾಗಿರಲು ಬಯಸದಿದ್ದರೆ, ಈ ಕಾರ್ಯಚಟುವಟಿಕೆಗಳನ್ನು ಪಡೆಯದಿರಬಹುದು/ಬಳಸದಿರಬಹುದು.
ಈ ಆಟೋಪೇ ನಿಯಮಗಳಿಗೆ ಅನುಸಾರವಾಗಿ PhonePe ಬಳಕೆದಾರರು ತಾವು ಬಯಸಿದ ಅಥವಾ ಆಯ್ಕೆ ಮಾಡಿದ ಆವರ್ತನದಲ್ಲಿ ತಮ್ಮ ಪರವಾಗಿ ಪಾವತಿ(ಗಳನ್ನು) ಮಾಡಲು PhonePe ಗೆ ಪೂರ್ವ-ಅಧಿಕಾರ ನೀಡುವ ಮೂಲಕ PhonePe ಆ್ಯಪ್‌ನಲ್ಲಿ ಅರ್ಹ ವ್ಯಾಪಾರಿ(ಗಳಿಗೆ) ಸ್ವಯಂಚಾಲಿತ ಪಾವತಿ(ಗಳನ್ನು) (ಕೆಳಗೆ ವಿವರಿಸಿದಂತೆ) ಹೊಂದಿಸುವ ಕಾರ್ಯವನ್ನು ಈ ಆಟೋಪೇ ನಿಯಮಗಳು ನಿಯಂತ್ರಿಸುತ್ತವೆ.
- ವ್ಯಾಖ್ಯಾನಗಳು
- “ಕಾರ್ಯಗಳು” ಎಂದರೆ ಮ್ಯಾಂಡೇಟ್‌ನ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಮತ್ತು ಸಮಯದಲ್ಲಿ PhonePe ಬಳಕೆದಾರರು ಕೈಗೊಳ್ಳಬಹುದಾದ ಮತ್ತು ವಿನಂತಿಸಬಹುದಾದ ಈ ಆಟೋಪೇ ನಿಯಮಗಳ ಸೆಕ್ಷನ್ V ಅಡಿಯಲ್ಲಿ ವ್ಯಾಖ್ಯಾನಿಸಲಾದ ಕಾರ್ಯಗಳು.
- “ಆಟೋ ಟಾಪ್-ಅಪ್ ಮ್ಯಾಂಡೇಟ್” ಎಂದರೆ UPI ಫೆಸಿಲಿಟಿ ಬಾಕಿಯು ಕನಿಷ್ಠ ಬಾಕಿ ಮಿತಿಯನ್ನು ತಲುಪಿದಾಗ RBI, NPCI ಮತ್ತು/ಅಥವಾ ಇತರ ನಿಯಂತ್ರಕ ಪ್ರಾಧಿಕಾರಗಳು ಸೂಚಿಸಿದ ಗರಿಷ್ಠ ಅನುಮತಿಸುವ ಟಾಪ್-ಅಪ್ ಮಿತಿಯವರೆಗೆ UPI-ಲೈಟ್ ಫೆಸಿಲಿಟಿ ಬ್ಯಾಲೆನ್ಸ್‌ನ ಸ್ವಯಂಚಾಲಿತ ಟಾಪ್-ಅಪ್‌ಗಾಗಿ UPI ಲೈಟ್ ಫೆಸಿಲಿಟಿ ಗೆ ನೀಡಿದ ಮ್ಯಾಂಡೇಟ್ (ಕೆಳಗೆ ವಿವರಿಸಿದಂತೆ),
- “ಆಟೋಮೇಟೆಡ್ ಪಾವತಿಗಳು” ಅಥವಾ “ಆಟೋಮೇಟೆಡ್ ವಹಿವಾಟು(ಗಳು)” ಎಂದರೆ ಅರ್ಹ ವ್ಯಾಪಾರಿಗಳಿಗಾಗಿ ಮ್ಯಾಂಡೇಟ್ ಅಡಿಯಲ್ಲಿ PhonePe ಬಳಕೆದಾರರು ನಿರ್ದಿಷ್ಟ ಆವರ್ತನದ ಆಧಾರದ ಮೇಲೆ PhonePe ಮೂಲಕ ಸಕ್ರಿಯಗೊಳಿಸಿದ ನಿಗದಿಪಡಿಸಿದ ಪಾವತಿಗಳು.
- “ಅರ್ಹ ವ್ಯಾಪಾರಿಗಳು” ಎಂದರೆ ಈ ಆಟೋಪೇ ನಿಯಮಗಳಿಗೆ ಅನುಗುಣವಾಗಿ PhonePe ಬಳಕೆದಾರರಿಂದ ಆಟೋಮೇಟೆಡ್ ಪಾವತಿಗಳನ್ನು ಸ್ವೀಕರಿಸಲು PhonePe ನೊಂದಿಗೆ ಸಕ್ರಿಯಗೊಳಿಸಲಾದ ವ್ಯಾಪಾರಿಗಳು, ಸೇವಾ ಪೂರೈಕೆದಾರರು, ಬಿಲ್ಲರ್‌ಗಳು.
- “ಮ್ಯಾಂಡೇಟ್” ಎಂದರೆ ಈ ಆಟೋಪೇ ನಿಯಮಗಳಿಗೆ ಅನುಗುಣವಾಗಿ ಅರ್ಹ ವ್ಯಾಪಾರಿಗಳಿಗೆ ಆಟೋಮೇಟೆಡ್ ಪಾವತಿಗಳನ್ನು ಮಾಡಲು PhonePe ಆ್ಯಪ್ ಮೂಲಕ ಆ್ಯಪ್ ಬಳಕೆದಾರರು ಒದಗಿಸಿದ ಸ್ಥಾಯಿ ಸೂಚನೆ / ಅಧಿಕಾರ.
- “ಮ್ಯಾಂಡೇಟ್ ಕಾರ್ಯಗತಗೊಳಿಸುವಿಕೆ” ಎಂದರೆ ನಿರ್ದಿಷ್ಟ ಆಟೋಪೇ ಪಾವತಿಗಾಗಿ PhonePe ಮೂಲಕ ಸಕ್ರಿಯಗೊಳಿಸಲಾದ ನಿಮ್ಮ ಆಯ್ದ ಪಾವತಿ ವಿಧಾನದ ಪ್ರಕಾರ ನಿಮ್ಮ ವಿತರಕ ಬ್ಯಾಂಕ್‌ನಿಂದ ಮ್ಯಾಂಡೇಟ್ ಸಂಬಂಧಿಸಿದಂತೆ ಅಧಿಕೃತ ಮೊತ್ತದ ಯಶಸ್ವಿ ಕಡಿತ.
- “ಮ್ಯಾಂಡೇಟ್ ಮಿತಿ(ಗಳು)” ಎಂದರೆ ಮ್ಯಾಂಡೇಟ್‌ಗೆ ಸಂಬಂಧಿಸಿದಂತೆ (i) ಆಟೋಮೇಟೆಡ್ ಪಾವತಿಯ ಪೂರ್ವ-ನಿಶ್ಚಿತ ಮೌಲ್ಯ ಅಥವಾ (ii) RBI / NPCI ನಿಗದಿಪಡಿಸಿದ (ಕಾಲಕಾಲಕ್ಕೆ ನವೀಕರಿಸಿದಂತೆ) ಗರಿಷ್ಠ/ಒಟ್ಟಾರೆ ಅನುಮತಿಸುವ ಮಿತಿಗೆ ಒಳಪಟ್ಟ ಆಟೋಮೇಟೆಡ್ ಪಾವತಿಯ ವೇರಿಯಬಲ್ ಮೌಲ್ಯ.
- “ಮ್ಯಾಂಡೇಟ್ ನೋಂದಣಿ” ಎಂದರೆ (i) ಮ್ಯಾಂಡೇಟ್ ಸಂಬಂಧಿಸಿದಂತೆ ನಿಯತಾಂಕಗಳು, (ii) ಮ್ಯಾಂಡೇಟ್ ಸಂಬಂಧಿಸಿದಂತೆ ಪ್ರಾರಂಭ ದಿನಾಂಕ ಮತ್ತು ಅಂತಿಮ ದಿನಾಂಕ, (iii) ಮ್ಯಾಂಡೇಟ್ ಮಿತಿಗಳು, (iv) ಮ್ಯಾಂಡೇಟ್ ಆವರ್ತನ ಇತ್ಯಾದಿ ಮ್ಯಾಂಡೇಟ್‌ಗೆ ಸಂಬಂಧಿಸಿದಂತೆ PhonePe ಬಳಕೆದಾರರು ಒದಗಿಸಬೇಕಾದ ವಿವರಗಳು/ಇನ್‌ಪುಟ್‌ಗಳು ಎಂದರ್ಥ.
- ಮ್ಯಾಂಡೇಟ್ ಸೆಟ್ ಅಪ್
PhonePe ಆ್ಯಪ್ ಮೂಲಕ ನಿಮ್ಮ ವಿತರಕ ಬ್ಯಾಂಕ್‌ನಿಂದ ಯಶಸ್ವಿ ಮೌಲ್ಯೀಕರಣ/ದೃಢೀಕರಣದ ನಂತರವೇ ಮ್ಯಾಂಡೇಟ್ ಹೊಂದಿಸಲಾಗುತ್ತದೆ. ಮ್ಯಾಂಡೇಟ್ ಹೊಂದಿಸಲು, ನಿರ್ದಿಷ್ಟ ಆಟೋಮೇಟೆಡ್ ಪಾವತಿಗೆ ಸಂಬಂಧಿಸಿದಂತೆ ಮ್ಯಾಂಡೇಟ್ ನೋಂದಣಿಗೆ ನೀವು ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಜೊತೆಗೆ, ಮ್ಯಾಂಡೇಟ್ ಸೆಟಪ್ ಮುಂದುವರಿಸಲು ಈ ಕಾರ್ಯದ ಅಡಿಯಲ್ಲಿ PhonePe ಮೂಲಕ ಸಕ್ರಿಯಗೊಳಿಸಲಾದ ಅಂತಹ ಪಾವತಿ ವಿಧಾನಗಳು / ಪಾವತಿ ಸಾಧನಗಳನ್ನು ನೀವು ಆಯ್ಕೆ ಮಾಡಬಹುದು.
ಯಶಸ್ವಿಯಾಗಿ ಮ್ಯಾಂಡೇಟ್ ನೋಂದಣಿ ಮಾಡಿದ ನಂತರ, ನೀವು ನಿಗದಿಪಡಿಸಿದ ಮ್ಯಾಂಡೇಟ್ ಆವರ್ತನದ ಆಧಾರದ ಮೇಲೆ ಅದನ್ನು ಕಾರ್ಯಗತಗೊಳಿಸಲಾಗುತ್ತದೆ ಮತ್ತು ಆಟೋಮೇಟೆಡ್ ಪಾವತಿಗೆ ಸಂಬಂಧಿಸಿದಂತೆ ನಿಗದಿಪಡಿಸಿದ ಮೊತ್ತವನ್ನು ನಿಮ್ಮ ಲಿಂಕ್ ಮಾಡಿದ ಬ್ಯಾಂಕ್ ಖಾತೆ / ಕ್ರೆಡಿಟ್ ಮಿತಿಯಿಂದ (ಸಂದರ್ಭಕ್ಕೆ ಅನುಸಾರವಾಗಿ) ಕಡಿತಗೊಳಿಸಲಾಗುತ್ತದೆ ಹಾಗೂ ನಿಗದಿಪಡಿಸಲಾದ ಪಾವತಿ ಸ್ವೀಕರಿಸುವವರಿಗೆ / ಫಲಾನುಭವಿಗೆ ವರ್ಗಾಯಿಸಲಾಗುತ್ತದೆ.
ಈ ಮೂಲಕ PhonePe ಮ್ಯಾಂಡೇಟ್ ನಿರಾಕರಣೆ, ವೈಫಲ್ಯ ಅಥವಾ ಬಾಕಿ ಹಾಗೂ ಮ್ಯಾಂಡೇಟ್ ಕಾರ್ಯಗತಗೊಳಿಸುವಿಕೆಗೆ ಸಂಬಂಧಿಸಿದಂತೆ ಯಾವುದೇ ಹೊಣೆಗಾರಿಕೆಯನ್ನು ನಿರಾಕರಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ನಿಮ್ಮ ವಿತರಕ ಬ್ಯಾಂಕ್ ಕೈಗೊಂಡ ಯಾವುದೇ ಮೌಲ್ಯೀಕರಣ (ಗಳು) / ದೃಢೀಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪಾತ್ರ ಅಥವಾ ಹೊಣೆಗಾರಿಕೆಯನ್ನು ಕೂಡ ಹೊಂದಿರುವುದಿಲ್ಲ. - UPI-ಲೈಟ್ ಗಾಗಿ ಆಟೋ-ಟಾಪ್ ಮ್ಯಾಂಡೇಟ್
PhonePe ಆ್ಯಪ್ ಮೂಲಕ ಸಕ್ರಿಯಗೊಳಿಸಲಾದ UPI ಲೈಟ್ ಸೌಲಭ್ಯವನ್ನು ನೀವು ಆರಿಸಿಕೊಂಡಿದ್ದರೆ, ಈ ಆಟೋಪೇ ನಿಯಮಗಳಿಗೆ ಅನುಗುಣವಾಗಿ UPI ಲೈಟ್ ಸೌಲಭ್ಯಕ್ಕಾಗಿ ಆಟೋ ಟಾಪ್-ಅಪ್‌ಗೆ ಅನ್ವಯವಾಗುವ ಮ್ಯಾಂಡೇಟ್ ಮಿತಿಗಳ ಪ್ರಕಾರ ಆಟೋ-ಟಾಪ್-ಅಪ್ ಮ್ಯಾಂಡೇಟ್ ಹೊಂದಿಸುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ.
ಉದಾಹರಣೆಗೆ: UPI ಲೈಟ್ ಸೌಲಭ್ಯದ ಬಾಕಿ INR 200ಕ್ಕಿಂತ ಕಡಿಮೆಯಾದಾಗ ಸ್ವಯಂಚಾಲಿತವಾಗಿ INR 300 ಅನ್ನು UPI ಲೈಟ್ ಸೌಲಭ್ಯಕ್ಕೆ ಸೇರಿಸಲು ಆಟೋ-ಟಾಪ್-ಅಪ್ ಮ್ಯಾಂಡೇಟ್ ಹೊಂದಿಸಬಹುದು. ಆ ಪ್ರಕಾರ, ಪ್ರತಿ ಬಾರಿ ಬಾಕಿ INR 200 ಕ್ಕಿಂತ ಕೆಳಗೆ ಹೋದಾಗ INR 300 ಅನ್ನು ಆ PhonePe ಬಳಕೆದಾರರ ಖಾತೆಯಿಂದ ಡೆಬಿಟ್ ಮಾಡಲಾಗುತ್ತದೆ. - ಮ್ಯಾಂಡೇಟ್ ಕಾರ್ಯಗತಗೊಳಿಸುವಿಕೆ
ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀವು ಸಾಕಷ್ಟು ಹಣವನ್ನು ಹೊಂದಿದ್ದರೆ ಮತ್ತು/ಅಥವಾ ಕ್ರೆಡಿಟ್ ಮಿತಿ (ಗಳು) ಲಭ್ಯವಿದ್ದರೆ ಮಾತ್ರ (ಅನ್ವಯವಾಗುವಂತೆ) ಮ್ಯಾಂಡೇಟ್ ಸೆಟಪ್ ಸಮಯದಲ್ಲಿ ನೀವು ಆಯ್ಕೆ ಮಾಡಿದ ಪಾವತಿ ಸಾಧನ/ವಿಧಾನವನ್ನು ಆಧರಿಸಿ ನಿಮ್ಮ ಮ್ಯಾಂಡೇಟ್ ಪ್ರಕ್ರಿಯೆಗೊಳಿಸಲಾಗುತ್ತದೆ. ಒಂದು ವೇಳೆ ಸಾಕಷ್ಟು ಬಾಕಿಯಿಲ್ಲದಿದ್ದರೆ, ನಿಮ್ಮ ಮ್ಯಾಂಡೇಟ್ ಕಾರ್ಯಗತಗೊಳಿಸುವಿಕೆಯು ವಿಫಲವಾಗುತ್ತದೆ.
PhonePe ಮೂಲಕ ಮ್ಯಾಂಡೇಟ್ ಪ್ರಕ್ರಿಯೆಗೊಳಿಸಿದ ನಂತರ, ನಿಮ್ಮ ಅರ್ಹ ವ್ಯಾಪಾರಿಯಿಂದ ಸ್ವಯಂಚಾಲಿತ ಪಾವತಿಗೆ ಸಂಬಂಧಿಸಿದಂತೆ ಅಂತಿಮ ಪಾವತಿ ಸ್ಥಿತಿಯ ದೃಢೀಕರಣವನ್ನು ಸ್ವೀಕರಿಸಲು ಸ್ವಯಂಚಾಲಿತ ಪಾವತಿಯ ದಿನಾಂಕದಿಂದ 2 (ಎರಡು) ರಿಂದ 10 (ಹತ್ತು) ದಿನಗಳವರೆಗೆ ತೆಗೆದುಕೊಳ್ಳಬಹುದು ಎಂಬುದನ್ನು ದಯವಿಟ್ಟು ಗಮನಿಸಿ.
ನಿಮ್ಮ ಆಟೋಮೇಟೆಡ್ ಪಾವತಿಗೆ ಸಂಬಂಧಿಸಿದಂತೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ, ಕ್ರೆಡಿಟ್ ಮಿತಿಯಿಂದ (ಅನ್ವಯವಾಗುವಂತೆ) ಡೆಬಿಟ್ ಮಾಡುವ ಮೊದಲು ಹಾಗೂ ಯಶಸ್ವಿಯಾಗಿ ಮ್ಯಾಂಡೇಟ್ ಕಾರ್ಯಗತಗೊಳಿಸಿದ ನಂತರ, ಮ್ಯಾಂಡೇಟ್ ಕಾರ್ಯಗತಗೊಳಿಸುವಿಕೆಗೆ ಸಂಬಂಧಿಸಿದಂತೆ ಇತರ ವಿವರಗಳೊಂದಿಗೆ ಅನ್ವಯವಾಗುವ ಕಾನೂನುಗಳು/ ಅಧಿಸೂಚನೆಗಳು/ ಮಾರ್ಗಸೂಚಿಗಳ ಅಡಿಯಲ್ಲಿ ನಿಯಂತ್ರಕ ಸಂಸ್ಥೆಗಳು ಸೂಚಿಸಿದ ರೀತಿಯಲ್ಲಿ (ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ) ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸೂಚನೆ ನೀಡಲಾಗುತ್ತದೆ. - ಮ್ಯಾಂಡೇಟ್ ಸಂಬಂಧಿಸಿದಂತೆ ಕ್ರಮಗಳು:
ಮ್ಯಾಂಡೇಟ್ ಸಕ್ರಿಯವಾಗಿರುವ ಸಮಯದಲ್ಲಿ PhonePe ಆ್ಯಪ್ ಮೂಲಕ ಅದರ (ಆಟೋ ಟಾಪ್-ಅಪ್ ಮ್ಯಾಂಡೇಟ್ ಒಳಗೊಂಡಂತೆ) ನಿರ್ವಹಣೆಗೆ ಸಂಬಂಧಿಸಿದಂತೆ ನೀವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬಹುದು.(i) ಮ್ಯಾಂಡೇಟ್ ನೋಂದಣಿಯ ಸಮಯದಲ್ಲಿ ನೀವು ನಿಗದಿಪಡಿಸಿದ ಮ್ಯಾಂಡೇಟ್ ಮಿತಿಗಳನ್ನು ಮಾರ್ಪಡಿಸಬಹುದು, (ii) ಮ್ಯಾಂಡೇಟ್ ನಿಲ್ಲಿಸುವುದು ಮತ್ತು/ಅಥವಾ ರದ್ದುಗೊಳಿಸುವುದು, (iii) ಆಟೋಮೇಟೆಡ್ ಪಾವತಿಗೆ ಸಂಬಂಧಿಸಿದಂತೆ ನಿಮ್ಮ ವಿತರಕ ಬ್ಯಾಂಕ್ ಮ್ಯಾಂಡೇಟ್ ಪ್ರಕ್ರಿಯೆಗೊಳಿಸುವ ಮೊದಲು ಅದನ್ನು ಹಿಂತೆಗೆದುಕೊಳ್ಳುವುದು/ರದ್ದುಗೊಳಿಸುವುದು.
ಮ್ಯಾಂಡೇಟ್‌ಗೆ ಸಂಬಂಧಿಸಿದಂತೆ ನಿಮ್ಮ ಕ್ರಮಗಳು ನಿಮ್ಮ ವಿತರಕ ಬ್ಯಾಂಕ್‌ನಿಂದ ಹೆಚ್ಚುವರಿ ಮೌಲ್ಯೀಕರಣ ಅಥವಾ ದೃಢೀಕರಣಕ್ಕೆ ಒಳಪಟ್ಟಿರಬಹುದು ಎಂದು ನೀವು ಒಪ್ಪುತ್ತೀರಿ. ನೀವು ನಿರ್ವಹಿಸುವ ಕ್ರಮಗಳು ಈ ಆಟೋಪೇ ನಿಯಮಗಳಿಗೆ ಅನುಗುಣವಾಗಿರಬೇಕು ಮತ್ತು ಅನ್ವಯವಾಗುವ ಕಾನೂನು ಗಳಿಗೆ ಬದ್ಧವಾಗಿರಬೇಕು ಎಂದು ನೀವು ಸಮ್ಮತಿಸುತ್ತೀರಿ ಮತ್ತು ಅಂತಹ ಕ್ರಮಗಳ ಕಾಲಮಿತಿಗೆ ಸಂಬಂಧಿಸಿದಂತೆ RBI / NPCI ಅಥವಾ ನಿಮ್ಮ ವಿತರಕ ಬ್ಯಾಂಕ್ (ಅನ್ವಯವಾಗುವಂತೆ) ಸೂಚನೆಗಳಿಗೆ ನೀವು ಬದ್ಧರಾಗಿರುತ್ತೀರಿ. - ಶುಲ್ಕಗಳು
ಮ್ಯಾಂಡೇಟ್‌ಗೆ ಸಂಬಂಧಿಸಿದಂತೆ ಶುಲ್ಕ / ದರಗಳನ್ನು ವಿಧಿಸಲಾಗಬಹುದು. ಅಂತಹ ಅನ್ವಯವಾಗುವ ಶುಲ್ಕ / ದರಗಳನ್ನು PhonePe ತೋರಿಸುತ್ತದೆ ಮತ್ತು ಈ ಸಂಬಂಧ ಅಂತಹ ಶುಲ್ಕಗಳು / ದರಗಳನ್ನು ಪಾವತಿಸಲು ನೀವು ಸಮ್ಮತಿಸುತ್ತೀರಿ. - ಹೊಣೆಗಾರಿಕೆಗಳು
ಈ ಕೆಳಗಿನ ಅಂಶಗಳಿಗೆ ಒಪ್ಪುತ್ತೀರಿ ಮತ್ತು ಸ್ವೀಕರಿಸುತ್ತೀರಿ:- PhonePe ಎನ್ನುವುದು ಆಟೋಮೇಟೆಡ್ ಪಾವತಿಗಳಿಗೆ ನಿಮ್ಮ ವಿತರಕ ಬ್ಯಾಂಕ್‌ನಿಂದ ಪ್ರಕ್ರಿಯೆಗೊಳಿಸಲಾದ ಮ್ಯಾಂಡೇಟ್‌ಗಳಿಗೆ ಪಾವತಿ ಫೆಸಿಲಿಟೇಟರ್ ಮಾತ್ರ ಆಗಿದ್ದು ನಿಗದಿತ ಪಾವತಿದಾರ/ ಫಲಾನುಭವಿಗೆ ಪಾವತಿಸಬೇಕಾದ ಪಾವತಿ ವಹಿವಾಟಿಗೆ ಪಕ್ಷವಲ್ಲ.
- PhonePe ಬಳಕೆದಾರರು ನಿಗದಿಪಡಿಸಿದ ಮ್ಯಾಂಡೇಟ್‌ಗಳು ಮತ್ತು PhonePe ಆ್ಯಪ್ ಮೂಲಕ ಮ್ಯಾಂಡೇಟ್ ನೋಂದಣಿಗಾಗಿ ಹಂಚಿಕೊಂಡ ವಿವರಗಳ ಆಧಾರದ ಮೇಲೆ ಎಲ್ಲಾ ಮ್ಯಾಂಡೇಟ್‌ಗಳನ್ನು PhonePe ಆ್ಯಪ್ ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಯಾವುದೇ ಆಟೋಮೇಟೆಡ್ ಪಾವತಿಗೆ ನಿಮ್ಮ ಲಿಂಕ್ ಮಾಡಿದ ಬ್ಯಾಂಕ್ ಖಾತೆ/ ಕ್ರೆಡಿಟ್ ಮಿತಿಯಿಂದ (ಅನ್ವಯವಾಗುವಂತೆ) ಕಡಿತವಾದ ಮೊತ್ತದ ಪರಿಶೀಲನೆಗೆ ಮತ್ತು ಯಾವುದೇ ಡಬಲ್ ಪಾವತಿಗೆ PhonePe ಜವಾಬ್ದಾರನಾಗಿರುವುದಿಲ್ಲ. PhonePe ಆ್ಯಪ್ ಮೂಲಕ ಈ ಕಾರ್ಯಚಟುವಟಿಕೆ ಅಡಿಯಲ್ಲಿ ಪ್ರತಿ ಮ್ಯಾಂಡೇಟ್‌ಗೆ ಒದಗಿಸಲಾದ/ ಅಧಿಕೃತಗೊಳಿಸಲಾದ ವಿವರಗಳನ್ನು ಪರಿಶೀಲಿಸುವುದು ನಿಮ್ಮ ಜವಾಬ್ದಾರಿಯಾಗಿದೆ.
- ಗೊತ್ತುಪಡಿಸಿದ ಪಾವತಿ ಸ್ವೀಕರಿಸುವವರು / ಫಲಾನುಭವಿಯಿಂದ ಆಟೋಮೇಟೆಡ್ ಪಾವತಿಗಳಿಗೆ ಸಂಬಂಧಿಸಿದಂತೆ ನೀವು ಕೈಗೊಂಡ ಸರಕುಗಳು, ಸೇವೆಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು, ತೊಂದರೆಗಳು ಅಥವಾ ವಿವಾದಗಳಿಗೆ PhonePe ಜವಾಬ್ದಾರಿಯಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಸರಕುಗಳು / ಸೇವೆಗಳಿಂದಾದ ನಿಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನೀವು ಅರ್ಹ ವ್ಯಾಪಾರಿಗಳನ್ನು ನೇರವಾಗಿ ಸಂಪರ್ಕಿಸಬಹುದು.
- ಯಶಸ್ವಿ ಮ್ಯಾಂಡೇಟ್ ಕಾರ್ಯಗತಗೊಳಿಸುವಿಕೆಗಾಗಿ ನಿಮ್ಮ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ/ ಕ್ರೆಡಿಟ್ ಮಿತಿಯಲ್ಲಿ (ಅನ್ವಯವಾಗುವಂತೆ) ಸಾಕಷ್ಟು ಬಾಕಿ ಮೊತ್ತ ಕಾಪಾಡಿಕೊಳ್ಳಲು ನೀವು ಒಪ್ಪುತ್ತೀರಿ ಮತ್ತು ಸಮ್ಮತಿಸುತ್ತೀರಿ. ನಿಮ್ಮ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ/ ಕ್ರೆಡಿಟ್ ಮಿತಿಯಲ್ಲಿ [ಅನ್ವಯವಾಗುವಂತೆ] ಸಾಕಷ್ಟು ಬಾಕಿ ಮೊತ್ತದ ಕೊರತೆಯಿಂದ ಉಂಟಾದ ಮ್ಯಾಂಡೇಟ್ ಕಾರ್ಯಗತಗೊಳಿಸುವಿಕೆಯಲ್ಲಿನ ವೈಫಲ್ಯ ಅಥವಾ ನಿರಾಕರಣೆಗೆ ಸಂಬಂಧಿಸಿದಂತೆ PhonePe ಯಾವುದೇ ಹೊಣೆಗಾರಿಕೆಗಳಿಗೆ ಜವಾಬ್ದಾರನಾಗಿರುವುದಿಲ್ಲ.
- ಈ ಕಾರ್ಯಚಟುವಟಿಕೆ ಅಡಿಯಲ್ಲಿ PhonePe ಆ್ಯಪ್ ಮೂಲಕ ಸಕ್ರಿಯಗೊಳಿಸಲಾದ ನಿಮ್ಮ ಕ್ರಿಯೆಗಳು, ಮ್ಯಾಂಡೇಟ್‌ಗಳು, ಮ್ಯಾಂಡೇಟ್ ಕಾರ್ಯಗತಗೊಳಿಸುವಿಕೆಗಳನ್ನು ನಿಯಮಿತವಾಗಿ ಪರಿಶೀಲಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಆಟೋಮೇಟೆಡ್ ಪಾವತಿಗಳಿಗೆ ಸಂಬಂಧಿಸಿದಂತೆ ನಿಮ್ಮ ವಿತರಕ ಬ್ಯಾಂಕ್/ಅರ್ಹ ವ್ಯಾಪಾರಿ ವಿಧಿಸುವ ಯಾವುದೇ ಅನಧಿಕೃತ ಶುಲ್ಕಗಳು, ದಂಡಗಳು, ವಿಳಂಬ ಪಾವತಿ ಶುಲ್ಕಗಳು ಅಥವಾ ನೀವು ನಿಗದಿಪಡಿಸಿದ ಮ್ಯಾಂಡೇಟ್ ನೋಂದಣಿ / ಮ್ಯಾಂಡೇಟ್ ಮಿತಿಗೆ ಸಂಬಂಧಿಸಿದಂತೆ ಯಾವುದೇ ವ್ಯತ್ಯಾಸಗಳಿಗೆ PhonePe ಜವಾಬ್ದಾರನಾಗಿರುವುದಿಲ್ಲ.
- ಸಂಬಂಧಿತ ಮಾರ್ಗಸೂಚಿಗಳು / ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ RBI /NPCI ಸೂಚಿಸಿದ ಮ್ಯಾಂಡೇಟ್ ಮಿತಿಗಳನ್ನು ಅನುಸರಿಸಲು ಮತ್ತು ಅವಕ್ಕೆ ಬದ್ಧರಾಗಿರಲು ನೀವು ಸಮ್ಮತಿಸುತ್ತೀರಿ.
- ಸಾಮಾನ್ಯ
- ಈ ಆಟೋಪೇ ನಿಯಮಗಳಿಗೆ ಸಂಬಂಧಿಸಿದಂತೆ ಉದ್ಭವಿಸಬಹುದಾದ ಯಾವುದೇ ಮತ್ತು ಎಲ್ಲಾ ನಷ್ಟಗಳು, ಹಾನಿಗಳು, ಕ್ರಮಗಳು, ಕ್ಲೈಮ್‌ಗಳು ಮತ್ತು ಹೊಣೆಗಾರಿಕೆಗಳಿಂದ (ಕಾನೂನು ವೆಚ್ಚಗಳು ಸೇರಿದಂತೆ) PhonePe, ಅದರ ಅಂಗಸಂಸ್ಥೆಗಳು, ಉದ್ಯೋಗಿಗಳು, ನಿರ್ದೇಶಕರು, ಅಧಿಕಾರಿಗಳು, ಏಜೆಂಟ್‌ಗಳು ಮತ್ತು ಪ್ರತಿನಿಧಿಗಳನ್ನು ಹೊರಗಿಡಲು ನೀವು ಸಮ್ಮತಿಸುತ್ತೀರಿ.
- ಈ ಆಟೋಪೇ ನಿಯಮಗಳಿಗೆ ಸಂಬಂಧಿಸಿದಂತೆ ಒಪ್ಪಂದದ ಅಪಚಾರ, ನಿರ್ಲಕ್ಷ್ಯ, ವಾರಂಟಿ ಅಥವಾ ಇನ್ಯಾವುದೇ ರೀತಿಯಲ್ಲಿ ಅಥವಾ ಒದಗಿಸಿದ ಮಾಹಿತಿಯ ಬಳಕೆಯಿಂದ ಅಥವಾ ಬಳಸಲು ಅಸಮರ್ಥತೆಯಿಂದ ಒಪ್ಪಂದದ ನಿರ್ಲಕ್ಷ್ಯ, ಅಪಚಾರ ಅಥವಾ ಇನ್ನಾವುದೇ ರೀತಿಯಿಂದ ಉಂಟಾದ ಲಾಭ ಅಥವಾ ಆದಾಯದ ನಷ್ಟ, ವ್ಯಾಪಾರ ಅಡಚಣೆ, ವ್ಯಾಪಾರ ಅವಕಾಶಗಳ ನಷ್ಟ, ಡೇಟಾ ನಷ್ಟ ಅಥವಾ ಇತರ ಆರ್ಥಿಕ ಆಸಕ್ತಿಗಳ ನಷ್ಟ ಇವುಗಳನ್ನು ಒಳಗೊಂಡಂತೆ ಆದರೆ ಇಷ್ಟಕ್ಕೆ ಸೀಮಿತವಾಗಿರದೆ ಯಾವುದೇ ಹಾನಿಗೆ PhonePe ಪರೋಕ್ಷವಾಗಿ, ಪರಿಣಾಮವಾಗಿ, ಪ್ರಾಸಂಗಿಕವಾಗಿ, ವಿಶೇಷವಾಗಿ ಅಥವಾ ದಂಡನೀಯವಾಗಿ ಬಾಧ್ಯವಾಗಿರುವುದಿಲ್ಲ.
- ಈ ಆಟೋಪೇ ನಿಯಮಗಳನ್ನು ಯಾವುದೇ ಕಾನೂನಾತ್ಮಕ ಸಂಘರ್ಷಗಳನ್ನು ಪರಿಗಣಿಸದೆ ಭಾರತದ ಕಾನೂನುಗಳು ನಿಯಂತ್ರಿಸುತ್ತವೆ. ನಿಮ್ಮ ಮತ್ತು PhonePe ನಡುವೆ ಸಂಪೂರ್ಣ ಅಥವಾ ಭಾಗಶಃ ಈ ಆಟೋಪೇ ನಿಯಮಗಳಿಗೆ ಸಂಬಂಧಿಸಿದಂತೆ ಉದ್ಭವಿಸುವ ಯಾವುದೇ ಕ್ಲೈಮ್ ಅಥವಾ ವಿವಾದವನ್ನು ಕೇವಲ ಬೆಂಗಳೂರಿನಲ್ಲಿ ನೆಲೆಗೊಂಡಿರುವ ಸಕ್ಷಮ ನ್ಯಾಯವ್ಯಾಪ್ತಿಯ ನ್ಯಾಯಾಲಯವು ನಿರ್ಧರಿಸುತ್ತದೆ.
- ಈ ಆಟೋಪೇ ನಿಯಮಗಳಿಗೆ ಅನುಸಾರವಾಗಿ ಲಭ್ಯವಿರುವ ಈ ಕಾರ್ಯಗಳ ನಿಖರತೆ ಮತ್ತು ನೈಜತೆಗೆ ಸಂಬಂಧಿಸಿದಂತೆ PhonePe ಎಲ್ಲಾ ವ್ಯಕ್ತ ಅಥವಾ ಸೂಚಿತ ಖಾತರಿಗಳನ್ನು ನಿರಾಕರಿಸುತ್ತದೆ.
- PhonePe ಬಳಕೆಯ ನಿಯಮಗಳು ಮತ್ತು PhonePe ಗೌಪ್ಯತೆ ನೀತಿಯನ್ನು ಉಲ್ಲೇಖವಾಗಿ ಈ ಆಟೋಪೇ ನಿಯಮಗಳಿಗೆ ಸಂಯೋಜಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಈ ನಿಯಮಗಳು ಮತ್ತು PhonePe ನಿಯಮಗಳ ನಡುವಿನ ಯಾವುದೇ ಸಂಘರ್ಷದ ಸಂದರ್ಭದಲ್ಲಿ, ಈ ಆಟೋಪೇ ನಿಯಮಗಳ ಮೂಲಕ ಸಕ್ರಿಯಗೊಳಿಸಲಾದ ಈ ಕಾರ್ಯಗಳಿಗೆ ಸಂಬಂಧಿಸಿದಂತೆ ಈ ಆಟೋಪೇ ನಿಯಮಗಳು ಮೇಲುಗೈ ಸಾಧಿಸುತ್ತವೆ.